ಹಲ್ಲೆಗಳನ್ನು ಎದುರಿಸಲು ವೈದ್ಯರಿಗೆ ಕರಾಟೆ,ಕುಂಗ್ಫೂ ಕಲಿಸಲು ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ವೈದ್ಯರ ಮೇಲೆ ರೋಗಿಗಳ ಕಡೆಯವರಿಂದ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಎಂಬಿಬಿಎಸ್ ವ್ಯಾಸಂಗದ ಸಂದರ್ಭದಲ್ಲೇ ಮತ್ತು ವೈದ್ಯರಿಗೆ ಆತ್ಮರಕ್ಷಣೆಯ ಕಲೆಯನ್ನೂ ಕಡ್ಡಾಯಗೊಳಿಸಲು ಚಿಂತಿಸಿದೆ. ವೈದ್ಯಕೀಯ ಕೋರ್ಸ್ ಮಾಡುವ ವೇಳೆ ಕರಾಟೆ, ಕುಂಗ್ಫೂ ಮೊದಲಾದ ಸಮರ ಕಲೆಗಳನ್ನು ಹೇಳಿಕೊಡಲಾಗುತ್ತದೆ. ಒಂದು ವೇಳೆ ಆಸ್ಪತ್ರೆಯಲ್ಲಿ ರಾಜಕೀಯ ಮುಖಂಡರಿಂದ, ರೋಗಿಗಳ ಕಡೆಯವರಿಂದ ದಾಳಿಗಳು ನಡೆದಾಗ ಏನು ಮಾಡಬೇಕು. ಅವರಿಂದ ಹೊಡೆತಗಳನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನೂ ಕಲಿಸಲಾಗುತ್ತದೆ.
ಸರ್ಕಾರ ಈ ಬಗ್ಗೆ ರಾಜ್ಯಪಾಲರಿಗೆ ವೈದ್ಯರ ಆತ್ಮರಕ್ಷಣಾ ಕಾಯ್ದೆ ರೂಪಿಸಿ ರಾಜ್ಯಪಾಲರ ಬಳಿ ಕಳುಹಿಸಿದ್ದು, ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದರೆ ವೈದ್ಯರು ಆತ್ಮರಕ್ಷಣೆಗಾಗಿ ಪ್ರತಿ ದಾಳಿ ಮಾಡುವ ಹಾದಿ ಸುಗಮವಾಗುತ್ತದೆ ಎನ್ನಲಾಗಿದೆ. ಈ ಕಾಯ್ದೆ ಜಾರಿಯಾದರೆ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ನಿರ್ಭಯವಾಗಿ ಕಾರ್ಯನಿರ್ವಹಿಸಬಹುದು ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.