ಮಾಗಡಿ ರಂಗನಾಥನ ಕಾಣಿರೋ…


Team Udayavani, Feb 23, 2019, 12:30 AM IST

15.jpg

ದೇವಸ್ಥಾನದ ಗರ್ಭಗೃಹದಲ್ಲಿ ಶ್ರೀ ರಂಗನಾಥ ಸ್ವಾಮಿಯ ವಿಗ್ರಹವು ನಿಂತಿರುವ ಭಂಗಿಯಲ್ಲಿದೆ. ವಿಜಯನಗರ ಶೈಲಿಯಲ್ಲಿರುವ ಈ ವಿಗ್ರಹವು ಸುಮಾರು 4 ಅಡಿ ಎತ್ತರವಿದ್ದು,  ಶಂಖ, ಚಕ್ರ, ಗಧ ಮತ್ತು ಅಭಯ ಹಸ್ತವನ್ನು ಹೊಂದಿದೆ. ಇದು ವೆಂಕಟೇಶ್ವರನ ಮೂಲ ವಿಗ್ರಹ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ರಾಮನಗರ ತಾಲೂಕಿನ ಮಾಗಡಿಯಲ್ಲಿ ಒಂದು ವಿಶೇಷ ದೇವಸ್ಥಾನವಿದೆ. ಅದುವೇ ಲಕ್ಷಿ$¾à ರಂಗನಾಥ ದೇವಾಲಯ. ಇಲ್ಲಿ ಭಕ್ತಿಯಿಂದ ಪೂಜಿಸಿದರೆ ಸಕಲ ಇಷ್ಟಾರ್ಥ ನೆರವೇರುತ್ತದೆ ಎಂಬಂತೆ ನಂಬಿಕೆಯಿದೆ. 

ಸಾವಿರಾರು ವರ್ಷಗಳ ಇತಿಹಾಸ ಇರುವ ರಂಗನಾಥ ಸ್ವಾಮಿ ಆಲಯವು ಮಾಗಡಿಯಲ್ಲಿಯೇ ಅತ್ಯಂತ ಪುರಾತನವಾದದ್ದು.  ದ್ವಾಪರಯುಗದ ಅಂತ್ಯದಲ್ಲಿ ದೂರ್ವಾಸ ಮುನಿಗಳು ಈ ದೇವಾಲಯವನ್ನು ನಿರ್ಮಿಸಿದ್ದರು ಎನ್ನಲಾಗುತ್ತಿದೆ.  ಈಗಿರುವ ದೇವಸ್ಥಾನದ ಸ್ಥಳದಲ್ಲಿಯೇ ಮುನಿಗಳು ತಪಸ್ಸು ಮಾಡುತ್ತಿದ್ದರಂತೆ. ಹಾಗಾಗಿ, ಇಲ್ಲಿ ದೂರ್ವಾಸ ಮುನಿಯ ತಪೋ ಮಂಟಪವನ್ನು ನಾವು ಕಾಣಬಹುದಾಗಿದೆ. ಅದರ ಜೊತೆಗೆ ಇಲ್ಲಿ ಕಂಬದ ನರಸಿಂಹ ಸ್ವಾಮಿಯೂ ಇದೆ. ಪ್ರತಿದಿನ ಬೆಳಗ್ಗೆ ಪಂಚಾಮೃತ ಅಭಿಷೇಕ ನಡೆಯುತ್ತದೆ.  ಪೂರ್ವಾಭಿಮುಖವಾಗಿರುವ ಈ ದೇವಾಲಯಕ್ಕೆ ಎತ್ತರವಾದ ರಾಜಗೋಪುರವಿದೆ. ಉಲ್ಲೇಖಗಳ ಪ್ರಕಾರ, ರಂಗನಾಥ ದೇವಸ್ಥಾನದ ಗರ್ಭಗುಡಿ 12ನೇ ಶತಮಾನದ ಆರಂಭದಲ್ಲಿ ಚೋಳ ಅರಸರಿಂದ ನಿರ್ಮಿಸಲ್ಪಟ್ಟಿದೆಯಂತೆ. ನಂತರ ದೇವಾಲಯವನ್ನು ನವೀಕರಣ ಮಾಡಲಾಯಿತಂತೆ. ಗೋಪುರವನ್ನು 16 ನೇ ಶತಮಾನದಲ್ಲಿ ವಿಜಯನಗರ ಅರಸ ಕೃಷ್ಣದೇವರಾಯರು ನಿರ್ಮಿಸಿದರು. ನಂತರ ಮೈಸೂರಿನ ರಾಜ ಜಯಚಾಮರಾಜ ಒಡೆಯರ್‌ ನವೀಕರಿಸಿದರು ಎನ್ನುತ್ತದೆ ಇತಿಹಾಸ. 

ದೇವಸ್ಥಾನದ ಗರ್ಭಗೃಹದಲ್ಲಿ ಶ್ರೀ ರಂಗನಾಥ ಸ್ವಾಮಿಯ ವಿಗ್ರಹವು ನಿಂತಿರುವ ಭಂಗಿಯಲ್ಲಿದೆ. ವಿಜಯನಗರ ಶೈಲಿಯಲ್ಲಿರುವ ಈ ವಿಗ್ರಹವು ಸುಮಾರು 4 ಅಡಿ ಎತ್ತರವಿದ್ದು,  ಶಂಖ, ಚಕ್ರ, ಗಧ ಮತ್ತು ಅಭಯ ಹಸ್ತವನ್ನು ಹೊಂದಿದೆ. ಇದು ವೆಂಕಟೇಶ್ವರನ ಮೂಲ ವಿಗ್ರಹ ಎಂದು ಹೇಳಲಾಗುತ್ತಿದೆ.  ದೇವಾಲಯದ ಗೋಪುರ ದ್ರಾವಿಡ ಶೈಲಿಯಲ್ಲಿದ್ದು, ಒಳಗೆ ಸುಂದರವಾದ ಕಂಬಗಳನ್ನು ಕೆತ್ತನೆ ಮಾಡಲಾಗಿದೆ.  ಟಿಪ್ಪು ಸುಲ್ತಾನ್‌, ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿಯ ಅಖಂಡ ಭಕ್ತನಾಗಿದ್ದನಂತೆ.  ಈ ದೇವಾಲಯದ ದೇವರನ್ನೂ, ರಂಗನಾಥ ಎಂದೇ ಕರೆದನಂತೆ, ಪರಿಣಾಮ, ಇದು ಮಾಗಡಿಯ ರಂಗನಾಥ ದೇವಾಲಯ ಎಂದು ಹೆಸರಲಾಗಿದೆ ಎಂದೂ ಹೇಳುತ್ತಾರೆ.  ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷ ವಿಗ್ರಹವಿದೆ.  ಅದುವೇ ಬೆಳೆಯೋ ರಂಗ ಅಂದರೆ ಬೆಳೆಯುತ್ತಿರುತ್ತದೆ ಎಂಬ ನಂಬಿಕೆಯಿದೆ. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುತ್ತದೆ. ಇದು ರಂಗನಾಥನ ಇನ್ನೊಂದು ಸಣ್ಣ ವಿಗ್ರಹ ಮಲಗಿರುವ ಸ್ಥಿತಿಯಲ್ಲಿದೆ. 
ಅಷ್ಟೇ ಅಲ್ಲದೆ, ಈ ದೇವಸ್ಥಾನದಲ್ಲಿ ಇನ್ನು ಅನೇಕ ಪುಟ್ಟ ಪುಟ್ಟ ದೇವರ ಗುಡಿಗಳಿವೆ. ಅಲ್ಲಿ ರಾಮ, ಸೀತಾ, ಆಂಜನೇಯ, ಗಣೇಶ, ವೇಣುಗೋಪಾಲ ಕೃಷ್ಣಗೆ ಮತ್ತು ನವಗ್ರಹಗಳಿಗೆ ಮೀಸಲಾದ  ದೇವಾಲಯಗಳಿವೆ. ಮುಖ್ಯ ದೇವಾಲಯದ ಹಿಂದೆ ಪುಟ್ಟ ರಂಗನಾಥನಿಗೆ ಅರ್ಪಿಸಲಾದ ಸಣ್ಣ ದೇಗುಲವಿದೆ.  ಅದರ ಪಕ್ಕದಲ್ಲಿÉ ಲಕ್ಷಿ$¾à ದೇವಿಯ ದೇವಸ್ಥಾನವಿದೆ. ಇÇÉೊಂದು ಗರುಡ ಸ್ತಂಭ ಕೂಡ ಇದೆ. 

ಈ ದೇವಸ್ಥಾನದಲ್ಲಿ ವಿಜಯನಗರದ ಅರಸರಾದ ಕೃಷ್ಣ ದೇವರಾಯ ನೀಡಿದ ಉಡುಗೊರೆಗಳ ಉಲ್ಲೇಖವಿರುವ ತಾಮ್ರಪತ್ರಇದೆ ಎನ್ನಲಾಗುತ್ತಿದೆ. ದೇವಸ್ಥಾನದÇÉೊಂದು ಪತ್ರ ಕೊಳವಿದೆ. ಇದು ದೇವಾಲಯದ ಬಲಭಾಗದಲ್ಲಿದ್ದು, ಈ ಕೊಳದ ನೀರಿನಿಂದಲೇ ಪೂಜಾ ಕೈಕಂರ್ಯಗಳನ್ನು ನಡೆಸಲಾಗುತ್ತದೆ. ಬೆಟ್ಟದ ಮೇಲಿರುವ ಈ ಕೊಳದಲ್ಲಿ ನೀರು ಸದಾಕಾಲ ತುಂಬಿರುತ್ತದೆ. ಜೈಮಿನಿ ಭಾರತವನ್ನು ಲಕ್ಷಿ$¾àಶ ಕವಿಯು ದೇವಸ್ಥಾನದಲ್ಲಿ ಕೂತೇ ಪೂರ್ಣ ಗೊಳಿಸಿದರು ಎಂದು ಹೇಳಲಾಗುತ್ತಿದೆ. 
ಮಾಗಡಿ ರಂಗನಾಥ  ದೇವರ ದರ್ಶನ ಮಾಡಿದರೆ,  ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಷ್ಟೇ ಪುಣ ಲಭಿಸುತ್ತದೆ ಎನ್ನುವ ನಂಬಿಕೆ ಇದೆ . ದೇವಾಲಯವು ಪ್ರತಿದಿನ ಬೆಳಗ್ಗೆ 6.30 ರಿಂದ 11.00, ಸಂಜೆ 5.30ರಿಂದ 7.30  ತೆರೆದಿರುತ್ತದೆ. 

ಮಖ್ಯಾಂಶಗಳು
-ದೇವಾಲಯ ಪ್ರತಿದಿನ ಬೆಳಗ್ಗೆ 6.30 ರಿಂದ 11ವರೆಗೆ, ಸಂಜೆ 5.30ರಿಂದ 7.30ರ ವರೆಗೆ ತೆರೆದಿರುತ್ತದೆ.
– ಮಾಗಡಿ ರಂಗನಾಥನ ದರ್ಶನ ಮಾಡಿದರೆ, ತಿರುಪತಿ ವೆಂಕಟೇಶ್ವರ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ. 
– ವಿಜಯನಗರದ ದೊರೆ ಕೃಷ್ಣ ದೇವರಾಯ, ದೇವಾಲಯಕ್ಕೆ ಉಡುಗೊರೆ ನೀಡಿದ್ದಾನೆಂಬ ಉಲ್ಲೇಖಗಳಿವೆ.

ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.