CONNECT WITH US  

ಹುಟ್ಟೂರು  ಮಡಾಮಕ್ಕಿಯಲ್ಲಿ  ನೀರವ

ಸಿದ್ದಾಪುರ: ಶ್ರೀ ಲಕ್ಷ್ಮೀವರತೀರ್ಥರ ಹುಟ್ಟೂರು ಕುಂದಾಪುರ ತಾಲೂಕಿನ ಮಡಾಮಕ್ಕಿ ಹಾಗೂ ಅವರ ಮೂಲ  ಮನೆಯಲ್ಲಿ ನೀರವ ಮೌನ ಆವರಿಸಿದೆ. ನಿಧನ ವಾರ್ತೆ ತಿಳಿಯುತ್ತಿದ್ದಂತೆ ಮಡಾಮಕ್ಕಿ ಸ.ಹಿ.ಪ್ರಾ. ಶಾಲೆಗೆ ರಜೆ ನೀಡಿ ಸಂತಾಪ ಸೂಚಿಸಿದರು. ಮಡಾಮಕ್ಕಿಯಲ್ಲಿ1964ರ ಜೂ. 8ರಂದು ವಿ| ಪುನರೂರು ವಿಠಲಾಚಾರ್ಯ ಹಾಗೂ ಕುಸುಮಾ ಆಚಾರ್ಯ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯವರಾಗಿ ಜನಿಸಿದರು. ಮೂಲ ಹೆಸರು ಹರೀಶ ಆಚಾರ್ಯ. ಅವರ ತಮ್ಮ ಲಾತವ್ಯ ಆಚಾರ್ಯ ಮಠದ ಹೊಣೆ ಹೊತ್ತಿದ್ದಾರೆ. 

ತಂದೆ ಶೀರೂರು ಮಠದಲ್ಲಿ ವೇದ ಪಾಠ ಕಲಿಸುತ್ತಿದ್ದರು. ಶ್ರೀಪಾದರು ಮಡಾಮಕ್ಕಿಯ ತಮ್ಮ ಮೂಲ ಮನೆಯಲ್ಲಿ ಜನಿಸಿದ 6 ತಿಂಗಳಷ್ಟೇ ಇದ್ದುದು. ಬಳಿಕ ಶೀರೂರು ಮಠದಲ್ಲಿ ಬೆಳೆದರು. ಅದೇ ಪರಿಸರದಲ್ಲಿ ವ್ಯಾಸಂಗವೂ ನಡೆಯಿತು. ಮಡಾಮಕ್ಕಿ ಮೂಲ ಮನೆಯಲ್ಲಿ ಶ್ರೀಪಾದರ ತಾಯಿಯ ಸಹೋದರ ಅನಂತ ತಂತ್ರಿ - ಜಯಲಕ್ಷ್ಮೀ ದಂಪತಿ ವಾಸವಾಗಿದ್ದಾರೆ. ಅನಂತ ತಂತ್ರಿ ನಿವೃತ್ತ ಶಿಕ್ಷಕರು. ಅವರ ಮಗ, ಸೊಸೆ, ಮೊಮ್ಮಕ್ಕಳೂ ಇಲ್ಲಿದ್ದಾರೆ.
ಮಡಾಮಕ್ಕಿ ನಂಟು ಶ್ರೀಗಳು ಕೊನೆಯವರೆಗೂ ಮಡಾಮಕ್ಕಿ ನಂಟು ಬಿಟ್ಟವರಲ್ಲ. ಇಲ್ಲಿನ ಶ್ರೀ ವೀರಭದ್ರ ಸ್ವಾಮಿ ದೇಗುಲಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ದೇಗುಲದ ಅಭಿವೃದ್ಧಿಗೂ ಕೊಡುಗೆ ನೀಡಿದ್ದರು. ಪುನರ್‌ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವಕ್ಕೆ ಆಗಮಿಸಿ, ಆಶೀರ್ವದಿಸಿದ್ದರು. ಪರಿಸರದ ಹಲವು ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಕೊಡುಗೆಗಳನ್ನು ನೀಡಿದ್ದರು. ಅವರಿಗೆ ಹುಟ್ಟೂರ ಸಮ್ಮಾನವೂ ನಡೆದಿತ್ತು. 2017ರ ಫೆ. 3ರ ಅವರ ಭೇಟಿಯೇ ಕೊನೆಯದ್ದು.

ಹೆರಿಗೆ ಮಾಡಿಸಿದ್ದು ಮುಸ್ಲಿಂ ಮಹಿಳೆ
ಶ್ರೀಪಾದರ ಜನನ ಮಡಾಮಕ್ಕಿ ಯಲ್ಲಿ ನಡೆದಿದ್ದು, ಅವರ ತಾಯಿ ಕುಸುಮಾ ಆಚಾರ್ಯರಿಗೆ ಹೆರಿಗೆ ಮಾಡಿಸಿದ್ದು ಆರ್ಡಿ ಮೂಲದ ಮುಸ್ಲಿಂ ಮಹಿಳೆ ಆಯಿಸ್‌ಂ ಎನ್ನುವವರು. 


Trending videos

Back to Top