ಕರುಣಾರಸ ಹರಿಸಿದ ವಿದುರಾತಿಥ್ಯ-ಕರ್ಣಭೇದನ

Team Udayavani, Jun 7, 2019, 5:50 AM IST

f-7

ನಿಟ್ಟೆ ನೆಲ್ಲಿಮಾರು ಮನೆಯಲ್ಲಿ ಇತ್ತೀಚೆಗೆ ವಿದುರಾತಿಥ್ಯ-ಕರ್ಣಭೇದನ ತಾಳಮದ್ಧಳೆ ಜರುಗಿತು. ವಿದುರನ ಪಾತ್ರ ಬಹಳ ಭಾವನಾತ್ಮಕವಾದುದು. ಈ ಪಾತ್ರದ ಪೋಷಣೆ ಕೂಡಾ ಬಲು ವಿಶಿಷ್ಟ. ದಾಯಾದಿಗಳ ಕಲಹ ವಿಚಾರವಾಗಿ ವಿದುರ ದುಃಖದಲ್ಲಿದ್ದಾಗ ಸಂಧಾನಕ್ಕಾಗಿ ಕೃಷ್ಣ ಹಸ್ತಿನೆಗೆ ಬರುತ್ತಾನಂತೆ, ನನಗೂ ಒಮ್ಮೆ ನೋಡಬೇಕಿತ್ತು, ಆತನ ಅತ್ತೆ ಕುಂತಿ ಹೇಗೂ ನನ್ನಲ್ಲಿಯೇ ಇದ್ದಾಳೆ ಎಂದು ವಿದುರ ಕೃಷ್ಣ ಧ್ಯಾನದಲ್ಲಿರಬೇಕಾದರೆ , ಕುದುರೆ ಸಪ್ಪಳ ಕೇಳಿ ಕಣ್ತೆರೆದಾಗ ಕೃಷ್ಣನ ರಥ ವಿದುರನ ಮನೆಯಂಗಳದಲ್ಲಿ ನಿಂತಿತ್ತು.

ಕೃಷ್ಣನಿಗಾಗಿ ಅರಮನೆ, ಭೀಷ್ಮ, ದ್ರೋಣರ ಮನೆ ಸಹಿತ ಹಸ್ತಿನೆಯ ಎಲ್ಲಾ ಪ್ರಮುಖ ಮನೆಗಳಲ್ಲೂ ಆರೋಗಣೆ ಸಿದ್ಧಪಡಿಸಿಡಲಾಗಿತ್ತು.ಆದರೆ ಏನನ್ನೂ ಸಿದ್ಧಪಡಿಸದ ವಿದುರನ ಮನೆಗೇ ಕೃಷ್ಣ ಹಸಿವು ಹಸಿವು ಎಂದಾಗ ದೇವರೇ ಬಂದ ಖುಶಿಯಲ್ಲಿ ಭಾವನಾತ್ಮಕ ವಾಗಿ ವಿಚಾರಿಸಿ ಒಂದು ಕುಡುತೆ ಹಾಲು ಕೊಡುತ್ತಾನೆ. ಕುಡಿಯುವಾಗ ಒಂದು ಬಿಂದು ಹಾಲು ಕೆಳಗೆ ಬಿದ್ದು ನದಿಯಾಗಿ ಹರಿಯುತ್ತಿರಬೇಕಾದರೆ ಊರ ಜನರೆಲ್ಲಾ ತುಂಬಿ ತಾ, ತುಂಬಿ ತಾ, ಎಂದು ಕೊಡಪಾನಗಳಲ್ಲಿ ತುಂಬುತ್ತಿರಬೇಕಾದರೆ ಇತ್ತ ವಿದುರ ಕೃಷ್ಣನಲ್ಲಿ ಹೊಟ್ಟೆ ತುಂಬಿತಾ ಎನ್ನುತ್ತಿದ್ದ.

ಇತ್ತ ಕೃಷ್ಣ ಕರ್ಣನಿಗೆ ನಿನ್ನನ್ನು ಕ್ಷತ್ರಿಯರಂತೆಯೇ , ಕೌರವ ಪಾಂಡವರಂತೆಯೇ ನಿನ್ನನ್ನೂ ಗುರುತಿಸುವಂತಾಗಲಿ ನೀನು ಸೂತನ ಮಗ ಅಲ್ಲ ಎಂದಾಗ, ಕರ್ಣ ಅದು ಹೇಗೆ ಸಾಧ್ಯ ? ನನ್ನನ್ನು ಕಂಡೊಡನೆಯೇ ಮಾರುದೂರ ಓಡುವವರಿದ್ದಾರೆ, ಪಂಕ್ತಿಯ ಕೊನೆಯಲ್ಲಿ ನಾನು ಊಟಕ್ಕೆ ಕುಳಿತರೆ ಅಲ್ಲಿಂದಲೇ ಓಡುವ ಜನರೇ ಹಸ್ತಿನಾವತಿಯ ಅರಮನೆಯಲ್ಲಿರಬೇಕಾದರೆ ನಾನು ಹೇಗೆ ಅವರಂತೆ ಕ್ಷತ್ರಿಯನಾಗಲು ಸಾಧ್ಯ ಎಂದಾಗ ಕೃಷ್ಣ ಆತನ ಜನ್ಮ ರಹಸ್ಯ ತಿಳಿಸುತ್ತಾನೆ.

ಕೃಷ್ಣನ ಕುಂತಿ ಸೂಚನೆಯಂತೆ ಕರ್ಣನಲ್ಲಿ ತೆರಳುತ್ತಾಳೆ. ಮಗನೇ ನನ್ನಿಂದಪರಾಧವಾಯಿತು, ಕ್ಷಮಿಸು ಮಗನೇ ಎಂದು ಗೋಗರೆಯುತ್ತಾಳೆ. ಆವಾಗ ಕರ್ಣ ಜನನೀ ಎಂದು ಕರೆಯುತ್ತಾ ಯಾವ ತಾಯಿ ಮಗುವಿಗೆ ಜನ್ಮ ನೀಡುತ್ತಾಳ್ಳೋ ಅವಳೇ ಜನನಿ, ರಾಧೆ ನನ್ನ ಸಾಕು ತಾಯಿ, ನೀನು ನನ್ನ ಹೆತ್ತವ್ವೆ. ಲೋಕಾಪವಾದಕ್ಕೆ ಹೆದರಿ ಹೀಗೆ ಮಾಡಿದೆ ನಿನ್ನದೇನೂ ತಪ್ಪಿಲ್ಲ ಎಂದಾಗ , ಕುಂತಿ ಬಾ ಮಗನೆ ಒಮ್ಮೆ ನನ್ನನ್ನು ತಬ್ಬಿ ಅಮ್ಮಾ ಎಂದು ಕರೆ ಎಂದಾಗ , ಅಮ್ಮಾ ಜನನೀ ಎಂದು ಕರೆದಾಗ ಸೇರಿದ ಶ್ರೋತೃಗಢಣದ ಕಣ್ಣು ಮಂಜಾಗಿತು. ವಿದುರಾತಿಥ್ಯ-ಕರ್ಣಭೇದನದ ಕೃಷ್ಣನಾಗಿ ಹರೀಶ ಬಳಂತಿಮೊಗರು ಭಾವನಾತ್ಮಕವಾಗಿ ಸುಂದರ ಚಿತ್ರಣ ನೀಡಿದರು.

ವಿದುರನಾಗಿ ಪ್ರೊ| ಸದಾಶಿವ ಶೆಟ್ಟಿಗಾರ ಭಕ್ತಿರಸ ಪ್ರಧಾನ ಅರ್ಥಗಾರಿಕೆ ನೀಡಿದರು. ಉಜಿರೆ ಅಶೋಕರ ಕರ್ಣನಂತೂ ಕೃಷ್ಣನಲ್ಲೂ, ಕುಂತಿಯಲ್ಲೂ ಭಾವಪರವಶರಾಗಿ , ಸೂರ್ಯನಲ್ಲಿ ಸ್ವಲ್ಪ ರಂಜನೆಯಾಗಿ ರಂಜಿಸಿದರು. ಕುಂತಿಯಾಗಿ ವಿದ್ಯಾ ಕೊಳ್ಯೂರು ಪುತ್ರ ಪ್ರೇಮದ ಹೊಳೆ ಹರಿಸಿ,ಕರುಣಾ ರಸದಲ್ಲಿ ಸೇರಿದ ಜನರಲ್ಲೂ ಅಶ್ರುಧಾರೆ ಇಳಿಸಿದರು, ಸೂರ್ಯನಾಗಿ ಸದಾಶಿವ ನೆಲ್ಲಿಮಾರ್‌ ಮಿಂಚಿ ಮರೆಯಾದರು.

ಹಾಡುಗಾರಿಕೆಯಲ್ಲಿ ಬಲಿಪ ಶಿವಶಂಕರರು, ಚಂಡೆಯಲ್ಲಿ ದೇವಾನಂದರು, ಮದ್ದಳೆಯಲ್ಲಿ ಶಿತಿಕಂಠ ಭಟ್ಟರು, ಚಕ್ರತಾಳದಲ್ಲಿ ಮುರಾರಿ ವಿಟ್ಲ ರಂಜಿಸಿದರು.

ಸದಾಶಿವ ರಾವ್‌

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.