ಶ್ರಾವಣ ಶುಕ್ರವಾರ


Team Udayavani, Aug 24, 2018, 9:39 AM IST

pagespeed.jpg

ಶ್ರಾವಣವೆಂದರೆ ಹಬ್ಬಗಳ ಸಾಲು. ಪೊರೆಯುವ ದೇವಿಗೆ ಅಕಲಂಕ ಭಕ್ತಿ, ಶ್ರದ್ಧೆಯಿಂದ ಅರ್ಚಿಸಿ, ಪೂಜಿಸಲು ಧಾರ್ಮಿಕ ನಿಷ್ಠೆ , ಭಕ್ತಿಯುಳ್ಳ  ಮನೆ-ಮನೆಗಳ ಸದಸ್ಯರು ಹಬ್ಬಗಳ ನಿರೀಕ್ಷೆಯಲ್ಲಿರುತ್ತಾರೆ. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬ ಮೊದಲಿನದು. ವಿವಾಹಿತ ಮಹಿಳೆಯರಿಗೆ ವಿಶೇಷದ ಸಡಗರ. ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಸಮೀಪದ ಶುಕ್ರವಾರ ವರಮಹಾಲಕ್ಷ್ಮೀಯ ಪೂಜಾಸಂಭ್ರಮ. ದೇವಸ್ಥಾನಗಳಲ್ಲಿ, ಮನೆಮನೆಗಳಲ್ಲಿ  ಮಂಗಳವಾರ, ಶುಕ್ರವಾರ ದೇವೀಪೂಜೆಗೆ ಶುಭ ದಿನ. ಅದರಲ್ಲೂ ಗೋಧೂಳಿ ಹೊತ್ತು ಶ್ರೇಷ್ಠ. 

ಲಕ್ಷ್ಮೀದೇವಿ ಅಂದರೆ ಸಿರಿಯ ಅಧಿದೇವಿ. ಆಕೆಯ  ಅರ್ಚನೆ, ಪೂಜೆಗಳಿಂದ  ಸಕಲ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ವಿಜೃಂಭಣೆಯಿಂದ ಉಳ್ಳವರು ಆಚರಿಸಿದರೆ, ಸರಳವಾಗಿ, ಸಾಮೂಹಿಕವಾಗಿ ಆಚರಿಸಿ ದೇವಿಯ ಕೃಪೆಗೆ ಭಾಜನರಾಗುವವರು ಧಾರಾಳವಾಗಿದ್ದಾರೆ.

ಎಲ್ಲ ಪೌರಾಣಿಕ ಹಬ್ಬ, ವ್ರತಗಳಿಗೂ ಇರುವಂತೆ ವರಮಹಾಲಕ್ಷ್ಮೀ ವ್ರತದ ಹಿಂದೆಯೂ ಒಂದು ಹಿನ್ನಲೆ ಕಥೆ ಇದೆ. ಚಾರುಮತಿ ಎಂಬ ಓರ್ವ ಬಡ ಮುತ್ತೈದೆ ಬಹು ಕಷ್ಟದಲ್ಲಿ ಬದುಕುತ್ತಿದ್ದಳು. ಇಡೀ ದಿನ ಹಿರಿಯರ ಸೇವೆ, ಪತಿ ಸೇವೆ, ಮಕ್ಕಳ ಆರೈಕೆ ಎಂದು  ದುಡಿಯುತ್ತಿದ್ದಳು. ಆಕೆ ಲಕ್ಷ್ಮೀದೇವಿಯ ಪರಮಭಕ್ತೆ. ಅವಳ ನಿವ್ಯಾìಜ ಭಕ್ತಿಗೆ ಒಲಿದ ದೇವಿ ಶ್ರಾವಣಮಾಸದ ಒಂದು ರಾತ್ರಿ ಸ್ವಪ್ನದಲ್ಲಿ ಕಾಣಿಸಿಕೊಂಡಳು. ನಿದ್ರಿಸುತ್ತಿದ್ದ ಚಾರುಮತಿಯನ್ನು ದೇವಿ ಎಬ್ಬಿಸಿದಳು.  ಆಕೆಯ ಎದುರಿನಲ್ಲಿ  ಅಪೂರ್ವಪ್ರಭೆಯ ಮಹಾಲಕ್ಷ್ಮೀ  ಪ್ರತ್ಯಕ್ಷವಾಗಿದ್ದಳು. 

“”ಚಾರುಮತಿ, ನಾನು  ವರಮಹಾಲಕ್ಷ್ಮೀ ಬಂದಿದ್ದೇನೆ. ನಿನ್ನ ನಿಜಭಕ್ತಿಗೆ ಮೆಚ್ಚಿದ್ದೇನೆ. ಶ್ರಾವಣಮಾಸದ ಶುಕ್ಲಪಕ್ಷದ ಹುಣ್ಣಿಮೆಗೆ ಸಮೀಪದ ಶುಕ್ರವಾರ ದೇವಿಪೂಜೆಯ ವಿಶೇಷದ ದಿನ. ಆ ದಿನ ನಾನು ವರಮಹಾಲಕ್ಷ್ಮೀಯಾಗಿ ಬಂದು ನಂಬಿದ ಭಕ್ತರಿಗೆ ಬೇಡಿದ್ದನ್ನು ಕರುಣಿಸುತ್ತೇನೆ. ಧನಕನಕವೇ ಮೊದಲಾದ ಕೋರಿಕೆಗಳನ್ನು ಈಡೇರಿಸುತ್ತೇನೆ. ಅಂದು ಶ್ರದ್ಧಾಭಕ್ತಿಯಿಂದ ನನ್ನನ್ನು ಅರ್ಚಿಸಿ, ಪೂಜಿಸಿ ಒಳ್ಳೆಯ ಫ‌ಲಗಳನ್ನು ಪಡೆದುಕೋ” ಚಾರುಮತಿ ನೋಡುತ್ತಿದ್ದಂತೆ ದೇವಿ ಮಾಯವಾದಳು.

ಎಚ್ಚೆತ್ತ ಅವಳು ಮನೆಯವರನ್ನು ಎಬ್ಬಿಸಿ ಸ್ವಪ್ನದ  ವಿಚಾರವನ್ನೆಲ್ಲ ಮನೆಯವರಿಗೆ ತಿಳಿಸಿದಳು. ಎಲ್ಲರೂ ಸಂತೋಷದಿಂದ, ಭಕ್ತಿಯಿಂದ ಶುಕ್ರವಾರದ ದಿನ ವರಮಹಾಲಕ್ಷ್ಮೀಯನ್ನು ಅರ್ಚಿಸಿ  ಬೇಡಿಕೊಂಡರು. ಪ್ರಸನ್ನೆಯಾದ ದೇವಿ ಚಾರುಮತಿಗೆ ಸುಖ, ಸಂಪತ್ತು, ಆರೋಗ್ಯವೇ ಮೊದಲಾದ ಸರ್ವ ವರಗಳನ್ನೂ ಕರುಣಿಸಿದಳು. ಅಂದಿನಿಂದ ಚಾರುಮತಿ ದಿನೇ ದಿನೇ  ಸಂಪತ್ತು, ಸಮೃದ್ದಿ ಹೊಂದಿದಳು. ನಂತರ ವರ್ಷವರ್ಷವೂ ಭಕ್ತಿಯಿಂದ ಪೂಜಿಸುತ್ತ ಇತರರಿಗೆ ಒಳಿತನ್ನು ಮಾಡುತ್ತ ಸುಖಸಂತೋಷದಿಂದ ಕುಟುಂಬದವರೊಂದಿಗೆ ಕಾಲ ಕಳೆದಳು.

ಲೋಕದ ಭಕ್ತರ  ಸುಖ-ಸಂತೋಷ ಹೆಚ್ಚಿಸಲು ಒಳ್ಳೆಯ ವ್ರತವೊಂದನ್ನು ತಿಳಿಸಬೇಕು ಎಂದು ಪಾರ್ವತೀದೇವಿ ಪರಮೇಶ್ವರನಲ್ಲಿ ಬೇಡಿಕೊಂಡಾಗ ಶಿವನು ಉಪದೇಶಿಸಿದ ವ್ರತ ಇದೇ ವರಮಹಾಲಕ್ಷ್ಮೀವ್ರತ. ಸ್ತ್ರೀ-ಪುರುಷರೆಂಬ ಭೇದ, ಬಡವ ಬಲ್ಲಿದರೆಂಬ ಅಂತರ ಮೇಲು, ಕೀಳು ಎಂಬ ಭಾವನೆ ಇಲ್ಲದೆ ಸರ್ವ ಭಕ್ತರೂ ಆಚರಿಸಬಹುದಾದ ಈ ವ್ರತ ಭಕ್ತರ ಮನೋಭಿಷ್ಟವನ್ನು ಈಡೇರಿಸುತ್ತದೆ. ಮುಂದೆ ಶೌನಕಾದಿ ಮುನಿಗಳು, ಸೂತ ಪುರಾಣಿಕರ ಮೂಲಕ ನಾಡಿನ ಎಲ್ಲೆಡೆ ವರಮಹಾಲಕ್ಷ್ಮೀ ವ್ರತವನ್ನು ಭಕ್ತಿಭಾವದಿಂದ ಆಚರಿಸತೊಡಗಿದರು.

ಸಾಮೂಹಿಕವಾಗಿ ಮಾಡುವ ಪೂಜೆ, ಅರ್ಚನೆಗಳಲ್ಲಿ ವಿಶೇಷವಾದ ಶಕ್ತಿ ಇದೆ. ಅಲ್ಲಿ ದೇವತಾ ಸಾನ್ನಿಧ್ಯವಿರುತ್ತದೆ. ಯಾವುದೇ  ಭೇದ-ಭಾವಗಳಿಲ್ಲದೆ ಎಲ್ಲರೂ ಒಟ್ಟಾಗಿ ನಿಜಭಕ್ತಿಯಿಂದ ಮಾಡುವ  ದೇವತಾಕಾರ್ಯಗಳಲ್ಲಿ ದೇವತಾನುಗ್ರಹವಾಗುತ್ತದೆ. ಅದ್ದೂರಿ, ಆಡಂಬರ, ವೈಭವದ ಪ್ರದರ್ಶನಕ್ಕಿಂತಲೂ ಭಕ್ತಿಪೂರ್ವಕವಾಗಿ ಭಗವಂತನಿಗೆ ಒಂದು ತುಳಸೀದಳ ಅರ್ಪಿಸಿದರೆ ಅವನು ಪ್ರಸನ್ನವಾಗಿ ಒಲಿಯುತ್ತಾನೆ. ಸಂತತಿಯೇ ಇಲ್ಲದ ದಂಪತಿ ಒಂದು ಸಂತಾನಕ್ಕಾಗಿ ತಮ್ಮೆಲ್ಲ ಆರ್ಥಿಕ ಸಂಪತ್ತನ್ನು ಸಮರ್ಪಿಸಲು ಹಿಂದೆಮುಂದೆ ನೋಡುವುದಿಲ್ಲ. ಹಾಸಿಗೆ ಹಿಡಿದ ರೋಗಿ ತನಗೆ ನಡೆದಾಡುವಂತಾಗಲು ಅದೆಷ್ಟು ವೆಚ್ಚ ಮಾಡಲೂ ಹಿಂಜರಿಯಲಾರ. ಕೋಟಿ ಹೊನ್ನಿಗಿಂತ ಮಿಗಿಲು ಉತ್ತಮ  ಸಂತಾನ- ಅದು ಹೆಣ್ಣು ಮಗು ಅಥವಾ ಗಂಡು ಮಗುವೇ ಇರಲಿ. ಅದೇ ಮನೆಯ ಮಾಣಿಕ್ಯ. ಮತಿ ವಿಕಲ್ಪತೆ, ಅಂಗ ವೈಕಲ್ಯ, ಕಾಡುವ ಅನಾರೋಗ್ಯದಿಂದ ಬಸವಳಿದ ಜನರಲ್ಲಿ  ವಿಚಾರಿಸಿದರೆ  ಉತ್ತಮ ಆರೋಗ್ಯವೇ ದೊಡ್ಡ ಸಂಪತ್ತು. ಮನೆ ಮನೆಗಳಲ್ಲಿ ಬಂಧುಗಳು  ಕಳೆದುಕೊಂಡ ಪ್ರೀತಿಪಾತ್ರರು ಮರಳಿ ಸಿಗುವುದಾದರೆ ತಮ್ಮೆಲ್ಲ ಧನ ಸಂಪತ್ತು ವೆಚ್ಚ ಮಾಡಲೂ ಹಿಂಜರಿಯುವುದಿಲ್ಲ.  ಬರಿದೇ ಹಣ, ಒಡವೆ, ಮನೆ, ಮಹಲು, ಭೂಮಿಗಾಗಿ ಹಾತೊರೆಯುವ ಬದಲಾಗಿ  ಅದಕ್ಕಿಂತ ಸಹಸ್ರ ಪಟ್ಟು ಹೆಚ್ಚಿನ ಮೌಲ್ಯದ ನೆಮ್ಮದಿ, ಆರೋಗ್ಯ ಪೂರ್ಣ, ಸಂತೋಷದ ಕುಟುಂಬ ಜೀವನಕ್ಕಾಗಿ ದೇವರಲ್ಲಿ ಕೈ ಜೋಡಿಸಬಹುದು. ಎಲ್ಲದಕ್ಕಿಂತ  ಹೆಚ್ಚಿನ ಮೌಲ್ಯದ ಸಂಪತ್ತು-ದುಡ್ಡು, ಕಾಸು, ಆಭರಣ, ಭೂಮಿಗಿಂತ ಮಿಗಿಲಾಗಿ ಶಾರೀರಿಕ, ಮಾನಸಿಕ ಆರೋಗ್ಯ ಭಾಗ್ಯದ ಬದುಕು, ಕೋಟಿ ಹೊನ್ನಿಗೂ ಹೆಚ್ಚಿನ  ಉತ್ತಮ ಸಂಸ್ಕಾರವಂತ ಸಂತಾನ-   ಲಕ್ಷ್ಮೀದೇವಿಯ ಅನುಗ್ರಹದಿಂದ  ಅದು ಚೆನ್ನಾಗಿದ್ದರೆ  ಹಣ, ಒಡವೆ, ಆಸ್ತಿ ಎಲ್ಲ  ತಾನಾಗೇ ಹಿಂಬಾಲಿಸುತ್ತದೆ.

– ಕೃಷ್ಣವೇಣಿ ಎಂ.

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.