ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕ

Team Udayavani, Oct 9, 2019, 4:11 AM IST

ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕಕಾಲೇಜು ಜೀವನದಲ್ಲಿ ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವ‌ಹಿಸುವುದು ಸಾಮಾನ್ಯ. ಆದರೆ ಕೆಲವರು ಯಾಕೆ ಅದಕ್ಕೆಲ್ಲಾ ಸೇರಬೇಕು ಎಂದು ಸುಮ್ಮನಾಗುತ್ತಾರೆ. ಅದೇ ರೀತಿ ಶಾಲಾ ಜೀವನದಿಂದ ಹಿಡಿದು ಕಾಲೇಜು ಮುಗಿಯುವವರೆಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು ಸಾಮಾನ್ಯ. ಆದರೆ ಅದರಲ್ಲಿ ಭಾಗವಹಿಸುವವರ ಸಂಖ್ಯೆ ಮಾತ್ರ ವಿರಳ.

ಪ್ರಬಂಧ ಬರೆಯಲು ಎಲ್ಲರಿಗೂ ಇಷ್ಟವಿರುವುದಿಲ್ಲ ಆದರೆ ಅದರಿಂದ ಹಲವು ಅನೂಕೂಲಗಳಿವೆ. ಅದೆಂತಹ ಅನುಕೂಲ ಎಂಬ ಕೂತೂಹಲವಿರುವುದು ಸಾಮಾನ್ಯ. ಪ್ರಬಂಧ ಬರೆಯುವುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ.

ಶೈಕ್ಷಣಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆೆ. ಪ್ರಬಂಧ ಬರೆಯುವುದರಿಂದ ಇರುವ ಅನುಕೂಲಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಿಷಯಗಳ ಕ್ರೋಡೀಕರಣ
ಒಂದು ಪ್ರಬಂಧ ಬರೆಯಬೇಕಾದರೆ ಹಲವು ರೀತಿಯ ಪುಸ್ತಕಗಳನ್ನು ಓದಬೇಕಾಗುತ್ತದೆ. ಆಗ ಹೊಸ ವಿಷಯಗಳ ಪರಿಚಯವಾಗುತ್ತದೆ. ಪ್ರಬಂಧಕ್ಕೆ ಪೂರಕವಾದಂತಹ ಮಾಹಿತಿಗಳು ದೊರಕುತ್ತವೆ. ಹಲವು ಪುಸ್ತಕಗಳು ನೆನಪಿನ ಶಕ್ತಿಯನ್ನು ಹೆಚ್ಚಿಸಿ ಬೇರೆ ಬೇರೆ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆೆ. ಓದುವುದು ಮಾತ್ರವಲ್ಲದೆ ಬೇರೆ ಬೇರೆ ಕಡೆಗಳಿಂದ ವಿಷಯ ಸಂಪಾದಿಸಿಕೊಳ್ಳಬಹುದು. ಇದರಿಂದ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬಹುದು.

ವಿಷಯ ಪ್ರಸ್ತುತಿ
ವಿದ್ಯಾರ್ಥಿಗಳು ಹೇಗೆ ಒಂದು ವಿಷಯವನ್ನು ಪ್ರಸ್ತುತ ಪಡಿಸಬೇಕೆನ್ನುವುದನ್ನು ಪ್ರಬಂಧ ಕಲಿಸಿಕೊಡುತ್ತದೆ. ಒಂದು ವಿಷಯವನ್ನು ಹೇಗೆ ಆರಂಭಿಸಬೇಕು, ಹೇಗೆ ಆರಂಭಿಸಿದರೆ ಉತ್ತಮ ಮತ್ತು ಅದಕ್ಕೆ ಪೂರಕವಾದ ಅಂಶಗಳನ್ನು ನೀಡುವುದು ಹೇಗೆ ಎಂಬುದನ್ನು ಮನಗಾಣಲು ಸಹಾಯ ಮಾಡುತ್ತದೆ. ಇದರಿಂದ ಒಬ್ಬ ವಿದ್ಯಾರ್ಥಿ ತಾನು ಹೇಗೆ ಒಂದು ವಿಷಯವನ್ನು ಪ್ರಸ್ತುತಪಡಿಸಬಹುದು ಎಂಬುದನ್ನು ತಿಳಿದುಕೊಳ್ಳುತ್ತಾನೆ.

ಭಾಷಾ ಪ್ರೌಢಿಮೆ
ಇವೆಲ್ಲವುದರ ಹೊರತಾಗಿ ಪ್ರಬಂಧ ಬರೆಯುವುದರಿಂದ ವಿದ್ಯಾರ್ಥಿ ತನ್ನ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸಿಕೊಳ್ಳಬಹುದು. ಪ್ರಬಂಧ ಬರೆಯುವಾಗ ಬಳಸುವ ಪದಗಳು, ಅದು ಯಾವ ಅರ್ಥ ನೀಡಿದರೆ ಹೆಚ್ಚು ಸೂಕ್ತ, ಪದ ಬಳಕೆ ಯಾವುದು ಸರಿ? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಪ್ರಬಂಧ ಉತ್ತರ ನೀಡುತ್ತದೆ. ಒಬ್ಬ ವಿದ್ಯಾರ್ಥಿ ಹೆಚ್ಚು ಹೆಚ್ಚು ಬರೆಯುತ್ತಾ ಹೋದಂತೆ ಭಾಷೆಯ ಪ್ರೌಢಿಮೆ ಹೆಚ್ಚುತ್ತದೆ. ಹೀಗೆ ಪ್ರಬಂಧ ಬರೆಯುವುದರಿಂದ ವಿದ್ಯಾರ್ಥಿಯ ಕೌಶಲ ವೃದ್ಧಿ ಯಾಗುವುದಲ್ಲದೆ ಅವರ ಸಾಮರ್ಥ್ಯ ಕೂಡ ಹೆಚ್ಚುತ್ತದೆ

ಉತ್ತಮ ಬರೆವಣಿಗೆ
ಪ್ರಬಂಧ ಬರೆಯುವ ರೂಢಿ ಬೆಳೆಸಿಕೊಂಡಲ್ಲಿ ಸರ್ವೇ ಸಾಮಾನ್ಯವಾಗಿ ಉತ್ತಮ ಬರವಣಿಗೆಗೆ ಸಹಕಾರಿ. ಅದಲ್ಲದೆ ಇದು ಕಾರ್ಯಕ್ಷಮತೆಯನ್ನು ಇಮ್ಮಡಿಗೊಳಿಸುತ್ತದೆ. ಹೆಚ್ಚು ಹೆಚ್ಚು ಬರೆಯುವುದರಿಂದ ಅಕ್ಷರಗಳು ಸುಂದರವಾಗಿ ಮೂಡುವುದಲ್ಲದೆ ಬರವಣಿಗೆಯ ವೇಗ ಕೂಡ ಹೆಚ್ಚುತ್ತದೆ.

ಪ್ರೀತಿ ಭಟ್‌ ಗುಣವಂತೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ....

  • ಕಾಮಿಕ್‌ ಆರ್ಟ್‌ ಅಥವಾ ಕಾಟೂìನ್‌ ಎಂಬುದು ಒಂದು ಕಲೆ. ಚಿತ್ರಗಳ ಮೂಲಕ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುವುದು ಕಾಮಿಕ್‌ ಆರ್ಟ್‌ನ ವೈಶಿಷ್ಟ. ಹಾಸ್ಯ ಮಿಶ್ರಿತ...

  • ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಸಾಮಾನ್ಯ, ಉತ್ತಮ ಮತ್ತು ಅತ್ಯುತ್ತಮ ಎಂದು ಗುರುತಿಸುವುದು ಅವರ ಜ್ಞಾನ, ಶಕ್ತಿ, ಸಾಮರ್ಥ್ಯಗಳ ಆಧಾರದ ಮೇಲೆ. ಹಾಗಂತ ಹುಟ್ಟುವಾಗಲೆ...

  • ಮಾಡಿದ ಅಡುಗೆಯನ್ನು ಸವಿಯುವುದು ಮಾತ್ರವಲ್ಲ ರುಚಿಕರ ಅಡುಗೆ ಮಾಡುವುದು ಅನೇಕರಿಗೆ ಖುಷಿಯ ಸಂಗತಿ. ಮನೆ ಮಂದಿಗೆಲ್ಲ ರುಚಿಯಾದ ಆಹಾರ ಸಿದ್ಧಪಡಿಸಿಕೊಡುವುದು...

  • ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌ಮದರಂಗಿಗೆ ಭಾರತದ ಸಂಪ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಹಾಗಾಗಿ ಮದರಂಗಿಗೆ ನಮ್ಮಲ್ಲಿ ಆದ್ಯತೆ ಹೆಚ್ಚಿದೆ. ಮದುವೆ...

ಹೊಸ ಸೇರ್ಪಡೆ