ಪೂಜೆ ಪುನಸ್ಕಾರಗಳೊಂದಿಗೆ ಮಹಾದೇವನ ಜಳಕದ ಸವಾರಿ

Team Udayavani, Apr 19, 2018, 12:16 PM IST

19-April-10.jpg

ನಗರ: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಬುಧವಾರ ಸಂಜೆ ಶ್ರೀ ದೇವರ ಅವಭೃಥ ಸವಾರಿ 13 ಕಿ.ಮೀ. ದೂರವಿರುವ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ನಗರದ ಮೂಲಕ ವಿವಿಧ ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ತೆರಳಿತು.

ದಾರಿಯುದ್ದಕ್ಕೂ ಶ್ರೀ ದೇವರು ಭಕ್ತರಿಂದ ಆರತಿ, ಹಣ್ಣುಕಾಯಿ ಮತ್ತು ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ಎ. 19ರಂದು ಮುಂಜಾನೆ 6 ಗಂಟೆಗೆ ವೀರಮಂಗಲ ನದಿ ತಟಕ್ಕೆ ತಲುಪುತ್ತಾರೆ. ಅಲ್ಲಿ ಅವಭೃಥ ಮುಗಿಸಿ ಬೆಳಗ್ಗೆ 10 ಗಂಟೆಗೆ ಶ್ರೀ ದೇವರು ದೇವಾಲಯಕ್ಕೆ ಮರಳಿ ಧ್ವಜಾವರೋಹಣ ನಡೆಯುತ್ತದೆ.

ರಥೋತ್ಸವದ ಬಳಿಕ
ಎ. 17ರಂದು ರಾತ್ರಿ ರಥೋತ್ಸವದ ಬಳಿಕ ಶ್ರೀ ದೇವರ ಬಂಗಾರ್‌ ಕಾಯರ್‌ಕಟ್ಟೆ ಸವಾರಿ ನಡೆದು ಶ್ರೀ ಉಳ್ಳಾಲ್ತಿ ದೈವಗಳನ್ನು ಬೀಳ್ಕೊಡುವ ಕಾರ್ಯ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆದು ಅನಂತರ ಭೂತ ಬಲಿ ಹಾಗೂ ಶ್ರೀ ದೇವರ ಶಯನ ನಡೆಯಿತು.

ದೈವ ಭೇಟಿ
ಎ. 18ರಂದು ಬೆಳಗ್ಗೆ ದೇವಾಲಯದಲ್ಲಿ ತುಲಾಭಾರ ಸೇವೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. ಅಪರಾಹ್ನ ಹುಲಿಭೂತ, ಕಾಜುಕುಜುಂಬ ಅಂಙಣತ್ತಾಯ ದೈವಗಳ ಪ್ರತಿನಿಧಿ ದೈವವಾಗಿ ದೇವರೊಂದಿಗೆ ಹೋಗುವ ರಕ್ತೇಶ್ವರಿ ದೈವವು ದೇವರನ್ನು ರಥದ ಗದ್ದೆಯಲ್ಲಿ ಭೂತದ ಕಲ್ಲಿನ ಬಳಿಯಿಂದ ಬೀಳ್ಕೊಡುವ ಪದ್ಧತಿ ನಡೆಯಿತು. ಬಳಿಕ ಶ್ರೀ ದೇವರು ನಗರದ ರಾಜ ರಸ್ತೆಯ ಮೂಲಕ ವೀರಮಂಗಲ ಕುಮಾರಧಾರಾ ನದಿತಟಕ್ಕೆ ಅವಭೃಥ ಸ್ನಾನಕ್ಕೆ ತೆರಳಿದರು.

ವಿವಿಧೆಡೆ ಕಟ್ಟೆ ಪೂಜೆ
ಆರಂಭದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಕಟ್ಟೆ, ಗಾಂಧಿ ಕಟ್ಟೆ, ಸಿಟಿ ಹಾಸ್ಪಿಟಲ್‌ ಕಟ್ಟೆ, ಅರುಣಾ ಚಿತ್ರಮಂದಿರ ವಠಾರದ ಕಟ್ಟೆ, ವಾಸುದೇವ್‌ ನಾಯಕ್‌ ನಿರ್ಮಿಸಿದ ಕಟ್ಟೆ, ಕೆನರಾ ಬ್ಯಾಂಕ್‌ ಎದುರಿನ ಕಟ್ಟೆ, ಯೆಳ್ತಿಮಾರ್‌ ಬಾಬಣ್ಣ ಶೆಣೈ ಅವರ ಕಟ್ಟೆ, ದಾಮೋದರ ಶೆಣೈ ಅವರ ಕಟ್ಟೆ, ಏಳ್ಮುಡಿ ನಾಗಪ್ಪ ಪೂಜಾರಿಯವರ ಕಟ್ಟೆ, ಕಲ್ಲಾರೆ ಶ್ರೀ ಮಹಾಲಿಂಗೇಶ್ವರ
ದೇವರ ಕಟ್ಟೆ, ರಾಘವೇಂದ್ರ ಮಠ, ಜೆ.ಕೆ. ಕಾಂಪ್ಲೆಕ್‌ ಕಟ್ಟೆ, ಕಲ್ಲಾರೆ ಆಳ್ವ ಗ್ಯಾರೇಜ್‌ ಕಟ್ಟೆ, ಧನ್ವಂತರಿ ಆಸ್ಪತ್ರೆಯ
ವಠಾರದ ಕಟ್ಟೆ, ಕೆ.ಕೆ. ಶೆಣೈ ಕಾಂಪೌಂಡ್‌ ಕಟ್ಟೆ, ದರ್ಬೆ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಡಾಲ್ಫಿ ರೇಗೋ ವಠಾರದ ಕಟ್ಟೆ,
ದರ್ಬೆ ಶ್ರೀ ಮಹಾಲಿಂಗೇಶ್ವರ ಭಕ್ತವೃಂದ ಸಾರ್ವಜನಿಕ ಕಟ್ಟೆ, ದರ್ಬೆ ವೃತ್ತದ ಬಳಿಯ ಕಟ್ಟೆ, ಗೋಪಾಲ ಪೈ
ಕಟ್ಟೆ, ದಿ| ಮಹಾಲಿಂಗ ಪೈ ಕಟ್ಟೆ, ದರ್ಬೆ ಕಾವೇರಿಕಟ್ಟೆ, ಮುರಳಿ ಮೋಹನ ಶೆಟ್ಟಿಯವರ ವಠಾರದ ಕಟ್ಟೆ, ಶ್ರೀ
ಮಹಾಲಿಂಗೇಶ್ವರ ಕಟ್ಟೆ, ಕೂರ್ನಡ್ಕ ಅಣ್ಣಪ್ಪ ಕಟ್ಟೆ, ಲಾರ್ಡ್‌ ಮಹಾಲಿಂಗೇಶ್ವರ ಪೀಠಂ ಟ್ರಸ್ಟ್‌ ಕ್ಯಾಂಪ್ಕೋ ವಠಾರದ
ಕಟ್ಟೆ, ಕೃಷ್ಣಯ್ಯ ಮಾಸ್ಟರ್‌ ವಠಾರದ ಕಟ್ಟೆ, ಮರೀಲ್‌ ಮಹಾಲಿಂಗೇಶ್ವರ ಕಟ್ಟೆ, ಮರೀಲ್‌ ಸಾರ್ವಜನಿಕ ಕಟ್ಟೆ, ಮಹಾಲಿಂಗೇಶ್ವರ ಭಟ್‌ ವಠಾರದ ಕಟ್ಟೆ, ಬೆದ್ರಾಳ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಶ್ರೀ ನಂದಿಕೇಶ್ವರ ಕಟ್ಟೆ, ದೇವರಕಟ್ಟೆ ಬೆದ್ರಾಳ, ಮುಕ್ವೆ ಶ್ರೀ ಮಹಾಲಿಂಗೇಶ್ವರ
ದೇವರ ಕಟ್ಟೆ, ಪಿ. ಗಣಪತಿ ಭಟ್‌ ಕಟ್ಟೆ, ಮಜಲುಮಾರು ಉಮಾಮಹೇಶ್ವರ ದೇವಸ್ಥಾನ, ಪದ್ಮಾವತಿ ಅಮ್ಮ ಕಟ್ಟೆ, ಪಾದೆ ಕಟ್ಟೆ, ಪುತ್ತೂರಾಯ ಕಟ್ಟೆ, ನರಿಮೊಗರು ಕಾಳಿಂಗಹಿತ್ಲು ಕಟ್ಟೆ, ದುಬ್ರಾಯ ಹೆಬ್ಟಾರ್‌ ಅವರ ಕಟ್ಟೆ, ಕೆರೆಮನೆ ಕಟ್ಟೆ, ಕೊಡಿನೀರು ಸಾರ್ವಜನಿಕ ಅಶ್ವತ್ಥ ಕಟ್ಟೆ, ಅತಿಶಯ ಕ್ಷೇತ್ರ ಕೈಪಂಗಳ ಕಟ್ಟೆ, ಪುತ್ತೂರು ಸಾವಂತ ಕಟ್ಟೆ, ಆನಾಜೆ ಹೆಬ್ಟಾರರ ಕಟ್ಟೆ, ವೀರಮಂಗಲ ಆನಾಜೆ ಸಾರ್ವಜನಿಕ ಕಟ್ಟೆ, ವೀರಮಂಗಲ ಗುತ್ತು, ವೀರಮಂಗಲ ದೇವಸ್ಥಾನ, ನದಿ ಕಿನಾರೆ ಕಟ್ಟೆಯಲ್ಲಿ ಶ್ರೀ ದೇವರಿಗೆ ಪೂಜೆ
ನಡೆಯಿತು.

ಸುಮಾರು 50 ಕಟ್ಟೆಗಳಲ್ಲಿ ಪೂಜೆಯ ಜತೆಗೆ ನಗರದಲ್ಲಿ ಹಾಗೂ ವೀರಮಂಗಲ ನದಿ ತೀರಕ್ಕೆ ತಲುಪುವ ಮೊದಲು ವಿವಿಧ ಕಡೆಗಳಲ್ಲಿ ಭಕ್ತರು ಸಲ್ಲಿಸುವ ಆರತಿ, ಹಣ್ಣುಕಾಯಿಗಳನ್ನು ಸ್ವೀಕರಿಸಿದರು.

ಅಲ್ಲಲ್ಲಿ ಕಾರ್ಯಕ್ರಮ
ಶ್ರೀ ದೇವರು ಅವಭೃಥಕ್ಕೆ ಹೋಗುವ ದಾರಿಯುದ್ದಕ್ಕೂ ತಳಿರು-ತೋರಣ, ವಿದ್ಯುದ್ದೀಪಗಳ ಅಲಂಕಾರ, ಹಣತೆಗಳ
ಶೃಂಗಾರ, ಕಟ್ಟೆಗಳ ಶೃಂಗಾರ ಗಮನ ಸೆಳೆಯಿತು. ವಿವಿಧ ಕಟ್ಟೆಗಳಲ್ಲಿ ಶ್ರೀ ದೇವರಿಗೆ ಪೂಜೆಯ ಸಂದರ್ಭದಲ್ಲಿ
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ, ತಾಳಮದ್ದಳೆ, ನಾಟಕ, ಸಂಗೀತ ಕಾರ್ಯಕ್ರಮಗಳು ನಡೆದವು. ಸುಡುಮದ್ದು ಪ್ರದರ್ಶನವೂ ನಡೆಯಿತು.

ಟಾಪ್ ನ್ಯೂಸ್

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.