ಮಹಾಮಸ್ತಕಾಭಿಷೇಕದಲ್ಲಿ ಅನಾವರಣಗೊಂಡ ಪಂಚಮಹಾವೈಭವ 

Team Udayavani, Mar 1, 2019, 12:30 AM IST

v-12.jpg

ವೃಷಭ ದೇವನ ಸಮೃದ್ಧಿಯ ಆಡಳಿತ, ಮಕ್ಕಳ ನಾಮಕರಣ, ಬಾಲ ಲೀಲೋತ್ಸವ, ಸ್ತ್ರೀ ಶಿಕ್ಷಣದ ಮೂಲಕ ಬ್ರಾಹ್ಮಿ-ಸುಂದರಿ ಸಹಿತ ಮಕ್ಕಳಿಗೆ ಶಿಕ್ಷಣ, ಬಳಿಕ ಜೀವನದಲ್ಲಿ ವೈರಾಗ್ಯ ಬಂದು ವೃಷಭ ದೇವರು ಭರತ-ಬಾಹುಬಲಿಗೆ ರಾಜ್ಯದ ಅಧಿಕಾರ ನೀಡಿ ಭೋಗಜೀವನದಿಂದ ತ್ಯಾಗದೆಡೆಗೆ ಸಾಗುವ ದೃಶ್ಯವನ್ನು ಅಳವಡಿಸಿಕೊಳ್ಳಲಾಗಿದೆ.

ಧರ್ಮಸ್ಥಳದ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕದಂಗವಾಗಿ ಈ ಬಾರಿ ವಿಶೇಷವಾಗಿ ಅಯೋಧ್ಯೆ ಮತ್ತು ಪೌದನಾಪುರ ನಗರದ ವೈಭವಪೂರ್ಣ ವೇದಿಕೆಯಲ್ಲಿ ಐದು ದಿನಗಳ ಕಾಲ ಬಾಹುಬಲಿಯ ಜೀವನ ಚಿತ್ರಣವನ್ನು ಬಿಂಬಿಸುವ ಪಂಚಮಹಾವೈಭವವು ಅನಾವರಣಗೊಂಡಿತು. ಎಲ್ಲ ಮಸ್ತಕಾಭಿಷೇಕಗಳಲ್ಲಿ ಪಂಚಕಲ್ಯಾಣ ಮಹೋತ್ಸವದ ದೃಶ್ಯಕಾವ್ಯ ಅನಾವರಣಗೊಂಡರೆ ಈ ಬಾರಿ ರಂಗ ನಿರ್ದೇಶಕ, ಕಲಾವಿದ ಜೀವನ್‌ರಾಂ ಸುಳ್ಯ ಪಂಚಮಹಾ ವೈಭವದ ವಿಶೇಷ ದೃಶ್ಯಕಾವ್ಯವನ್ನು ಸಾದೃಶವಾಗಿ ಕಟ್ಟಿಕೊಟ್ಟರು. 

ಆದಿನಾಥ ಮಹಾರಾಜರ ನವಯುಗ ಆರಂಭದ ಮೂಲಕ ಪ್ರಾರಂಭಗೊಂಡ ಪಂಚಮಹಾವೈಭವದ ದೃಶ್ಯಾವಳಿಗಳು ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗುವ ವರೆಗಿನ ಐತಿಹಾಸಿಕ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿವೆ. ವೃಷಭ ದೇವನ ಸಮೃದ್ಧಿಯ ಆಡಳಿತ, ಮಕ್ಕಳ ನಾಮಕರಣ, ಬಾಲ ಲೀಲೋತ್ಸವ, ಸ್ತ್ರೀ ಶಿಕ್ಷಣದ ಮೂಲಕ ಬ್ರಾಹ್ಮಿ-ಸುಂದರಿ ಸಹಿತ ಮಕ್ಕಳಿಗೆ ಶಿಕ್ಷಣ, ಬಳಿಕ ಜೀವನದಲ್ಲಿ ವೈರಾಗ್ಯ ಬಂದು ವೃಷಭ ದೇವರು ಭರತ-ಬಾಹುಬಲಿಗೆ ರಾಜ್ಯದ ಅಧಿಕಾರ ನೀಡಿ ಭೋಗಜೀವನದಿಂದ ತ್ಯಾಗದೆಡೆಗೆ ಸಾಗುವ ದೃಶ್ಯವನ್ನು ಅಳವಡಿಸಿಕೊಳ್ಳಲಾಗಿದೆ.

ಅಯೋದ್ಯೆಯಲ್ಲಿ ಭರತನ ಆಳ್ವಿಕೆ ಸಮೃದ್ಧಿಯಿಂದ ಕೂಡಿರಲು ವಿಶೇಷವಾಗಿ ಚಕ್ರರತ್ನದ ಉದಯ, ವೃಷಭ ದೇವರಿಗೆ ಕೇವಲಜ್ಞಾನ ಪ್ರಾಪ್ತಿ ಹಾಗೂ ಪುತ್ರರತ್ನದ ಯೋಗ ಲಭಿಸುತ್ತದೆ. ಚಕ್ರರತ್ನದ ಮೂಲಕ ಷಡVಂಡಗಳನ್ನು ಗೆಲ್ಲುತ್ತಾನೆ. ಬಾಹುಬಲಿಯನ್ನು ಗೆಲ್ಲದೆ ಚಕ್ರವರ್ತಿಯಾಗಲು ಅಸಾಧ್ಯವೆಂದರಿತು ಯುದ್ಧ ನಡೆದು ಬಾಹುಬಲಿ ತ್ಯಾಗದ ಕಡೆಗೆ ಸಾಗುತ್ತಾನೆ. ಭಗವಾನ್‌ ಆದಿನಾಥ ತೀರ್ಥಂಕರರ ಸಮವಸರಣ ದರ್ಶನದೊಂದಿಗೆ ಭರತಾಗಮನದ ಶಂಕೆ ನಿವಾರಣೆಯಾಗುವುದು ಹಾಗೂ ಬಾಹುಬಲಿ ಸ್ವಾಮಿಗೆ ಕೇವಲ ಜ್ಞಾನವಾದ ಹಿನ್ನೆಲೆಯಲ್ಲಿ ಸ್ವಾಮಿಗೆ ಮಹಾಮಜ್ಜನ ಹಾಗೂ ಪಂಚಾಮೃತಗಳಿಂದ ಮಹಾಮಸ್ತಕಾಭಿಷೇಕವಾಗುವ ದೃಶ್ಯಗಳನ್ನು ಪಂಚಮಹಾ ವೈಭವದಲ್ಲಿ ಸಾಕ್ಷೀಕರಿಸಿ ಇತಿಹಾಸದ ಪುಟಗಳನ್ನು ಮತ್ತೂಮ್ಮೆ ಕಣ್ಣೆದುರು ತೆರೆದಿರಿಸಿದ್ದಾರೆ. ಪಂಚಮಹಾವೈಭವ ಹೊಸ ಇತಿಹಾಸವನ್ನೇ ಸೃಷ್ಟಿಸಿದೆಯೆಂದು ಆಚಾರ್ಯ ಶ್ರೀ ಸಿದ್ದಸೇವಾ ಸಾಗರ್‌ ಶ್ರೀ ಮುನಿರಾಜ್‌ ಉಲ್ಲೇಖೀಸಿದ್ದಾರೆ. 

ಬೆಂಗಳೂರಿನ ಅಶೋಕ ಕುಮಾರ್‌ ಜೈನ್‌ ಹಾಗೂ ತಂಡದವರ ಅಭಿನಯ, ಜೀವನ್‌ರಾಂ ಸುಳ್ಯ ಅವರ ಪರಿಪಕ್ವ ನಿರ್ದೇಶನ ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದೆ. ಹೆಗ್ಗಡೆ ಕುಟುಂಬದ ಯುವ ಪೀಳಿಗೆ ದೃಶ್ಯ ರೂಪಕದಲ್ಲಿ ಪಾತ್ರ ನಿರ್ವಹಿಸಿ ವಿಶೇಷ ಮೆರುಗು ನೀಡಿದ್ದಾರೆ. ಫೆ. 13 ರಂದು ಧರ್ಮಸ್ಥಳದಿಂದ ಶಾಂತಿವನದವರೆಗೆ ಸಾಗಿ ಮರಳಿದ ಭರತನ ದಿಗ್ವಿಜಯ ಯಾತ್ರೆಯ ವೈಭವಪೂರ್ಣ ಮೆರವಣಿಗೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇದು ಎಂದೆಂದೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಚಿರಸ್ಥಾಯಿಯಾಗಿ ಉಳಿಯುವ ದೃಶ್ಯಕಾವ್ಯ ಬರೆದಿದೆ. ವಿವಿಧ ಕಲಾತಂಡಗಳು ದಿಗ್ವಿಜಯ ಯಾತ್ರೆಗೆ ವಿಶೇಷ ಮೆರಗು ನೀಡಿದ್ದಾರೆ. ನೂರಾರು ಕಲಾವಿದರ ಪರಿಕ್ರಮ ಸಾರ್ಥಕ್ಯ ಕಂಡಿದೆ.
 
ಸಾಂತೂರು ಶ್ರೀನಿವಾಸ ತಂತ್ರಿ 

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.