CONNECT WITH US  

ಕಂಚಿನ ಬಣ್ಣದ ರೆಕ್ಕೆ ಜಕನಾ 

ಗಂಡು ಜಕನಾ 28 ಸೆಂ.ಮೀ. ಹೆಣ್ಣು ಜಕನಾ 31 ಸೆಂ.ಮೀ ದೊಡ್ಡದಾಗಿ ಇರುತ್ತದೆ. BRONZE WINGED JAKANA(Mepotidusindicus )RWeter hen + -ಉದ್ದುದ್ದ ಬಲವಾದ ಕಾಲು, ಕಾಲಿನಲ್ಲಿ, ಜೇಡರ ಕಾಲಿನಂತಹ ಉದ್ದದ ಬೆರಳು ಇದ‌ಕ್ಕಿದೆ. ಇದರ ಸಹಾಯದಿಂದ ಜಲ ಸಸ್ಯಗಳ ಗುತ್ಛ ಅಥವಾ ಕನ್ನೈದಿಲೆ, ತಾವರೆ ಎಲೆ, ಸಸ್ಯಗಳಿಂದ ತುಂಬಿದ ಕೆರೆ, ಹಿನ್ನೀರು, ನೀರಿನ ಹೊಂಡಗಳಲ್ಲಿ ಅವುಗಳ ಗುತ್ಛ , ಇಲ್ಲವೇ ಎಲೆಗಳ ಮೇಲೆ ನಡೆಯುತ್ತಾ, ಕೆಲವೊಮ್ಮೆ ಅರ್ಧ ಮುಳುಗುತ್ತಾ, ಅಸಮತೋಲನವನ್ನು ಕಾಪಾಡಿಕೊಂಡು ನಡೆಯುವುದು. 

ಅದರ ಉದ್ದ ಹಾಗೂ ಸಂದುಗಳಿರುವ ಕಾಲು ಮತ್ತು ಬೆರಳು ಇದಕ್ಕೆ ಜಲ ಸಸ್ಯಗಳ ಮೇಲೆ ನಡೆದಾಡಲು ಮತ್ತು ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗಿದೆ.  ಹೊಳೆವ ಕಡು ನೀಲಿ ಬಣ್ಣದ ತಲೆ, ಕತ್ತು, ಎದೆ, ಬೆನ್ನು ಇದೆ. ಹೊಳೆವ ಕಂಚು ಬಣ್ಣದ ರೆಕ್ಕೆ ಇದರ ಚೆಲುವನ್ನು ಹೆಚ್ಚಿಸಿದೆ. ಹಳದಿ ಬಣ್ಣದ ಚುಂಚು, ಎರಡು ಚುಂಚು ಸೇರುವಲ್ಲಿ ಹರಿತವಾಗಿದೆ. ತುದಿ ಸ್ವಲ್ಪ ಬಗ್ಗಿದೆ. ಇದರಿಂದ ಜಲಸಸ್ಯಗಳ ದಂಟು, ಚಿಗುರೆಲೆ, ಜಲಸಸ್ಯಗಳ ಹಣ್ಣು ತಿನ್ನಲು ಸಹಕಾರಿ. ವಿಸ್ತಾರವಾದ ಉದ್ದಕಾಲು ಹಳದಿ ಮತ್ತು ಬೆರಳು ನೀಲಿ ಕಪ್ಪು ಬಣ್ಣ ಇದೆ. ಕಪ್ಪು ಪುಕ್ಕದ ಕೆಳಗೆ ಕೆಂಪು ಬಣ್ಣ ಇದೆ. ಈ ಪಕ್ಷಿ$280 ರಿಂದ 310 ಎಂ.ಎಂ. ಉದ್ದ ಇದ್ದು ರೆಕ್ಕೆಯ ಅಗಲ 150 ರಿಂದ 197 ಮಿಲಿ ಮೀಟರ್‌ ಇದೆ. ಗಂಡು ಹಕ್ಕಿಯರೆಕ್ಕೆ ಅಗಲ 150-180 ಎಂ.ಎಂ. ಹೆಣ್ಣು ಹಕ್ಕಿಯರೆಕ್ಕೆ 167 ರಿಂದ 187 ಎಂ.ಎಂ ಇರುತ್ತದೆ.  ಚುಂಚು ಬುಡದಿಂದ ತುದಿಯವರೆಗೆ 34-46 ಎಂ.ಎಂ. ಇದೆ. ಬಾಲದ ಉದ್ದ 61 ರಿಂದ 76 ಎಂ.ಎಂ. ಇರುವುದು. ಜಲಸಸ್ಯಗಳ ಮೇಲೆ ನಡೆಯುವ ಚೆದ್ರಿಡಿಯಾ ಕುಟುಂಬದ ಈ ಹಕ್ಕಿ ಜಾಲ ಪಾದಗಳಿಲ್ಲದಿದ್ದರೂ ನೀರಿನಲ್ಲಿ ಈಜಬಲ್ಲದು. 

ಕತ್ತಿಯ ಅಲಗಿನಂತಿರುವ ಜಕನಾ, ಕಪ್ಪು ನಾಮದ ಕೋಳಿ ಸಹವರ್ತಿ. ಇವೆಲ್ಲ ಸಾಮಾನ್ಯವಾಗಿ ಒಂದೇ ರೀತಿಯ ಆಹಾರ ಮತ್ತು ಇರುನೆಲೆಗಳನ್ನು ಹೊಂದಿವೆ. 
ಜಲ ಸಸ್ಯಗಳಿಂದ ಕೂಡಿದ ಕೆರೆ, ನೀರಿನ ಹೊಂಡ, ಸರೋವರಗಳಲ್ಲಿ ತೇಲುವ ಜಲಸಸ್ಯಗಳ ಮೇಲೆ ಸಮತೋಲನ ಕಾಯ್ದು ಕೊಳ್ಳುತ್ತಾ ನ‌ಡೆಯುವ ಜಕನಾವನ್ನು ತಿನ್ನಲು ಹೊಂಚುಹಾಕಿ ಎರಗುವ ಬಿಳಿ ಗರುಡ ಅಂದರೆ ಬ್ರಾ¾ಣಿಖೈಟ್‌ ನಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಮುಳುಗು ಹಾಕುತ್ತದೆ.  ಬೆಂಗಳೂರಿನ ಉತ್ತರಹಳ್ಳಿ ಕೆರೆ, ಉತ್ತರ ಕನ್ನಡ ಕುಮಟಾದ ಉಪ್ಪಿನ ಪಟ್ಟಣದ ಕೆರೆ, ಗುಡವಿಯ ಮಾರ್ಗದಲ್ಲಿರುವ ಜಲ ಸಸ್ಯಗಳಿಂದ ಕೂಡಿದ ನೀರಿನ ಹೊಂಡ, ಶಿರಸಿ, ಯಲ್ಲಾಪುರ ಪಟ್ಟಣದ ಹತ್ತಿರದ ಜಲಸಸ್ಯಗಳಿಂದ ಕೂಡಿದಕೆರೆಯಲ್ಲಿ ಸಮೀಪ ಸಹ ಈ ಹಕ್ಕಿ ಸಿಕ್ಕಿದೆ. ಇವು ಭಾರತದ ತುಂಬೆಲ್ಲಾ ಇವೆ. ಸೌತ್‌ ಈಸ್ಟ್‌ ಏಶಿಯಾದಲ್ಲೂ ಸಹ ಕಂಡಿವೆ. ಕೊಲ್ಕತ್ತಾ ವೆಸ್ಟ್‌ ಬಂಗಾಲದಲ್ಲಿ ಕಂಡಿದ್ದು ದಾಖಲಾಗಿದೆ. ಇವು ಒಂದಕ್ಕಿಂತ ಹೆಚ್ಚು ಗಂಡನ್ನು ವರಿಸುತ್ತದೆ. ಮಿಲನದ ಸಂದರ್ಭದಲ್ಲಿ ಗಂಡು ಪ್ರತ್ಯೇಕವಾದ ಇರುನೆಲೆ ಮಾಡಿಕೊಳ್ಳುತ್ತದೆ. ಒಂದು ಗಂಡಿನ ಜೊತೆಯ ಪ್ರಣಯದಾಟ, ನಿಶ್ಚಿತ ಇರುನೆಲೆಯ ವ್ಯಾಪ್ತಿಯಲ್ಲಿಇರುವುದು. ಹೀಗೆ ಎಷ್ಟು ಸಮಯಗಂಡು-ಹೆಣ್ಣು ಈ ವ್ಯಾಪ್ತಿಯಲ್ಲಿಇರುವುದು ಎಂಬುದು ತಿಳಿದು ಬಂದಿಲ್ಲ. 

ಇದು ತೇಲುವ ಸಸ್ಯಗಳ ಗುಚ್ಚದ ಮೇಲೆ ಮೊಟ್ಟೆಇಡುತ್ತದೆ. ಅದರ ರಕ್ಷಣೆಯ ಜವಾಬ್ದಾರಿ ಹಕ್ಕಿಯದು. 

 ಪಕ್ಷಿ$ ಜಾತಿಗಳಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ-ಒಂದೇ ಜಾತಿಯ ಪಕ್ಷಿ$ಗಳು ಬೇರೆ, ಬೇರೆ ನೆಲೆಯಲ್ಲಿ ಬೆಳೆಯುವ ಪ್ರಸಂಗ ಬಂದಾಗ ಅವುಗಳ ಆಹಾರ ರೀತಿಯಲ್ಲಿ ವ್ಯತ್ಯಾಸ ಕಂಡರೂ ರೂಪದಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಒಂದೇ ಪ್ರದೇಶದಲ್ಲಿ ಆಹಾರ ವ್ಯತ್ಯಾಸವಾದರೆ ರೂಪ, ರಚನೆ ಬೇರೆಬೇರೆಯಾಗಿ ಬೆಳೆಯುವವು ಎಂಬುದು ಸಂಶೋಧನೆಯಿಂದ ತಿಳಿದ ಸತ್ಯ. ಇದಕ್ಕೆ ಉದಾಹರಣೆಯೆಂದರೆ, ಮೆಡಗಾಸ್ಕರ್‌ ನಡುಗಡ್ಡೆ ಜಕನಾದ ಕೆಳಭಾಗದ ಕತ್ತು ಕಪ್ಪು. ಆಫ್ರಿಕಾದ ಇದೇ ಜಾತಿಯ ಜಕನಾದ ಕುತ್ತಿಗೆ ಮೇಲ್ಭಾಗಕಪ್ಪು. ಆದರೆ ಭಾರತದಲ್ಲಿ ಸಿಗುವ ಒಂದು ಜಾತಿಯ ಜಕನಾದ ಕತ್ತು ಮೇಲೆ ಕೆಳಗೆ ಎರಡೂಕಪ್ಪಾಗಿದೆ. ಸ್ಥಳೀಯ ಭಾರತದ ಜಕನಾ ವಲಸೆ ಹೋಗುವುದಿಲ್ಲ. ಜೂನ್‌ ಸೆಪ್ಟಂಬರ್‌ ತಿಂಗಳು ಇದು ಮರಿಮಾಡುವ ಸಮಯ. 

Trending videos

Back to Top