CONNECT WITH US  

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ರಥಯಾತ್ರೆಗೆ ಚಾಲನೆ

ನೆಲಮಂಗಲ: ಪ್ರತಿಯೊಬ್ಬರೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಪಂ  ನೂತನ ಇಒ ಎಚ್‌.ಆರ್‌.ಹನುಮಂತರಾಯಪ್ಪ ತಿಳಿಸಿದರು.  ಪಟ್ಟಣದಲ್ಲಿರುವ ತಾಪಂ ಆವರಣದಲ್ಲಿ ಗ್ರಾಮಾಂತರ ಜಿಲ್ಲಾ ಸ್ವಚ್ಛ ಭಾರತ್‌ ಮಿಷನ್‌ವತಿಯಿಂದ ಹಮ್ಮಿಕೊಂಡಿರುವ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛಭಾರತ್‌ ಮಿಷನ್‌ ಯೋಜನೆಯಡಿ ಗ್ರಾಮ ನೈರ್ಮಲ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಆಗಸ್ಟ್‌ನ್ನು ಸರ್ವೇಕ್ಷಣ ಮಾಸಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರಥ ತಾಲೂಕಿನ ಎಲ್ಲಾ 24 ಗ್ರಾಪಂಗಳಿಗೂ ಭೇಟಿ ನೀಡಿ ಸ್ವಚ್ಛತೆ ಅರಿವು ಮೂಡಿಸಲಿದೆ ಎಂದು ತಿಳಿಸಿದರು.        

ತಾಪಂ ಸದಸ್ಯ ಬೆಟ್ಟೇಗೌಡ, ಸಾರ್ವಜನಿಕರು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಆಹ್ವಾನಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ತಮ್ಮ ವ್ಯಾಪ್ತಿಯಲ್ಲಿ ಪರಿಸರ ಸ್ವಚ್ಛವಾಗಿರಿಸಿಕೊಳ್ಳಬೇಕೆಂದರು.

ಅಭಿನಂದನೆ: ತಾಪಂ ನೂತನ ಇಒ ಆಗಿ ಕಾರ್ಯಪ್ರಾರಂಭ ಮಾಡಿದ  ಎಚ್‌.ಆರ್‌.ಹನುಮಂತರಾಯಪ್ಪ ಅವರನ್ನು ತಾಪಂ ಸದಸ್ಯರು ವಿವಿಧ ಗ್ರಾಪಂ ವ್ಯಾಪ್ತಿಯ ಸದಸ್ಯರು, ಅಧ್ಯಕ್ಷರು, ಮುಖಂಡರು ಅಭಿನಂದಿಸಿದರು.

ತಾಪಂ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ್‌, ತಾಪಂ ಸದಸ್ಯರಾದ ವೆಂಕಟೇಗೌಡ, ನಾಗಭೂಷಣ್‌, ಸ್ವಚ್ಛಭಾರತ್‌ ಮಿಷನ್‌ನ ಜಿಲ್ಲಾ ಸಂಚಾಲಕ ಬಿ.ಎ.ಮೂರ್ತಿ, ತಾಪಂ ವ್ಯವಸ್ಥಾಪಕ ಗಂಗರಂಗಯ್ಯ, ರಾಷ್ಟ್ರೀಯ ಕಿಸಾನ್‌ ಸಂಘದ ತಾಲೂಕು ಅಧ್ಯಕ್ಷ ಮರಿರಾಜು, ಗುರುಮೂರ್ತಿ, ನಾಯಕ್‌, ಮುಖಂಡರಾದ ಹನುಮಂತರಾಜು ಇದ್ದರು.


Trending videos

Back to Top