ಬಾಲ್ಯದ ಸಿಹಿ ನೆನಪುಗಳು

Team Udayavani, Aug 24, 2018, 6:00 AM IST

makkala-ata.jpg

ನೆನಪುಗಳು ಅಂದರೇನೆ ಹಾಗೆ. ಮನಸ್ಸಿಗೆ ಖುಷಿ ನೀಡುವಂತಹ ಅನೇಕ ನೆನಪುಗಳು ಒಂದು ಕಡೆಯಾದರೆ, ಮನಸ್ಸಿನಿಂದ ಮಾಸಿ ಹೋಗಬೇಕೆನಿಸುವ ನೆನಪುಗಳು ಇನ್ನೊಂದು ಕಡೆ. ಬಾಲ್ಯ ಎನ್ನುವುದು ಸವಿನೆನಪುಗಳ ಬುತ್ತಿ ಅಂತಾನೆ ಹೇಳಬಹುದು, ಅಲ್ವೆ? ನಾವು ಮಾಡಿದ ತುಂಟಾಟ, ಚೇಷ್ಟೆಗಳು, ಗೊತ್ತಿಲ್ಲದೆ ಮಾಡಿರುವ ಅವಾಂತರಗಳು ಇವೆಲ್ಲವೂ ಆ ಬುತ್ತಿಯೊಳಗೆ ಸೇರಿಕೊಂಡು ಸುಮ್ಮನೆ ಮೆಲುಕು ಹಾಕಿಕೊಂಡು ಕೂರುವಾಗ ನಮಗೆ ನಗೆಯ ರಸದೂಟವನ್ನು ಬಡಿಸುತ್ತದೆ.

ನಾನು ಅಂಗನವಾಡಿಗೆ ಹೋಗುತ್ತಿದ್ದ ಸಮಯದಲ್ಲಿ ನಡೆದ ಘಟನೆಯಿದು. ನಮ್ಮ ಟೀಚರ್‌ ನಮಗೆಲ್ಲ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಅವುಗಳಲ್ಲಿ ಓಟ, ಕಪ್ಪೆ ಜಿಗಿತ, ನೆನಪಿನ ಶಕ್ತಿ ಆಟಗಳಂತಹ ಸ್ಪರ್ಧೆಗಳು ಕೆಲವು. ನಾವೆಲ್ಲ ಆ ಸ್ಪರ್ಧೆಗಳಲ್ಲಿ ಭಾಗವಹಿಸಿದೆವು ಹಾಗೂ ವಿಜೇತರಾದೆವು. ಒಂದು ದಿನ ಬಹುಮಾನ ವಿತರಣಾ ಸಮಾರಂಭವನ್ನು ಕೂಡ ಏರ್ಪಡಿಸಿದ್ದರು. ಆ ದಿನ ನನ್ನ ಗೆಳತಿಯೊಬ್ಬಳು ಬಂದಿರಲಿಲ್ಲ. ಹಾಗಾಗಿ ಅವಳ ಬಹುಮಾನ ಟೀಚರ್‌ನ ಬಳಿಯೇ ಉಳಿದಿತ್ತು. ಮರುದಿನ ಬಂದ ನನ್ನ ಗೆಳತಿಗೆ ಟೀಚರ್‌ ಅವಳಿಗೆ ಸೇರಬೇಕಾಗಿದ್ದ ಬಹುಮಾನವನ್ನು ಕೊಟ್ಟರು. 

“ಅವಳಿಗೆ ಬಹುಮಾನ ಕೊಟ್ಟರು. ಆದರೆ ನನಗೆ ಕೊಡಲಿಲ್ಲ’ ಎನ್ನುವ ಬೇಸರದಿಂದ ಮುಖ ಗಂಟು ಹಾಕಿಕೊಂಡು ಮೂಲೆಯಲ್ಲಿ ಕೂತೆ. ನನ್ನ ಗೆಳತಿಗೆ ಬಹುಮಾನ ಕೊಟ್ಟ ದಿನ ನನಗೂ ಕೊಡಲೇಬೇಕಿತ್ತು ಅನ್ನುವ ಸಣ್ಣ ಹೊಟ್ಟೆ ಉರಿ ಅಂತ ಹೇಳಬಹುದೇನೋ ಇದಕ್ಕೆ. ಕುಂಬಳಕಾಯಿ ಥರ ಆಗಿದ್ದ ನನ್ನ ಮುಖವನ್ನು ನೋಡಿದ ಟೀಚರ್‌ಗೆ ನನ್ನ ಬೇಸರಕ್ಕೆ ಕಾರಣ ಏನು ಅಂತ ಗೊತ್ತಾಯೊ¤à ಏನೋ. ತಮ್ಮಲ್ಲಿ ಹೆಚ್ಚಿಗೆ ಉಳಿದಿದ್ದ ಬಹುಮಾನವನ್ನು ನನಗೆ ತಂದು ಕೊಟ್ಟರು. ನನಗೆ ಎಷ್ಟು ಖುಷಿಯಾಯಿತೆಂದರೆ ನನ್ನ ಗೆಳತಿಯ ಹತ್ತಿರ “ನನಗೆ ಇನ್ನೊಂದು ಬಹುಮಾನ’ ಅಂತ ಹೇಳಿಕೊಂಡು ಕುಣಿದೆ. ಇದು ನನ್ನ ಚೇಷ್ಟೆಯ ಪರಮಾವಧಿಯಾಗಿದ್ದರೂ ಕೂಡ, ನಮ್ಮ ಟೀಚರ್‌ ಮಕ್ಕಳಿಗೆ ಬೇಸರವಾಗಬಾರದೆನ್ನುವ ಉದ್ದೇಶದಿಂದ ತಮ್ಮಲ್ಲಿ ಉಳಿದಿದ್ದ ಬಹುಮಾನವನ್ನು ನನಗೆ ಕೊಟ್ಟರು. ಇದನ್ನು ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಆದರೆ ನಮ್ಮ ಟೀಚರ್‌ನ ಪ್ರೀತಿಯನ್ನು ಕಂಡು ನನ್ನ ಮನ ಕರಗುತ್ತದೆ.
ಮಕ್ಕಳ ಮನಸ್ಸನ್ನು ಅರಿಯುವ ಗುರುಗಳಿಗೆ ನನ್ನ ಕಡೆಯಿಂದ ಹ್ಯಾಟ್ಸಾಪ್‌.

– ವಾಣಿ
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, 
ಮಂಗಳೂರು

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.