ಮನೆ ಹೊರಗಿನ ಆಹಾರ ಆರೋಗ್ಯಕ್ಕೆ ಎಷ್ಟು ಉತ್ತಮ?
Team Udayavani, Mar 17, 2020, 4:28 AM IST
ಮನೆಯಲ್ಲಿ ಏನು ಮಾಡಿದರೂ ರುಚಿಕರವಲ್ಲ.ಆದರೆ ಅದೇ ಹೊರಗಿನ ಆಹಾರ ಎಲ್ಲರಿಗೂ ರುಚಿಕರ ಅನಿಸುತ್ತದೆ. ಅದೆಷ್ಟು ಉತ್ತಮ ಎನ್ನುವುದನ್ನು ಯೋಚಿಸದೆ ಹೊರಗಿನ ಆಹಾರಕ್ಕೆ ಗೊತ್ತಿಲ್ಲದೆಯೇ ಅಂಟಿಕೊಂಡು ಬಿಡುತ್ತೇವೆ. ಪ್ರತಿದಿನ ಹೊರಗಿನ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
1 ಬೊಜ್ಜಿಗೆ ಕಾರಣವಾಗಬಹುದು
ಹೊರಗಿನ ಆಹಾರವನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುವ ಸಾಧ್ಯತೆಯಿದೆ. ಮನೆಯ ಆಹಾರಕ್ಕೆ ಹೆಚ್ಚು ಎಣ್ಣೆ, ಸೋಡಾ ಪುಡಿಗಳನ್ನು ಬಳಕೆ ಮಾಡದೇ ಇರುವುದರಿಂದ ಆರೊಗ್ಯ ಕಾಪಾಡಿಕೊಳ್ಳಲು ಸಾಧ್ಯ.
2 ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚು
ಇಂದು ಫುಡ್ ಪಾಯಿಸನ್ ಎಂದು ಹೇಳುತ್ತಾ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಹೆಚ್ಚು. ಮನೆ ಹೊರಗಿನ ಆಹಾರ ಸೇವನೆಯಿಂದ ಈ ರೀತಿಯ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚು.
3 ತಿನ್ನುವ ಪ್ರಮಾಣ ಕಡಿಮೆಯಾಗ ಬಹುದು.
ಪ್ರತಿಯೊಬ್ಬರೂ ತಿನ್ನುವ ಆಹಾರ ನಿರ್ದಿಷ್ಟ ಪ್ರಮಾಣದ್ದಾಗಿರುತ್ತದೆ. ಆದರೆ ಹೊರಗಿನ ಆಹಾರ ಸೇವನೆ ಮಾಡಲು ಆರಂಭಿಸಿದರೆ ಆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಹೊರಗಿನ ಆಹಾರಕ್ಕೆ ಸೋಡಾ ಪುಡಿ ಹಾಕುವುದರಿಂದ ಬೇಗನೆ ಹಸಿವು ನಿಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮನೆ ಹೊರಗಡೆ ಆಹಾರ ವೀಕೆಂಡ್‌ಗಳಿಗೆ, ಪಾರ್ಟಿಗಳಿಗೆ ಮಾತ್ರ ಸೀಮಿತವಾಗಿದರೆ ಪ್ರತಿದಿನ ಹೊರಗಿನ ಆಹಾರಕ್ಕೆ ಒಗ್ಗಿಕೊಂಡರೆ ಅಷ್ಟೇ ಬೇಗ ಆರೋಗ್ಯ ಹದಗೆಡುವ ಸಾಧ್ಯತೆಯಿದೆ.
ಹೊರಗಿನ ಆಹಾರ ಸೇವನೆ ಮಾಡುವವರು ಆದಷ್ಟು ಆರೊಗ್ಯಕರ ಆಹಾರ ಸೇವನೆ ಮಾಡುವುರಿಂದ ಈ ಸಮಸ್ಯೆಗಳು ಕಡಿಮೆಯಾಗಬಹುದು. ಎಣ್ಣೆ ಪದಾರ್ಥಗಳು, ಕೆಲವೊಂದು ಮಸಾಲೆಗಳು ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುವುದರಿಂದ ಅವುಗಳನ್ನು ಪ್ರತಿದಿನ ಸೇವನೆ ಮಾಡುವುದರನ್ನು ಕಡಿಮೆಗೊಳಿಸಬಹುದು.