ಇಲ್ಲಿ ಪ್ರತಿದಿನ ಪುಸ್ತಕ ಪರಿಷೆ


Team Udayavani, Sep 22, 2018, 5:15 PM IST

2-asdsa.jpg

ಅಂಕೇಗೌಡರ ಮನೆಗೆ ಕಾಲಿಟ್ಟರೆ ಬರೀ ಪುಸ್ತಕ. ಕಂಡ, ಕಡೆಯಲ್ಲೆಲ್ಲಾ ಪುಸ್ತಕಗಳ ರಾಶಿಗಳು. ಇಷ್ಟೊಂದು ಪುಸ್ತಕಗಳನ್ನು ಎಲ್ಲಿ ತಂದರು, ಎಷ್ಟು ದುಡ್ಡು ವ್ಯಯಿಸಿದರು, ಇದನ್ನೆಲ್ಲಾ ಹೆಂಗೆ ಕಾಪಾಡುತ್ತಾರೆ? ಪ್ರಶ್ನೆಗಳಿಗೆ ಉತ್ತರಕ್ಕೆ ಪಾಂಡವಪುರದ ಇವರ ಮನೆಗೆ ಬರಬೇಕು. 

ಮೊನ್ನೆ ಗೆಳೆಯರ ಗುಂಪು ಬೆಂಗಳೂರಿನಿಂದ ಹೋಗಿಬರುವ ಮನಸ್ಸು ಮಾಡಿ , ಶ್ರೀರಂಗ ಪಟ್ಟಣದೆಡೆಗೆ ಹೊರಟಿತ್ತು. ಹೊರಟ ತಂಡಕ್ಕೆ ತಾವು ಎಲ್ಲಿಗೆ ಹೋಗಿ, ಏನು ನೋಡುತ್ತೇವೆ ಎನ್ನುವ ಕುರಿತು ಸರಿಯಾದ ಸ್ಪಷ್ಟ  ಮಾಹಿತಿ ಇರಲಿಲ್ಲ. ಆದರೂ ಒಂದು ಗ್ರಂಥಾಲಯಕ್ಕೆ ಭೇಟಿ ಕೊಡೋಣ ಅನ್ನೋದು ತೀರ್ಮಾನವಾಗಿತ್ತು. ಗ್ರಂಥಾಲಯ ಅಂದರೆ ಒಂದಷ್ಟು ಪುಸ್ತಕಗಳ ಸಂಗ್ರಹ ಇರುತ್ತೆ , ಹೀಗೆ ಹೋಗಿ ಹಾಗೆ ಬಂದು ಮತ್ತೂಂದಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು ಅನ್ನೋ ಯೋಜನೆ ಬಹಳ ಜನಕ್ಕೆ ಇತ್ತು. 

ಇಂಥದೊಂದು ಯೋಚನೆಯೊಂದಿಗೆ ಸ್ನೇಹಿತರ ತಂಡ ಹೊರಟಿದ್ದು , ಪಾಂಡವಪುರ ತಾಲೂಕಿನ ಹರಳಳ್ಳಿಯ ವಿಶ್ವೇಶ್ವರ ನಗರ ಸಮೀಪ ಇರುವ  ಅಂಕೆ ಗೌಡರ   ಪುಸ್ತಕದ ಮನೆಗೆ.   ಮಂಡ್ಯ ಜಿಲ್ಲೆಯ ಜನಗಳು ಒರಟರು , ಂಬ ಹಳೆಯ ನಂಬಿಕೆಯಲ್ಲಿ ಹುರುಳಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿರುವ ವ್ಯಕ್ತಿ ಈ ಅಂಕೇಗೌಡರು. 

 ಒಬ್ಬ ವ್ಯಕ್ತಿ ಅಬ್ಬಬ್ಟಾ ಅಂದರೆ ಎಷ್ಟು ಪುಸ್ತಕ ಸಂಗ್ರಹಿಸ ಬಹುದು? ಪುಸ್ತಕ ಸಂಗ್ರಹದ ಹವ್ಯಾಸಕ್ಕಾಗಿ  ಗಳಿಸಿದ ಹಣವನ್ನು ಎಷ್ಟು ಸುರಿಯ ಬಹುದು? ಇಂಥ ಹುಚ್ಚು ಹವ್ಯಾಸಗಳಿಗೆ ಮಡದಿಯ ಸಹಕಾರ ಎಷ್ಟಿರುತ್ತದೆ?

 ಹೀಗೆ ಅನುಮಾನಗಳನ್ನು ಹೊತ್ತು ಅವರ ಮನೆಗೆ ಕಾಲಿಟ್ಟರೆ ಉತ್ತರವಾಗಿ ರಾಶಿ ರಾಶಿ ಪುಸ್ತಕಗಳು ಇದ್ದವು. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಕಾಣುತ್ತಿದ್ದದ್ದು ಪುಸ್ತಕಗಳ ಸಮುದ್ರ. 

 ನಂಬಿದರೆ ನಂಬಿ, ಬಿಟ್ಟರೆ ಬಿಡಿ: ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಗೌಡರು ಸಂಗ್ರಹಿಸಿ¨ªಾರೆ. ನಾಣ್ಯ, ಅಂಚೆ ಚೀಟಿಗಳ, ಲಗ್ನಪತ್ರಿಕೆಗಳ ಸಂಗ್ರಹಗಳೂ ಇದರಲ್ಲಿ ಸೇರಿವೆ. ಒಂದು ಸಂಸ್ಥೆ  ಸಹ ಮಾಡಲು ಅಸಾಧ್ಯವಾದ ಕೆಲಸವನ್ನು ಇವರು ಮಾಡಿ¨ªಾರೆ.  ಅಂಕೇ ಗೌಡರು, ಸಾಮಾನ್ಯ ಹಳ್ಳಿ ಕುಟುಂಬದಿಂದ ಬಂದವರು. ಮಂಡ್ಯ ಜಿÇÉೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದವರು. ಓದಿದ್ದು ಪಿ.ಯು.ಸಿವರೆಗೆ. ಆನಂತರ ಬಸ್‌ ಕಂಡಕ್ಟರ್‌ ಆಗಿ ದುಡಿದವರು. ಮುಂದೆ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ .ಪದವಿ ಪಡೆದರು. ಈ ಸಮಯದಲ್ಲಿ ಇವರ ಗುರುಗಳಾಗಿದ್ದ ಕೆ.ಅನಂತರಾಮು ಯಾವುದೋ ಸಂದರ್ಭದಲ್ಲಿ - “ಸರ್ಟಿಫಿಕೇಟಿನ ದೊಡªತನಕ್ಕಿಂತ ಒಳ್ಳೆಯ ಹವ್ಯಾಸಗಳೇ  ಮೌಲ್ಯಯುತವಾಗಿರುತ್ತವೆ.  ಸಾಧ್ಯ ವಾದರೆ ಬಡವರಿಗೆ ದ್ದ$Ìನಿ ಯಾಗುವ ಪುಸ್ತಕ ಸಂಗ್ರಹ ಹವ್ಯಾಸ ಬೆಳಸಿಕೊಳ್ಳಿ’  ಎಂದು ಹೇಳಿದರಂತೆ. ಗುರುಗಳ ಈ ಮಾತು ಶಿಷ್ಯನ ಮನಸ್ಸಿನಲ್ಲಿ ನಾಟಿತು, ಅದರ ಫ‌ಲವೇ ಈ ಪುಸ್ತಕ ಸಂಗ್ರಹ.

 ಓದು ಮುಗಿದ ನಂತರ ಪಾಂಡವಪುರ  ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿ ಟೈಮ… ಆಫೀಸರ್‌ ಹು¨ªೆಗೆ ಸೇರ್ಪಡೆಯಾದರು.  ಆಗಲೇ ಸಂಬಳದ ಬಹುತೇಕ ಪಾಲು ಪುಸ್ತಕ ಖರೀದಿಸಲು ವಿನಿಯೋಗವಾಗಲು ಶುರುವಾಯ್ತು.ಮಗನಿಗೆ ಮದುವೆ ಮಾಡಿದರೆ ಸರಿಯಾದೀತೆಂದು ಮದುವೆಮಾಡಿದರೆ . ಅಂಕೇಗೌಡರ ಬಾಳ ಸಂಗಾತಿ ಜಯಲಕ್ಷಿ$¾ ಯವರೂ  ಪತಿಗೆ   ಗಂಡನ ಹವ್ಯಾಸಕ್ಕೆ ಸಾತ್‌ ನೀಡಿದರು. ಹೀಗಾಗಿ ಪುಸ್ತಕದ ಹುಚ್ಚು ಬಿಡಲಿಲ್ಲ.   ಇಂದಿಗೂ ಪುಸ್ತಕ ನೋಡಲು ಬರುವ ಜನರನ್ನು ಗೌಡರ ಪತ್ನಿ ಜಯಲಕ್ಷಿ$¾ ಅವರೇ ನಗುನೊಗದಿಂದ ಸತ್ಕರಿಸುವುದು.

ಮೊದ ಮೊದಲು ಒಂದೊಂದಾಗಿ ಮನೆ ಸೇರಿದ ಪುಸ್ತಕಗಳು, ರಾಶಿಯಾಗಿ ವಿಶ್ವೇಶ್ವರ ನಗರದ ಕ್ವಾರ್ಟಸ್‌ ಪೂರ್ತಿ ತುಂಬಿ ಹೋಯಿತು. ಏನು ಮಾಡುವುದು? ಊಟ, ತಿಂಡಿ ಮಕ್ಕಳ ಆಟ ಎಲ್ಲವೂ ಪುಸ್ತಕದ ಜೊತೆಗೇ ಆಯಿತು.  
ಈ ಮಧ್ಯೆ ಗೌಡರು ಪಾಂಡವಪುರ ಸಕ್ಕರೆ ಕಾರ್ಖಾನೆಯ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದರು. ಆಗ ಬಂದ ಗ್ರಾಚುಯಿಟಿ,ಪಿ.ಎಫ್ನಿಂದ ಬಂದ ಹಣ, ನಂತರ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿ ದುಡಿದ ಹಣ , ಮೈಸೂರಿನ ಹೆಬ್ಟಾಳದಲ್ಲಿದ್ದ ನಿವೇಶನ ಮಾರಿದ ಹಣ,  ಜಮೀನಿನಲ್ಲಿ ಕಬ್ಬು  ಮಾರಿ ಬಂದ ಹಣ ಎಲ್ಲವೂ ಕೈ ಸೇರಿತು. ಇನ್ನು ಬದುಕಲು ಚಿಂತೆ ಇಲ್ಲ ಅಂದು ಕೊಳ್ಳುವ ಬದಲು ಎಲ್ಲವನ್ನೂ ಪುಸ್ತಕ ಕೊಳ್ಳಲು ಸುರಿದರು. 

ಪುಸ್ತಕ ಕೊಳ್ಳುವ ಹುಚ್ಚು ಇವರಿಗೆ ಎಷ್ಟಿತ್ತೆಂದರೆ, ಪಾಂಡವಪುರದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು, ಪುಸ್ತಕ ಖರೀದಿಸಿ ರಾತ್ರಿ ವೇಳೆಗೆ ಪುಸ್ತಕಗಳ ಮೂಟೆಯೊಂದಿಗೆ ಮನೆ ಸೇರುತ್ತಿದ್ದರು.

  ಅಂಕೇ ಗೌಡರ  ಮನೆಯಲ್ಲಿ ಎಲ್ಲೆಲ್ಲೂ ಪುಸ್ತಕಗಳೇ ಆಗಿ ಓಡಾಡಲೂ ಜಾಗವಿಲ್ಲದ ಪರಿಸ್ಥಿತಿ ಉದ್ಭವಿಸಿ ಪುಸ್ತಕ ಸಂರಕ್ಷಣೆ ಹೇಗೆ ಎಂಬ ಚಿಂತೆ ಉಂಟಾಯಿತು. ಈ ಸಮಯದಲ್ಲಿ ಅಂಕೇಗೌಡರ  ಹಲವಾರು ಸ್ನೇಹಿತರು ಈ ಬಗ್ಗೆ ಚಿಂತನೆಯಲ್ಲಿ ತೊಡಗಿ ಪುಸ್ತಕ ಸಂರಕ್ಷಣೆ ಬಗ್ಗೆ ಹಲವು ಕಾರ್ಯಕ್ರಮ ಹಾಕಿ ಕೊಂಡರು. ಈ  ಸಮಯದಲ್ಲಿ ಕೆ.ಆರ್‌.ಎಸ್‌. ಹಿನ್ನೀರಿನಲ್ಲಿ ಮುಳುಗಿದ್ದ ವೇಣುಗೋಪಾಲ ಸ್ವಾಮಿ ದೇವಾಲಯ ಸ್ಥಳಾಂತರ ಕಾರ್ಯವನ್ನು ಕೈಗೊಂಡಿದ್ದ ಉದ್ಯಮಿ ಹರಿ ಖೋಡೆ ಅವರಿಗೆ ಈ ಪುಸ್ತಕ ರಾಶಿ ಬಗ್ಗೆ ತಿಳಿದು ಅಂಕೇಗೌಡರ ಮನೆಗೆ ಬಂದರು. ಪುಸ್ತಕ ರಾಶಿಯನ್ನು ನೋಡಿ ಮೂಕ ವಿಸ್ಮಿತರಾದರು. “ಸಾರ್‌, ನನಗೇನೂ ಬೇಡ. ಪುಸ್ತಕಗಳ ಸಂರಕ್ಷಣೆಗೆ  ಏನಾದರೂ ಅನುಕೂಲ ಮಾಡಿಕೊಡಿ ಎಂದಿದ್ದು ಗೌಡರು ಹೇಳಿದ್ದು ಕೇಳಿ ಅಚ್ಚರಿಯಿಂದ  ಅವರು ಪುಸ್ತಕಗಳ ವಿಂಗಡಣೆಗೆ ಕಂಪ್ಯೂಟರ್‌ ಎಂಜಿನಿಯರ್‌  ಜೊತೆ 40 ಜನರನ್ನು ಕಳುಹಿಸಿದರು. ಇವರೆಲ್ಲರೂ ಸೇರಿ 35 ದಿನಗಳ ಕಾಲ ಪುಸ್ತಕ ವರ್ಗೀಕರಣ  ಮಾಡಿದರು.  ಸಮಯದಲ್ಲಿ ಅಕ್ಕ ಪಕ್ಕದ ಹಳ್ಳಿಯ ಜನ , ಸ್ವಯಂ ಇಚ್ಚೆಯಿಂದ ಊಟ ತಯಾರಿಸಿಕೊಂಡು ಬಂದು ಪುಸ್ತಕ ವಿಂಗಡಣೆ ಕೆಲಸದಲ್ಲಿ ತೊಡಗಿದ್ದವರಿಗೆ ನೀಡಿ ಸತ್ಕರಿಸಿದ್ದು  ವಿಶೇಷವಾಗಿತ್ತು. ನಂತರ ಅಂಕೇ ಗೌಡ ಜ್ಞಾನ ಪ್ರತಿಷ್ಠಾನ ಸ್ಥಾಪಿಸಿದರು.  ಹರಳಹಳ್ಳಿಯಲ್ಲಿ ಅರ್ಧಕ್ಕೆ ನಿಂತಿದ್ದ ಸುಸಜ್ಜಿತ ಕಟ್ಟಡ ನಿರ್ಮಿಸಿ ಕೊಟ್ಟರು.

  ಅಂಕೇ ಗೌಡರ ಪುಸ್ತಕ ಸಂಗ್ರಹಕ್ಕೆ  ಒಂದು ರೂಪ ಸ್ಪಷ್ಟವಾಗುತ್ತಿದ್ದಂತೆ. ಇವರಲ್ಲಿದ್ದ ಅಪರೂಪದ  ಪುಸ್ತಕಗಳು ಬೆಳಕಿಗೆ ಬಂದವು.  ವಿಶ್ವವಿಖ್ಯಾತ  ಪುಸ್ತಕ, ನೊಬೆಲ… ಪ್ರಶಸ್ತಿ ಪಡೆದ ಕೃತಿಗಳು, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪ್ರಕಟಣೆಗಳು, ಅತ್ಯಂತ  ಪ್ರಾಚೀನ ಕನ್ನಡ ನಿಘಂಟುಗಳು- ಹೀಗೆ ಎಲ್ಲೂ ಸಿಗದ ಶೇ.90 ರಷ್ಟು ಪುಸ್ತಕಗಳು ನಿಮಗೆ ಖಂಡಿತವಾಗಿ ಇಲ್ಲಿ  ನೋಡಲು ಸಿಗುತ್ತವೆ.

  ಪುಸ್ತಕದ ಮನೆಗೆ ಮೈಸೂರಿನಿಂದ, ನಾಡಿನ ಹಲವಾರು ಪಟ್ಟಣಗಳಿಂದ ಆಸಕ್ತರು ಭೇಟಿನೀಡುತ್ತಾರೆ.  ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲು ಅವರು ಪಟ್ಟಿರಬಹುದಾದ ಶ್ರಮದ ಬಗ್ಗೆ ಯೋಚಿಸಿದಾಗ ಅಚ್ಚರಿಯಾಗುತ್ತದೆ. 

ಬಾಲು ತಹಶೀಲ್ದಾರ್‌ 

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.