ಯುಎಇನಲ್ಲಿ ಹೊಸ ತೈಲ ನಿಕ್ಷೇಪ ಪತ್ತೆ

Team Udayavani, Nov 5, 2019, 12:35 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅಬುಧಾಬಿ: ತೈಲೋತ್ಪಾದನೆಯಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ (ಒಪೆಕ್‌) ಒಂದಾದ ಯು.ಎ.ಇ, ತನ್ನ ವ್ಯಾಪ್ತಿಯಲ್ಲಿ ಹೊಸದಾಗಿ ಮತ್ತಷ್ಟು ತೈಲ ಬಾವಿಗಳು ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಪತ್ತೆ ಹಚ್ಚಿದೆ.

ಯು.ಎ.ಇ.ನಲ್ಲಿ ಇಂಧನ ಕ್ಷೇತ್ರದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವಿರುವ ಸುಪ್ರೀಂ ಪೆಟ್ರೋಲಿಯಂ ಕೌನ್ಸಿಲ್‌ (ಎಸ್‌ಪಿಸಿ) ಹೊರಡಿಸಿರುವ ಪ್ರಕಾರ, ಹೊಸದಾಗಿ ಪತ್ತೆಯಾಗಿರುವ ತೈಲ ಬಾವಿಗಳಲ್ಲಿ ಏಳು ಬಿಲಿಯನ್‌ ಬ್ಯಾರೆಲ್‌ಗ‌ಳಷ್ಟು ಕಚ್ಚಾ ತೈಲವಿದ್ದು, ನೈಸರ್ಗಿಕ ಅನಿಲ ನಿಕ್ಷೇಪದಲ್ಲಿ 58 ಟ್ರಿಲಿಯನ್‌ ಕ್ಯೂಬಿಕ್‌ ಅಡಿಗಳಷ್ಟು ಅನಿಲ ತುಂಬಿದೆ ಎಂದು ಹೇಳಲಾಗಿದೆ.

ಇದರಿಂದಾಗಿ, ಆ ದೇಶದಲ್ಲಿರುವ ಕಚ್ಚಾ ತೈಲದ ಪ್ರಮಾಣ 105 ಬಿಲಿಯನ್‌ ಬ್ಯಾರೆಲ್‌ಗ‌ಳಿಗೆ ಮುಟ್ಟಿದ್ದು, ಆ ಮೂಲಕ ಜಗತ್ತಿನ 6ನೇ ಅತಿ ದೊಡ್ಡ ತೈಲ ಸಂಗ್ರಹ ಹೊಂದಿರುವ ದೇಶವೆಂಬ ಹೆಗ್ಗಳಿಕೆ ಪಡೆದಿದ್ದ ಕುವೈತ್‌ ಅನ್ನು ಯುಎಇ ಹಿಂದಿಕ್ಕಿದೆ ಎಂದು ಅಬುಧಾಬಿ ರಾಷ್ಟ್ರೀಯ ತೈಲ ಸಂಸ್ಥೆ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ