ಕಾಫಿ; ಕೊಯ್ಲಿಗ ಸರಾಗ


Team Udayavani, Dec 24, 2018, 6:00 AM IST

raitha-1.jpg

ಸಮಯಕ್ಕೆ ಸರಿಯಾಗಿ ಕಾಫಿ ಕೊಯ್ಲಾಗದಿದ್ದರೆ ಬೆಳೆಗಾರರಿಗೆ ಜ್ವರ ಬರುತ್ತದೆ. ಇದಕ್ಕೆ ಅಂತಲೇ ಕುಶಲ ಕೆಲಸಗಾರರು ಇದ್ದರೂ ಅವರುಗಳ ಪ್ರಮಾಣ ಕಡಿಮೆ. ಈ ತಲೆನೋವನ್ನು ಕಡಿಮೆ ಮಾಡಲು ಇಲ್ಲೊಂದು ಯಂತ್ರ ಆವಿಷ್ಕಾರವಾಗಿದೆ. 

ಈಗ ಎಲ್ಲೆಲ್ಲೂ ಕಾಫಿ ಕೊಯ್ಲಿನ ಹವಾ.
ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಳಲ್ಲೆಲ್ಲಾ ಕೊಯ್ಲಿನ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಕಾಫಿ ಬೆಳೆದವರಿಗೆ ಕೊಯ್ಲು ಬಂದರೆ ಜ್ವರ ಬಂದಂತೆ ಅನ್ನೋದೇನೋ ಸತ್ಯ.  ಏಕೆಂದರೆ, ಸರಿಯಾದ ಸಮಯಕ್ಕೆ ಕೊಯ್ಲು ಮಾಡಬೇಕು. ಅದಕ್ಕೆ ಜನ ಬೇಕು. ಅವರು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಸಿಕ್ಕರೂ, ಕುಶಲ ಕೆಲಸಗಾರರು ಸಿಗುವುದು ವಿರಳ. ಇದು ಕಾಫಿ ಸಂಗ್ರಹಣೆ ಪ್ರಮಾಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಣಾಮ, ಬೆಳೆಗಾರರು ನಷ್ಟ ಅನುಭವಿಸುವಂಥ ಸ್ಥಿತಿಗೆ ತಲುಪಿ ಬಿಡುತ್ತಾರೆ.

ಇಂಥ ಸಂದರ್ಭಗಳಲ್ಲಿ ಯಂತ್ರಗಳ ಅವಶ್ಯಕತೆ ಇರುತ್ತದೆ. ಇತ್ತೀಚಿನವರೆಗೂ ಕಾಫಿಕೊಯ್ಲಿಗೆ ಸೂಕ್ತವಾದ ಯಂತ್ರೋಪಕರಣಗಳಿರಲಿಲ್ಲ. ಈ ಕೊರತೆ ನೀಗಿಸಲು ಈಗ  ಗಲೀವರ್‌ ಎಂಬ ಸಾಧನ ಆವಿಷ್ಕಾರವಾಗಿದೆ. ಇದನ್ನು ಬಳಸಿ ಪರಿಣಾಮಕಾರಿಯಾಗಿ,  ನಿಗದಿತ ದಿನಗಳಿಗಿಂತಲೂ ಮುಂಚಿತವಾಗಿಯೇ ಕೊಯ್ಲು ಮಾಡಬಹುದು. ನೋಡಲು ಸರಳವಾಗಿರುವ ಈ ಸಾಧನ, ಬಳಸಲು ಅಷ್ಟೇ ಹಗುರ ಮತ್ತು ಸರಾಗ.

ಈ ಯಂತ್ರ ಬಳಸಿ, ಒಂದೇ ಒಂದು ಗಂಟೆಯಲ್ಲಿ ಸರಾಸರಿ 80 ಕೆ.ಜಿ ಕಾಫಿಹಣ್ಣು ಕೊಯ್ಲು ಮಾಡಬಹುದು. ಕೆಲಸ ಆರಂಭಿಸುವ ಮುನ್ನ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಬೇಕು. ಯಾವುದೇ ಸ್ಥಳದಲ್ಲಿಯಾದರೂ ಇದನ್ನು ಶೀಘ್ರವಾಗಿ ಚಾರ್ಜ್‌ ಮಾಡಿಕೊಳ್ಳ ಬಹುದಾದ್ದರಿಂದ ಕಿರಿಕಿರಿಯಾಗುವುದಿಲ್ಲ. ಕೊಯ್ಲು ಮಾಡುವಾಗ ನೇರ ವಿದ್ಯುತ್‌ ಸಂಪರ್ಕದ ಅವಶ್ಯಕತೆ ಇರುವುದಿಲ್ಲ. ಇದರಿಂದ ಶಾರ್ಟ್‌ ಸರ್ಕ್ನೂಟ್‌, ವಿದ್ಯುತ್‌ ಅವಘಡದಂಥ ಅಪಾಯಗಳು ಇಲ್ಲ. 

ಈ ಸಾಧನಕ್ಕೆ ಸೆನ್ಸಾರ್‌ ಅಳವಡಿಸಲಾಗಿದೆ. ಇದನ್ನು ಬಳಸಿ ಕೊಯ್ಲು ಮಾಡುವಾಗ ಕಾಫಿಗಿಡದ ಬುಡ ಅಲುಗಾಡುವುದಿಲ್ಲ. ಅದರ ಕಾಂಡಗಳಿಗೆ, ರೆಕ್ಕೆಗಳಿಗೆ ಗಾಸಿಯಾಗುವುದಿಲ್ಲ. ಎಲೆಗಳು ಕಿತ್ತು ಬರುವುದಿಲ್ಲ. ಹಣ್ಣುಗಳ ಮೇಲೆ ತರಚುಗಾಯಗಳಾಗುವುದಿಲ್ಲ. ಬಹಳ ನಾಜೂಕಾಗಿ ಹಣ್ಣುಗಳ ಕೊಯ್ಲುಕಾರ್ಯ ನಡೆಯುತ್ತದೆ. ಕೊಯ್ಲು ನಡೆಯುವಾಗ ಗಿಡದ ಕೆಳಗೆ ತೆಳುವಾದ ಪ್ಲಾಸ್ಟಿಕ್‌ ಶೀಟ್‌ ಅಥವಾ ಗೊಬ್ಬರದ ಚೀಲಗಳನ್ನು ಹೊಲಿದು ಮಾಡಿದ ಶೀಟ್‌, ಟಾರ್ಪಾಲ್‌ ಹಾಸಬೇಕು. ಇದರಿಂದ ಹಣ್ಣುಗಳು ನೆಲಕ್ಕೆ ಬಿದ್ದು ಚದುರುವುದಿಲ್ಲ. ಇದರಿಂದ ಸಂಗ್ರಹಣೆ ಕಾರ್ಯ ಸಲೀಸಾಗುತ್ತದೆ. 

ಕೃಷಿಕಾರ್ಯದ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಕೃಷಿಗೆ ಮಾಡಿದ ಖರ್ಚೂ ಗಿಟ್ಟದ ಉದಾಹರಣೆಗಳು ಕಾಫಿ ಬೆಳೆಗಾರರಿಗೂ ಆಗಿದೆ. ಇಂಥ ಸಂದರ್ಭಗಳಲ್ಲಿ ಖರ್ಚು ಕಡಿಮೆಯಾದಷ್ಟೂ ಲಾಭದಾಯಕ. ಈ ನಿಟ್ಟಿನಲ್ಲಿ, ಈ ಸಾಧನ ಬೆಳೆಗಾರರಿಗೆ ವರದಾನವೇ ಆಗಿದೆ.

– ಕುಮಾರ ರೈತ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.