#HappyBirthdayBeta ಟ್ರೆಂಡ್ ಆಯ್ತು ಪಾಕ್ ಗೆ ಭಾರತೀಯರ ಸ್ವಾತಂತ್ರ್ಯ ಶುಭಾಶಯ!

Team Udayavani, Aug 14, 2019, 6:30 PM IST

ನವದೆಹಲಿ: 1947ರಲ್ಲಿ ನಮ್ಮದೇ ಭೂಭಾಗದಿಂದ ಬೇರೆಯಾಗಿ ಹೊಸ ರಾಷ್ಟ್ರವಾಗಿ ಉದಯಿಸಿದ್ದ ಪಾಕಿಸ್ಥಾನಕ್ಕೆ ಇಂದು 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಪಾಕಿಸ್ಥಾನದ ಸಂಬಂಧ ಹದಗೆಟ್ಟಿದೆ. ಪಾಕಿಸ್ಥಾನವನ್ನು ಮತ್ತು ಪಾಕಿಸ್ಥಾನೀಯರನ್ನು ಕಾಲೆಳೆಯುವ ಯಾವ ಅವಕಾಶವನ್ನೂ ಭಾರತೀರು ಕಳೆದುಕೊಳ್ಳಲು ಬಯಸುವುದಿಲ್ಲ. ಹಾಗೆಯೇ ಪಾಕಿಸ್ಥಾನೀಯರೂ ಸಹ ಅವಕಾಶ ಸಿಕ್ಕಾಗಲೆಲ್ಲಾ ಭಾರತೀಯರ ಕಾಲೆಳೆಯುತ್ತಲೇ ಇರುತ್ತಾರೆ.

ವಿಷಯ ಹೀಗಿರುತ್ತಾ, ಭಾರತಕ್ಕಿಂತ ಒಂದು ದಿನ ಮುಂಚಿತವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಪಾಕಿಸ್ಥಾನಕ್ಕೆ ಭಾರತೀಯರು ಶುಭಾಶಯ ಕೋರುತ್ತಿದ್ದಾರೆ. ಆದರೆ ಅದರಲ್ಲೂ ಒಂದು ವಿಶೇಷತೆ ಇದೆ. #HappyBirthdayBeta ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವಿಟ್ಟರ್ ನಲ್ಲಿ ಪಾಕಿಸ್ಥಾನಕ್ಕೆ ಸ್ವಾತಂತ್ರ್ಯ ಶುಭಾಶಯ ಕೋರುವ ಸಂದೇಶಗಳು ಹರಿದಾಡುತ್ತಿವೆ. ವಿಶೇಷವೆಂದರೆ ಈ ಹ್ಯಾಷ್ ಟ್ಯಾಗ್ ದೇಶದ ಇಂದಿನ ಟ್ರೆಂಡಿಂಗ್ ಹ್ಯಾಷ್ ಟ್ಯಾಗ್ ಗಳಲ್ಲಿ ಐದನೇ ಸ್ಥಾನದಲ್ಲಿದೆ! ಈ ಹ್ಯಾಷ್ ಟ್ಯಾಗ್ ನಲ್ಲಿ ಇದುವರೆಗೆ 13 ಸಾವಿರಕ್ಕೂಹೆಚ್ಚು ಟ್ವೀಟ್ ಗಳು ಪೋಸ್ಟ್ ಆಗಲ್ಪಟ್ಟಿವೆ.

ಈ ಬಾರಿಯ ಸ್ವಾತಂತ್ರ್ಯ ದಿನವನ್ನು ಪಾಕಿಸ್ಥಾನದಲ್ಲಿ ‘ಕಾಶ್ಮೀರ ಸಾರ್ವಭೌಮತೆ’ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಾಶ್ಮೀರಕ್ಕೆ ವಿಶೇಷ ಅಧಿಕಾರವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ಭಾರತ ಸರಕಾರ ರದ್ದುಗೊಳಿಸಿದ್ದನ್ನು ವಿರೋಧಿಸಿ ಪಾಕಿಸ್ಥಾನದಲ್ಲಿ ಕಾಶ್ಮೀರ ಬೆಂಬಲವಾಗಿ ಸಾರ್ವಭೌಮತಾ ದಿನಾಚರಣೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ‘ಕಾಶ್ಮೀರ್ ಬನೇಗಾ ಪಾಕಿಸ್ಥಾನ್’ (ಕಾಶ್ಮೀರ ಪಾಕಿಸ್ಥಾನಕ್ಕೆ ಸೇರುತ್ತದೆ) ಎಂಬ ತಲೆಬರಹವುಳ್ಳ ಬರಹಗಳನ್ನು ಇಂದಿನ ಸಾರ್ವಭಾಮತೆ ದಿನಾಚರಣೆಯ ಸಂದರ್ಭದಲ್ಲಿ ಬಳಸಲಾಗುತ್ತಿದೆ.

ಪಾಕಿಸ್ಥಾನದ ಈ ಅತಿರೇಕದ ವರ್ತನೆಗೂ ಟ್ವಿಟ್ಟರ್ ನಲ್ಲಿ ಭಾರತೀಯರು ಖಾರವಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಹುಟ್ಟು ಹಬ್ಬದ ಶುಭಾಶಯಗಳು ಮಗನೇ, ನಮ್ಮಂತಹ ಅಪ್ಪನನ್ನು ಪಡೆಯಲು ನೀನು ಪುಣ್ಯ ಮಾಡಿರಬೇಕು’ ಎಂದು ಕೆಲವು ಟ್ವಿಟ್ಟರಿಗರು ಪಾಕಿಸ್ಥಾನಕ್ಕೆ ಸ್ವಾತಂತ್ರ್ಯದ ಶುಭಾಶಯ ಕೋರಿದ್ದಾರೆ.

ಇದಲ್ಲದೇ #BalochistanSolidarityDay ಮತ್ತು #14AugustBlackDay ಎಂಬ ಹ್ಯಾಷ್ ಟ್ಯಾಗ್ ಗಳೂ ಸಹ ಟ್ವಿಟ್ಟರ್ ನಲ್ಲಿ ಸದ್ದುಮಾಡುತ್ತಿವೆ. ಇವೆರಡೂ ಹ್ಯಾಷ್ ಟ್ಯಾಗ್ ಗಳಲ್ಲಿ ಇದುವರೆಗೂ ಕ್ರಮವಾಗಿ 1 ಲಕ್ಷ ಮತ್ತು 54 ಸಾವಿರ ಟ್ವೀಟ್ ಗಳು ಪೋಸ್ಟ್ ಮಾಡಲ್ಪಟ್ಟಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ