ಮೌನವೇ ಎಲ್ಲವನ್ನೂ ಹೇಳಬಲ್ಲದು

Team Udayavani, Jun 17, 2019, 5:53 AM IST

ಪ್ರತಿದಿನ ನೀವು ಅಂದುಕೊಂಡ ಹಾಗೇ ಇರಬೇಕು ಎಂದೇನಿಲ್ಲ. ಒಂದು ದಿನ ಬೇಸರ ಅತಿಯಾಗಿ ಕಾಡಬಹುದು, ಕೆಲವೊಮ್ಮೆ ಕಾರಣವಿಲ್ಲದೆ ಮನಸ್ಸು ಚಂಚಲವಾಗಬಹುದು, ಖುಷಿ, ಸಂತೊಷಗಳಿರಬಹುದು. ಕಾರಣವನ್ನು ಹುಡುಕಿದರೂ ಅಲ್ಲೆಲ್ಲಾ ಕೇವಲ ನಮಗೇ ಅರ್ಥವಾಗದ ಶೂನ್ಯಗಳು, ಮೌನವಾದ ಕೆಲವು ದನಿಗಳೇ ಗೋಚರವಾಗಬಹುದು. ಇನ್ನೂ ತಾರ್ಕಿಕವಾಗಿ ಕೆದಕುತ್ತಾ ಹೋದರೆ ದಿವ್ಯ ಮೌನದೊಳಗಿನ ನೀರವತೆ ನಮ್ಮ ಈ ಭಾವನೆೆಗೆ ಕಾರಣವನ್ನು, ಸುಪ್ತ ಮನಸ್ಸಿನ ಪ್ರಶಾಂತತೆ ಮತ್ತು ಅಶಾಂತಿಯನ್ನು ನಮ್ಮ ಎದುರು ತೆರೆದಿಡುವ ಕೆಲಸವನ್ನು ಮಾಡುತ್ತದೆ.

ಒಂದೊಮ್ಮೆ ಕೋಪ ಬರಬಹುದು. ಆತುರದ ನಿರ್ಧಾರಗಳ ಮೂಲಕ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿಕೊಳ್ಳುವ ಸಂದರ್ಭಗಳೂ ನಮ್ಮೆದುರು ತಲೆದೋರಬಹುದು. ಕೋಪ ಕರಗಿದ ಮೇಲೆ ನಮ್ಮ ತಪ್ಪು ಒಪ್ಪುಗಳ ಸಣ್ಣ ಚಿತ್ರಣವೊಂದು ನಮ್ಮ ಕಣ್ಣ ಮುಂದೆ ಹಾಗೇ ಸುಳಿದು ಹೋಗುತ್ತದೆ. ಆಗ ನಮಗೆ ಅರಿವಾಗುತ್ತದೆ ನಮ್ಮ ಆತುರದ ಬುದ್ಧಿಯಿಂದ ನಾವು ಕಳೆದುಕೊಂಡದ್ದೆಷ್ಟು, ನಮ್ಮಲ್ಲಿ ಉಳಿಸಿಕೊಂಡದ್ದು ಎಷ್ಟು ಎಂದು. ಹೀಗೆ ಆತುರದ ಆಂತರ್ಯವನ್ನು ಬಗೆಯುವುದಕ್ಕಿಂತ, ನಮ್ಮ ಸುಪ್ತ ಮನಸ್ಸಿನ ಆಂತರ್ಯವನ್ನು ಅರಿಯುವುದನ್ನು ಆ ಕ್ಷಣಕ್ಕಾದರೂ ರೂಢಿಸಿಕೊಂಡಲ್ಲಿ ನಾವು ಉಳಿಸಿಕೊಳ್ಳುವುದರ ಮೌಲ್ಯ ಹೆಚ್ಚಾಗಬಹುದಲ್ಲವೇ ಎಂದು.

ಇದಕ್ಕೆ ಬೇಕಿರುವುದು ತಾಳ್ಮೆ. ಒಂದು ಸಮಸ್ಯೆಯಿಂದ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುವ ಬದಲು ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗ್ಗೆ ಒಂದಷ್ಟು ತಾಳ್ಮೆಯನ್ನು ಹೊಂದಿ ಯೋಚಿಸಿದಲ್ಲಿ ಅದೆಷ್ಟು ಬಾಂಧವ್ಯಗಳು ಗಟ್ಟಿಗೊಳ್ಳುವುದು ಸಾಧ್ಯ ಅಲ್ಲವೆ. ಸಮಯ ಎಲ್ಲವನ್ನೂ ಸರಿ ಪಡಿಸುತ್ತದೆ ಎನ್ನುವ ಕಾಯುವಿಕೆಯ ಗುಣವೇ ಗೌಣವಾದಲ್ಲಿ ಮಾತ್ರ ಬದುಕು ಬಲು ಕಷ್ಟ. ಹಾಗಾಗಿ ಮೌನ ಎಂಬ ನಿರಾಭರಣ ಸೌಂದರ್ಯವನ್ನು ತೊಟ್ಟುಕೊಂಡು ಜೀವಿಸುವುದನ್ನು ಕಲಿತಲ್ಲಿ ಸಾವೇ ನಮ್ಮ ಮುಂದೆ ಬಂದರೂ ಅದನ್ನು ನಗುತ್ತಲೆ ಸ್ವೀಕರಿಸುವ ಧೈರ್ಯ ನಮ್ಮದಾಗುತ್ತದೆ. ಮಾತು ಬೆಳ್ಳಿ ಮೌನ ಬಂಗಾರ. ಇದನ್ನು ಅರಿತು ನಡೆದಲ್ಲಿ ಬದುಕೇ ಶೃಂಗಾರ.

-  ಪ್ರೀತಿ ಭಟ್‌ ಗುಣವಂತೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ...

  • ಹೇರಳ ಆರೋಗ್ಯವರ್ಧಕ ಗುಣಗಳಿರುವ ದಾಳಿಂಬೆಯನ್ನು ಉಪಬೆಳೆಯಾಗಿ ಕೃಷಿ ಮಾಡಬಹುದು. ಮೂಲತಃ ಇರಾನ್‌ ದೇಶಕ್ಕೆ ಸೇರಿರುವ ದಾಳಿಂಬೆಯನ್ನು ಭಾರತದಲ್ಲೂ ಹಲವಾರು ವರ್ಷಗಳಿಂದ...

  • ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ...

  • "ಅರೇ ಇದೇನಿದು?'ಎಂದು ಯೋಚಿಸಿದ್ದೀರಾ?ತುಂಬಾ ಸರಳ. ಮನೆ ಸುತ್ತ ಮುತ್ತ ಜಾಗದಲ್ಲಿ ಗಿಡಗಳನ್ನು ಬೆಳೆಸಿದರಾಯಿತು. ಮನೆ ಚಿಕ್ಕದು, ಅಂಗಳ ಇಲ್ಲದಿದ್ದರೂ ಚಿಂತೆ ಇಲ್ಲ....

  • ಸಾಮಾನ್ಯವಾಗಿ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು, ಸುಂದರವಾಗಿ ಕಾಣಲು ಬಯಸುತ್ತಾರೆ. ಸೋಫಾ, ಲೈಟ್ಸ್‌, ಇನ್ನಿತರ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ವಿನ್ಯಾಸಗೊಳಿಸುತ್ತೇವೆ....

ಹೊಸ ಸೇರ್ಪಡೆ