ದೊಡ್ಡ ಬಣ್ಣದ ಪಟ್ಟೆ ಗೊರವ


Team Udayavani, Dec 8, 2018, 12:05 PM IST

55.jpg

Greater Painted Snipe (Rostratula benghalensis) (Linnaeus)  R- Quail+
ಮೊಟ್ಟೆ ಇಡುವ ಜಾಗವನ್ನು ಹೆಣ್ಣು ಹಕ್ಕಿ ಗುರುತಿಸಿ, ಗೂಡು ಕಟ್ಟುತ್ತದೆ. ಆನಂತರ ಮೊಟ್ಟೆಗೆ ಕಾವು ಕೊಡುವ ಮತ್ತು ಅದನ್ನು ರಕ್ಷಿಸುವ ಹೊಣೆಯನ್ನು ಗಂಡು ಹಕ್ಕಿ ಹೊತ್ತುಕೊಳ್ಳುತ್ತವೆ. ಗಾತ್ರದಲ್ಲಿ ಗಂಡಿಗಿಂತ ಹೆಣ್ಣು ಹಕ್ಕಿಯೇ ದೊಡ್ಡದಾಗಿರುತ್ತದೆ. 

ಉರುಟಾದ ಕಾಡು ಕೋಳಿಯನ್ನು ತುಂಬಾ ಹೋಲುವ ಹಕ್ಕಿ ಇದು. ಎಷ್ಟೋ ಜನಕ್ಕೆ ಇದು ಕಾಡುಕೋಳಿಯೇ ಇರಬೇಕು ಅನ್ನೋ ಅನುಮಾನ ಇತ್ತು. ಆದರೆ ಸೂಕ್ಷವಾಗಿ ಗಮನಿಸಿದಾಗ ಇದು ಪ್ರತ್ಯೇಕ ಗುಂಪಿನ ಕುಟುಂಬಕ್ಕೆ ಸೇರಿದ ಬಣ್ಣದ ಪಟ್ಟೆ ಇರುವ ಚಿಕ್ಕ ಹಕ್ಕಿ ಎಂದು ತಿಳಿಯಿತು. 

ಇದರ ಚುಂಚು ನೇರವಾಗಿ ಇರುವಂತೆ ಭಾಸವಾಗುತ್ತದೆ. ಸೂಕ್ಷ್ಮವಾಗಿ ನೋಡಿದರೆ ಮಾತ್ರ ಚುಂಚಿನ ತುದಿಯಲ್ಲಿ ಕೆಳಮುಖ ಬಾಗಿರುವುದು ತಿಳಿಯುವುದು. ಪಟ್ಟೆ ಗೊರವ, ಜೇಕ್‌ ಪಟ್ಟೆ ಗೊರವ, ಯುರೇಶಿಯನ್‌ ಕೋಳಿ, ಪಿನ್‌ ಟೇಲ್‌ ಪಟ್ಟೆ ಗೊರವ ಮುಂತಾದ ಹಕ್ಕಿಗಳ ಚುಂಚು ಹೀಗೆ ಇರುತ್ತದೆ. 

ಜೆಕ್‌ ಪಟ್ಟೆ ಗೊರವದ ಕಣ್ಣಿನ ಸುತ್ತ ತಿಳಿಬಣ್ಣದ ಮಚ್ಚೆ ಇರುತ್ತದೆ.  ಇತರ ಪಟ್ಟೆ ಗೊರವದ ಕಣ್ಣಿನ ಕೆಳಗೆ ಸ್ವಲ್ಪ ಅಂತರದಲ್ಲಿ ಕಂದು ಬಣ್ಣದ ವರ್ತುಲಾಕಾರದ ರೇಖೆ ಇದೆ. ದೊಡ್ಡ ಬಣ್ಣದ ಪಟ್ಟೆ ಗೊರವದ ಕಣ್ಣು ಹೊಳೆವಂತಿದೆ. ಕಣ್ಣಿನ ಸುತ್ತ ಇರುವ ಬಿಳಿಬಣ್ಣ ಮತ್ತು ಕಣ್ಣಿನ ಹಿಂಭಾಗದಲ್ಲಿ ಚಾಚಿದ ಬಿಳಿಬಣ್ಣ ಇದರ ಕಣ್ಣಿಗೆ ಕನ್ನಡಕ ಧರಿಸಿದಂತೆ ಭಾಸವಾಗುತ್ತದೆ.  ಹಕ್ಕಿಯ ಭುಜದ ಭಾಗದಲ್ಲಿರುವ ವರ್ತುಲ ರೂಪದ ಬಿಳಿಪಟ್ಟೆಯಿಂದ ಇದು ಪಟ್ಟೆ ಗೊರವಕ್ಕಿಂತ ಭಿನ್ನ ಎಂದು ಗುರುತಿಸ ಬಹುದು. 

ಈ ಕುಟುಂಬದ ಹಕ್ಕಿಗಳೆಲ್ಲಾ ಸಾಮಾನ್ಯವಾಗಿ ಜವಗು ಮತ್ತು ಕೆಸರು ಗದ್ದೆಗಳನ್ನೇ ತಮ್ಮ ಇರುನೆಲೆಯನ್ನಾಗಿ ಮಾಡಿಕೊಳ್ಳುವುದರಿಂದ ಇದಕ್ಕೆ ಕೆಸರಿನ ಹಕ್ಕಿ ಎಂಬ ಹೆಸರೂ ಇದೆ. 

ಈ ಹಕ್ಕಿಯ ಎದೆಯ ಮೇಲೆ  ಹಾರದಂತೆ ಬಿಳಿ ಬಣ್ಣದ ರೇಖೆ ಇದೆ. ದೊಡ್ಡ ಬಣ್ಣದ ಗೊರವ ಇತರ ಗೊರವ ಹಕ್ಕಿಗಿಂತ ಭಿನ್ನಾವಾಗಿದೆ. ಇತರ ಗೊರವ ಹಕ್ಕಿಗೆ ಚಿಕ್ಕ ಕಾಲಿರುತ್ತದೆ.  ಆದರೆ ದೊಡ್ಡ ಗೊರವ ಬಣ್ಣದ ಹಕ್ಕಿಗೆ ಉದ್ದ ಕಾಲಿದೆ. ಕಾಲು ಹಳದಿ ಛಾಯೆಹಸಿರು ಬಣ್ಣದಿಂದ ಕೂಡಿದೆ. ಹಾರುವಾಗ ಹಾಗೂ ಇದನ್ನು ನೋಡುವಾಗ ಅದಕ್ಕಿಂತ ಪ್ರತ್ಯೇಕ ಲಕ್ಷಣ ಇರುವುದನ್ನು ನೋಡಿ ಇದನ್ನು ಸುಲಭವಾಗಿ ಗುರುತಿಸ ಬಹುದು. ಹೆಣ್ಣು ಹಕ್ಕಿ ಹೆಚ್ಚು ಗಾಢ ಬಣ್ಣದಿಂದ ಕೂಡಿದ್ದು ಗಂಡಿಗಿಂತ ದೊಡ್ಡದಾಗಿರುತ್ತದೆ. ಗಂಡು ಹಕ್ಕಿಯ ಬಣ್ಣ ಸ್ವಲ್ಪ ಮಂಕಾಗಿರುತ್ತದೆ.  ದೇಹದ ಮೇಲಿರುವ ಚಿತ್ತಾರ- ಎರಡೂ ಹಕ್ಕಿಯಲ್ಲಿ ಒಂದೇರೀತಿ ಇರುವುದು. ಇದು ಹಾಡು ಹಕ್ಕಿಯಲ್ಲ.  ಆದರೂ ಗಂಡು ಹಕ್ಕಿ ಮರಿಮಾಡುವ ಸಮಯದಲ್ಲಿ ಶ್ರಿಲ್‌, ಟರಿಲ ಎಂಬ ದನಿ ಹೊರಡಿಸುತ್ತದೆ. ಹೆಣ್ಣು ಅದರೊಟ್ಟಿಗೆ ಕ್ರೋಕ್‌ ದನಿ ಹೊರಡಿಸಿ  ಸಂಭಾಷಿಸುತ್ತದೆ. 

ಕೆಸರು ಪ್ರದೇಶ, ನದೀ ತೀರದ ಭಾಗ, ಭತ್ತದ ಗದ್ದೆ ಇರುವ ಕೆಸರು ಪ್ರದೇಶದಲ್ಲಿ ಸದಾ ಮಣ್ಣು ಕೆದಕುತ್ತಾ ಕೆಸರಿನಲ್ಲಿ ಕುಕ್ಕಿ ಕುಕ್ಕಿ ಅಲ್ಲಿರುವ ಮಣ್ಣಿನ ಹುಳ ಮತ್ತು ಎರೆಹುಳದ ಮೊಟ್ಟೆಯನ್ನು ಚಿಕ್ಕ ಕ್ರಿಮಿಯನ್ನು ಆಯ್ದು ತಿನ್ನುವುದು. ಇದು ಸಮುದ್ರ ತೀರ, ಗಜನಿ ಕೆಸರು. ನದೀ ತೀರ, ಭತ್ತದ ಗದ್ದೆ ಯಲ್ಲಿ ಜೋಡಿಯಾಗಿ ಇಲ್ಲವೇ 10-12ರ ಗುಂಪಿನಲ್ಲಿ ಇರುತ್ತದೆ.  ಇದು ತುಂಬಾ ಸೂಕ್ಷ್ಮ ಸ್ವಭಾವದ ಹಕ್ಕಿ. ಮನುಷ್ಯರ ಸುಳಿವು ಸಿಕ್ಕ ತಕ್ಷಣ ಬಹುಬೇಗ ಹಾರಿ ದೂರ ಹೋಗುವುದು. 

 ಮೊಟ್ಟೆ ಇಡುವ ಜಾಗವನ್ನು -ಹೆಣ್ಣು ಹಕ್ಕಿ ನಿರ್ಧರಿಸುವುದು. ಹೀಗೆ ಗೂಡು ಮಾಡುವ ಜಾಗ ನಿರ್ಧಾರವಾದ ನಂತರ ಮೊಟ್ಟೆ ರಕ್ಷಣೆ ಮತ್ತು ಕಾವುಕೊಡುವ ಕಾರ್ಯವನ್ನು ಗಂಡು ನಿರ್ವಹಿಸುತ್ತದೆ.  ಕೆಲವೊಮ್ಮೆ ಮೃದ್ವಂಗಿಗಳನ್ನು ಭತ್ತ ಮತ್ತು ಹುಲ್ಲಿನ ಬೀಜಗಳನ್ನು ಸಹ ತಿನ್ನುತ್ತದೆ. ಹೆಚ್ಚಾಗಿ, ಶೀತ ಪ್ರದೇಶಗಳಲ್ಲಿ ಈ ಹಕ್ಕಿ ಗೂಡು ನಿರ್ಮಿಸಿ, ಮರಿ ಮಾಡುತ್ತದೆ.

ಪಿ.ವಿ.ಭಟ್‌ ಮೂರೂರು 

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.