ಶಿರಸಿಗೆ ಬನ್ನಿ “ಸತ್ಕಾರ’ ಪಡೆಯಿರಿ


Team Udayavani, Jun 4, 2018, 12:08 PM IST

hotel.jpg

1961ರಲ್ಲಿ ಒಂದು ಮಸಾಲೆ ದೋಸೆಗೆ 25 ಪೈಸೆ ಇತ್ತು. ಆಗ ಚಹಾಕ್ಕೆ 2 ಅಣೆ. ಮೂರಾಣೆ ಮಾಡಿದ್ದಕ್ಕೆ ಗಲಾಟೆ ಕೂಡ ಆಗಿತ್ತು. ಇಂದು ನಿರ್ವಹಣಾ ವೆಚ್ಚ, ಕೂಲಿ,  ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಕಾರಣದಿಂದ ದೋಸೆಗೆ 35 ರೂ. ಮಾಡಿದ್ದೇವೆ. 

1950ರ ದಶಕ. ಶಿರಸಿ-ಕುಮಟಾ ಹೆದ್ದಾರಿಯ ಕತಗಾಲ ಸಮೀಪದ ಉಪ್ಪಿನಪಟ್ಟಣ ಎಂಬ ಪುಟ್ಟ ಊರಿನಲ್ಲಿ ಮಳೆಗಾಲದಲ್ಲಿ ನೆರೆ ಬಂದು ಮನೆ ಹಾಗೂ ಇದ್ದ ಸಣ್ಣ ಹೋಟೆಲ್ಲೂ ಹೋಯಿತು. ಹೆಂಡ್ತಿ ಮಕ್ಕಳೊಂದಿಗೆ ಜೀವನ ನಿರ್ವಹಣೆಗೆ ಶಿರಸಿಗೆ ಬಂದವರು ಕಾಯಿ ವ್ಯಾಪಾರ ಶುರು ಮಾಡಿಕೊಂಡರು. ಐದಾರು ವರ್ಷ ಕಾಯಿ ವ್ಯಾಪಾರ ಮಾಡಿದರೂ ಹಳೆ ಕಸುಬು ಹೋಟೆಲ್‌ ಆರಂಭಿಸುವ ಕನಸು ಗರಿ ಗೆದರಿತು. ಮೂರ್‍ನಾಲ್ಕು ಕಡೆ ಹೋಟೆಲ್‌ ಆರಂಭಿಸಲು ಜಾಗ ನೋಡಿ, ಕೊನೆಗೆ ಉಣ್ಣೇ ಮಠ ಗಲ್ಲಿಯ ತಗ್ಗಿನ ಜಾಗವನ್ನು ನೋಡಿದರು. 1961ನೇ ಇಸವಿಯಲ್ಲಿ ಹೋಟೆಲ್‌ ಆರಂಭಿಸಿ, ಅದಕ್ಕೆ ಸತ್ಕಾರ ಎಂಬ ಫ‌ಲಕ ಹಾಕಿದರು. 

ಅಂದಿನಿಂದ, ಇಡೀ ಕುಟುಂಬವೇ ಹೋಟೆಲ್‌ ಉದ್ದಿಮೆಯಲ್ಲಿ ತಲ್ಲೀನವಾಯಿತು. ಮಕ್ಕಳು ಶಾಲೆಗೆ ಹೋಗಿ ವಾಪಸ್ಸು ಬಂದವರು ಹೋಟೆಲ್‌ನಲ್ಲಿ ಕೆಲಸ ಮಾಡಿದರು. ಇಡೀ ಹೋಟೆಲ್‌ನಲ್ಲಿ ಲವಲವಿಕೆಯಿಂದ ಕೆಲಸ ಮಾಡಿದರು. ನಾರಾಯಣ ವಾಸುದೇವ ನಾಯಕ ಈ ಹೋಟೆಲ್‌ನ ಸ್ಥಾಪಕರಾದರು. ಉಪ್ಪಿನ ಪಟ್ಟಣದಲ್ಲಿ ನೋವುಂಡು ಘಟ್ಟ ಏರಿದ್ದ ನಾರಾಯಣ ನಾಯಕ ಕುಟುಂಬ ಅದೇ “ಉಪ್ಪು’ ಬಳಸಿ ಹೋಟೆಲ್‌ ಆರಂಭಿಸಿತು. ಅದು ಇಂದು ಹತ್ತಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿದೆ. ಇವರ ಕುಟುಂಬವನ್ನೂ ಬೆಳೆಸಿದೆ.
ಇದು ಹೋಟೆಲ್‌ನ ಕಥೆ. 

ಆದರೆ, ಇಷ್ಟೇ ಆಗಿದ್ದರೆ ವಿಶೇಷ ಎನಿಸುತ್ತಿರಲಿಲ್ಲ. ಎಷ್ಟೋ ಮಂದಿಗೆ ಸತ್ಕಾರ ಎಂದರೆ ತಕ್ಷಣ ನೆನಪಾಗುವುದು ಮಸಾಲೆ ದೋಸೆ. “ಸತ್ಕಾರ ದೋಸೆ ತಿಂಬನ ಬಾ’ ಎಂದು ಕರೆದುಕೊಂಡು ಹೋದರೆ ಅದು ಮಸಾಲೆ ದೋಸೆಗೇ ಆಗಿರುತ್ತದೆ. ಪುಡಿಚಟ್ನಿ ಮಸಾಲೆ ಇನ್ನೂ ಗಮ್ಮತ್ತು. ಚಟ್ನಿ ಹಾಗೂ ಸಂಬಾರ ಜೊತೆಗೆ ನೀಡುವ ಮಸಾಲೆ ದೋಸೆ ಸತ್ಕಾರ ಹೆಸರಿನ ಜೊತೆಗೂ ಕಳೆದ ಐದೂವರೆ ದಶಕಗಳಿಂದ ಅಂಟಿಕೊಂಡಿದೆ.

ಇಂದು ನಾರಾಯಣ ನಾಯಕ ಅವರು ಇಲ್ಲ. ಬದಲಿಗೆ ಅವರ ಮಕ್ಕಳಾದ ವಾಸುದೇವ ನಾಯಕ ಹಾಗೂ ಸುಧೀರ ನಾಯಕ ಹೋಟೆಲನ್ನು ನಡೆಸುತ್ತಿದ್ದಾರೆ. ಬಪ್ಪ ಅಪ್ಪನಿಗೆ ಹೆಗಲಾಗಿ ಎಂ.ಕಾಂ ಓದಿದ ಸಂದೀಪ ನಾಯಕ ಹೆಗಲು ಕೊಟ್ಟಿದ್ದಾರೆ. ಮುಂಜಾನೆ 7ರಿಂದ ರಾತ್ರಿ 9ರ ತನಕ ಮಸಾಲೆ ದೋಸೆ ಏನಿಲ್ಲ ಎಂದರೂ 500ಕ್ಕೂ ಹೆಚ್ಚು ಮಾರಾಟವಾಗುತ್ತದೆ. ಬಿಸಿ ಬಿಸಿ ಮಸಾಲೆ ಐವತ್ತು ಅರವತ್ತು ಕಿಲೋಮೀಟರ್‌ ಆಚೆಯ ಊರುಗಳಿಗೂ ಪಾರ್ಸಲ್‌ ಆಗುತ್ತದೆ. 

ಮಸಾಲೆ ದೋಸೆಯನ್ನು ಎಲ್ಲ ಕಡೆ ಮಾಡುತ್ತಾರೆ. ಅದೇನ್‌ ವಿಶೇಷ ಸಂಯೋಜನೆ ಗೊತ್ತಿಲ್ಲ;  ಇಲ್ಲಿಯದ್ದು ಟೇಸ್ಟ್‌ ಬೇರೆ ಎನ್ನುತ್ತಲೇ ಊರಿಗೆ ಬಂದವರೂ ಪೇಟೆ ನಡುವಿನ ಸತ್ಕಾರ ಹೋಟೆಲ್‌ಗೆ ಬರುತ್ತಾರೆ. ಈ ಹಿಂದೆ ನಾರಾಯಣ ನಾಯಕ ಅವರೇ ಸ್ವತಃ ದೋಸೆ ಹಿಟ್ಟು ಸಿದ್ಧಗೊಳಿಸಿ ಎರೆಯುತ್ತಿದ್ದರು. ಅಕ್ಕಿ ನೆನಸಿಟ್ಟು ಅದಕ್ಕೆ ಮೆಂತ್ಯ, ಜೀರಿಗೆ, ಉದ್ದಿನಬೇಳೆ, ಉಪ್ಪುಗಳನ್ನೆಲ್ಲ ಹದವಾಗಿ ಹಾಕಿ, ರುಬ್ಬಿ ಅಣಿಗೊಳಿಸುತ್ತಿದ್ದರಂತೆ. ಈಗ ಮಕ್ಕಳೂ ಅಪ್ಪ ಹೇಳಿಕೊಟ್ಟ ರೆಸಿಪಿಯನ್ನೇ ಅನುಸರಿಸಿದ್ದಾರೆ. ಇಂದಿಗೂ ಒಮ್ಮೆಲೇ ದೋಸೆ ಹಿಟ್ಟು ಸಿದ್ಧಗೊಳಿಸುವುದಿಲ್ಲ. ಬದಲಿಗೆ ದಿನಕ್ಕೆ ಮೂರು ಸಲ ಹಿಟ್ಟು ಬೀಸಿ,  ಎರೆದು ಕೊಡುತ್ತಾರೆ. ಮಸಾಲೆ ದೋಸೆಯೊಳಗೆ ಪುಟಾಣಿ ಹುಣಸೆಹಣ್ಣು, ಖಾರದಪುಡಿ, ಕೊಬ್ಬರಿ ಉಪ್ಪು ಹಾಕಿ ಹದಗೊಳಿಸಿದ ಪುಡಿ ಚಟ್ನಿ, ಬಟಾಟೆ ಪಲ್ಯ ಹಾಕಿ ಕೊಡುತ್ತಾರೆ. 

“57 ವರ್ಷದಿಂದ ಅಪ್ಪ ಹೇಳಿಕೊಟ್ಟ ಮಾದರಿಯಲ್ಲೇ ಹೋಟೆಲ್‌ ನಡೆಸಲಾಗುತ್ತಿದೆ. 1961ರಲ್ಲಿ ಒಂದು ಮಸಾಲೆ ದೋಸೆಗೆ 25 ಪೈಸೆ ಇತ್ತು. ಆಗ ಚಹಾಕ್ಕೆ 2 ಅಣೆ. ಮೂರಾಣೆ ಮಾಡಿದ್ದಕ್ಕೆ ಗಲಾಟೆ ಕೂಡ ಆಗಿತ್ತು. ಇಂದು ನಿರ್ವಹಣಾ ವೆಚ್ಚ, ಕೂಲಿ,  ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಕಾರಣದಿಂದ ದೋಸೆಗೆ 35 ರೂ. ಮಾಡಿದ್ದೇವೆ. ಹೋಟೆಲ್‌ ನಿರ್ವಹಣೆ ಸುಲಭದ್ದಲ್ಲ. ಅದರದ್ದೇ ಆದ ಕಷ್ಟಗಳೂ ಇವೆ. ಆದರೆ, ನಮಗೆ ಬೇರೆ ಗೊತ್ತಿಲ್ಲ. ಗುಣಮಟ್ಟ ಕಾಯ್ದುಕೊಳ್ಳಬೇಕಾದ ಜವಾಬ್ದಾರಿಗೆ ಹೆಗಲು ಕೊಟ್ಟಿದ್ದೇವೆ. ನಮ್ಮ ಗ್ರಾಹಕರಿಗೆ ಖುಷಿ. ಅದೇ ನಮಗೆ ಸಂತೃಪ್ತಿ ಎನ್ನುತ್ತಾರೆ’ ವಾಸುದೇವ ನಾಯಕ. 

ಸತ್ಕಾರದಲ್ಲಿ ಕೇವಲ ದೋಸೆ ಮಾತ್ರವಲ್ಲ. ಕಟ್ಲೆàಟ್‌, ಮೊಸರು ವಡೆ ಕೂಡ ಸೂಪರ್‌ ಎನ್ನುವವವರೂ ಇದ್ದಾರೆ. ಉತ್ತರ ಭಾರತೀಯ ತಿಂಡಿಗಳಿಗಾಗಿ ಈಗ  ನ್ಯೂ ಸತ್ಕಾರ ಕೂಡ ಆರಂಭಿಸಿದ್ದಾರೆ. ಇಡ್ಲಿ, ಉಪ್ಪಿಟ್ಟು, ಪೂರಿ, ದೋಸೆ, ಬೋಂಡಾ, ಕೊಲ್ಲಾಪುರ ಸ್ವೀಟ್‌ಗಳೂ ಇವೆ. ಆದರೆ, ಹೋಟೆಲ್‌ಗೆ ಬರುವ ಗ್ರಾಹಕರಲ್ಲಿ ಇಂದಿಗೂ ಶೇ.60ಕ್ಕೂ ಹೆಚ್ಚು ದೋಸೆ ಬೇಕು ಎನ್ನುವವರೇ. 

ಇನ್ನು ಮಲೆನಾಡು ಸೀಮೆಯಲ್ಲಿ ದೋಸೆ ಎಂದರೆ ಪ್ರತಿ ಮನೆಯ ಬೆಳಗು. ಸತ್ಕಾರ ಇಲ್ಲಿನ ಸಂಪ್ರದಾಯ, ಜೀವನ ವಿಧಾನ. ದೋಸೆ ಹಾಗೂ ಸತ್ಕಾರ ಎರಡೂ ಜೊತೆಯಾಗಿ ಶಿರಸಿ ಪೇಟೆಯಲ್ಲಿ “ಸತ್ಕಾರ ದೋಸೆ’ ಆಗಿದೆ. 

ಮಾಹಿತಿಗೆ- 08384-226481 

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.