ನಟ ದುನಿಯಾ ವಿಜಯ್ ತಾಯಿ ಇನ್ನಿಲ್ಲ!
Team Udayavani, Jul 9, 2021, 1:53 PM IST
ಬ್ರೇನ್ ಸ್ಟ್ರೋಕ್ ನಿಂದ ಬಳಲಿದ್ದ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಇಂದು (ಶುಕ್ರವಾರ) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ವಿಜಯ್ ತಮ್ಮ ತಾಯಿಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ.
ಕೆಲ ದಿನಗಳ ಹಿಂದೆ ಕೋವಿಡ್ ನಿಂದ ನಾರಾಯಣಮ್ಮ ಚೇತರಿಸಿಕೊಂಡಿದ್ದರು. ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ಮತ್ತೆ ಅವರ ಆರೋಗ್ಯ ಹದಗೆಟ್ಟಿತ್ತು.
ಈ ಬಗ್ಗೆ ಅಳಲು ನೋವು ತೋಡಿಕೊಂಡ ನಟ ವಿಜಯ್ ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಮನೆಯಲ್ಲೇ ಚಿಕಿತ್ಸೆ ಕೊಡಿಸಿದ್ದೆ ಎಂದರು.