ಅಧಿಕ ಇಳುವರಿಗೆ ಹೊದಿಕೆ ತಂತ್ರ


Team Udayavani, Mar 20, 2017, 5:00 PM IST

KANAJA-002.jpg

ಕೊಪ್ಪಳದ ಕುಷ್ಟಗಿ ತಾಲೂಕಿನ ಕೆ.ಬೆಂಚಮಟ್ಟಿ ಗ್ರಾಮದ ಪಕ್ಕದಲ್ಲಿ ಸುಮಾರು 60 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಇಲ್ಲಿಯವರೆಗೆ ಹಣ್ಣುಗಳಿಂದ ತುಂಬಿಕೊಂಡಿದ್ದ ಗಿಡಗಳು ದೂರದಿಂದಲೇ ಕಣ್ಣಿಗೆ ಕುಕ್ಕುವಂತಿದ್ದವು. ಆದರೆ ಇದ್ದಕ್ಕಿದ್ದಂತೆ ಅಲ್ಲಿ ಯಾವ ದಾಳಿಂಬೆ ಗಿಡಗಳೂ ಕಾಣಿಸುತ್ತಿಲ್ಲ. ಅಂದರೆ ಎಲ್ಲ ಗಿಡಗಳು ಬಟ್ಟೆಯ ಮೇಲು ಹೊದಿಕೆ ಹಾಕಿಕೊಂಡು ನಿಂತಿವೆ.

ವೈಜಾnನಿಕ ಕೃಷಿ ಮಾಡುತ್ತಿರುವ ಪುನೀತರೆಡ್ಡಿ ಎಂಬ ರೈತರು ತಮ್ಮ 60 ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದು ಸದ‌Â ಉತ್ತಮ ಇಳುವರಿ ನೀಡುವ ಹಂತದಲ್ಲಿದೆ. ಬಿಸಿಲಿನ ಅಧಿಕ ತಾಪಮಾನದ ಮುನ್ನೆಚ್ಚರಿಕೆ ಕ್ರಮವಾಗಿ ಫ‌ಸಲು ಕೈ ತಪ್ಪಬಾರದು ಎಂದು ತೆಳುವಾದ ಹೊದಿಕೆ ಹಾಕಿದ್ದಾರೆ.

ಸಾಮಾನ್ಯವಾಗಿ ಬೇಸಿಗೆಯ ಅವಧಿಯಲ್ಲಿ ದಾಳಿಂಬೆ ವಿದೇಶಕ್ಕೆ ರಫ್ತಾಗುವುದರಿಂದ ಅಧಿಕ ಬೆಲೆ ತರುತ್ತದೆ. ಅದರಂತೆ ಈ ಅವಧಿಯಲ್ಲಿ ಬಹುತೇಕ ಹಣ್ಣುಗಳು ಬಿಸಿಲಿಗೆ ಬಸವಳಿಯುವುದು ಹೆಚ್ಚು. ಬಿಸಿಲಿನ ತಾಪಮಾನಕ್ಕೆ ಹಾಳಾಗುವ ಹಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿಯೇ ಈ ಹೊದಿಕೆ ತಂತ್ರಜಾnನ ಅಳವಡಿಸಿಕೊಳ್ಳಲಾಗುತ್ತಿದೆ.

ಇಲ್ಲಿಯವರೆಗೆ ಬಹುತೇಕ ರೈತರು ಸೆಣಬಿನ ಚೀಲ, ಕಾಗದ, ಸೀರೆಗಳನ್ನು ಹೊದಿಕೆಯಾಗಿ ಅಳವಡಿಸುತ್ತಿದ್ದರು. ಆದರೆ ಆ ರೀತಿ ಮಾಡುವುದರಿಂದ ಸೂರ್ಯನ ಎಳೆ ಬಿಸಿಲು ಹಣ್ಣಿಗೆ ತಾಕದ ಬೆಳವಣಿಗೆ ಕುಂಠಿತವಾಗುತ್ತಿತ್ತು. ಈ ಹೊಸ ಹೊದಿಕೆಯ ಪ್ರಯೋಗ ನಡೆಯುತ್ತಿದೆ. 

60 ಏಕರೆ ಭೂಮಿಯ ಬೆಳೆದ ದಾಳಿಂಬೆ ಗಿಡಗಳಿಗೆ ಬಿಸಿಲಿನ ತಾಪಮಾನ ಕಡಿಮೆ ಮಾಡಲು ಸುಮಾರು 10-12 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಇದರಿಂದ ಇಳುವರಿಯಲ್ಲಿ 100ಕ್ಕೆ 100ರಷ್ಟು ಫ‌ಲವಂತೆ. 

ತಂತ್ರಜಾnನದ ಅಂಶ ಹೊಂದಿದ ಹೊದಿಕೆ
ಗುಜುರಾತನಿಂದ ಕ್ರಾಪ್‌ ಗ್ರೌ ಕವರ್‌ ಗ್ರೌಥ ಪೊ›ಟೆಕ್ಷನ್‌ (GROW  COVER   GROWTH PROTECTION) ಎಂಬ ಹೆಸರಿನ ತೆಳುವಾದ ಈ ಬಟ್ಟೆ ಸೂರ್ಯನ ನೇರಾಳತೀತ ಕಿರಣಗಳಿಗೆ ತಡೆ ಗೋಡೆಯಾಗಿರುವುದರ ಜೊತೆಗೆ ಒಳಗಿನ ಉಷ್ಣಾಂಶವನ್ನು ಹೊರ ಹಾಕುವ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಬೆಳೆಗೆ ಬೇಕಾಗುವಷ್ಟು ಗಾಳಿ ಹಾಗೂ ಬೆಳಕು ಬಿಡುವ ವ್ಯವಸ್ಥೆ ಹೊಂದಿದೆ ಎಂದು ರೆಡ್ಡಿ ಹೇಳುತ್ತಾರೆ.

ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಬರುವ ದಾಳಿಂಬೆ ಹಣ್ಣುಗಳ ಸರಾಸರಿ 60-70 ಸಾವಿರ ರೂಪಾಯಿ ಬೆಲೆ ತರುತ್ತವೆ. ಬಿರಿದ, ಬಣ್ಣ ರಹಿತವಾದ, ಸೈಜ್‌ ಇಲ್ಲದ ಹಾಗೂ ಉತ್ತಮ ಆಕಾರ ಹೊಂದಿಲ್ಲದಂತ ಶೇ. 20ರಷ್ಟು ಹಣ್ಣುಗಳು ಅರೆಬರೆ ಬೆಲೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಇನ್ನೂ ಶೇ.30ರಷ್ಟು ಭಾಗ ಬಿಸಿಲಿನ ತಾಪಕ್ಕೆ ಹಾಳಾಗುತ್ತದೆ. ನೆರಳಿನ ಹೊದಿಕೆ ಹಾಕುವುದರಿಂದ ನೂರಕ್ಕೆ ನೂರರಷ್ಟು ಲಾಭ ಪಡೆಯಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ.

ದಾಳಿಂಬೆ ಬೆಳೆಗೆಂದೆ ಸಿದ್ಧಪಡಿಸಿದ ಬಟ್ಟೆ ಇದು
ಇದು ವಿಶೇಷವಾಗಿ ಬೆಳೆಗಳ ರಕ್ಷಣೆಗೆ ಸಿದ್ದಪಡಿಸಿದ ಬಟ್ಟೆಯಾಗಿದೆ. ಈ ಬಟ್ಟೆಯನ್ನು ಕನಿಷ್ಟ 4-5 ತಿಂಗಳ ಬಳಸಬಹುದು. ಉಷ್ಣಂಶ ಹೆಚ್ಚಾದರೆ ಬೆಳೆಗಳಿಗೆ ರಕ್ಷಣೆ ನೀಡುವುದರ ಜೊತಗೆ ಉತ್ತಮ ಗಾಳಿ ಬೆಳಕು ನೀಡುತ್ತದೆ. ಇದನ್ನು ಬಳಸುವುದ ಹಿಂದೆ ಎರಡು ಕಾರಣಗಳು ಇವೆ. ಒಂದು ಡಿಸೆಂಬರನಿಂದ ಫೆಬ್ರವರಿ ವರೆಗೆ ಇಬ್ಬನಿ ಬಿಳುವುದರಿಂದ ಕಾಯಿಗಳ ಮೇಲೆ ನೀರಿನ ಹನಿ ಕುಳಿತು ಬಿಸಿಲಿಗೆ ಆವಿಯಾಗುತ್ತದೆ. ಆವಿಯಾದ ಭಾಗದಲ್ಲಿ ಸಣ್ಣ ಸಣ್ಣ ಚುಕ್ಕೆಗಳು ಮೂಡುತ್ತವೇ. ಚುಕ್ಕೆಗಳ ಭಾಗದ ಒಳಗಡೆ ಹಣ್ಣು ಕಲರ್‌ಫ‌ುಲ್‌ ಬರುವುದಿಲ್ಲ. ಹಣ್ಣಿನ ಮೇಲೆ ಚಿಕ್ಕೆಗಳು ಕಾಣುವುದರಿಂದ ಹಣ್ಣುಗಳಿಗೆ ಮಾರುಕಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ಬೆಲೆ ಸಿಗುವುದಿಲ್ಲ. ಈಗ ಬೇಸಿಗೆ ಇರುವುದರಿಂದ, ಉಷ್ಣಾಂಶದಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಕಾಯಿಗಳ ಬೆಳವಣಿಗೆ ಕುಂಠಿತವಾಗುತ್ತದೆ. 

“ಸಧ್ಯ ನಮ್ಮ 60 ಎಕರೆ ಭೂವಿಯಲ್ಲಿ ಸುಮಾರು 250 ಟನ್‌ ಬೆಳೆ ಬರುವ ನಿರೀಕ್ಷೆ ಇದೆ. ನಾವು ಗಿಡಗಳನ್ನು ರಕ್ಷಣೆ ಮಾಡದೆ ಇದ್ದರೇ ಸುಮಾರು 120 ಟನ್‌ ಬೆಳೆ ಹಾಳಾಗುತ್ತದೆ. ಹೀಗಾಗಿ ಹಣ್ಣಿನ ರಕ್ಷಣೆಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ಹೊದಿಕೆ ಹಾಕಿದ್ದೇವೆ ಎನ್ನುತ್ತಾರೆ ಪುನೀತರೆಡ್ಡಿ.

– ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.