ಶಿವಾಜಿ ಎಂಬ ಕರುಣೆಯ ಕಣ್ಣು


Team Udayavani, Dec 15, 2018, 7:25 AM IST

2-nnh.jpg

“ಕರುಣೆ’ ಎಂಬ ಪದಕ್ಕೆ ಜೀವ ತುಂಬಿದರೆ, ಅದು”ಶಿವಾಜಿ ಕಾಗಣಿಕರ’ ಎಂಬ ವ್ಯಕ್ತಿಯಾಗುತ್ತದೆ. ಈ ಬಾರಿಯ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿರುವ ಶಿವಾಜಿಯನ್ನು ಬೆಳಗಾವಿಯ ಜನ ಭಗೀರಥ, ಪರಿಸರ ದಾತಾ, ಜಾಗೃತಿ ಮಾಮಾ ಎಂದೆಲ್ಲಾ ಕರೆಯುತ್ತಾರೆ. ಪುಟ್ಟ ಮಕ್ಕಳು ಈ ಬರಿಗೈ ಫ‌ಕೀರನನ್ನು ಬಾಬಾ, ದಾದಾ, ಕಾಕಾ ಎಂದೆಲ್ಲ ಕರೆದು ಸಂಭ್ರಮಿಸುತ್ತವೆ…

ಮೈಮೇಲೆ ಸದಾ ಒಂದು ಖಾದಿ ಅರ್ಧ ತೋಳಿನ ಅಂಗಿ ಹಾಗೂ ಚಡ್ಡಿ. ತಲೆಯ ಮೇಲೆ ಗಾಂಧಿ ಟೊಪ್ಪಿಗೆ.  ಬಗಲಲ್ಲಿ ಸಾದಾ ಕೈಚೀಲ. ಚೀಲದ ತುಂಬ ಕಾಗದ ಪತ್ರ. ಒಂದು ಜೊತೆ ಬಟ್ಟೆ.  ಕಾಲಲ್ಲಿ ಚಪ್ಪಲಿ ಇದ್ದರೂ ಅಷ್ಟೇ ಇಲ್ಲದಿದ್ದರೂ ಅಷ್ಟೆ. ಬೆಳಗಾವಿ ನಗರ ಹಾಗೂ ಗಡಿ ಭಾಗದ ಹತ್ತಾರು ಹಳ್ಳಿಗಳಲ್ಲಿ ಈ ರೀತಿ  ಕಾಣುವವರು ಒಬ್ಬರೇ ಒಬ್ಬ ವ್ಯಕ್ತಿ. ಅವರೇ ಶಿವಾಜಿ ಕಾಗಣಿಕರ. ಒಬ್ಬ ಅಪರೂಪದ, ಸರಳ ವ್ಯಕ್ತಿತ್ವ, ಸರಳ ಜೀವನ ಹಾಗೂ ಸದಾ ನಗುಮುಖದ ಶಿವಾಜಿ ಅಪ್ಪಟ ಗಾಂಧಿವಾದಿ. 

ಸಮಾಜಸೇವೆಗೆ ಸದಾ ಮುಂದು
 ಬೆಳಗಾವಿ ತಾಲೂಕಿನ ಕಡೋಲಿ ಇವರ  ಹುಟ್ಟೂರು. ಸಮಾಜ ಸೇವೆಗೆ ಆರಿಸಿಕೊಂಡಿದ್ದು ಕಟ್ಟಣಬಾವಿ. ತಾಯಿ ಗಂಗವ್ವ, ತಂದೆ ಛತ್ರೆಪ್ಪ. ಶಾಲೆಯ ದಾಖಲಾತಿಯಂತೆ ಶಿವಾಜಿಯ ಜನ್ಮದಿನ 1949 ಮಾರ್ಚ್‌ 01. ಒಂದು ಹೆಣ್ಣು ಮತ್ತು ಎಂಟು ಗಂಡು ಮಕ್ಕಳಲ್ಲಿ ಶಿವಾಜಿ ಎಂಟನೆಯವರು. ಕಡೋಲಿಯ ಕುರುಬ ಸಮುದಾಯದಲ್ಲಿ ಮೆಟ್ರಿಕ್‌ ಪಾಸಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಶಿವಾಜಿಯದೇ. ಮನೆಮಾತು ಕನ್ನಡವಾದರೂ ಅಲ್ಲಿ ಕನ್ನಡ ಶಾಲೆಗಳಿಲ್ಲದ್ದರಿಂದ, ಸಮೀಪದ ಕಡೋಲಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮರಾಠಿ ಮಾಧ್ಯಮದಲ್ಲಿ ಮಾಡಿದ್ದಾರೆ. ಸಾಮಾಜಿಕ ಚಳವಳಿಯ ಸೆಳೆತದಿಂದ  ಪದವಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಸಾನೇ ಗುರೂಜಿ, ಜಯಪ್ರಕಾಶ ನಾರಾಯಣ, ವಸಂತ ಪಾಳಸೇಕರ, ಅಣ್ಣಾ ಹಜಾರೆ, ಮೋಹನ್‌ ಹೀರಾಬಾಯಿ ಹೀರಾಲಾಲ್‌ ಮುಂತಾದವರ ಪ್ರಭಾವದಿಂದ ಸಮಾಜ ಸೇವೆ ಮಾಡಲು ನಿರ್ಧಿರಿಸಿ,  ಅವಿವಾಹಿತರಾಗಿ ಉಳಿದಿದ್ದಾರೆ. 

ಸಾಮಾಜಿಕ ಚಳುವಳಿ
ಶಿವಾಜಿಯು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಡೆದ ಎರಡು ಘಟನೆಗಳು ಅವರನ್ನು ಸಾಮಾಜಿಕ ಚಳವಳಿಯತ್ತ ಸೆಳೆದವಂತೆ. ಒಂದು : ಮರಾಠಿ ಮಾಧ್ಯಮದಲ್ಲಿ ಮೂರನೇ ತರಗತಿಯಲ್ಲಿದ್ದಾಗ ಸಾನೇ ಗುರೂಜಿ ಅವರ ಭೂತ ದಯಾ ಎನ್ನುವ ಪಾಠ ಬಾಲಕ ಶಿವಾಜಿಯ ಮೇಲೆ ಅತ್ಯಂತ ಪ್ರಭಾವ ಬೀರುತ್ತದೆ. ಪಾಠದಲ್ಲಿ, ಗಾಯಗೊಂಡು ಬಿದ್ದ ಪಕ್ಷಿಯನ್ನು ಸಾನೇ ಗುರೂಜಿ  ಮನೆಗೆ ತಂದು ಮೂರು ದಿನಗಳ ಕಾಲ ಆರೈಕೆ ಮಾಡುತ್ತಾರೆ. ಆದರೆ ಅದು ಉಳಿಯುವುದಿಲ.É ಅದಕ್ಕೆ ಗುರೂಜಿ ಮನುಷ್ಯರಿಗೆ ಮಾಡುವ ಹಾಗೆ ಅಂತ್ಯ ಸಂಸ್ಕಾರ ಮಾಡಿ ಮೂರು ದಿನ ಸೂತಕ ಆಚರಿಸುತ್ತಾರೆ.   ವಿದ್ಯಾ ಸಂಸ್ಥೆಗಳು ಹಣಗಳಿಕೆಯ ಕೇಂದ್ರಗಳಾಗುತ್ತಿರುವುದು, ಶಿಕ್ಷಕರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಜೀತದಾಳುಗಳನ್ನಾಗಿ ಬಳಸಿಕೊಳ್ಳುತ್ತಿರುವುದನ್ನು ಕಂಡು ನೌಕರಿಯ ಆಸೆ ಬಿಟ್ಟು ಹಳ್ಳಿಗೆ ಹೋಗಿ ದುಡಿಯಲು ನಿರ್ಧರಿಸಿದರು.

ಆಗ ಸಂಪರ್ಕಕ್ಕೆ ಬಂದಿದ್ದೇ ಅಖೀಲ ಭಾರತ ತರುಣ ಕ್ರಾಂತಿ ಶಿಬಿರ. ಅದು 1972 ರ ಸಮಯ.  ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ಗಾಂಧೀವಾದಿ ಸದಾಶಿವರಾಬ್‌ ಭೋಸಲೆ ನೇತೃತ್ವದಲ್ಲಿ ಈ ಶಿಬಿರ ನಡೆದಿತ್ತು. ಇದರಲ್ಲಿ ಭಾಗವಹಿಸಿದ ಶಿವಾಜಿ ಕಾಗಣಿಕರ ಅವರ  ಜೀವನದ ದಿಕ್ಕೇ ಬದಲಾಯಿತು.
ಶಿಬಿರ ಮುಗಿದ ಮೇಲೆ  ಕಾಲೇಜಿಗೂ  ಹಾಗೂ  ಮನೆಗೂ ಹೋಗದೆ ನೇರವಾಗಿ ನಿಂಗೇನಟ್ಟಿ ಎಂಬ ಹಳ್ಳಿಗೆ ಬಂದು ಪಾಳು ದೇವಸ್ಥಾನದಲ್ಲಿ ಉಳಿದುಕೊಳ್ಳುತ್ತಾರೆ ಶಿವಾಜಿ. ಒಂದು ವರ್ಷಕಾಲ ಸುಮಾರು 20 ಹಳ್ಳಿಗಳನ್ನು ಸುತ್ತಿ ಅಲ್ಲಿರುವ ಸಮಸ್ಯೆಗಳನ್ನು ಕಣ್ಣಾರೆ ನೋಡುತ್ತಾರೆ.  1968-69ರಲ್ಲಿ ಸರ್ವೋದಯ ಗೆಳೆಯರ ಜೊತೆ ಸೇರಿ, ಜನ ಜಾಗರಣ ಸಂಸ್ಥೆಯನ್ನು ಹುಟ್ಟು ಹಾಕಿ ರಾತ್ರಿ ಶಾಲೆಗಳನ್ನು ನಡೆಸುತ್ತಾರೆ. ಮುಂದೆ ಇದೇ ಸಮಿತಿ ಮಹಾನ್‌ ಸಾಧನೆಗೆ ಕಾರಣವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬೇಡ, ಮರಾಠಾ ಮತ್ತು ಕುರುಬ ಸಮುದಾಯಗಳೇ ವಾಸವಾಗಿರುವ ಅರಣ್ಯ ಪ್ರದೇಶದ ಹಳ್ಳಿಗಳಲ್ಲಿ ವಾಸಮಾಡಿ, ಸೆ„ಕಲ್‌ ಮೇಲೆ ಸುತ್ತಾಡಿ ಶೆ„ಕ್ಷಣಿಕ ಜಾಗƒತಿ ಮಾಡಿದ ಶಿವಾಜಿ, ವಿಶೇಷವಾಗಿ ರಾತ್ರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರಿಗೆ ಹೊಸ ದಾರಿ ತೋರಿಸಿದರು. ಯಾವ ಗುಡಿ-ದೇವಸ್ಥಾನಗಳಿಗೆ ಮಹಿಳೆಯರ ಪ್ರವೇಶ ನಿರ್ಬಂಧಿಸಲಾಗಿತ್ತೋ ಅಂತಹ ದೇವಸ್ಥಾನಗಳಲ್ಲೇ ಮಹಿಳೆಯರ ರಾತ್ರಿ ಶಾಲೆಗಳನ್ನು ಪ್ರಾರಂಭಿಸಿ, ಹತ್ತು ವರ್ಷಕಾಲ ಸತತ ನಡೆಸಿ ಜಾಗƒತಿ ಮೂಡಿಸಿದರು. 

 ಬೆಳಗಾವಿ ಮತ್ತು ಹುಕ್ಕೇರಿ ತಾಲೂಕುಗಳಲ್ಲಿ ಒಂದು ತಾಲೂಕಿಗೆ 2000ದವರೆಗೆ ಈ ಸಂಘದ ಸದಸ್ಯೆಯರಿದ್ದಾರೆ. ಶಿವಾಜಿಯ ಮಾರ್ಗದರ್ಶನದಲ್ಲಿ ಇಂದು ಒಂದೊಂದು ಸಂಘ 15 ರಿಂದ 20 ಲಕ್ಷದವರೆಗೆ ಉಳಿತಾಯ ಸಂಗ್ರಹಮಾಡಿ ಸ್ವಾವಲಂಬನೆಯ ಜೀವನಕ್ಕೆ ಮಾದರಿಯಾಗಿವೆ.

ಪ್ರಶಸ್ತಿಯಿಂದ ಹೆಚ್ಚಿದೆ
ದೇವರಾಜ ಅರಸ್‌ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಪ್ರಶಸ್ತಿಗೆ ನನ್ನ ಹೆಸರು ಶಿಫಾರಸ್ಸು ಮಾಡಲು  ಬಂದಾಗ ನಿರಾಕರಿಸಿದೆ.  ಪ್ರಶಸ್ತಿ ಪಡೆದುಕೊಂಡಿದು ªಆನಂದ ಉಂಟುಮಾಡಿದೆ. ನನ್ನ ಜವಾಬ್ದಾರಿಯನ್ನೂ ಅದು ಹೆಚ್ಚುಮಾಡಿದೆ ಎಂದರು ಶಿವಾಜಿ ಕಾಗಣಿಕರ.  ಪ್ರಶಸ್ತಿ ಜೊತೆಗೆ ಸರಕಾರ ಕೊಟ್ಟಿರುವ 5 ಲಕ್ಷ ರೂ ಪುರಸ್ಕಾರವನ್ನು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಬಳಕೆ  ಮಾಡಲು ನಿರ್ಧಾರ ಮಾಡಿದ್ದೇನೆ. ಈಗ ಬೆಳಗಾವಿ ತಾಲೂಕಿನ ಬಂಬರಗಾ, ಕಡೋಲಿ,, ದೇವಗಿರಿ ಬೆಕ್ಕಿನಕೆರೆ, ನಿಂಗ್ಯಾನಟ್ಟಿ, ಗೋರಾನಟ್ಟಿ ಗ್ರಾಮಗಳಲ್ಲಿ ನಡೆಸುತ್ತಿರುವ ನಾಲ್ಕು  ತೊಟ್ಟಿಲ ಮನೆ ಹಾಗೂ ನಾಲ್ಕು ಕಲಿಕಾ ಕೇಂದ್ರಕ್ಕೆ ಈ ಹಣ ವಿನಿಯೋಗವಾಗಲಿದೆ ಎಂದೂ ಅವರು ಹೇಳಿದರು. 

ಗ್ರಾಮ ಸ್ವರಾಜ್‌ ಕನಸು
ಗ್ರಾಮ ಸ್ವರಾಜ್‌ ನನ್ನ ಬಹು ದೊಡ್ಡ ಕನಸು. ಈಗಿನ ಸ್ಥಿತಿ ನೋಡಿದರೆ ನನ್ನ ದೇಶ ಕಲಿಯದೇ ಇರುವವರ ದೇಶ ಎಂದೇ ಇರಬೇಕಿತ್ತು ಎನಿಸುತ್ತದೆ. ಭ್ರಷ್ಟಾಚಾರವನ್ನು ಶಿಷ್ಟಾಚಾರ ಎಂದು ತಿಳಿದುಕೊಂಡಿದ್ದಾರೆ. ಇದು ದೇಶದ ಬಹಳ ದೊಡ್ಡ ಶಾಪ. ರೋಗ.  ಭ್ರಷ್ಟಾಚಾರದಲ್ಲಿ ಮುಳುಗಿರುವವರನ್ನು ಜನರು  ಉಸಿರು  ತೆಗೆದುಕೊಳ್ಳದಂತೆ ಮಾಡಬೇಕು.  ಅಧಿಕಾರಿಗಳಿಗೆ ಅವರು ಇರುವ ಜಾಗ  ತೋರಿಸಬೇಕು. ಇದುವೇ ಜನ ಜಾಗರಣ ಸಮಿತಿಯ ಮುಖ್ಯ ಉದ್ದೇಶ ಎನ್ನುತ್ತಾರೆ ಶಿವಾಜಿ ಕಾಗಣಿಕರ.

ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ಸಂಘ ಸಂಸ್ಥೆಗಳ ಸಂಸ್ಥಾಪಕರಾಗಿ, ಕಾರ್ಯದರ್ಶಿಯಾಗಿ, ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಾಜಿದಾದಾ ಕಾಗಣೀಕರ ಅವರಿಗೆ ಮನೆಯೆಂಬುದಿಲ್ಲ, ದಲಿತರ ಮನೆಗಳಲ್ಲೆ ವಸತಿ ಮಾಡುತ್ತಾರೆ. ತಿರುಗಾಡಲು ಸ್ವಂತ ವಾಹನವಿಲ್ಲ, ಸಂಪರ್ಕಕ್ಕೆ ಒಂದು ´ೋನಾಗಲಿ, ಮೊಬೆ„ಲ್‌ ಆಗಲಿ ಇಟ್ಟುಕೊಂಡಿಲ್ಲ. ಆದರೆ ಗಾಂದೀಜಿ, ಜಯಪ್ರಕಾಶ ನಾರಾಯಣ ಅವರ ಗ್ರಾಮಸ್ವರಾಜ್ಯ ಕನಸನ್ನು ಮಾತ್ರ ಕಣ್ಣು ಮನದಲ್ಲಿ ತುಂಬಿಕೊಂಡಿದ್ದಾರೆ. 
ಸರ್ವ ಸಾಮಾನ್ಯ ಜನರಲ್ಲಿ  ನನ್ನ ಬಗ್ಗೆ ಬಹಳ ಪ್ರೀತಿ ಇದೆ. ಅದನ್ನು ನಾನು ಹೇಗೆ ಹೇಳಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ.  ನಾನು ಯಾವುದೇ ಹಳ್ಳಿಗೆ ಹೋಗಲಿ, ಅಲ್ಲಿ ನನ್ನನ್ನು ನೋಡಿದ ಮಕ್ಕಳು ಓಡೋಡಿ ಬಂದು ನನ್ನ ಕೈಹಿಡಿದು ಬಾಬಾ ನೀನು ನನ್ನ ಮನೆಗೆ ಊಟಕ್ಕೆ ಬರಬೇಕು ಎಂದ ಹಠ ಮಾಡುತ್ತಾರೆ. ತಾಯಿಗೆ ಬಾಬಾ ಬಂದಾನ ರೊಟ್ಟಿ ಮಾಡು, ಇಂಥದೇ ಪಲ್ಯ ಮಾಡು ಎಂದು ಹೇಳುವದನ್ನು ನೋಡಿದರೆ ಕಣ್ಣಲ್ಲಿ  ನೀರು ಬರುತ್ತದೆ. ಅವರ ಅಭಿಮಾನ ಹಾಗೂ ಪ್ರೀತಿ ನನ್ನನ್ನು ಕಟ್ಟಿಹಾಕಿದೆ ಎಂದು ಹೇಳುವಾಗ ಶಿವಾಜಿ ಕಾಗಣಿಕರ ತುಂಬಾ ಭಾವುಕರಾಗುತ್ತಾರೆ.

ಗೋಬರ್‌ ಗ್ಯಾಸ್‌ ಅಳವಡಿಕೆಯಲ್ಲಿ ಕ್ರಾಂತಿ
ಶಿವಾಜಿ ಕಾಗಣಿಕರ ಅವರ ಇನ್ನೊಂದು ಸಾಧನೆ ಎಂದರೆ,  ಗೋಬರ್‌ ಗ್ಯಾಸ್‌ ಅಳವಡಿಕೆಯಲ್ಲಿ ಮಾಡಿದ ಕ್ರಾಂತಿ. ಮನೆಯಲ್ಲಿ ಹೆಣ್ಣುಮಕ್ಕಳು ಅಡಿಗೆ ಮಾಡುವಾಗ ಹಸಿ ಕಟ್ಟಿಗೆ ಉಪಯೋಗಿಸುವದು. ಅದರಿಂದ ಆಗುವ ತೊಂದರೆ ಹಾಗು ಪರಿಸರದ ಮೇಲೆ ಆಗುವ  ಪರಿಣಾಮಗಳನ್ನು ಕಣ್ಣಾರೆ ಕಂಡ ಶಿವಾಜಿ ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಆಲೋಚಿಸಿದಾಗ ಹೊಳೆದಿದ್ದು ಗೋಬರ್‌ ಗ್ಯಾಸ್‌ಮಾಡುವದು. ಬೆಳಗಾವಿ, ಹುಕ್ಕೇರಿ ಹಾಗೂ  ಖಾನಾಪುರ ತಾಲೂಕುಗಳನ್ನು ಆಯ್ಕೆಮಾಡಿಕೊಂಡು ಅಲ್ಲಿನ ಮನೆ ಮನೆಗೆ ತೆರಳಿ ಜನರಿಗೆ ತಿಳುವಳಿಕೆ ಮೂಡಿಸಿದರು.ದೀನ ಬಂಧು ಎಂಬ ಎನ್‌ಜಿಒ ಜೊತೆ ಒಪ್ಪಂದ  ಮಾಡಿಕೊಂಡು 30 ಸಾವಿರಕ್ಕೂ ಹೆಚ್ಚು ಗೋಬರ್‌ ಗ್ಯಾಸ್‌ ಘಟಕಗಳನ್ನು ಹಳ್ಳಿಯ ಪ್ರತಿ ಮನೆಗೂ ಅಳವಡಿಸಿದರು.  ಆಗ ಗೋಬರ್‌ಗ್ಯಾಸ್‌ ಬಳಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಶಿವಾಜಿಯವರ ಕಡೋಲಿ ಗ್ರಾಮ ಕರ್ನಾಟಕದಲ್ಲೇ ಪ್ರಥಮ ಸ್ಥಾನದಲ್ಲಿತ್ತು. 

ಕೆರೆ ನಿರ್ಮಾಣದಲ್ಲಿ ಕ್ರಾಂತಿ
ಶಿವಾಜಿ ಕಾಗಣಿಕರ ಮಾಡಿರುವ ಪರಿಸರ ಸಾಧನೆಗಳಲ್ಲಿ ಕೆರೆ ಒಡ್ಡುಗಳ ನಿರ್ಮಾಣ ಮತ್ತು ಮರ ಬೆಳೆಸುವ ಕಾರ್ಯ ಬಹಳ ಪ್ರಮುಖ. ಬೆಳಗಾವಿ ತಾಲೂಕಿನ ನಿಂಗೇನಟ್ಟಿ  ಕಟ್ಟಣಬಾವಿ, ಗೋರಾಮಟ್ಟಿ ಮತ್ತು ಬಂಬರಗಾ ಹಳ್ಳಿಗಳಲ್ಲಿ ಡಿಸೆಂಬರ್‌-ಜನವರಿ ತಿಂಗಳಲ್ಲೇ ನೀರಿನ ಅಭಾವ. ಅದಕ್ಕಾಗಿ ಮೇದಾ ಪಾಟ್ಕರ್‌ ಅವರೊಂದಿಗೆ ಕಾರ್ಯ ಮಾಡಿದ ಪುಣೆಯ ಅಕ್ಷರನ‌ಂದನ್‌ ಸಂಸ್ಥೆಯ ಶುಭದಾ ಜೋಶಿ ಅವರ ಸಲಹೆ ಮೇರೆಗೆ ಶಿವಾಜಿ ಕಾಗಣಿಕರ  ಮಹಿಳಾ ಮತ್ತು ಪುರುಷರ ಎರಡು ತಂಡಗಳನ್ನು ಅಣ್ಣಾ ಹಜಾರೆ ಅವರ ರಣಗಾಳೆ ಸಿದ್ದಿಗೆ ಕರೆದುಕೊಂಡು ಹೋಗಿ ಅಲ್ಲಿನ ಪಾನಿ ಅಡವಾ ಪಾನಿ ಜಿರವಾ (ನೀರು ನಿಲ್ಲಿಸಿ ನೀರು ಇಂಗಿಸಿ) ಆಂದೋಲನದ ಕಾರ್ಯ ವಿಧಾನವನ್ನು ಪರಿಚಯಿಸುತ್ತಾರೆ. 

ಬೆಳಗಾವಿಯ ಜನ್‌ಧನ್‌ ಸಂಸ್ಥೆಯ ಜರ್ಮನ ಪ್ರತಿನಿದಿ ರುಡಾಲ್ಪ್ ಅವರ ಹಣಕಾಸಿನ ನೆರವು ಪಡೆದು ಈ ನಾಲ್ಕು ಹಳ್ಳಿಗಳಲ್ಲಿ ಐದಾರು ಕೆರೆಗಳನ್ನು, ಅನೇಕ ಒಡ್ಡುಗಳನ್ನು ನಿರ್ಮಿಸಿ, ಜಲಸಂಗ್ರಹ ಮಾಡಿ ಶಾಶ್ವತ ನೀರು ಲಭ್ಯವಾಗುವತೆ ಮಾಡಿದ್ದಾರೆ. ಒಂದು ಕೆರೆಗೆ ಕನಿಷ್ಠ 11 ಲಕ್ಷ ರೂ ಖರ್ಚಾಗಬೇಕಿದ್ದ 11 ಲಕ್ಷ ಲೀಟರ್‌ ಸಾಮರ್ಥ್ಯದ ಕೆರೆಯನ್ನು ಕೇವಲ 4 ಲಕ್ಷ ರೂಗಳಲ್ಲಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಕೀರ್ತಿ ಶಿವಾಜಿ ಅವರದು. ಇದರ ಜೊತೆಗೆ, ರೈತರ ನೆಲ-ಹೊಲಗಳಲ್ಲಿ ಅರಣ್ಯ ಇಲಾಖೆ ಸಹಾಯದಿಂದ ಮೂರು ಲಕ್ಷಕ್ಕೂ ಹೆಚ್ಚು ಗಿಡ ನೆಟ್ಟು, ಬೆಳೆಸಿ ಹಸಿರುಕ್ರಾಂತಿ ಮಾಡಿದ್ದಾರೆ. ಅನೇಕ ಕಡೆ ಬೆಳೆಸಿದ ಕಾಜು ಗಿಡಗಳು ರೈತರಿಗೆ ಲಕ್ಷಗಟ್ಟಲೇ ಆದಾಯ ತಂದುಕೊಡುತ್ತಿವೆ.

ಮರಾಠಿಯ ದಟ್ಟ ಪ್ರಭಾವವಿದ್ದ ಮತ್ತು ಮರಾಠಿ ಶಾಲೆಗಳಷ್ಟೇ ಇದ್ದ ಗ್ರಾಮಗಳಲ್ಲಿ ಮಹಾರಾಷ್ಟÅ ಏಕೀಕರಣ ಸಮಿತಿಯ ವಿರೋಧದ ನಡುವೆಯೂ ಕನ್ನಡ ಶಾಲೆ ಮತ್ತು ಕನ್ನಡ ಭಾಷೆಯ ಪ್ರಾಮುಖ್ಯತೆಗಾಗಿ ಹೋರಾಟ ಮಾಡಿ ಕನ್ನಡ ಶಾಲೆಗಳು ತಲೆ ಎತ್ತುವಂತೆ, ಕನ್ನಡ ಮಾಧ್ಯಮ ಬಲಗೊಳ್ಳುವಂತೆ ಮಾಡಿದ್ದಾರೆ ಶಿವಾಜಿ ಕಾಗಣಿಕರ. ಇದಕ್ಕಾಗಿ ಅನೇಕರ ವಿರೋಧ ಸಹ ಕಟ್ಟಿಕೊಂಡಿದ್ದಾರೆ. 

ಕೇಶವ ಆದಿ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.