ಶೆಫ್ ಈ ವೃತ್ತಿ ಅವಕಾಶಗಳ ಅಗರ

Team Udayavani, Oct 9, 2019, 5:25 AM IST

ಮಾಡಿದ ಅಡುಗೆಯನ್ನು ಸವಿಯುವುದು ಮಾತ್ರವಲ್ಲ ರುಚಿಕರ ಅಡುಗೆ ಮಾಡುವುದು ಅನೇಕರಿಗೆ ಖುಷಿಯ ಸಂಗತಿ. ಮನೆ ಮಂದಿಗೆಲ್ಲ ರುಚಿಯಾದ ಆಹಾರ ಸಿದ್ಧಪಡಿಸಿಕೊಡುವುದು ಕೆಲವರಿಗೆ ಪ್ರವೃತ್ತಿಯಾದರೆ, ಆ ಪ್ರವೃತ್ತಿಯನ್ನೇ ವೃತ್ತಿಯಾಗಿಸಿ ಆಹಾರ ತಯಾರಿಸುವಿಕೆಯನ್ನು ಸಂಭ್ರಮಿಸು ವವರು ಅನೇಕರಿದ್ದಾರೆ. ವೃತ್ತಿಗಳಲ್ಲಿ ಆಸಕ್ತಿದಾಯಕ, ಪ್ರತಿದಿನ ಹೊಸತನದಿಂದ ಕೂಡಿರುವ ವೃತ್ತಿಯೆಂದರೆ ಶೆಫ್ ವೃತ್ತಿ…

ಈ ಭೂಮಿಯಲ್ಲಿ ಹುಟ್ಟಿದ ಪ್ರತೀ ಮನುಷ್ಯನಲ್ಲಿಯೂ ಯಾವುದಾದರೊಂದು ಕಲೆ ಸುಪ್ತವಾಗಿರುತ್ತದೆ. ಕೆಲವೊಮ್ಮೆ ಅದೇ ಕಲೆ ವೃತ್ತಿ ಜೀವನಕ್ಕೆ ಅವಕಾಶವನ್ನು ಸೃಷ್ಟಿಸಿಕೊಟ್ಟು ಜೀವನಾಧಾರವಾಗಿಯೂ ಕೈಹಿಡಿಯುತ್ತವೆ. ಅಂತಹ ವೃತ್ತಿಗಳ ಪೈಕಿ ಅಡುಗೆ ವೃತ್ತಿಯೂ ಒಂದು.

ಈಗೆಲ್ಲ ಸಮಾರಂಭಗಳು ಮನೆಯ ಬದಲಾಗಿ ಹಾಲ್‌ಗ‌ಳಲ್ಲೇ ನಡೆಯುತ್ತದೆ. ಹಾಲ್‌ಗ‌ಳಲ್ಲಿ ನಡೆಯುವ ಯಾವುದೇ ಸಮಾರಂಭಗಳಲ್ಲಿಯೂ ಅಡುಗೆ ಮಾಡಲು ವೃತ್ತಿಪರರನ್ನೇ ಆಯ್ಕೆ ಮಾಡುವುದು ಸದ್ಯದ ಟ್ರೆಂಡ್‌. ಹಾಗಾಗಿಯೇ ವೃತ್ತಿಯಾಗಿ ಅಡುಗೆ ಕೆಲಸವು ಹಲವಾರು ಅವಕಾಶಗಳನ್ನು ತೆರೆದಿಟ್ಟಿದೆ.

ಮದುವೆ, ನಿಶ್ಚಯ, ಮಗುವಿನ ನಾಮಕರಣ ಮುಂತಾದ ಸಮಾರಂಭಗಳಿಗೆ ನಗರ ಪ್ರದೇಶಗಳಲ್ಲಿ ಅಡುಗೆಗಾಗಿ ಪ್ರಸಿದ್ಧ ಅಡುಗೆಯವರನ್ನೇ ಕರೆಸಲಾಗುತ್ತದೆ. ಈ ಕೆಲಸಕ್ಕೆ ಕನಿಷ್ಠ 20 ಸಾವಿರ ರೂ.ಗಳಿಂದ ದಿನದ ಶುಲ್ಕ ಪಡೆಯುವುದು ಸದ್ಯ ಚಾಲ್ತಿಯಲ್ಲಿದೆ. ಇದನ್ನು ವೃತ್ತಿಯಾಗಿ ಅಥವಾ ಪ್ರವೃತ್ತಿಯಾಗಿ ತೆಗೆದುಕೊಂಡರೆ ಜೀವನಾಧಾರಕ್ಕೆ ಸಹಕಾರಿಯಾಗುತ್ತದೆ.

ಹೊಟೇಲ್‌ಗ‌ಳಲ್ಲಿ ಶೆಫ್‌ ಸೇವೆ
ಹೊಟೇಲ್‌ಗ‌ಳಲ್ಲಿ ಅಡುಗೆಯಲ್ಲಿ ಸಿದ್ಧ ಹಸ್ತ ಶೆಫ್‌ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಬೇಕಾದ, ರುಚಿಕರ ಅಡುಗೆ ತಯಾರಿಕೆಗೆ ಇವರು ಹೆಸರು ಪಡೆದುಕೊಳ್ಳುತ್ತಾರೆ ಮತ್ತು ಹೊಟೇಲ್‌ನ ಆದಾಯದ ಭಾಗ ಈ ಶೆಫ್‌ಗಳಾಗಿರುತ್ತಾರೆ. ಹೊಟೇಲ್‌ ಮ್ಯಾನೇಜ್‌ ಮೆಂಟ್‌ ಕೋರ್ಸ್‌ ಮುಗಿಸಿಯೂ ಶೆಫ್‌ ಉದ್ಯೋಗದಲ್ಲಿ ಪಳಗಿಸಿಕೊಂಡವರು ಅನೇಕರಿದ್ದಾರೆ. ಸ್ಟಾರ್‌ ಹೊಟೇಲ್‌ ಗಳಲ್ಲಿ ಶೆಫ್‌ಗಳ ಆವಶ್ಯಕತೆ ಹೆಚ್ಚಿದ್ದು, ಬದುಕು ಕಂಡುಕೊಳ್ಳಲು ರಹದಾರಿಯಾಗುತ್ತದೆ. ಸ್ಟಾರ್‌ ಹೊಟೇಲ್‌ ಗಳಲ್ಲಿಯೂ ಅಡುಗೆ ತಯಾರಕರಾಗಿ ಗುರುತಿಸಿಕೊಳ್ಳಲು ರುಚಿಕರ ಪಾಕ ತಯಾರಿಕಾ ಕಲೆ ಇದ್ದರಾಯಿತು.

ಯಾವ ವೃತ್ತಿಯೂ ಕನಿಷ್ಠವಲ್ಲ
ಯಾವ ವೃತ್ತಿಯೂ ಗರಿಷ್ಠವ‌ಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ, ತಾಳ್ಮೆ, ಛಲ ಮತ್ತು ಗುರಿ ಮುಟ್ಟುವ ಎದೆಗಾರಿಕೆ ಇದ್ದರಾಯಿತಷ್ಟೇ. ಹಿಡಿದ ಕೆಲಸವು ಕೈ ಹಿಡಿಯುವುದರಲ್ಲಿ ಸಂಶಯವೇ ಇಲ್ಲ. ಮನೆಯಲ್ಲಿ ರುಚಿಕರವಾದ ಅಡುಗೆ ತಯಾರಿಸುವ ವ್ಯಕ್ತಿಯೊಬ್ಬ ಬಹು ಬೇಡಿಕೆಯ ಅಡುಗೆ ತಯಾರಿಕನಾಗಿ ಬೆಳೆಯಬಲ್ಲ. ದಿನದ ಖರ್ಚಿಗೆ ಸಣ್ಣ ಹೊಟೇಲ್‌ ನಲ್ಲಿ ದುಡಿಯುತ್ತಿದ್ದವನೊಬ್ಬ ಆತನ ಶ್ರದ್ಧಾಪೂರ್ಣ ಕೆಲಸದಿಂದಾಗಿ ಶೆಫ್‌ ಸ್ಥಾನಕ್ಕೆ ಏರಬಲ್ಲ. ಅಭ್ಯಾಸಬಲ, ಆಸಕ್ತಿಯ ವಿಷಯವೇ ಅವನನ್ನು ಲಕ್ಷಾಂತರ ರೂ. ಆದಾಯಗಳಿಸುವ ವೃತ್ತಿಯಾಗಿ ಮಾಡಬಲ್ಲುದು ಎಂಬುದಕ್ಕೆ ಬಾಣಸಿಗರು ಸಾಕ್ಷಿಯಾಗಿದ್ದಾರೆ.

ಕ್ಯಾಟರಿಂಗ್‌ ವೃತ್ತಿ
ಇತ್ತೀಚೆಗೆ ಬಹು ಪ್ರಮುಖವಾಗಿರುವ ಇನ್ನೊಂದು ಅಡುಗೆ ಅವಕಾಶವೆಂದರೆ ಕ್ಯಾಟರಿಂಗ್‌ ವೃತ್ತಿ. ಕ್ಯಾಟರಿಂಗ್‌ ನಡೆಸುವುದು ಸದ್ಯದ ದಿನಗಳಲ್ಲಿ ಲಾಭದಾಯಕವೂ ಆಗಿದೆ. ನಗರ ಪ್ರದೇಶಗಳಲ್ಲಿ ರುಚಿಕರವಾದ ಅಡುಗೆ ತಯಾರಿಕಾ ಕ್ಯಾಟರಿಂಗ್‌ ಸಂಸ್ಥೆಯವರಿಗೆ ಬಹು ಬೇಡಿಕೆಯೂ ಇರುತ್ತದೆ. ಸಮಾರಂಭಗಳಲ್ಲಿ ನಿಗದಿಪಡಿಸಿದಷ್ಟು ಆಹಾರ ಪೂರೈಕೆಯ ಜವಾಬ್ದಾರಿ ಪೂರೈಸಿದರೆ ದಿನವೊಂದಕ್ಕೆ 30 ಸಾವಿರ ರೂ. ಗಳಿಂದ 1 ಲಕ್ಷ ರೂ. ಗಳವರೆಗೂ ಎಣಿಸಬಹುದು. ಪ್ಲೇಟ್‌ ಊಟಕ್ಕೆ 350 ರೂ. ಗಳಿಂದ 500 ರೂ. ಗಳವರೆಗೆ ನಿಗದಿಪಡಿಸಲಾಗುತ್ತದೆ. ಆದಾಯದ ಮೂಲವಾಗಿ ಕ್ಯಾಟರಿಂಗ್‌ ಕೈ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ ಎಂಬಂತೆ ಕ್ಯಾಟರಿಂಗ್‌ ಉದ್ಯಮ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿದೆ.

ಕೋರ್ಸ್‌ ಇದೆ
ಸ್ಟಾರ್‌ ಹೊಟೇಲ್‌ಗ‌ಳಲ್ಲಿ ಅಡುಗೆ ತಯಾರಿಕೆ, ವಿತರಣೆ, ನಿರ್ವಹಣೆ ಸಹಿತ ಎಲ್ಲ ಸ್ತರದ ಕೆಲಸಗಳಲ್ಲಿಯೂ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿದವರಿಗೆ ಅವಕಾಶಗಳಿರುತ್ತವೆ. ಇಲ್ಲಿ ವಿವಿಧ ಖಾದ್ಯಗಳ ತಯಾರಿಕೆ, ಹೊಸ ಪಾಕಗಳ ಸೃಷ್ಟಿ, ಅವುಗಳ ತಯಾರಿಕಾ ವಿಧಾನ ಸಹಿತ ಅಡುಗೆಯ ಸಮಸ್ತ ವಿಧಾನಗಳನ್ನು ಕಲಿಸಿಕೊಡಲಾಗುತ್ತದೆ. ಆಯ್ಕೆಯಾದ ಬಳಿಕ ತಿಂಗಳಿಗೆ 30 ಸಾವಿರ ರೂ. ಗಳಿಗೂ ಮಿಕ್ಕಿ ಆದಾಯ ಗಳಿಸುವ ಅವಕಾಶ ಈ ಕೋರ್ಸ್‌ ಕಲಿತರೆ ಸಿಗುತ್ತದೆ.
ಹೊಟೇಲ್‌ ಮ್ಯಾನೇಜ್‌ಮೆಂಟ್‌ ಕೇವಲ ಕೋರ್ಸ್‌ ಆಗಿರದೆ, ಪ್ರತ್ಯೇಕ ಕಾಲೇಜುಗಳೇ ಇದಕ್ಕಿವೆೆ. ಮಂಗಳೂರಿನಲ್ಲಿ ಶ್ರೀನಿವಾಸ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಕಾಲೇಜು, ಶ್ರೀದೇವಿ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಕಾಲೇಜು, ಸರೋಶ್‌ ಇನ್ಸ್ಟಿಟ್ಯೂಟ್‌ ಆಫ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌, ಲಕ್ಷ್ಮೀ ಮೆಮೋರಿಯಲ್‌ ಇನ್ಸ್ಟಿಟ್ಯೂಟ್‌ ಆಫ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಸಹಿತ ಹಲವಾರು ಕಾಲೇಜುಗಳು ಆಸಕ್ತರಿಗೆ ಅವಕಾಶದ ಹೆಬ್ಟಾಗಿಲನ್ನು ಸೃಷ್ಟಿಸಿಕೊಟ್ಟಿವೆ. ಗೃಹವಿಜ್ಞಾನ ಕೋರ್ಸ್‌ ‌ ಅಡುಗೆ ಪರಿಣತಿ ಸಾಧಿಸುವಲ್ಲಿ ಅವಕಾಶಗಳನ್ನು ಕೊಡುತ್ತಿದೆ.

– ಧನ್ಯಾ ಬಾಳೆಕಜೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಾಂಚಿ: ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಜಾರಿಯಲ್ಲಿದ್ದು ನಾಲ್ಕನೇ ಹಂತದ ಮತದಾನ ಸೋಮವಾರ ನಡೆಯುತ್ತಿದೆ.  ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಿಗಿ...

  • ಕೋಲ್ಕತಾ: ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌)ನಲ್ಲಿ ಕೇಂದ್ರ ಸರಕಾರ ತಾನು ಹೊಂದಿರುವ ಶೇ.28ರಷ್ಟು ಷೇರುಗಳನ್ನು ಮಾರುವ ಸಾಧ್ಯತೆ ಇದೆ. ಉಳಿದಿರುವ...

  • ಹೊಸದಿಲ್ಲಿ: ಉನ್ನಾವ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ಸೋಮವಾರ (ಡಿ.16) ತೀರ್ಪು ಪ್ರಕಟಿಸಲಿದೆ. ಬಿಜೆಪಿಯ...

  • "ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್‌, ನೀವು ಸುಮ್ಮನೆ...

  • ದರ್ಶನ್‌ ಅಭಿನಯದ "ಒಡೆಯ' ಚಿತ್ರದ ಆರ್ಭಟ ಜೋರಾಗಿದೆ. ಅದರಲ್ಲೂ ದರ್ಶನ್‌ ಅಭಿಮಾನಿಗಳಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಅಂಶಗಳು "ಒಡೆಯ'ದಲ್ಲಿರುವುದರಿಂದ...