CONNECT WITH US  

ಸಾವು ಗೆದ್ದವರ ಕಥೆ

ಲೈಫ್ ಕ್ಯಾಮೆರಾ ಆ್ಯಕ್ಷನ್‌

ಓಪನ್‌ ವಾಟರ್‌ (2003)
ನಿರ್ದೇಶಕ: ಕ್ರಿಸ್‌ ಕೆಂಟಿಸ್‌
ಅವಧಿ: 79 ನಿಮಿಷ

ನೈಜ ಘಟನೆ ಆಧರಿಸಿ ತೆಗೆದ ಇಂಗ್ಲಿಷ್‌ ಚಿತ್ರ "ಓಪನ್‌ ವಾಟರ್‌'. ಅಮೆರಿಕದ ಡೇನಿಯಲ್‌ ಕೈಂಟ್ನರ್‌ ಮತ್ತು ಸುಸೇನ್‌ ವಾಟಿRನ್ಸ್‌ ದಂಪತಿ, ಕೆರಿಯನ್‌ ದ್ವೀಪಕ್ಕೆ ರಜೆ ಅನುಭವಿಸಲು ಹೋಗ್ತಾರೆ. ಅಲ್ಲಿನ ಸ್ಕೂಬಾ ಡೈವಿಂಗ್‌ ತಂಡದೊಂದಿಗೆ ಒಂದಷ್ಟು ದೂರ ಸಮುದ್ರದಲ್ಲಿ ಕ್ರಮಿಸುತ್ತಾರೆ. ಆದರೆ, 20 ಜನರ ಆ ತಂಡವು ಮರಳುವಾಗ ಅದರ ಸಂಖ್ಯೆ 18 ಆಗುತ್ತದೆ. ಇಬ್ಬರು ನಾಪತ್ತೆ ಆಗಿರ್ತಾರೆ! ಅವರೇ ಈ ದಂಪತಿ! ಇವರಿಬ್ಬರೂ ಹಾದಿ ತಪ್ಪಿ, ಎಷ್ಟೋ ದೂರ ಕ್ರಮಿಸಿ, ಮೇಲೆದ್ದು ಬರುವಾಗ, ತಾವಿರುವುದು ಮಧ್ಯ ಸಮುದ್ರವೆಂದು ಗೊತ್ತಾಗಿ, ಧೈರ್ಯಗುಂದುವಾಗ ಪ್ರೇಕ್ಷಕನೂ ತಬ್ಬಿಬ್ಬು. ಈ ವೇಳೆ ಶಾರ್ಕ್‌ಗಳ ದಾಳಿ ಆತಂಕ ಹುಟ್ಟಿಸುತ್ತವೆ. ಪತ್ನಿ ಸುಸೇನ್‌ ಕೈ ತಪ್ಪಿ ಹೋಗುತ್ತಾಳೆ. ಗಂಡನನ್ನು ಶಾರ್ಕ್‌ಗಳ ದೊಡ್ಡ ಹಿಂಡು ಸುತ್ತುವರಿಯುವ ದೃಶ್ಯವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಇವರ ಜೀವ ಉಳಿಯುತ್ತಾ? ಇಲ್ಲವಾ? ಎನ್ನುವುದೇ ಇಲ್ಲಿನ ಮೈನವಿರೇಳಿಸುವ ಕತೆ. 1998ರಲ್ಲಿ ಒಂದು ಜೋಡಿ ಇದೇ ರೀತಿ, ಆಸ್ಟ್ರೇಲಿಯಾದ ದಿ ಗ್ರೇಟ್‌ ಬ್ಯಾರಿಯರ್‌ ರೀಫ್ನಿಂದ ನಾಪತ್ತೆ ಆಗಿದ್ದರು. ಅವರ ಎದುರಿಸಿದಂಥ ಸವಾಲುಗಳೇ "ಓಪನ್‌ ವಾಟರ್‌'ಗೆ ಪ್ರೇರಣೆ. ಸಮುದ್ರದೊಳಗಿನ ಕತೆಯೇ ಆದರೂ, ಕ್ಯಾಮೆರಾ ವರ್ಕ್‌ ಅತ್ಯಂತ ಸಹಜವಾಗಿ,  ಅದ್ಭುತವಾಗಿ ಮೂಡಿಬಂದಿದೆ.  ಹಲವು ಫಿಲ್ಮ್ ಫೆಸ್ಟಿವಲ್‌ಗ‌ಳಲ್ಲಿ ಮೆಚ್ಚುಗೆ ಗಿಟ್ಟಿಸಿಕೊಂಡ ಈ ಚಿತ್ರ, ದಾಖಲೆಯ ಗಳಿಕೆಯನ್ನೂ ಕಂಡಿದೆ. ಇದರ ಮುಂದುವರಿದ ಭಾಗಗಳೂ ಅಷ್ಟೇ ಜನಪ್ರಿಯ.

ಚೇತನ್‌ ಓ.ಆರ್‌.

Trending videos

Back to Top