ಕಾಂಗ್ರೆಸ್‌ ಸರ್ಕಾರಗಳಿಂದ 48 ಲಕ್ಷ ಕೋಟಿ ಲೂಟಿ

ಹಗರಣಗಳ "ಕಾಂಗ್ರೆಸ್‌ ಫೈಲ್ಸ್‌' ರಿಲೀಸ್‌ ಮಾಡಿದ ಬಿಜೆಪಿ

Team Udayavani, Apr 3, 2023, 7:20 AM IST

ಕಾಂಗ್ರೆಸ್‌ ಸರ್ಕಾರಗಳಿಂದ 48 ಲಕ್ಷ ಕೋಟಿ ಲೂಟಿ

ನವದೆಹಲಿ: ದೇಶವನ್ನು 70 ವರ್ಷ ಕಾಲ ಆಳಿದ ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು 48 ಲಕ್ಷ ಕೋಟಿ ರೂ.ಗಳನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಮೊತ್ತದಿಂದ ಹಲವು ಯೋಜನೆಗಳಿಗೆ ಲಾಭವಾಗುತ್ತಿತ್ತು ಎಂದು ಅದು ಹೇಳಿಕೊಂಡಿದೆ.

ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದೆ. “ಕಾಂಗ್ರೆಸ್‌ ಸಾರ್ವಜನಿಕರ 48,20,69,00,00,000 ರೂ.ಗಳನ್ನು ಲೂಟಿ ಮಾಡಿದೆ. ಈ ಹಣವನ್ನು ರಕ್ಷಣೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಸದುಪಯೋಗ ಪಡಿಸಬಹುದಿತ್ತು. ಈ ಮೊತ್ತದಿಂದ ಕನಿಷ್ಠ 24 ಐಎನ್‌ಎಸ್‌ ವಿಕ್ರಾಂತ್‌, 300 ರಫೇಲ್‌ ಜೆಟ್‌ಗಳನ್ನು ಖರೀದಿಸಬಹುದಿತ್ತು ಹಾಗೂ 1,000 ಮಂಗಳ ಉಪಗ್ರಹ ಯೋಜನೆಗಳನ್ನು ಕೈಗೊಳ್ಳಬಹುದಿತ್ತು,’ ಎಂದು ದೂರಿದೆ.

“ಕಾಂಗ್ರೆಸ್‌ ಆಳಿದ 70 ವರ್ಷಗಳನ್ನು ಪಕ್ಕಕ್ಕೆ ಇಟ್ಟು, ಈ ಪೈಕಿ ಕೇವಲ 2004ರಿಂದ 2014ರ ಅವಧಿಯನ್ನು ಗಮನಿಸಿದರೆ, ಇದು ಕಳೆದುಹೋದ ದಶಕವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟ್ರಾಚಾರ ನಡೆಯುತ್ತಿದ್ದರೂ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೋಡಿಯೂ ನೋಡದಂತೆ ಮೌನ ವಹಿಸಿದ್ದರು,’ ಎಂದು ಬಿಜೆಪಿ ಆರೋಪಿಸಿದೆ.

“1.86 ಲಕ್ಷ ಕೋಟಿ ರೂ. ಕಲ್ಲಿದ್ದಲು ಹಗರಣ, 1.76 ಲಕ್ಷ ಕೋಟಿ ರೂ. 2ಜಿ ಸ್ಪೆಕ್ಟ್ರಮ್‌ ಹಗರಣ, 10 ಲಕ್ಷ ಕೋಟಿ ರೂ. ಮನರೇಗಾ ಹಗರಣ, 70,000 ಕೋಟಿ ರೂ. ಕಾಮನ್‌ವೆಲ್ತ್‌ ಹಗರಣ, ಇಟಲಿಯೊಂದಿಗೆ ಹೆಲಿಕಾಪ್ಟರ್‌ ಖರೀದಿ ಒಪ್ಪಂದದಲ್ಲಿ 362 ಕೋಟಿ ರೂ. ಲಂಚ, ರೈಲ್ವೆ ಮಂಡಳಿಯ ಅಧ್ಯಕ್ಷರ ನೇಮಕದಲ್ಲಿ 12 ಕೋಟಿ ರೂ. ಲಂಚ…ಹೀಗೆ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ,’ ಎಂದು ದೂರಿದೆ.

“ಕಾಂಗ್ರೆಸ್‌ ನಡೆಸಿರುವ ಭ್ರಷ್ಟಾಚಾರ ಕುರಿತು ಈ “ಕಾಂಗ್ರೆಸ್‌ ಫೈಲ್ಸ್‌’ ಕೇವಲ ಟ್ರೈಲರ್‌ ಆಗಿದೆ. “ಅಭಿ ಫಿಕ್ಚರ್‌ ಬಾಕಿ ಹೈ'(ಇನ್ನು ಸಿನಿಮಾ ಮುಂದೆ ಇದೆ). ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರ ಬಗ್ಗೆ ಸರಣಿ ಕಂತುಗಳು ಬಿಡುಗಡೆಯಾಗಲಿದೆ,’ ಎಂದು ಬಿಜೆಪಿ ಕಟುವಾಗಿ ಬರೆದುಕೊಂಡಿದೆ.

ಟಾಪ್ ನ್ಯೂಸ್

kರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

ರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

ಕರ್ನಾಟಕದಲ್ಲಿ ಬಿಹಾರದ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

ಕರ್ನಾಟಕದಲ್ಲಿ ಬಿಹಾರದ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

1-qqw-qwewqewqeqwe

IPL 2024; ಅಮೋಘ ಆಟವಾಡಿ ಮೂರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆಕೆಆರ್

1-aaaa

Delhi ಹಸುಗೂಸುಗಳ ದುರಂತ: ಆಸ್ಪತ್ರೆಯ ಮಾಲಕ, ವೈದ್ಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

Delhi ಹಸುಗೂಸುಗಳ ದುರಂತ: ಆಸ್ಪತ್ರೆಯ ಮಾಲಕ, ವೈದ್ಯ ಬಂಧನ

Modi 2

SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ

15

ಕಪಿಲ್‌ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ

AAP;  ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

rajnath singh

Indian Constitution ಪೀಠಿಕೆಯನ್ನು ಬದಲಾವಣೆ ಮಾಡಿದ್ದು ಕಾಂಗ್ರೆಸ್: ರಾಜನಾಥ್ ಸಿಂಗ್

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

kರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

ರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

ಕರ್ನಾಟಕದಲ್ಲಿ ಬಿಹಾರದ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

ಕರ್ನಾಟಕದಲ್ಲಿ ಬಿಹಾರದ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.