ನಮ್ಮ ಹೆಮ್ಮೆಯ ಅಜರಾಮರಗಳು: ನಾಡಿನ ಸೀನಿಯರ್‌ ಸಿಟಿಜನ್‌ 


Team Udayavani, Jun 23, 2018, 3:34 PM IST

1-aa.jpg

 ವಯಸ್ಸು ಕೇಳಂಗಿಲ್ಲ. ನೋಡಿದರ ಸಾಕು ಇವರ ಈ ಶತಮಾನದವರಲ್ಲ ಅನಿಸುತ್ತದೆ. ಆಯಸ್ಸು ಇನ್ನೂ ಮುಗಿದಿಲ್ಲ. ಸಾವು ಸಧ್ಯಕ್ಕಿಲ್ಲ. ಯಾರಿವರು? ಹೌದು, ನಮ್ಮ ರಾಜ್ಯದಲ್ಲಿರುವ ಸೀನಿಯರ್‌ ಸಿಟಿಜನ್‌ಗಳು. ಶತ ಶತಮಾನಗಳಿಂದಲೂ ಬದುಕಿರುವ ಇವರ ಹೇಗಿದ್ದಾರೆ? ನೋಡೋಣ ಬನ್ನಿ. 

ಸಿಟಿಜನ್‌ -1 
ಹುಣಸೇ ಮರ

 ನೆಲೆ- ದೇವನಹಳ್ಳಿ ಬೆಂಗಳೂರು ಗ್ರಾಮಾಂತರ
 ವಯಸ್ಸು-900

   ದೇವನಹಳ್ಳಿಯಿಂದ ಸೂಲಿಬೆಲೆ ಕಡೆ ಹಾಗೇ ಹೋಗುತ್ತಿದ್ದರೆ ತಲೆಯ ಮೇಲೆ ಒಂದಷ್ಟು ವಿಮಾನಗಳು ಹಾರಿದಾಗ, ಗುಂಡಿಗೆ ಅಲುಗಾಡಿದಂತಾಯಿತು.  ಇನ್ನೊಂದಷ್ಟು ವಿಮಾನಗಳು ಕಾಗೆಯಂತೆ ಅಪ್ಪಳಿಸುವ ರೀತಿ ಹೋದಾಗಲಂತೂ ರಸ್ತೆಯ ಕಡೆಗಿದ್ದ ಗಮನ ವಿಕೇಂದ್ರಿಕರಣವಾಗಿ ಆಕಾಶದ ಕಡೆ ತಿರುಗಿತು. ಈ ಪರದಾಟವನ್ನು ನೋಡುತ್ತಿದ್ದ ಸೂರ್ಯ ನಗುತಲಿದ್ದ. ನೆತ್ತಿಯ ಮೇಲೆ ನಿಂತು. 

  ಹಾಗೇ ಮುಂದಡಿ ಇಡುತ್ತಿರುವಾಗಲೇ ಎಡಭಾಗಕ್ಕೆ ಗವ್ವೆನ್ನುವ ನಿಶºಬ್ದ ಜೊತೆಯಾಯಿತು. ಆಕಾಶದಲ್ಲಿ ಕಿವಿಗಡಚಿಕ್ಕುವ ಸದ್ದು, ಕೆಳಗೆ ಈ ನಿಶಬ್ದ ತೀರ. ನೋಡಿದರೆ ಗುಂಪು ಗುಂಪಾಗಿ ನಿಂತ ಮರಗಳು. ಏನೇನೋ ಮಾತನಾಡಿಕೊಳ್ಳುವಂತಿದೆ. 

ದೂರದಲ್ಲಿ….
“ಅಲ್ಲೇ, ಅಲ್ಲೇ ಇದೆ. ಕಲ್ಲು ತಗೊಂಡು ಬೀಸಿರಿ’
 “ಹೋ. … ಅದೋ… ಅದೋ ಕಾಣ್ತದೆ’
 “ಇಳಿ ತಳಕ್ಕೆ…’
  ಕೂಗು ಎಲ್ಲಿಂದಲೋ ಕೇಳುತ್ತಿದೆ. ಧನ್ವಿಯ ದಿಕ್ಕಿಗೆ ಕಣ್ಣ ನೆಟ್ಟರೆ ಯಾರೂ ಕಾಣುತ್ತಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ತುಂಬು ಮರಗಳು. ಇದೊಂದು ರೀತಿ ಬಂಡೀಪುರ ಕಾಡಿಗೆ ಕಾಲಿಟ್ಟ ಅನುಭವ. ಆದರೆ ಪ್ರಾಣಿಗಳು ಮಾತ್ರ ಇಲ್ಲ. ಏರ್‌ಪೋರ್ಟ್‌ ರಸ್ತೆ ಅಂದರೆ ಕಾರು, ಬಸ್ಸಿನ ಗದ್ದಲಪುರ.
ಅಲ್ಲಿ ಇಂಥ ಒಂದು ಸ್ಥಳ ಇದೆಯಾ?
  ನಂಬೋದಕ್ಕೆ ಸ್ವಲ್ಪ ಮನಸ್ಸು ಹಿಂದೆ ಮುಂದೆ ನೋಡಿತು. ಆದರೆ ಕಣ್ಣ ಮುಂದೆ ವಾಸ್ತವ ಇತ್ತು. 

ಈ ಹಳ್ಳಿಯ ಹೆಸರು ಹೊಸನಲ್ಲೂರು. ಊರಿನ ಮುಂಭಾಗದ ರಸ್ತೆಯ ಎರಡೂ ತಟದಲ್ಲಿ ತೋಪಿದೆ. ತೋಪಿನ ತುಂಬ ಬರೀ ಹಣಸೇ ಮರಗಳು. 52 ಎಕರೆಯಲ್ಲಿ ಸುಮಾರು 300 ಮರಗಳು ಇರಬಹುದು. ಇದರ ವಯಸ್ಸು ಕೇಳಿದಾಗ ಗಾಬರಿಯಾಯಿತು. ಏಕೆ ಗೊತ್ತಾ? ಅಲ್ಲಿರುವ ಮರಗಳು ವಯಸ್ಸು  900 ವರ್ಷ. 

 ಹನ್ನೆರಡನೇ ಶತಮಾನದಲ್ಲಿದ್ದ ಉದಯ ಮಾರ್ತಾಂಡ ರಾಜನ ಕಾಲನದ್ದು ಈ ಜಾಗ ! ಈ ಹುಣಸೆ ತೋಪಿನ ಹಿಂದೆ ರೋಚಕ ಕಥೆಯೇ ಇದೆ.  ಆತನ ಕಾಲದಲ್ಲಿ ನಲ್ಲೂರು ಪ್ರಾಂತ್ಯ ರಕ್ಷಣೆಗೆ ಈ ಹುಣಸೆ ಮರಗಳು ನಿಂತಿದ್ದವಂತೆ.  ಶತ್ರು ಪಡೆ ಗಾಢವಾಗಿ ನಿಂತಿದ್ದ ಹುಣಸೇ ಮರಗಳನ್ನು ಬೇಧಿಸಿ ನಲ್ಲೂರ ಪ್ರವೇಶಿಸಲು ಒದ್ದಾಡುತ್ತಿದ್ದರಂತೆ. ಕೊನೆಗೆ ರಾಜನ ಮಗಳೇ ತನ್ನ ಗಂಡನಿಗೆ ಗುಟ್ಟು  ಬಿಟ್ಟು ಕೊಟ್ಟಿದ್ದರಿಂದ ಮಾರ್ತಾಂಡನ ಅಂತ್ಯವಾಯಿತು ಅನ್ನೋದು ಇತಿಹಾಸ ಹೇಳುವ ಕಥೆ. 

 ದಢೂತಿ ಗಾತ್ರದ ಹುಣಸೆ ಮರಗಳನ್ನು ನೋಡಿದರೆ ಮನಸ್ಸು ಝಲ್‌ ಅನ್ನುತ್ತದೆ. ಒಂದೊಂದು ಮರದ ಸುತ್ತಳತೆ 25-30 ಅಡಿ. ಅಂದರೆ ಬೆಂಗಳೂರಿನಲ್ಲಿ ಪುಟ್ಟ ಸಂಸಾರ ಮಾಡುವಷ್ಟು ಜಾಗ. ಬೇರುಗಳು ಇಡೀ ಭೂಮಿಯನ್ನು ಹರಡಿ, ಮತ್ತೆ ರೆಂಬೆಗಳಾಗಿ, ಮರಗಳಾಗಿವೆ.  ದೂರದಿಂದ ನೋಡಿದಾಗ ಇದು ಆಲದಮರ ಅನ್ನೋ ಭಾವ ಮೂಡುತ್ತದೆ. ಆದರೆ ಹತ್ತಿರ ಹೋದಾಗಲೇ ವಿಸ್ಮಯ ಗೊತ್ತಾಗುವುದು. ಬೇರುಗಳು ರಂಬೆಯಾಗುವುದು ಕೇವಲ ಆಲದಮರದಂತೆ ಮಾತ್ರವಲ್ಲ,  ಹುಣಸೇ ಮರಗಳಲ್ಲೂ ಸಾಧ್ಯ ಅನ್ನೋದು ಇಲ್ಲಿಗೆ ಬಂದರೆ ತಿಳಿಯುತ್ತದೆ. ಪ್ರತಿ ಮರದಲ್ಲೂ 20-30 ಗಂಟುಗಳು. ಈ ಗಂಟುಗಳು ಅವುಗಳ ವಯಸ್ಸು ಎಷ್ಟು ಎನ್ನುವುದು ಹೇಳುತ್ತದೆ. ಸುಮಾರು 60 ಜಾತಿಯ ಪಕ್ಷಿಗಳು ಇಲ್ಲಿ ನೆಲೆ ಕಂಡಿವೆ. 

 ಹುಣಸೆ ಮರಗಳ ತುಂಬಾ ಕೋತಿಗಳು. ಮರ ಮುಟ್ಟಿದರೆ ಮೈ ಮೇಲೆ ಬೀಳುವ ಭಯ. 
  ತೋಪಿನ ಒಳಗೆ ಎ.ಸಿ ಹಾಕಿದ ಅನುಭವವಾಗುತ್ತದೆ. ಒಮ್ಮೆಗೆ 18  ಡಿಗ್ರಿ ಉಷ್ಣಾಂಶ ಮಾತ್ರ ಇತ್ತು. ಇಡೀ ಆಕಾಶವನ್ನು ಹುಣಸೆ ಮರಗಳು ಹರಡಿಕೊಂಡಿದ್ದವು. ಮಳೆಗಾಲದಲ್ಲಿ ಸೂರ್ಯನ ಕಿರಣಗಳು ತೋಪಿನ ಒಳಗೆ ಕಾಲಿಡುವುದು ಮಧ್ಯಾಹ್ನದ ಮೇಲೆ. ಆ ಮಟ್ಟಿಗೆ ಹುಣಸೆ ಮರಗಳು ಹೊರ ಚಾದರ ಹೊದಿಸಿರುತ್ತವೆ. ಬಹುಶ ಇಡೀ ಜಗತ್ತಿನಲ್ಲಿ 5 ಜಾತಿಯ ಹುಣಸೆ ಮರಗಳು ಒಂದೇ ಕಡೆ ಇರುವುದು ಅಪರೂಪ. ಆದರೆ ಇಲ್ಲಿದೆ. 5 ಬೀಜ, 3 ಬೀಜದ ಹುಣಸೆ ಕೆಂಪು, ಕಪ್ಪು ಸಿಹಿ ಹುಣಸೆಗಳು ಇಲ್ಲಿವೆ.

 ಇಷ್ಟು ದೊಡ್ಡ ಮರಗಳಿಂದ ಟನ್‌ಗಟ್ಟಲೆ ಹುಣಸೆ ಕಾಯಿಸಿಗುತ್ತದೆ. ಆದರೆ ಯಾರೂ ಇವನ್ನು ಮುಟ್ಟವಂತಿಲ್ಲ. ವರ್ಷಕ್ಕೋ, ಎರಡುವರ್ಷಕ್ಕೋ ಟೆಂಡರ್‌ ಮೂಲಕ ಹರಾಜು ಹಾಕುತ್ತಾರೆ.  ಊರಿನವರು ಆಗಾಗ ಇತ್ತ ಸುಳಿದಾಡುತ್ತಿರುತ್ತಾರೆ. ವರ್ಷಕ್ಕೋ , ಎರಡು ವರ್ಷಕ್ಕೋ ಒಮ್ಮೆ ಗಂಗಮ್ಮನ ಜಾತ್ರೆ ನಡೆಯುತ್ತದೆ.  ಸುಮಾರು 18 ಹಳ್ಳಿಗಳು ಸೇರಿ ವೈಭವದ ಜಾತ್ರೆ ಮಾಡುತ್ತಾರೆ.   ಪುಣ್ಯದ ವಿಚಾರ ಎಂದರೆ, 52ಎಕರೆಗೆ ಸರ್ಕಾರ ಬೇಲಿ ಹಾಕಿಸಿರುವುದು. ಪ್ರತಿಯೊಂದು ಮರಕ್ಕೂ ನಂಬರ್‌ ಪ್ಲೇಟ್‌ಗಳನ್ನು ಹಾಕಿದೆ. ಇದರ ಜೊತೆಗೆ ನಲ್ಲೂರಿನ ಇತಿಹಾಸ ಹುಣಸೇ ಮರಗಳು ಎನ್ನುವ ದೊಡ್ಡ ಬೋರ್ಡು ಹೊರತಾಗಿ ಸಂರಕ್ಷಣೆ ಏನೇನೂ ಇಲ್ಲ ಅನ್ನೋದರ ಕುರುಹಾಗಿ ಒಂದಷ್ಟು ಬಿಸಲೇರಿ ಬಾಟಲಿಗಳನ್ನು ಕಾಣಬಹುದು.

ಕಟ್ಟೆ ಗುರುರಾಜ್‌
ಚಿತ್ರಗಳು-ನಲ್ಲೂರು ಮಂಜುನಾಥ್‌

ಸಿಟಿಜನ್‌ 2
ಗೋರಕ್ಷಿ ಮರ 
ನೆಲೆ- ಬಿಜಾಪುರ
 ವಯಸ್ಸು-900 ವರ್ಷ

ಈಸಲದ ಬೇಸಿಗೆಯಲ್ಲಿ ವಿಜಯಪುರದ ಕಡೆಗೇನಾದ್ರೂ ಹೋಗಿದ್ರಾ ? ಹೋಗಿದ್ರೆ ಗೋಲ್‌ಗ‌ುಂಬಜ್‌ ಅಂತೂ ನೋಡೇ ಇರುತ್ತೀರಿ. ಅಲ್ಲಿನ ಗೋಡೆಗೆ ಮೂತಿ ಅಂಟಿಸಿ ಪಿಸುಗುಟ್ಟಿ,  ಆಕಡೆಯಿಂದ ಕಿವಿ ಗೊಟ್ಟು ಕೇಳಿ ಮಕ್ಕಳು ಹರ್ಷಪಟ್ಟಿರಬೇಕಲ್ಲ? ಗುಂಬಜ್‌ ಕೆಳಗೆ ನಿಂತು ಚಪ್ಪಾಳೆ ಹೊಡೆದು ಪ್ರತಿ ಧ್ವನಿಯಾಗಿ ಕೇಳಿಸುವ ಅದೇ ಚಪ್ಪಾಳೆ ಸದ್ದಿಗೆ ಮುಪ್ಪಾದ ಮುದುಕರೂ ಮಕ್ಕಳಂತೆ ಸಂಭ್ರಮಿಸುತ್ತಾರೆ. ಹಾಗೇ ಬಾರಾಕಮಾನ್‌ , ಇಬ್ರಾಹಿಂ ರೋಜಾ , ಯೋಗಾಪುರ ದರ್ಗಾ ಎಲ್ಲ ಸುತ್ತಾಡಿರ್ಬೇಕಲ್ಲ ? ಅಷ್ಟಕ್ಕೂ ನೀವು ಇಬ್ರಾಹಿಂ ರೋಜಾಕ್ಕೆ ಅಥವಾ ಯೋಗಾಪುರ ದರ್ಗಾಗೆ  ಹೋದಾಗ ಅಲ್ಲೇನಾದ್ರೂ ರುಸಲು ಮರದ ನೆರಳು ಹುಡುಕಿದ್ದರೆ ಚೆನ್ನಿತ್ತು. 

ಹೌದು, ವಿಶೇಷ ಇರುವುದು ಅಲ್ಲೇ. ಶತಮಾನಗಳಿಂದ ಬಂದ ಯಾತ್ರಾರ್ಥಿಗಳಿಗೆ ನೆರಳನ್ನು, ಆಸರೆ ಹುಡುಕಿಕೊಂಡು ಬರುವ ಹಕ್ಕಿಗಳಿಗೆ ಸ್ಥಳವನ್ನೂ , ಹಣ್ಣುಗಳನ್ನು ನೀಡುತ್ತಿರುವ ಈ ಮರಗಳ ಇತಿಹಾಸ ಆಸಕ್ತಿಕರ. ವಿಜಯಪುರ ಅಂದಾಕ್ಷಣ ನೆನಪಿಗೆ ಬರುವುದು ಆದಿಲ್‌ ಶಾಹಿ ಸಾಮ್ರಾಜ್ಯ. ಆದರೆ ಅವರ ಪರಿಸರ ಪ್ರೇಮದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲದಿರುವುದು ವಿಪರ್ಯಾಸ.  ಇಲ್ಲಿನ ಪರಿಸರವನ್ನು ಅಭ್ಯಸಸಿ ಸ್ಥಳೀಯ ವಾತಾವರಣಕ್ಕೆ ಹೊಂದುವಂಥ ಗಿಡಗಳನ್ನು ಅಲ್ಲಲ್ಲಿ ನೆಟ್ಟು, ಬೆಳೆಸಿದ ಖ್ಯಾತಿ ಆ ಅರಸರದ್ದು. ಈ ಮೊದಲು ಹೇಳಿದ ಮರಗಳದ್ದೂ ಅದೇ ಕಥೆ. ಸ್ಥಳೀಯವಾಗಿ ಗೋರಕ್ಷಿಯೆಂದು ಕರೆಯಲಾಗುವ ಈ ಮರಗಳನ್ನು ಆದಿಲ್‌ ಶಾ ಅರಸರು ಆಫ್ರಿಕಾದಿಂದ ತರಿಸಿದ್ದರೆಂದು ಇತಿಹಾಸ ಹೇಳುತ್ತದೆ. ಕಡಿಮೆ ಮಳೆಬೀಳುವ ಪ್ರದೇಶದಲ್ಲಷ್ಟೇ ಬೆಳೆಯುವ ಕಾರಣದಿಂದ ವಿಜಯಪುರ ಜಿಲ್ಲೆಯಲ್ಲಷ್ಟೇ ಇವು ಕಂಡುಬರುತ್ತವೆ. ರಾಜ್ಯದಲ್ಲಿ ಇದೀಗ ಬದುಕುಳಿದಿರುವ ಗೋರಕ್ಷಿ ಮರಗಳ ಸಂಖ್ಯೆ ಕೇವಲ ನಾಲ್ಕು. ಈ ಗೋರಕ್ಷಿ ಮರಗಳಲೆಲ್ಲವೂ ಈ ಜಿಲ್ಲೆಯಲ್ಲಷ್ಟೇ ಇದ್ದು, ಎಲ್ಲದರ ಆಯಸ್ಸು 500 ರ ಆಸುಪಾಸಿನಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಕಾಣಬರುವ ಈ ಮರಗಳನ್ನು ಅಲ್ಲಿಂದ ವಿಜಯಪುರಕ್ಕೆ ಬರುತ್ತಿದ್ದ ವರ್ತಕರ ಮೂಲಕ ಅರಸರು ತರಿಸಿಕೊಂಡರಂತೆ. ಸುಮಾರು 10 ಮೀಟರ್‌ ಸುತ್ತಳತೆಯ 20 ಮೀಟರ್‌ ಎತ್ತರದ ವಿಜಯಪುರದ  ಇಬ್ರಾಹಿಂ ರೋಜಾದ ಮರದ ವಯಸ್ಸು ಸುಮಾರು ಆರುನೂರು ವರ್ಷ ಎಂದು ಅಂದಾಜಿಸಲಾಗಿದ್ದು.  ಯೋಗಾಪುರ ದರ್ಗಾದ ಬಳಿ ಇರುವ ಮರದ ವಯಸ್ಸು ನಾಲ್ಕುನೂರು ವರ್ಷ ಎನ್ನಲಾಗುತ್ತಿದೆ. 

ಅಂದ ಹಾಗೆ, ಕರ್ನಾಟಕದ ಅತಿ ಪ್ರಾಚೀನ ವೃಕ್ಷ ಕೂಡ ವಿಜಯಪುರ ಜಿಲ್ಲೆಯಲ್ಲೇ ಇದ್ದು ಇಲ್ಲಿನ ಸಿಂಧಗಿ ತಾಲ್ಲೂಕಿನ ಹೂವಿನಪ್ಪರಗಿ ಎಂಬ ಹಳ್ಳಿಯ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿದೆ. ಈ ಹುಣಸೆ ಮರದ ಆಯಸ್ಸು 900 ರ ಆಜೂಬಾಜು ಎಂದು ಅಂದಾಜಿಸಲಾಗಿದೆ. ಇದೂ ಕೂಡ ಆದಿಲ್‌ಶಾಹಿ ಆಳ್ವಿಕೆಯಲ್ಲಿ ನೆಟ್ಟ ಮರವಾಗಿವಿದೆ.  ಕಾಂಡವೇ ಸುಮಾರು ಎಂಟು ಮೀಟರ್‌ ಸುತ್ತಳತೆ ಹೊಂದಿದೆ. ನಲವತ್ತು ಮೀಟರನಷ್ಟು ಎತ್ತರದ ನಿಲುವಿದೆ. 

ಈ ಎಲ್ಲ ಮರಗಳಿಗೀಗ  ಪಾರಂಪರಿಕ ವೃಕ್ಷಗಳೆಂಬ ಬಿರುದನ್ನೂ ಅಂಟಿಸಿ ಈ ವೃಕ್ಷಕ್ಕೆ ಯಾವುದೇ ರೀತಿಯ ಹಾನಿಯುಂಟುಮಾಡುವುದನ್ನು ಕಾನೂನಿನ ರೀತ್ಯ ನಿಷೇಧಿಸಲಾಗಿದೆ. ಗೋರಕ್ಷಿ$ ಮರದ ಹಣ್ಣುಗಳಿಂದ ಸಸಿಗಳನ್ನು ಬೆಳೆಸಿ, ಅಲ್ಲಲ್ಲಿ ನೆಡುವ ಕಾರ್ಯಕ್ಕೆ ಅಲ್ಲಿನ ಪುರಾತತ್ವ ಇಲಾಖೆಯ ಜೊತೆಗೆ ಅರಣ್ಯ ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ಕೆಲವು ಸಸಿಗಳನ್ನು ಬೆಳೆಸಿ ನಂತರ ಇದನ್ನು ಇನ್ನಷ್ಟು ವಿಸ್ತರಿಸುವ ವಿಚಾರವೂ ಇಲಾಖೆಗಿದೆ.ಇಲ್ಲಿನ ಪ್ರಖ್ಯಾತ ಗೋಲಗುಂಬಜ್‌ನ ಆವರಣದಲ್ಲೂ ಸಸಿಯೊಂದನ್ನು ನೆಟ್ಟು ಬೆಳಸಲಾಗುತ್ತಿದ್ದು, ಮುಂದಿನ ತಲೆಮಾರಿಗೆ ಈ ಹಿರಿಮೆಯನ್ನು ದಾಟಿಸುವತ್ತ ಇದೊಂದು ಪ್ರಮುಖ ಹೆಜ್ಜೆಯಾಗಲಿದೆ.   

ಮುಂದಿನ ಬಾರಿ ವಿಜಯಪುರಕ್ಕೆ ಭೆಟ್ಟಿ ನೀಡಿದಾಗ ಈ ಮರಗಳನ್ನೂ ನೋಡಿ. ಮಕ್ಕಳಿಗೂ ಈ ಕಥೆ ಹೇಳಿ.

ಸುನೀಲ್‌ಬಾರಕೂರ್‌
ಚಿತ್ರಗಳು- ರವೀಂದ್ರ ಬಿಳಗಿ

ಸಿಟಿಜನ್‌ 3 

ಹುಣಸೇಮರ
ನೆಲೆ – ಸವಣೂರು, ಹಾವೇರಿ 
ವಯಸ್ಸು-400 ವರ್ಷ

 ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಕಲ್ಮಠದ ಪ್ರಾಂಗಣದಲ್ಲಿ ಶತ ಶತಮಾನಗಳಿಂದ ಬಿಸಿಲು ಮಳೆ ಗಾಳಿಗೆ ಜಗ್ಗದೆ ಉಳಿದಿರುವ ಮೂರು ಅದ್ಬುತ ವೃಕ್ಷಗಳಿವೆ. ಇವು ಗತ ಇತಿಹಾಸದ ಕೊಂಡಿಯಾಗಿ, ಪ್ರಕೃತಿಯ ಭವ್ಯ ಪರಂಪರೆಯ ಸಾಕ್ಷಿಯಾಗಿ ನಿಂತಿವೆ. ಮೊದಲ ನೋಟಕ್ಕೇ ಅಚ್ಚರಿ ಹುಟ್ಟಿಸುವ ಈ ಗಜಗಾತ್ರದ ಮರಗಳ ಬೊಡ್ಡೆಯ(ಕಾಂಡದ) ಸುತ್ತಳತೆಯೇ ವಿಸ್ಮಯ ಗೊಳಿಸುವಂತದ್ದು. 

ಈ ವೃಕ್ಷಗಳನ್ನು ಹಠಯೋಗಿಯಾದ ಗೋರಕನಾಥರು ನೆಟ್ಟರಂತೆ.  ದೇಶ ಸಂಚಾರದ ವೇಳೆ ಸವಣೂರಿನ ಕಲ್ಮಠಕ್ಕೆ ಬಂದು, ಇಲ್ಲಿ ಅನೇಕ ವರ್ಷಗಳವರಗೆ ಅನುಷ್ಠಾನಗೈದು ತಮ್ಮ ಯೋಗಶಕ್ತಿಯಿಂದ ಮರದ ಬೀಜಗಳನ್ನು ನೆಟ್ಟರಂತೆ. 

 ಈ ವೃಕ್ಷಗಳ ತಳವು ಉಬ್ಬಿದ ಬಾಟಲಿಯಂತೆ ಇದ್ದು ಕ್ರಮೇಣ ಮೇಲೆ ಹೋದಂತೆ ಮೊನಚಾಗುತ್ತದೆ. ಎಲೆಯು ಸುಮಾರು 4 ದಳದಿಂದ 7 ದಳದ ವರೆಗೆ ಇದ್ದು ಅಂಗೈಯಂತೆ ಕಾಣುತ್ತದೆ. 

ನೋಡುಗರ ಕಣ್ಣಿಗೆ ದೊಡ್ಡಗುಡ್ಡದಂತೆ ಕಾಣುವ ವೃಕ್ಷಗಳ ತೊಗಟೆ, ಖಡ್ಗ ಮೃಗದ ಚರ್ಮದಂತೆ ಮಡಿಕೆಯಾಗಿದೆ. ಮರವನ್ನು ಸ್ಪರ್ಶಿಸಿದರೆ ಆನೆ ಚರ್ಮವನ್ನು ಮುಟ್ಟಿದಂತಾಗುತ್ತದೆ. ಶ್ರೀಮಠದಲ್ಲಿ ಒಟ್ಟು ಮೂರು ವೃಕ್ಷಗಳು ಇದ್ದು, ಮೊದಲನೇ ವೃಕ್ಷದ ಸುತ್ತಳತೆ 14.70 ಮೀಟರ್‌ ಅಗಲ, 17.50 ಮೀಟರ್‌ ಎತ್ತರ. ಎರಡನೆಯದು, 11.97 ಮೀಟರ್‌ ಅಗಲ, 15.40ಮೀಟರ್‌ ಎತ್ತರ. ಮೂರನೇ ಮರದ ಸುತ್ತಳತೆ 11.63 ಮೀಟರ್‌ ಅಗಲ, 15.50 ಮೀಟರ್‌ ಎತ್ತರ ಇವೆ. ಇದು ಬೂರುಗದ ಹತ್ತಿಯ ಸಸ್ಯಕುಟುಂಬಕ್ಕೆ ಸೇರಿದೆ. ಇದನ್ನು ಆಂಗ್ಲಭಾಷೆಯಲ್ಲಿ ಬೋಬಾಬ್‌ ಟ್ರೀ, ಮಂಕೀ ಬ್ರೆಡ್‌ ಟ್ರೀ, ಆಫ್ರಿಕನ್‌ ಕಲಬಾಶ್‌ ಟ್ರೀ, ಸೋರ್‌ ಗೋರ್ಡ್‌ ಟ್ರೀ ಎಂದು ಕರೆಯುತ್ತಾರೆ. ಮರದ ತುಂಬಾ ಬಾವಲಿಗಳು ಸದಾಕಾಲ ಜೋತಾಡುತ್ತಿರುತ್ತವೆ. ಈ ಮರದ ಹೂಗಳು ಪರಾಗಸ್ಪರ್ಶ ಹೊಂದುವುದು ಬಾವಲಿಗಳಿಂದಲೇ. ಗಿಳಿಗಳೂ ಸಹ ಸಾಕಷ್ಟು ಸಂಖ್ಯೆಯಲ್ಲಿವೆ.

“ಇದರ ಮೂಲ ಆಫ್ರಿಕ. ಫ್ರೆಂಚ್‌ ಸಸ್ಯವಿಜಾnನಿ ಅಡೆನ್‌ಸನ್‌ನ ಸ್ಮರಣಾರ್ಥವಾಗಿ ಈ ಮರಗಳನ್ನು ಅಡೆನ್ಸೋನಿಯಾ ಎಂದು ಹೆಸರಿಸಲಾಗಿದೆ. ಇವು ಜಗತ್ತಿನ ಅತ್ಯಂತ ಪ್ರಾಚೀನ ವೃಕ್ಷಗಳ ಸಾಲಿಗೆ ಸೇರಿವೆ. ಈ ವೃಕ್ಷಗಳು ಸುಮಾರು 6000 ವರ್ಷಗಳ ತನಕ ಬಾಳಬಲ್ಲವು’ ಎನ್ನುತ್ತಾರೆ ದೊಡ್ಡಹುಣಸೆ ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ. 

ರಾಜಶೇಖರ ಎಫ್.ಗುರುಸ್ವಾಮಿಮಠ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.