CONNECT WITH US  

"ಸ್ವಾರ್ಥರತ್ನ'ದ ಈ ಜೀವ: ಬ್ಯೂಟಿಫುಲ್ ಸಾಂಗ್ ವೀಕ್ಷಿಸಿ

ಈಗಾಗಲೇ ಯಶಸ್ಸು ಕಂಡ "ಫ‌ಸ್ಟ್ ರ್‍ಯಾಂಕ್‌ ರಾಜು' ಮತ್ತು "ರಾಜು ಕನ್ನಡ ಮೀಡಿಯಂ' ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಶ್ವಿ‌ನ್‌ ಕೊಡಂಗಿ ನಿರ್ದೇಶನದ "ಸ್ವಾರ್ಥರತ್ನ' ಚಿತ್ರದ "ಈ ಜೀವ ಕರೆಯೋಲೆ ಆಗಿದೆ' ಎಂಬ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೊಂಬಾಟ್ ಹಿಟ್ ಆಗಿದೆ. ಹಾಡಿಗೆ ಬಾಲಿವುಡ್‍ನ ಖ್ಯಾತ ಗಾಯಕ ಅರ್ಮನ್ ಮಲಿಕ್ ದನಿಯಾಗಿದ್ದು, ಚಿತ್ರದ ಟ್ರೈಲರ್ ಕೂಡಾ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದೊಂದು ಪಕ್ಕಾ ಹಾಸ್ಯಮಯ ಸಿನಿಮಾ ಆಗಿದ್ದು, "ಈ ಸ್ವಾರ್ಥ ಎಂಬುದು ಮನುಷ್ಯನ ಸಹಜ ಗುಣ. ಸ್ವಾರ್ಥ ಅನ್ನುವುದು ಬೇರೆಯವರಿಗೆ ಯಾವ ರೀತಿ ಒಳಿತು ಮಾಡುತ್ತೆ ಎಂಬುದನ್ನೇ ಈ ಚಿತ್ರದಲ್ಲಿ ಹಾಸ್ಯ ಮೂಲಕ ಹೇಳಲಾಗಿದ್ದು, ಮನುಷ್ಯ ಎಷ್ಟೇ ಸ್ವಾರ್ಥಿಯಾಗಿದ್ದರೂ, ಅವರಲ್ಲೂ ನಿಸ್ವಾರ್ಥ ಇದ್ದೇ ಇರುತ್ತೆ' ಎಂಬಂತಹ ಅಂಶಗಳಿವೆ. ಇನ್ನು ಚಿತ್ರಕ್ಕೆ ಆದರ್ಶ್‌ ಹೀರೋ ಆಗಿದ್ದು, ನಾಯಕಿಯಾಗಿ ಸ್ನೇಹಾ ಸಿಂಗ್‌ ಅಭಿನಯಿಸಿದ್ದಾರೆ. ಇವರಿಗೆ ಕನ್ನಡ ಭಾಷೆ ಗೊತ್ತಿರದಿದ್ದರೂ, ಅರ್ಥ ಮಾಡಿಕೊಂಡು ನಟಿಸಿರುವುದು ವಿಶೇಷ. ರಿಷಿಕಾ ವರ್ಷ ಎಂಬ ಇನ್ನೊಬ್ಬ ಬೆಡಗಿಯೂ ಇಲ್ಲಿ ಕವನ ಎಂಬ ಪಾತ್ರ ಮಾಡಿದ್ದಾರೆ. ಬಿ.ಜೆ. ಭರತ್‌ ಸಂಗೀತ ಚಿತ್ರಕ್ಕಿದ್ದು, ರನ್ನಿಂಗ್‌ ಹಾರ್ಸ್‌ ಕ್ರಿಯೇಷನ್ಸ್‌ನಡಿ ನಿರ್ಮಾಣವಾಗಿದೆ. ಚಿತ್ರದ ಬ್ಯೂಟಿಫುಲ್ ಸಾಂಗ್ ವೀಕ್ಷಿಸಿ.

Back to Top