CONNECT WITH US  

ಮಹಿಳಾ ದಿನಕ್ಕೆ ಶುಭಕೋರಿ ಎಡವಟ್ಟು ಮಾಡ್ಕೊಂಡ ಟ್ರಂಪ್‌

ಪೂರ್ವ ಜನ್ಮದಲ್ಲಿ ಮಾಡಿದ ಪಾಪ ಈಗಿನ ಜನ್ಮದಲ್ಲೂ ಕಾಡುತ್ತದೆ ಎಂದು ಹೇಳುತ್ತಾರೆ. ಈ ಹೇಳಿಕೆಯನ್ನು "ಕೆಲ ವರ್ಷಗಳ ಹಿಂದೆ ಮಾಡಿದ ಪಾಪ ಈ ಜನ್ಮದಲ್ಲೇ ಕಾಡುತ್ತದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಷಯದಲ್ಲಿ ಬದಲಾಯಿಸಬೇಕಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗಣ್ಯಾತಿಗಣ್ಯರು ಮಹಿಳೆಯರಿಗೆ ಶುಭ ಕೋರುವುದು ಸಾಮಾನ್ಯ. ಅದರಂತೆ ಟ್ರಂಪ್‌ ಕೂಡ ಶುಭ ಕೋರಿ ಟ್ವೀಟ್‌ ಮಾಡಿದ್ದರು. ಅಲ್ಲೇ ಆಗಿದ್ದು ಎಡವಟ್ಟು. 

ಟ್ರಂಪ್‌ ಇಲ್ಲಿಯ ತನಕ ನೀಡಿರುವ ಮಹಿಳಾ ವಿರೋಧಿ ಹೇಳಿಕೆಗಳು, ಧೋರಣೆಗಳೆಲ್ಲಾ ಟ್ವಿಟರ್‌ ಬಳಕೆದಾರರ ಪ್ರತಿಕ್ರಿಯೆಯಾಗಿ ಹೊರಬರಲಾರಂಭಿಸಿವೆ. ಅದಲ್ಲದೇ ಇತ್ತಿಚೆಗಷ್ಟೇ ಟ್ರಂಪ್‌ ಗರ್ಭಪಾತ ವಿರೋಧಿ ಆಡಳಿತಾತ್ಮಕ ನೀತಿಗೆ ಸಹಿ ಮಾಡಿದ್ದರು. ಆ ವೇಳೆ ಒಬ್ಬ ಮಹಿಳೆಯ ಉಪಸ್ಥಿತಿಯೂ ಇರಲಿಲ್ಲ. ಈ ಧೋರಣೆಗೆ ಹಲವಾರು ಟ್ವೀಟಿಗರು ಟೀಕಿಸಿದ್ದಾರೆ. 1993ರಲ್ಲಿ ನೀವು "ಮಹಿಳೆಯರಿಗೆ ಉದ್ಯೋಗ ನೀಡುವುದು ಅಪಾಯಕಾರಿ' ಎಂದು ಹೇಳಿದ್ದೀರಿ. ಈಗ ನಿಮ್ಮ ಸಂದೇಶ ಇಷ್ಟೊಂದು ಮೃದುವಾಗಿದ್ದು ಹೇಗೆ? ಎಂದು ಒಬ್ಬರು ಟ್ವೀಟಿಸಿದ್ದಾರೆ.

Trending videos

Back to Top