ಆಂತರಿಕ ವಿನ್ಯಾಸಗಾರರಿಗಿದೆ ಅಪಾರ ಅವಕಾಶ

Team Udayavani, May 8, 2019, 5:50 AM IST

ಮನೆ ಕಟ್ಟುವುದು ಎಷ್ಟು ಮುಖ್ಯವೋ, ಅದಕ್ಕೆ ಪೂರಕವಾಗಿ ಅದನ್ನು ಸಿಂಗರಿಸುವುದು ಅಷ್ಟೇ ಮುಖ್ಯ. ಹೀಗಾಗಿ ಮನೆಯ ಸಿಂಗಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚುತ್ತಿದೆ. ಮನೆಗೆ ಯಾವ ಬಣ್ಣ ನೀಡಿದರೆ ಸೂಕ್ತ, ಲೈಟಿಂಗ್‌ ಹೇಗೆ ಇರಬೇಕು ಎಂಬುದನ್ನು ಕ್ರಿಯಾತ್ಮಕವಾಗಿ ವಿನ್ಯಾಸಕಾರ ತಿಳಿಯಪಡಿಸುತ್ತಾನೆ.

ಒಳಾಂಗಣ ವಿನ್ಯಾಸಕಾರರ ಕರ್ತವ್ಯಗಳು
ಹೊಸ ಹೊಸ ಯೋಜನೆಗಳನ್ನು ತೆಗೆದುಕೊಂಡು ಗ್ರಾಹಕನಿಗೆ ಬೇಕಾದ ರೀತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡುವುದಲ್ಲದೆ ಇರುವ ಜಾಗದಲ್ಲಿ ಪೀಠೊಪಕರಣ, ನೆಲಹಾಸು ಮುಂತಾದವುಗಳನ್ನು ಮನೆಗಳಲ್ಲಿ ಹೇಗೆ ಜೋಡಣೆ ಮಾಡಬೇಕು ಎಂದು ಅರಿತು ಅದಕ್ಕೆ ಆಗುವ ಮೊತ್ತವನ್ನು ಅಂದಾಜು ಮಾಡುವುದು. ಯೋಜನೆ ಪೂರ್ಣಗೊಂಡ ಬಳಿಕ ಗ್ರಾಹಕರು ತೃಪ್ತಿ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಎಲ್ಲಕ್ಕಿಂತ ಮಖ್ಯ . ಇದರಿಂದ ವೃತ್ತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ.

ಶಿಕ್ಷಣ
ವಿನ್ಯಾಸಕಾರರಾಗಲು ಸ್ನಾತಕೋತ್ತರ ಪದವಿಗಳಿದ್ದು ಡಿಗ್ರಿಯಲ್ಲಿ ಇದನ್ನು ಒಂದು ಪ್ರತ್ಯೇಕ ವಿಷಯವಾಗಿ ತೆಗೆದುಕೊಳ್ಳಬಹುದು ಇಲ್ಲವಾದಲ್ಲಿ ಟ್ರೇನಿಂಗ್‌ ಕೋರ್ಸ್‌ಗಳನ್ನು ಆಸಕ್ತಿಗೆ ಪೂರಕವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ಪೂರಕವಾಗಿ ಹಲವಾರು ಕಾಲೇಜುಗಳಿದ್ದು ಅರ್ಜಿ ಸಲ್ಲಿಸುವಾಗ ನಿಮ್ಮಲ್ಲಿರುವ ಕಲಾತ್ಮಕ ಸಾಮಥ್ಯದ ರೇಖಾಚಿತ್ರಗಳು ಮತ್ತು ಇತರ ಉದಾಹರಣೆಗಳನ್ನು ಸಲ್ಲಿಸಬೇಕಾಗುತ್ತದೆ. ಇದರ ಆದಾರದ ಮೇಲೆ ನಿಮ್ಮ ಕ್ರೀಯಾಶೀಲತೆಯನ್ನು ಗಮನಿಸಲಾಗುತ್ತದೆ.

ಒಳಾಂಗಣ ವಿನ್ಯಾಸಗಳಲ್ಲಿ ಅನೇಕ ವಿಧಗಳಿದ್ದು ಅವುಗಳಲ್ಲಿ 3 ಅತ್ಯಂತ ಹೆಚ್ಚು ಜನಪ್ರಿಯತೆ ಹೊಂದಿದ್ದು ಇದಕ್ಕೆ ಸಬಂಧಪಟ್ಟ ವಿನ್ಯಾಸಕಾರರಿಗೆ ಇತ್ತೀಚಿನ ದಿನಗಳಲ್ಲಿ ಬಲು ಬೇಡಿಕೆ ಇದೆ. ಕಾರ್ಪೊರೇಟ್ ವಿನ್ಯಾಸಕಾರರು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಕ್ರಿಯಾತ್ಮಕ ಮತ್ತು ಸುರಕ್ಷಿತವಾಗಿರುವಂತಹ ವಿನ್ಯಾಸವನ್ನು ರಚಿಸುತ್ತಾರೆ, ಇದರಲ್ಲಿ ಕಂಪೆನಿಯ ಬ್ರಾಂಡ್‌ ಅನ್ನು ಪ್ರಮೋಟ್ ಮಾಡುವುದು ಮುಖ್ಯವಾಗಿರುತ್ತದೆ.

ಹೇಲ್ತ್ಕೇರ್‌ ವಿನ್ಯಾಸಕಾರರು ಆರೋಗ್ಯ ಕೇಂದ್ರಗಳು, ಚಿಕಿತ್ಸಾಲಯ, ವೈದ್ಯರ ಕಚೇರಿ, ಆಸ್ಪತ್ರೆ, ವಸತಿ ಸೌಕರ್ಯಗಳಲ್ಲಿ ವಿನ್ಯಾಸಗೊಳಿಸುವುದು ಮತ್ತು ನವೀಕರಿಸುವುದು ಮುಖ್ಯ ಕೆಲಸವಾಗಿದ್ದು ಇದಕ್ಕೆಂದೇ ವೃತ್ತಿಪರ ತರಗತಿ ಕೂಡ ಇರುತ್ತದೆ. ಇನ್ನೊಂದು ಅಡುಗೆಮನೆ ವಿನ್ಯಾಸಕಾರರು ಮನೆಯ ರೂಮ್‌ಗಳ ವಿನ್ಯಾಸ ಮಾಡುವುದು ಇವರ ಕೆಲಸವಾಗಿದ್ದು ಯಾವ ರೀತಿಯಲ್ಲಿ ವಿನ್ಯಾಸ ಮಾಡುವುದು ಎಂಬುದು ಅವರ ಕ್ರಿಯಾಶೀಲತೆಗೆ ಬಿಟ್ಟ ವಿಚಾರವಾಗಿರುತ್ತದೆ.

ಅರೆಕಾಲಿಕ ಉದ್ಯೋಗಕ್ಕೆ ಅವಕಾಶ
ಬೇರೆ ಕೆಲಸಗಳನ್ನು ನಿರ್ವಹಿಸುತ್ತಿದ್ದರೂ ಅಥವಾ ಓದುತ್ತಲೇ ಈ ಕೆಲಸವನ್ನು ನಿರ್ವಹಿಸಬಹುದು ಇದಕ್ಕೆ ಕ್ರೀಯಾಶೀಲತೆ ಮುಖ್ಯವಾಗಿದ್ದು ನಿಮ್ಮ ಯೋಚನೆಗಳು ಮತ್ತು ಅದಕ್ಕೆ ತಕ್ಕಂತೆ ನೀವು ಸಂಯೋಜಿಸುವ ವಿಧಾನ ಇಲ್ಲಿ ಮುಖ್ಯವಾಗಿರುತ್ತದೆ.

•ಪ್ರೀತಿ ಭಟ್, ಗುಣವಂತೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಇಂಡಿ: ಇಂಡಿ ತಾಲೂಕಿನ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ನಿಮಿತ್ತ ಭಕ್ತರು ಸೋಮವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ತೈಲದ ದೀಪ ಬೆಳಗಿ...

  • ಕುದೂರು: ಕುದೂರು ಸಾರ್ವಜನಿಕರ ಹೆರಿಗೆ ಆಸ್ಪತ್ರೆ ಪಕ್ಕದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಕಾರ್ಯ ನೆಡೆಯುತ್ತಿದೆ. ಈ ಹೊಸ ಆಸ್ಪತ್ರೆಯೊಂದಿಗೆ ಹೆರಿಗೆ ಆಸ್ಪತ್ರೆ...

  • ಬೀದರ: ಜನತಾ ಸ್ಪಂದನೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸ್ಥಾಪಿಸಿರುವ ದೂರುಗಳ ಪೆಟ್ಟಿಗೆಯಲ್ಲಿ...

  • ಚನ್ನಪಟ್ಟಣ: ಕಳೆದ ಒಂದೂವರೆ ವರ್ಷದಿಂದಲೂ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿಫ‌ಲಾನುಭವಿಗಳಿಗೆ ಹಣ ಬಿಡುಗಡೆಯಾಗದೆ, ಸಮಸ್ಯೆ ಎದುರಿಸುತ್ತಿದ್ದಾರೆ...

  • ಮಂಡ್ಯ: ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಸರ್ಕಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಜಾರಿಗೆ...