CONNECT WITH US  

"ನಿಖೀಲಾ' ಕೋಟಿ ಬ್ರಹ್ಮಾಂಡ

ಶನಿ ಅಮ್ಮ ಹೇಳಿದ ಸಣ್‌ ಸಣ್‌ ಕತೆ

"ನನಗೆ ನಟನೆಯಲ್ಲಿ ಗ್ರಾಫ್ ಮುಖ್ಯ. ಒಂದೇ ರೀತಿಯ ಪಾತ್ರಗಳನ್ನು ಮಾಡೋಕೆ ಇಷ್ಟ ಇಲ್ಲ' ಅಂತ ಹೇಳ್ಳೋ ಈಕೆಯದ್ದು, ಸದಾ ಹೊಸತನಕ್ಕಾಗಿ ಹಾತೊರೆಯುವ ಮನಸ್ಸು. ರಂಗಭೂಮಿಯ ಹಿನ್ನೆಲೆಯಿಂದ ಬಂದ ಇವರು ನಟನೆ ಅಂದ್ರೆ ಸಿನಿಮಾ ಮಾತ್ರ ಅಂತ ಯಾವತ್ತೂ ಅಂದುಕೊಂಡಿಲ್ಲ. ಕನ್ನಡ, ತೆಲುಗು, ತಮಿಳು, ಶ್ರೀಲಂಕನ್‌ ಧಾರಾವಾಹಿಗಳಲ್ಲೂ ನಟಿಸಿರುವುದರಿಂದ ಬಹುಭಾಷಾ ನಟಿ ಎಂದು ಕರೆಯಲಡ್ಡಿಯಿಲ್ಲ. ಇಂತಿಪ್ಪ ನಿಖೀಲಾ ರಾವ್‌ "ಶನಿ' ಧಾರಾವಾಹಿಯಲ್ಲಿ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಮನೆಮಾತಾಗಿದ್ದಾರೆ...

- ಶನಿ ಧಾರಾವಾಹಿಯಲ್ಲಿ ನೀವು ನಿರ್ವಹಿಸುತ್ತಿರೋ ಛಾಯಾ, ಸನ್ಯಾದೇವಿ ಪಾತ್ರಗಳ ಬಗ್ಗೆ ಹೇಳಿ? 
"ಶನಿ'ಯಲ್ಲಿ ಒಂದೇ ಕಾಸ್ಟೂéಮ್‌ನಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿದ್ದೇನೆ. ಸೈಕಾಲಜಿಕಲಿ ತುಂಬಾ ಚಾಲೆಂಜಿಂಗ್‌ ಅನ್ನಿಸೋ ಪಾತ್ರಗಳು. ಎರಡೆರಡು ಪಾತ್ರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಛಾಯಾಳದ್ದು ಮೊದಲು ಮುಗಿಸೋಣ, ಆಮೇಲೆ ಸನ್ಯಾ ಮಾಡೋಣ ಅನ್ನೋದಿಲ್ಲ. ಕಾಸ್ಟೂéಮ್‌ ಒಂದೇ ಆಗಿರೋದ್ರಿಂದ ಎರಡೂ ಪಾತ್ರಗಳನ್ನು ಒಟ್ಟಿಗೇ ನಟಿಸಬೇಕು. ಒಬ್ಬಳು ತುಂಬಾ ಒಳ್ಳೆಯವಳು, ಇನ್ನೊಬ್ಬಳು ಜಗತ್ತಿನ ಕಣ್ಣಿನಲ್ಲಿ ಕೆಟ್ಟವಳು. ಆದರೆ, ಅವಳ ದೃಷ್ಟಿಯಲ್ಲಿ ಅವಳು ಮಾಡುತ್ತಿರುವುದು ಸರಿಯೇ. ಹೀಗೆ ನಾನು ಛಾಯಾ ಮತ್ತು ಸನ್ಯಾಳ ಅಂತರಾಳಕ್ಕಿಳಿದು ಪಾತ್ರಕ್ಕೆ ಜೀವ ತುಂಬಬೇಕು. ನಟನೆಯ ಗ್ರಾಫ್ನಲ್ಲಿ ತುಂಬಾ ಏರಿಳಿತ ಇದೆ. ಅಂಥ ಏರಿಳಿತಗಳೇ ಕಲಾವಿದನನ್ನು ಬೆಳೆಸುವುದು.

- ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದೀರಿ? ನಟನೆಯಲ್ಲಿ ಅದು ನಿಮಗೆ ಸಹಾಯವಾಗ್ತಿದೆಯಾ?
ನನಗೆ ನಟನೆಯಲ್ಲಿ ಆಸಕ್ತಿಯಿತ್ತು. ಸೆಕೆಂಡ್‌ ಪಿಯು ಅಲ್ಲಿದ್ದಾಗಲೇ ನಟಿಯಾಗುವ ಯೋಚನೆಯಿತ್ತು. ನಮ್ಮದು ಸಂಪ್ರದಾಯಸ್ಥ ಕುಟುಂಬ. "ಡಿಗ್ರಿ ಮುಗಿಸಿಲ್ಲ ಅಂದ್ರೆ ಯಾರು ಮದ್ವೆ ಆಗ್ತಾರೆ?' ಅನ್ನೋ ಒತ್ತಡ ಇತ್ತು. ಸರಿ, ಡಿಗ್ರಿ ಮಾಡೋಕೆ ಒಪ್ಪಿಕೊಂಡೆ. ಸುಲಭದ ಯಾವುದೋ ಡಿಗ್ರಿ ಮಾಡುವುದಕ್ಕಿಂತ, ಸೈಕಾಲಜಿಯಲ್ಲಿ ಬಿ.ಎ. ಮಾಡ್ತೀನಿ ಅಂತ ನಿರ್ಧರಿಸಿದೆ. ಪಾತ್ರಗಳ ಅಂತರಾಳವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸೈಕಾಲಜಿ ಓದಿದ್ದು ಸಹಾಯವಾಗಿದೆ. 

- ಹಾಗಾದರೆ, ಮೊದಲಿನಿಂದಲೂ ನಟನೆ ಬಗ್ಗೆ ಆಸಕ್ತಿ ಇತ್ತು?
ಹೌದು, ಮೊದಲಿನಿಂದಲೂ ನನಗೆ ರಂಗಭೂಮಿಯೆಡೆಗೆ ವಿಪರೀತ ಸೆಳೆತವಿತ್ತು. ಅದಕ್ಕೋಸ್ಕರ ಏನು ಮಾಡೋಕೂ ತಯಾರಿದ್ದೆ. ಸೈಕಾಲಜಿಯಲ್ಲಿ ಪಿಎಚ್‌.ಡಿ ಮಾಡಿ, ಎಲ್ಲೋ ಒಂದು ಎಸಿ ರೂಮ್‌ನಲ್ಲಿ ಕುಳಿತುಕೊಳ್ಳಬಹುದಿತ್ತು. ಆದರೆ, ಅದು ನನಗೆ ಸಂತೋಷ ಕೊಡೋದಿಲ್ಲ ಅನ್ನೋ ಸತ್ಯ ಗೊತ್ತಿತ್ತು. ಹಾಗಾಗಿ, ಪ್ಯಾಶನ್‌ ಅನ್ನೇ ಪ್ರೊಫೆಶನ್‌ ಆಗಿ ತೆಗೆದುಕೊಂಡೆ. 

- ರಂಗಭೂಮಿಯ ಪ್ರವೇಶ ಆಗಿದ್ದು ಯಾವಾಗ?
 ಎರಡನೇ ಕ್ಲಾಸ್‌ನಲ್ಲಿದ್ದಾಗ, ಬೇಸಿಗೆ ರಜೆಯಲ್ಲಿ "ರಂಗಾಯಣ'ದಲ್ಲಿ "ಅಲಿಬಾಬಾ ಮತ್ತು ನಲವತ್ತು ಕಳ್ಳರು' ನಾಟಕದಲ್ಲಿ ಮರ್ಜೀನಾ ಪಾತ್ರ ನಿರ್ವಹಿಸಿದ್ದೆ. ಮೈಮ್‌ ರಮೇಶ್‌ ಸರ್‌ ರಂಗಭೂಮಿಯಲ್ಲಿ ನನ್ನ ಮೊದಲ ಗುರು. ನನ್ನ ನಟನೆ ನೋಡಿ ಮನೆಯವರಿಗೂ ವಿಶ್ವಾಸ ಮೂಡಿತು. ಆನಂತರ ಪ್ರತಿವರ್ಷವೂ ರಜೆಯಲ್ಲಿ ರಂಗಶಿಬಿರಗಳಲ್ಲಿ ಭಾಗವಹಿಸುತ್ತಿದೆ. ನಂತರ "ನಟನಾ' ಸೇರಿಕೊಂಡೆ. ಅಲ್ಲಿಂದ ಇಲ್ಲಿಯವರೆಗೂ ಮಂಡ್ಯ ರಮೇಶ ಸರ್‌ ನನ್ನ ಗುರುಗಳು. ಅವರಿಂದ ತುಂಬಾ ಕಲಿತಿದ್ದೇನೆ.  

- ನೀವು ನಟಿಸಿದ ಧಾರಾವಾಹಿಗಳ ಬಗ್ಗೆ ಹೇಳಿ.
ಬಿ. ಸುರೇಶ್‌ ನಿರ್ದೇಶನದ "ಪ್ರೀತಿ ಪ್ರೇಮ' ಮೊದಲ ಧಾರಾವಾಹಿ. ನಂತರ ಶೃತಿ ನಾಯ್ಡು ಪ್ರೊಡಕ್ಷನ್‌ನಲ್ಲಿ "ದೇವಿ', "ಚಿ.ಸೌ. ಸಾವಿತ್ರಿ' ಮಾಡಿದೆ. ನಂತರ ರಾಮ್‌ಜೀ ನಿರ್ಮಾಣದ "ಸೊಸೆ'. ಅದು ಸಖತ್‌ ಹಿಟ್‌ ಆಯಿತು.
"ದೇವಿ'ಯಲ್ಲಿ ಕಚ್ಚೆ ಸೀರೆ ಉಟ್ಟುಕೊಂಡು ಓಡಾಡೊ ಪಕ್ಕಾ ಹಳ್ಳಿ ಹುಡುಗಿ ಪಾತ್ರ. ಸಾವಿತ್ರಿಯಲ್ಲಿ ಬಾಂಬೆ ರಿಟರ್ನ್ಡ್ ಹುಡುಗಿ. ನಂತರ ಸೊಸೆಯಲ್ಲಿ ನನ್ನದು ವಿಲನ್‌ ಪಾತ್ರ. ಆಮೇಲೆ ಬರೀ ವಿಲನ್‌ ಪಾತ್ರಗಳಿಗೆ ಆಫ‌ರ್‌ ಬರೋಕೆ ಶುರುವಾಯ್ತು. ಆದರೆ, ನನಗೆ ಹೊಸತನ ಬೇಕಿತ್ತು. ಅದೇ ಸಮಯದಲ್ಲಿ ತೆಲುಗಿನಲ್ಲಿ ಆಫ‌ರ್‌ ಬಂತು. ಅದು ಕ್ಯೂಟ್‌ ಹೀರೋಯಿನ್‌ ಪಾತ್ರ. ನನಗೆ ತೆಲುಗಿನಲ್ಲಿ ನೆಗೆಟಿವ್‌ ಪಾತ್ರಗಳನ್ನು ಮಾಡೋ ಆಸೆ ಇತ್ತು. ಆದರೆ, ತೆಲುಗಿನಲ್ಲಿ ಬಬ್ಲಿ ಪಾತ್ರಗಳಿಗೇ ಸೀಮಿತ ಮಾಡಿದ್ರು. ಅಲ್ಲಿಂದ ತಮಿಳಿಗೆ ಹೋದೆ. ಅಲ್ಲಿ ಬಿಂದಾಸ್‌ ಹುಡುಗಿ ಪಾತ್ರ ಮಾಡಿದೆ. ಅಲ್ಲಿಯೂ ಹಾಗೇ ಆಯ್ತು. ನನಗೆ ನಟನೆಯಲ್ಲಿ ಗ್ರಾಫ್ ಮುಖ್ಯ. ಪಾತ್ರಗಳಲ್ಲಿ ಹೊಸತನ ಇರಬೇಕು. ಒಂದು ರೀತಿಯ ಪಾತ್ರಕ್ಕೆ ಸೀಮಿತ ಆಗೋಕೆ ಇಷ್ಟ ಇಲ್ಲ.

ಮುಂದೆ ಶ್ರೀಲಂಕಾದ ಚಾನೆಲೊಂದಕ್ಕೆ ನಟಿಸಿದೆ. ಅದು ಚೆನ್ನೈನಲ್ಲಿಯೇ ಶೂಟ್‌ ಆಗಿದ್ದು. ಒಬ್ಬಳು ನಿರಾಶ್ರಿತೆಯ ಪಾತ್ರ ಅದು. ಯಾವುದೇ ರೀತಿಯ ಮೇಕಪ್‌ ಇಲ್ಲದ, ಪಾಪದ ಹುಡುಗಿಯ ಪಾತ್ರ. ಆಮೇಲೆ 6 ತಿಂಗಳು ಗ್ಯಾಪ್‌ ತೆಗೆದುಕೊಂಡು ಆರಾಮಾಗಿ ಮನೇಲಿದ್ದೆ. ನಂತರ "ಶನಿ' ಆಫ‌ರ್‌ ಬಂತು. ಪೌರಾಣಿಕ ಪಾತ್ರ ಅಂತ ತಿಳಿದ ಕೂಡಲೇ ಒಪ್ಪಿಕೊಂಡೆ. 

- ನಟಿ ಆಗಿರದಿದ್ದರೆ ಏನಾಗಿರಿ¤ದ್ರಿ?
ಬಿಸಿನೆಸ್‌ ಮಾಡ್ಬೇಕು ಅಂತ ದೊಡ್ಡ ಆಸೆ ಇತ್ತು. ಒಂದು ಆರ್ಟ್‌, ಕಲ್ಚರ್‌ ಬೇಸ್ಡ್ ಕೆಫೆಟೇರಿಯಾ ಶುರು ಮಾಡ್ತಿದ್ದೆ. ನಮ್ಮ ತಾತ, ಅಮ್ಮ, ದೊಡ್ಡಮ್ಮ ಎಲ್ಲರೂ ಚಿತ್ರ ಕಲಾವಿದರು. ಹಾಗಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ತುಂಬಾ ಆಸಕ್ತಿ ಇದೆ. ನಮ್ಮ ತಾತ ಬರೆದ ಚಿತ್ರಗಳು ಈಗಲೂ ಜಗನ್ಮೋಹನ ಅರಮನೆಯಲ್ಲಿವೆ!

- ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರಿ?
ನನಗೆ ಫ್ರೀ ಟೈಮ್‌ ಅನ್ನೋದು ಸಿಗೋದೇ ಇಲ್ಲ. ಏನಾದರೊಂದು ಕೆಲಸ ಮಾಡ್ತಾನೇ ಇರಿ¤àನಿ. ಮನೆಯಲ್ಲಿದ್ದಾಗ ಅಡುಗೆ ಮಾಡ್ತೀನಿ.

- ಏನೇನೆಲ್ಲಾ ಅಡುಗೆ ಮಾಡ್ತೀರಿ. ಯಾವುದು ತುಂಬಾ ಇಷ್ಟದ ಅಡುಗೆ? 
ನನ್ನ ಗಂಡನಿಗೆ ತಿನ್ನೋಕೆ ಇಷ್ಟ, ಹಾಗಾಗಿ, ನನಗೆ ಅಡುಗೆ ಮಾಡೋಕೆ ಇಷ್ಟ. ಗಂಡನ ಮನೆಯವರು ಸಂಕೇತಿಗಳು. ಅವರ ಕಡೆ "ಕೋಳ್ಕಟ್ಟೆ' ಅನ್ನೋ ಖಾದ್ಯ ಮಾಡ್ತಾರೆ. ಅದು ಕಡುಬಿನ ಹಾಗಿರುತ್ತೆ. ಆದರೆ, ತುಂಬಾ ಸಾಫ್ಟ್ ಇರುತ್ತೆ. ಚೂರು ಹದ ಕೆಟ್ಟರೂ ಪೂರ್ತಿ ಹಾಳಾಗುತ್ತೆ. ಅದನ್ನು ಅತ್ತೆಯಿಂದ ಕಲಿತಿದ್ದೇನೆ. ಹಬ್ಬದ ದಿನಗಳಲ್ಲಿ ಅಡುಗೆ ಮನೆ ಸುಪರ್ದಿ ನನ್ನದೇ. ಅತ್ತೆಯಿಂದ ತುಂಬಾ ರೀತಿಯ ಅಡುಗೆ ಕಲಿತಿದ್ದೇನೆ. ಪುಳಿಯೊಗರೆ, ಮೊಸರನ್ನ, ವೆಜ್‌ ಪಲಾವ್‌, ಚಿಲ್ಲಿ ಪನೀರ್‌. ಹೀಗೆ ಎಲ್ಲ ಅಡುಗೆ ಮಾಡ್ತೀನಿ. 

- ನಿಮ್ಮ ಡಯಟ್‌ ಸೂತ್ರ ಏನು?
ನಾನು ಫ‌ುಡ್ಡಿ. ಎರಡೆರಡು ಗಂಟೆಗೊಮ್ಮೆ ಚೂರು ಚೂರು ತಿಂತಾನೇ ಇರಿ¤àನಿ. ಒಂದೇ ಸಲ ಜಾಸ್ತಿ ತಿನ್ನೋಕೆ ಆಗಲ್ಲ. ಡಯಟ್‌ ಎಲ್ಲಾ ಮಾಡಲ್ಲ. ತೂಕ ಜಾಸ್ತಿ ಆಗ್ತಿದೆ ಅಂದ್ರೆ ಸ್ವಲ್ಪ ಫ‌ುಡ್‌ ಕಂಟ್ರೋಲ್‌ ಮಾಡ್ತೀನಿ. ಕಟ್ಟುನಿಟ್ಟಿನ ಜಿಮ್‌ ಎಲ್ಲಾ ಮಾಡಲ್ಲ. ನಾನು ತುಂಬಾ ಸೋಮಾರಿ. ದಿನಾ ಒಂದರ್ಧ ಗಂಟೆ ಯೋಗ ಮಾಡುತ್ತೇನೆ. 

- "ಶ್ರೀನಿವಾಸ ಕಲ್ಯಾಣ'ದ ನಂತರ ಬೇರೆ ಸಿನಿಮಾ ಮಾಡಿಲ್ಲ ಯಾಕೆ?
ಆ ಸಿನಿಮಾದ ನಂತರ 13 ಸ್ಕ್ರಿಪ್ಟ್ ಕೇಳಿದ್ದೇನೆ. ಯಾವುದೂ ಮಾಡಬೇಕು ಅನ್ನಿಸಲಿಲ್ಲ. ಆ್ಯಕ್ಟಿಂಗ್‌ ಅಂದ್ರೆ ಸಿನಿಮಾನೇ ಅಂಥ ನಂಬಿಕೊಂಡಿಲ್ಲ. ಇಂಡಸ್ಟ್ರಿಯಲ್ಲಿ ಇರಬೇಕು ಅಂತ ಸಿನಿಮಾ ಮಾಡೋದು ಬೇರೆ, ಸಿನಿಮಾ ಅಂತ ಸಿನಿಮಾ ಮಾಡೋದು ಬೇರೆ. ನಾನು ಒಳ್ಳೆಯ ಪಾತ್ರಗಳನ್ನು ಮಾಡೋಕೆ ಇಷ್ಟ ಪಡ್ತೀನಿ. ಮುಂದಿನವರಿಗೆ ಮಾದರಿ ಆಗೋವಂಥ ಪಾತ್ರಗಳನ್ನು ಮಾಡಬೇಕು. 

- ನಿಮಗೆ ಹಿಡಿಸುವ ಸ್ಕ್ರಿಪ್ಟ್ ಹೇಗಿರಬೇಕು? 
ನಾಟಕ, ಸಿನಿಮಾ, ಧಾರಾವಾಹಿ ಯಾವುದೇ ಆಗಿರಲಿ ಕತೆ ಮುಖ್ಯ. ನನ್ನ ಪ್ರಕಾರ ಕಥೆಯೇ ಹೀರೋ/ಹೀರೋಯಿನ್‌. ನಾನು ಕಥೆಗೆ ಏನು ಕೊಡುತ್ತೇನೆ ಅನ್ನೋದು ಮುಖ್ಯ. ನನ್ನ ಹೆಗಲ ಮೇಲೆ ಯಾವ ಜವಾಬ್ದಾರಿ ಬೀಳುತ್ತದೆ ಅಂತ ನೋಡಿಕೊಂಡು ನಾನು ಕಥೆ ಒಪ್ಪಿಕೊಳ್ಳುತ್ತೇನೆ. ನನಗೆ ಸಿಕ್ಕಿದ ಎಲ್ಲ ಕಥೆಯೂ ಮೇಲ್‌ ಓರಿಯೆಂಟೆಡ್‌, ಹೀರೋಯಿಸಂ ಜಾಸ್ತಿ ಇತ್ತು. ಯಾರೋ ಒಬ್ಬ ವ್ಯಕ್ತಿಯನ್ನು ಹೀರೋ ಮಾಡೋಕೆ ನಾನು ನಟಿಸೋದಿಲ್ಲ. ಸ್ಕ್ರಿಪ್ಟ್ನಲ್ಲಿ ಹೊಸತನ, ನಟನೆಗೆ ಪ್ರಾಮುಖ್ಯತೆ ಇರಬೇಕು.  

- ನಿರ್ದೇಶನದಲ್ಲಿ ಆಸಕ್ತಿ ಇದೆಯಾ?
ಇಲ್ಲ, ನಾನದನ್ನು ನನ್ನ ಗಂಡನಿಗೇ ಬಿಟ್ಟು ಕೊಡುತ್ತೇನೆ. ನನ್ನ ಗಂಡ ಸುಮನ್‌ ಜಾದೂಗರ್‌ ನಿರ್ದೇಶಕರು. ಇತ್ತೀಚೆಗೆಷ್ಟೇ "ಸಿಲಿಕಾನ್‌ ಸಿಟಿ' ಸಿನಿಮಾ ನಿರ್ದೇಶಿಸಿದ್ದಾರೆ. ಹಾಗಾಗಿ ನಿರ್ದೇಶನದ ವಿಭಾಗವನ್ನು ಅವರಿಗೆ ಬಿಡುತ್ತೇನೆ. 

- ನಿಮ್ಮ ಸ್ಟ್ರೆಂತ್‌ ಮತ್ತು ವೀಕ್‌ನೆಸ್‌ ಏನು?
ನನ್ನ ಬಿಗೆಸ್ಟ್‌ ಸ್ಟ್ರೆಂತ್‌ ನನ್ನ ಗಂಡ. ಅವರನ್ನು ಬಿಟ್ಟು ಬೇರೇನನ್ನೂ ಯೋಚಿಸೋಕೆ ನನಗೆ ಸಾಧ್ಯವಿಲ್ಲ. ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ದೆನೋ, ಅದಕ್ಕೆ ಈ ಜನ್ಮದಲ್ಲಿ ಒಳ್ಳೇ ಗಂಡ ಸಿಕ್ಕಿದ್ದಾನೆ ಅಂತ ಯಾವಾಗ್ಲೂ ಹೇಳ್ತಿರ್ತೇನೆ. ಇನ್ನು ನನ್ನ ವೀಕ್‌ನೆಸ್‌ ಅಂದ್ರೆ ಕುಟುಂಬದಿಂದ ದೂರ ಇರೋದು ತುಂಬಾ ಕಷ್ಟ ಆಗುತ್ತೆ. ನಮ್ಮ ಮನೆ, ನನ್ನ ಜನ, ನಮ್ಮನೆ ಊಟ, ನಮ್ಮನೆ ಹಾಲ್‌- ಹೀಗೆ ಎಲ್ಲವನ್ನೂ ಮಿಸ್‌ ಮಾಡ್ತೀನಿ. ನನ್ನದು ಅನ್ನೋದರ ಬಗ್ಗೆ ಸ್ವಲ್ಪ ಸೆಳೆತ ಜಾಸ್ತಿ. 

- ಈಗ ಮುಂಬೈನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದೀರಿ. ಎಷ್ಟು ದಿನಕ್ಕೊಮ್ಮೆ ಬೆಂಗಳೂರಿಗೆ ಬರುತ್ತೀರಿ?
ತಿಂಗಳಿಗೊಮ್ಮೆ ನಾನೇ ಅಲ್ಲಿಗೆ ಬರಿ¤àನಿ, ಇಲ್ಲಾ ಸುಮನ್‌ ಇಲ್ಲಿಗೆ ಬರುತ್ತಾರೆ. 

- ಶೂಟಿಂಗ್‌ ಸೆಟ್‌ನಲ್ಲಿ ತುಂಬಾ ಕಿರಿಕಿರಿ ಅನ್ನಿಸೋ ವಿಷಯಗಳೇನು? 
ಸೆಖೆ... ಸೆಖೆ ಜಾಸ್ತಿ ಆದ್ರೆ ನಂಗೆ ಹುಚ್ಚೇ ಹಿಡಿದು ಬಿಡುತ್ತೆ. ಯಾವಾಗಲೂ ಶೂಟಿಂಗ್‌ ವೇಳೆ ಪೋರ್ಟೆಬಲ್‌ ಎ.ಸಿ. ನನ್ನ ಮುಂದೆ ಇರಲೇಬೇಕು. ಇಲ್ಲದಿದ್ದರೆ, ತುಂಬಾ ಸಿಟ್ಟು ಬರುತ್ತೆ. ಇನ್ನು ಮೇಕಪ್‌ ಮಾಡುವಾಗ ನೋವು ಮಾಡಿದ್ರೆ ತುಂಬಾ ಕಿರಿಕಿರಿ ಆಗುತ್ತೆ. ನನ್ನ ಹೇರ್‌ ಡ್ರೆಸರ್‌ ಕೂದಲು ಸೆಟ್‌ ಮಾಡುವಾಗ ನೋವು ಮಾಡ್ತಾರೆ, ಆಗ ನಾನೂ ಅವರಿಗೆ ಚುಚಿ¤àನಿ. "ನೀವು ನಂಗೆ ನೋವು ಮಾಡಿದ್ರೆ, ನಾನೂ ನಿಮಗೆ ನೋವು ಮಾಡ್ತೀನಿ' ಅಂತ ಹೇಳ್ತಿರಿ¤àನಿ. ಪೌರಾಣಿಕ ಪಾತ್ರಗಳ ಕಾಸ್ಟೂéಮ್‌ ತುಂಬಾ ಭಾರ ಇರುತ್ತೆ. 12-13 ಗಂಟೆ ಆ ಮೇಕಪ್‌ನಲ್ಲೇ ಇರಬೇಕು. ಅದು ಸ್ವಲ್ಪ ಕಷ್ಟ ಅನ್ನಿಸುತ್ತೆ. 

- ತುಂಬಾ ಸಿನಿಮಾಗಳನ್ನು ನೋಡ್ತೀರ?
ಇಲ್ಲ. ನಾನು ಟಿ.ವಿ, ಸಿನಿಮಾ ನೋಡೋದು ಕಡಿಮೆ. ನಾಲ್ಕು ತಿಂಗಳಾಯ್ತು ಟಿ.ವಿ. ಆನ್‌ ಮಾಡಿ. ಪುಸ್ತಕ ಓದಿ¤àನಿ, ನಾಟಕ ನೋಡ್ತೀನಿ. ಸಿನಿಮಾ, ನಾಟಕ ಅಂತ ಎರಡು ಟಿಕೆಟ್‌ ಕೊಟ್ರೆ, ನನ್ನ ಆಯ್ಕೆ ನಾಟಕಾನೇ ಆಗಿರುತ್ತೆ. ಸೋಶಿಯಲ್‌ ಮೀಡಿಯಾದಿಂದಲೂ ಸ್ವಲ್ಪ ದೂರ. 
- - -
ಫ‌ಟಾಫ‌ಟ್‌
- ಕನಸಿನ ಪಾತ್ರ ಯಾವುದು?
ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸೋ ಆಸೆ ಇದೆ. 

- ನೆಚ್ಚಿನ ನಟ-ನಟಿ?
ಟಾಮ್‌ ಕ್ರೂಸ್‌, ಏಂಜಲೀನಾ ಜೂಲಿ. 

- ತುಂಬಾ ಇಷ್ಟಪಟ್ಟು ತಿನ್ನೋ ಫ‌ುಡ್‌?
ದೋಸೆ, ದೋಸೆ, ದೋಸೆ

- ನೆಚ್ಚಿನ ಹವ್ಯಾಸ
ಪುಸ್ತಕ ಓದುವುದು
- - -
ಆ ಅಜ್ಜಿ ಬೈದೇಬಿಟ್ರಾ...
ನಾನಾಗ "ಸೊಸೆ' ಧಾರಾವಾಹಿ ಮಾಡುತ್ತಿದ್ದೆ. ಮನೆಯಲ್ಲೇನೋ ಪೂಜೆ ಇತ್ತು. ಅದಕ್ಕೆ ವೀಳ್ಯದೆಲೆ ಬೇಕಿತ್ತು. ಅಮ್ಮ ತರೋಕೆ ಮರೆತಿದ್ರು. ಹಾಗಾಗಿ. ನಾನೇ ವೀಳೆÂದೆಲೆ ತರೋಕೆ ಹೋಗಿದ್ದೆ. ಒಬ್ಬರು ಅಜ್ಜಿ ವೀಳೆÂದೆಲೆ ಮಾರ್ತಾ ಕೂತಿದ್ರು. ಅಜ್ಜಿ ಹತ್ರ ಕೇಳಿದೆ. ಆಕೆ ಸಡನ್ನಾಗಿ, "ಏಯ್‌, ನೀನು ಕೆಟ್ಟ ಹೆಂಗುÕ. ಸರಿಯಿಲ್ಲ ನೀನು. ನಿಂಗೆ ವೀಳೆÂದೆಲೆ ಎಲ್ಲಾ ಕೊಡಲ್ಲಾ, ಹೋಗು ಬೇರೆ ಕಡೆ' ಅಂತ ಬೈದರು. ನನಗೆ ಜೋರಾಗಿ ನಗು ಬಂತು. ಅಷ್ಟೇ ಖುಷಿಯೂ ಆಯ್ತು. ನಾನು ಒಳ್ಳೆ ಹೆಂಗಸಲ್ಲ ಅಂತ ಆಕೆಯನ್ನು ಎಷ್ಟು ಚೆನ್ನಾಗಿ ನಂಬಿಸಿದ್ದೀನಲ್ಲಾ ಅನ್ನಿಸಿತು. ದುಡ್ಡು ಜಾಸ್ತಿ ಕೊಡ್ತೀನಿ ಅಂದ್ರೂ ಅಜ್ಜಿ ವೀಳೆÂದೆಲೆ ಕೊಡಲೇ ಇಲ್ಲ. ಆಮೇಲೆ ಬೇರೆ ಕಡೆ ಹೋಗಿ ಎಲೆ ತಗೊಂಡು ಬಂದೆ. 

ಫ್ಲೈಟ್‌ ಮಿಸ್ಸಾಯ್ತು...
ಇನ್ನೊಂದ್ಸಲ ನಾನು ಏರ್‌ಪೋರ್ಟ್‌ನಲ್ಲಿ ಚೆಕ್‌ ಇನ್‌ ಆಗ್ತಿದ್ದೆ. ಒಂದು ನಾಲ್ಕೈದು ಜನ ಓಡೋಡಿ ಬರ್ತಾ ಇದ್ರು. ಪಾಪ, ಅವರಿಗೆ ಲೇಟಾಗಿರಬೇಕು ಅದ್ಕೆ ಓಡ್ತಾ ಇದಾರೆ ಅಂದುಕೊಂಡೆ. ನನಗೂ ಲೇಟ್‌ ಆಗಿತ್ತು. ಆದ್ರೆ, ಅವರು ನನ್ನ ಹತ್ತಿರ ಬಂದು, ಎಲ್ಲಾ ಒಟ್ಟಿಗೆ ಮುಗಿ ಬಿದ್ದರು. "ಒಂದ್‌ ಫೋಟೊ ಪ್ಲೀಸ್‌' ಅಂತ, ಕಷ್ಟ- ಸುಖ ಮಾತಾಡಿಕೊಂಡು ನಿಂತುಬಿಟ್ಟರು. ಕೊನೆಗೂ ಅವತ್ತು ನನಗೆ ಫ್ಲೈಟ್‌ ಮಿಸ್‌ ಆಯ್ತು. 12,000 ಕೊಟ್ಟು ಮತ್ತೆ ಟಿಕೆಟ್‌ ಬುಕ್‌ ಮಾಡಿದೆ!

- ಪ್ರಿಯಾಂಕಾ ನಟಶೇಖರ್‌

Trending videos

Back to Top