H-1Bವೀಸಾ ನೀತಿ ಬದಲಿಲ್ಲ; ಅಮೆರಿಕದ ಭಾರತೀಯ ಟೆಕ್ಕಿಗಳಿಗೆ ರಿಲೀಫ್

Team Udayavani, Jan 9, 2018, 1:24 PM IST

Tech.jpg

ವಾಷಿಂಗ್ಟನ್:ಭಾರತೀಯ ಟೆಕ್ಕಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ, ಹೌದು ಭಾರತ ಸೇರಿದಂತೆ ವಿದೇಶಿ ತಂತ್ರಜ್ಞರು, ವೃತ್ತಿಪರರಿಗೆ ಉದ್ಯೋಗ ದೊರಕಿಸಿ ಕೊಡುವ ಎಚ್ 1 ಬಿ ವೀಸಾ ಹೊಂದಿರುವವರು ದೇಶ ಬಿಟ್ಟು ತೆರಳಬೇಕೆಂಬ ಯಾವ ಪ್ರಸ್ತಾಪವನ್ನು ಟ್ರಂಪ್ ಆಡಳಿತ ಸದ್ಯಕ್ಕೆ ಪರಿಗಣಿಸುತ್ತಿಲ್ಲ ಎಂದು ಮಂಗಳವಾರ ತಿಳಿಸಿದೆ.

ಭಾರತೀಯ ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್ 1ಬಿ ವೀಸಾ ವಿಸ್ತರಣೆಗೆ ಕಡಿವಾಣ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧತೆ ನಡೆಸಿದ್ದರು. ಇದರಿಂದಾಗಿ 7,50,000 ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು.

ಎಚ್ 1ಬಿ ವೀಸಾ ಹೊಂದಿರುವವರು ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಭೀತಿಗೆ ತೆರೆ ಬಿದ್ದಿರುವುದಾಗಿ ವರದಿ ವಿವರಿಸಿದೆ.

ಅಮೆರಿಕಾದಲ್ಲಿರುವವರಿಗೆ ಉದ್ಯೋಗ ದೊರಕಿಸಿಕೊಡುವ ಸಿದ್ಧತೆ ನಡೆಸಿರುವ ಟ್ರಂಪ್, ವಿದೇಶಿ (ಭಾರತ ಸೇರಿದಂತೆ) ಐಟಿ ಉದ್ಯೋಗಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದರು. ಇದರಿಂದಾಗಿ ಅಮೆರಿಕ ಎಚ್ 1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿಗೊಳಿಸಿತ್ತು. ಅಮೆರಿಕದ ಎಚ್ 1 ಬಿ ವೀಸಾದ ಹೊಸ ನೀತಿಯಿಂದಾಗಿ ಭಾರತೀಯ ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋಗೆ ಭಾರೀ ಹೊಡೆತ ಬೀಳಲಿತ್ತು.

ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್ 1 ಬಿ ವೀಸಾ ನಿಯಮ ರದ್ದುಪಡಿಸಬೇಕೆಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆ ವೇಳೆಯೇ ಹೇಳಿಕೆ ನೀಡಿದ್ದರು.

ಎಚ್1 ಬಿ ವೀಸಾ ಪಡೆಯುವವರು ಕನಿಷ್ಠ 1,30, 000 ಲಕ್ಷ ಅಮೆರಿಕನ್ ಡಾಲರ್(ಅಂದಾಜು ವರ್ಷಕ್ಕೆ 8 ಕೋಟಿ) ಸಂಬಳ ಹೊಂದಿರಬೇಕೆಂದು ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿತ್ತು. ಇದು ಈ ಹಿಂದಿನ ನಿಯಮಕ್ಕಿಂತ ದುಪ್ಪಟ್ಟಾಗಿದ್ದು, ಇದರಿಂದ ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ ನೀಡಲಿದೆ ಎಂದು ವಿಶ್ಲೇಷಿಸಲಾಗಿತ್ತು. ಎಚ್1 ಬಿ ವೀಸಾದಿಂದ ವಿದೇಶಿ(ಭಾರತ ಸೇರಿದಂತೆ)ಗರಿಗೆ ಉದ್ಯೋಗ ಕಲ್ಪಿಸಿಕೊಡುತ್ತಿರುವುದಕ್ಕೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ಹೊಸ ತಿದ್ದುಪಡಿ ಮಸೂದೆ ಮಂಡಿಸಲಾಗಿತ್ತು.

ಏತನ್ಮಧ್ಯೆ ಎಚ್ 1ಬಿ ವೀಸಾ ಅವಧಿ ವಿಸ್ತರಣೆಗೆ ಕಡಿವಾಣ ಹಾಕುವ ನಿರ್ಧಾರಕ್ಕೆ ಅಮೆರಿಕದ ಸೆನೆಟ್ ನಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗಿತ್ತು, ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅಧ್ಯಕ್ಷ ಟ್ರಂಪ್ ಅವರ ಜತೆ ಚರ್ಚಿಸಿ ಇಂತಹ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಟಾಪ್ ನ್ಯೂಸ್

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಇಂಟರ್‌ನ್ಯಾಶನಲ್‌ ಲೀಗ್‌ ಟಿ20: ಶಾರ್ಜಾ ವಾರಿಯರ್ ತಂಡದಲ್ಲಿ ಸ್ಟಾರ್‌ ಆಟಗಾರರು

ಇಂಟರ್‌ನ್ಯಾಶನಲ್‌ ಲೀಗ್‌ ಟಿ20: ಶಾರ್ಜಾ ವಾರಿಯರ್ ತಂಡದಲ್ಲಿ ಸ್ಟಾರ್‌ ಆಟಗಾರರು

ಭಾರತೀಯ ಏಕದಿನ ತಂಡಕ್ಕೆ ಜೂಲನ್‌ ಗೋಸ್ವಾಮಿ ಪುನರಾಗಮನ

ಭಾರತೀಯ ಏಕದಿನ ತಂಡಕ್ಕೆ ಜೂಲನ್‌ ಗೋಸ್ವಾಮಿ ಪುನರಾಗಮನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಕಾಶ್ಮೀರ ವಿವಾದ ಕೆದಕಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್

ಮತ್ತೆ ಕಾಶ್ಮೀರ ವಿವಾದ ಕೆದಕಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

ಫಿನ್ ಲ್ಯಾಂಡ್ ಯುವ ಪ್ರಧಾನಿ ಭರ್ಜರಿ ಪಾರ್ಟಿ, ಡ್ಯಾನ್ಸ್; ವಿಡಿಯೋ ವೈರಲ್, ವಿಪಕ್ಷ ಟೀಕೆ

Video;ಫಿನ್ ಲ್ಯಾಂಡ್ ಯುವ ಪ್ರಧಾನಿ ಭರ್ಜರಿ ಪಾರ್ಟಿ,ಡ್ಯಾನ್ಸ್;ವಿಡಿಯೋ ವೈರಲ್, ವಿಪಕ್ಷ ಟೀಕೆ

thumb 3 america

ವಿಸಿಟರ್‌ ವೀಸಾ ವಿಳಂಬ

tdy-13

ಟ್ರಂಪ್‌ ಭೇಟಿಗೆ 38 ಲಕ್ಷ ರೂ. ವೆಚ್ಚ!

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.