CONNECT WITH US  

ಸಿದ್ದು ಸರಕಾರಕ್ಕೆ ಗವರ್ನರ್‌ ಬಹುಪರಾಕ್‌

ಬೆಂಗಳೂರು: ಆಡಳಿತದಲ್ಲಿ ತಂತ್ರಜ್ಞಾನ ಬಳಕೆ ಕುರಿತಂತೆ ರಾಜ್ಯ ಸರಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸರಕಾರದ ಡಿಜಿಟಲ್‌ ಇಂಡಿಯಾ' ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಬಹಳ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಅಲ್ಲದೆ, ರಾಜ್ಯ ಸರಕಾರದಿಂದ ದೇಶದಲ್ಲೇ ಪ್ರಥಮ ಎನ್ನಲಾದ ಡಿಜಿಟಲ್‌ ಇಂಡಿಯಾ ರೀತಿಯ  ಮೊಬೈಲ್‌ ಗವರ್ನನ್ಸ್‌' ಯೋಜನೆ ಅತ್ಯುತ್ತಮ ಸಾಧನೆ ಎಂದು ಬಣ್ಣಿಸಿದ್ದಾರೆ.

67ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಕವಾಯತು ವೀಕ್ಷಿಸಿ, ಗೌರವರಕ್ಷೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಮೊಬೈಲ್‌ ಗವರ್ನನ್ಸ್‌ ಕಾರ್ಯಕ್ರಮದ ಮೂಲಕ ಎಲ್ಲ ಇಲಾಖೆಗಳ ಸೇವೆಗಳನ್ನು ಮೊಬೈಲ್‌ ವೇದಿಕೆಗೆ ತರಲಾಗಿದ್ದು, ಇದು ದೇಶದಲ್ಲಿಯೇ ಸರ್ವಪ್ರಥಮ ಯೋಜನೆಯಾಗಿದೆ. ಎಲ್ಲ ಇಲಾಖೆಗಳೂ ಮೊಬೈಲ್‌ ಅಪ್ಲಿಕೇಷನ್‌ ಅಳವಡಿಸಿಕೊಂಡ ಮೇಲೆ ಇದನ್ನು  ಗವರ್ನನ್ಸ್‌ ಅಟ್‌ ಫಿಂಗರ್‌ ಟಿಪ್ಸ್‌' ಎಂದು ಹೇಳಲಾಗು ವುದು. ಸರಕಾರಿ ಮತ್ತು ಖಾಸಗಿ ವಲಯದ ನಾಲ್ಕು ಸಾವಿರ ಸೇವೆಗಳು ಮೊಬೈಲ್‌ ಗವರ್ನನ್ಸ್‌ನಲ್ಲಿ ಸದ್ಯ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಇದಕ್ಕೆ ಸೇರಿಸಲಾಗುವುದು ಎಂದು ರಾಜ್ಯಪಾಲರು ಹೇಳಿದರು.

ಭಾರತ ಸರಕಾರವು ಕಳೆದ ವರ್ಷ ಸ್ಮಾರ್ಟ್‌ಸಿಟಿ ಮಿಷನ್‌ ಅಡಿಯಲ್ಲಿ ಕರ್ನಾಟಕದ ಮಂಗಳೂರು, ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ತುಮಕೂರು ಹಾಗೂ ದಾವಣಗೆರೆ ನಗರಗಳನ್ನು ಸ್ಮಾರ್ಟ್‌ ಸಿಟಿ ಎಂದು ಘೋಷಿಸಿದೆ. ಅರಮನೆ ನಗರಿ ಮೈಸೂರನ್ನು ದೇಶದ ಸ್ವಚ್ಛ ನಗರ ಎಂದು ಕೇಂದ್ರ ಸರಕಾರ ಘೋಷಿಸಿರುವುದು ಕರ್ನಾಟಕದ ಮಟ್ಟಿಗೆ ಹೆಮ್ಮೆಯ ವಿಷಯ. ಸ್ವಚ್ಛತೆ ಸಾಮಾಜಿಕ ಸ್ವಾಸ್ಥ್ಯದ ಗುರುತಾಗಿದೆ. ಮೈಸೂರು ನಗರದಿಂದ ಪ್ರೇರಿತವಾಗಿ ಬೇರೆ ನಗರಗಳೂ ಈ ನಿಟ್ಟಿನಲ್ಲಿ ಪ್ರಯತ್ನಿಸಲಿ ಎಂದು ರಾಜ್ಯಪಾಲರು ಆಶಿಸಿದರು.

ಗಾಂಧಿ ಕನಸು ಸಾಕಾರ: ರಾಜ್ಯ ಸರಕಾರವು ಪಂಚಾಯತ್‌ರಾಜ್‌ ಕಾಯ್ದೆಗೆ ತಿದ್ದುಪಡಿ ತಂದು ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಹೊಸ ದಿಕ್ಕು ತೋರಿಸಿದೆ. ಈ ಕಾಯ್ದೆಯು ಪಂಚಾಯತ್‌ಗಳಿಗೆ ನಿರ್ದೇಶಕ ತತ್ವಗಳ ಮೂಲಕ ಗ್ರಾಮಗಳ ಸರ್ವಾಂಗೀಣ ವಿಕಾಸಕ್ಕೆ ಪ್ರತಿಬದ್ಧಗೊಳಿಸುತ್ತದೆ. ಕುಂದು- ಕೊರತೆಗಳ ನಿವಾರಣೆಗೆ ಕಾನೂನಿನ ಸೂಕ್ತ ಪರಿಹಾರೋಪಾಯಗಳನ್ನು ತಿದ್ದುಪಡಿ ಕಾಯ್ದೆ ಯಲ್ಲಿ ಅಳವಡಿಸಿಕೊಂಡಿರುವುದರಿಂದ ಗ್ರಾಮೀಣ ಜನತೆಯ ಜೀವನ ಮಟ್ಟದಲ್ಲಿ ಸುಧಾರಣೆಯಾಗು ತ್ತದೆ. ಅಲ್ಲದೆ, ಸ್ಥಳೀಯ ಆಡಳಿತದಲ್ಲಿ ಪಾಲ್ಗೊಳ್ಳಲು ಜನರನ್ನು ಇದು ಪ್ರೇರೇಪಿಸುತ್ತದೆ. ಈ ಹೆಜ್ಜೆ ಮೂಲಕ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಪೂರ್ಣಗೊಳಿಸಲಾಗುತ್ತಿದೆ ಎಂದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top