ಕಮಂಡಲ ತೀರ್ಥ ಗಣಪತಿ ದೇವಸ್ಥಾನ 


Team Udayavani, Aug 18, 2018, 12:03 PM IST

3-aa.jpg

ನಮ್ಮ ರಾಜ್ಯದಲ್ಲಿ ಸಾಕಷ್ಟು ಗಣೇಶನ ದೇವಸ್ಥಾನಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆಗಳಿವೆ. ಇವುಗಳಲ್ಲಿ ಚಿಕ್ಕಮಗಳೂರಿನ ಕೊಪ್ಪದಲ್ಲಿರುವ ಕಮಂಡಲ ಗಣಪತಿ ದೇವಸ್ಥಾನವೂ ಒಂದು.  ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿ ಸೌಂದರ್ಯದ  ಮಧ್ಯದಲ್ಲಿ ನೆಲೆ ನಿಂತಿರುವ ಈ ಗಣೇಶ ಪವಾಡವನ್ನು ಸೃಷ್ಟಿಸುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಬಹಳ ಸೋಜಿಗಗಳನ್ನು ಹೊಂದಿರುವ ಈ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನವು ಕೊಪ್ಪ ಬಸ್‌ ನಿಲ್ದಾಣದಿಂದ 4 ಕಿ.ಮಿ. ದೂರದಲ್ಲಿದೆ.  

ಸ್ಥಳ ಪುರಾಣ 
ಇಲ್ಲಿನ ಸ್ಥಳಪುರಾಣದಂತೆ ಒಮ್ಮೆ ಶನಿದೇವನ ಕಾಟದಿಂದ ಪಾರಾಗಲು ಪಾರ್ವತಿ ದೇವಿಯು ಭೂಮಿಗಿಳಿದು ಬಂದು, ಮೈಗವಧೆ ಎಂಬಲ್ಲಿ ತಪಸ್ಸು ಮಾಡುತ್ತಾಳೆ. ಅಲ್ಲಿಂದ ಈ ದೇವಾಲಯವಿರುವ ಸ್ಥಳಕ್ಕೆ ಬಂದು ಗಣೇಶನಿಗೆ ಪೂಜೆ ಮಾಡಲು ಸಿದ್ಧಳಾಗುತ್ತಾಳೆ. ಆದರೆ ಪೂಜೆಗೆ ನೀರಿರುವುದಿಲ್ಲ. ನೀರಿಗಾಗಿ ಬ್ರಹ್ಮದೇವನನ್ನು ಬೇಡಿಕೊಂಡಾಗ, ಬ್ರಹ್ಮ ದೇವ ಭೂಮಿಗೆ ಬಾಣ ಹೊಡೆದು ನೀರು ಸೃಷ್ಟಿಸಿದನಂತೆ ಎಂಬುದು ಇಲ್ಲಿನ ಇತಿಹಾಸ. ಇದನ್ನೇ ಬ್ರಾಹ್ಮಿàನದಿಯ ಉಗಮ ಸ್ಥಾನವೆಂತಲೂ ಹೇಳಲಾಗುತ್ತದೆ.  ಇನ್ನು ಇಲ್ಲಿನ ಗಣೇಶನ ವಿಗ್ರಹ ಬಹಳ ಅಪರೂಪದ್ದಾಗಿದೆ. ಅದು ಹೇಗೆಂದರೆ ಇಲ್ಲಿರುವ, ಗಣೇಶ, ಯೋಗ ಮುದ್ರೆಯಲ್ಲಿ ಕುಳಿತಿರುವುದು. ಈ ರೀತಿಯ ವಿಗ್ರಹ ಬೇರೆಯಾವ ದೇವಸ್ಥಾನದಲ್ಲಿಯೂ ನಮಗೆ ಕಾಣಸಿಗದು.  ಹಾಗೇ, ಈ ಗಣೇಶನ ವಿಗ್ರಹದ ಮುಂದೆ ಒಂದು ಕಮಲದ ಆಕಾರವಿರುವ ತೀರ್ಥಕುಂಡವಿದೆ. ಇಲ್ಲಿ ವರ್ಷವಿಡೀ ತೀರ್ಥ ಹರಿಯುತ್ತಲೇ ಇರುತ್ತದೆ. ಹಾಗೆ ಹರಿದ ನೀರು ದೇವಸ್ಥಾನದ ಹೊಂಡದಲ್ಲಿ ಶೇಖರಣೆಯಾಗುತ್ತದೆ.  ಈ ತೀರ್ಥವನ್ನು ಕಮಂಡಲ ತೀರ್ಥ ಎನ್ನಲಾಗುತ್ತದೆ. ಗಣೇಶನ ಮುಂದೆ ಕಮಲದ ಹೂವಿನಿಂದ ಉದ್ಭವದಂತೆ ಕಾಣುವ ತೀರ್ಥಕುಂಡವಿರುವುದರಿಂದ ಇಲ್ಲಿರುವ ಗಣೇಶನಿಗೆ ಕಮಂಡಲ ತೀರ್ಥ ಗಣೇಶ ಎಂಬ ಹೆಸರು ಬಂದಿದೆ ಅಂತಲೂ ಹೇಳುತ್ತಾರೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಶನಿದೋಷ ಪರಿಹಾರವಾಗುತ್ತದಂತೆ. ಇಲ್ಲಿನ ತೀರ್ಥ ತೆಗೆದುಕೊಂಡು ಮಕ್ಕಳಿಗೆ ಕುಡಿಸಿದರೆ ಒಳಿತಾಗುತ್ತದೆ ಎಂಬುದು ಭಕ್ತಾದಿಗಳ ನಂಬಿಕೆ. 

 ಅಷ್ಟೇ ಅಲ್ಲದೆ, ಬೇಸಿಗೆಯಲ್ಲಿ ಕಡು ಬಿಸಿಲಿದ್ದರೂ ಇಲ್ಲಿನ ನೀರು ಬತ್ತುವುದಿಲ್ಲ.  ಮಳೆಗಾಲದಲ್ಲಿ ತೀರ್ಥದ ನೀರು ಗಣೇಶನ ಪಾದದವರೆಗೆ ಬರುತ್ತದಂತೆ. ಈ ಪುರಾಣ ಪ್ರಸಿದ್ಧ ಗಣೇಶನಿಗೆ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದಲೇ ಭಕ್ತಾದಿಗಳು ಬರುತ್ತಾರೆ. ಇನ್ನು ಈ ದೇವಸ್ಥಾನದ ಪೂಜಾ ಸಮಯ : ಬೆಳಗ್ಗೆ 7.30 ರಿಂದ 8.30 ರವರೆಗೆ ಅಭಿಷೇಕ – ಪೂಜೆ ಇರುತ್ತದೆ. ಮಧ್ಯಾಹ್ನ 12 ಗಂಟೆಯ ನಂತರ ಯಾವುದೇ ಪೂಜೆಗೆ ಅವಕಾಶವಿರುವುದಿಲ್ಲ. ಹಾಗಾಗಿ, ಕಮಂಡಲ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಲಿಚ್ಚಿಸುವವರು ಬೆಳಗಿನ ಸಮಯದಲ್ಲೇ  ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು. 

ತಲುಪುವ ಮಾರ್ಗ 
ದೇಶದ ಪ್ರಮುಖ ನಗರಗಳಿಂದ ಚಿಕ್ಕಮಗಳೂರಿಗೆ ಸಾಕಷ್ಟು ಬಸ್‌, ರೈಲುಗಳ ಸೌಕರ್ಯವಿದೆ. ಬೆಂಗಳೂರಿನಿಂದ ಕೊಪ್ಪ 359ಕಿ.ಮೀ ದೂರದಲ್ಲಿದೆ.

ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.