ಓ… ವಿಮೆ!

ಭ್ರಮೆಯಲ್ಲ ಈ ಚಿತ್ರ ವಿಚಿತ್ರ ಪಾಲಿಸಿಗಳು!

Team Udayavani, Jan 6, 2020, 6:05 AM IST

12

ನಮ್ಮ ನಡುವೆ ಇರುವ ಇನ್ಷೊರೆನ್ಸ್‌ಗಳಲ್ಲಿ ಲೈಫ್ ಇನ್ಷೊರೆನ್ಸ್‌, ವೆಹಿಕಲ್‌ ಇನ್ಷೊರೆನ್ಸ್‌, ಹೆಲ್ತ್‌ ಇನ್ಷೊರೆನ್ಸ್‌ ಹೆಚ್ಚು ಜನಪ್ರಿಯವಾದವು. ಬಹುತೇಕರು ತಮ್ಮ ಜೀವಮಾನದಲ್ಲಿ ಇವುಗಳನ್ನು ಮಾಡಿಸಿಯೇ ಇರುತ್ತಾರೆ. ಇಂದು ಯಾವ ಹೊತ್ತಿನಲ್ಲಿ ಏನು ಆಪತ್ತು ಬರುತ್ತದೆ ಎಂದು ಹೇಳಲಾಗುವುದಿಲ್ಲ. ವಿಮೆ, ಧುತ್ತೆಂದು ಎದುರಾಗುವ ಆಪತ್ತುಗಳಿಂದ ಪಾಲಿಸಿದಾರರಿಗೆ ಮತ್ತವರ ಕುಟುಂಬಕ್ಕೆ ರಕ್ಷಣೆ ಒದಗಿಸುತ್ತದೆ. ಇನ್ಷೊರೆನ್ಸ್‌ನ ಪ್ರಪಂಚದಲ್ಲಿ ಹಲವಾರು ಬಗೆಯ ವಿಮಾ ಪಾಲಿಸಿಗಳಿವೆ. ಜನರು ಯಾವ ಯಾವ ಸಂಪತ್ತುಗಳಿಗೆ, ವಿಷಯಗಳಿಗೆ ವಿಮೆ ಮಾಡಿಸಿದ್ದಾರೆ ಎನ್ನುವುದನ್ನು ತಿಳಿದರೆ ನೀವು ಒಂದು ಕ್ಷಣ ಮೂಗಿನ ಮೇಲೆ ಬೆರಳಿಡುವುದು ಖಚಿತ.

1. ಆಂಗಾಂಗಗಳ ವಿಮೆ
ಸೆಲಬ್ರಿಟಿಗಳು, ಕ್ರೀಡಾಪಟುಗಳಿಗೆ ಅವರ ದೈಹಿಕ ಆರೋಗ್ಯವೇ ಆಸ್ತಿ. ಹೀಗಾಗಿ ಅಂಥವರಿಗೆಂದೇ ಬಾಡಿ ಪಾರ್ಟ್‌ ಇನ್ಷೊರೆನ್ಸ್‌ ಪಾಲಿಸಿಗಳಿವೆ. ಇದರಲ್ಲಿ ಪಾಲಿಸಿದಾರರು ತಮ್ಮ ದೇಹದ ಯಾವುದೇ ಭಾಗಗಳಿಗೆ ಇನ್ಷೊರೆನ್ಸ್‌ ಮಾಡಿಸಬಹುದಾಗಿದೆ. ಯಾವುದೇ ಸಂದರ್ಭದಲ್ಲಿ ಆ ಭಾಗಕ್ಕೆ ಹಾನಿಯುಂಟಾದರೆ ಇನ್ಷೊರೆನ್ಸ್‌ ಕ್ಲೈಮ್‌ ಮಾಡಬಹುದು. ಬಾಲಿವುಡ್‌ ತಾರೆಯರಾದ ಜಾನ್‌ ಅಬ್ರಾಹಂ, ಮಲ್ಲಿಕಾ ಶೇರಾವತ್‌, ಮನೀಷಾ ಲಂಬಾ ಈ ವಿಮೆಯ ಪಾಲಿಸಿದಾರರಲ್ಲಿ ಕೆಲವರು. ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಬಾಕ್ಸರ್‌ ವಿಜೇಂದರ್‌ ಸಿಂಗ್‌ ತಮ್ಮ ಕೈಗಳಿಗೆ ಇನ್ಷೊರೆನ್ಸ್‌ ಮಾಡಿಸಿದ್ದಾರೆ. ಹಾಲಿವುಡ್‌ ನಟಿ ಜೂಲಿಯಾ ರಾಬರ್ಟ್ಸ್ ತಮ್ಮ ಮುಗುಳ್ನಗೆಗೆ ವಿಮೆ ಮಾಡಿಸಿದ್ದಾರೆ.

2. ವಾಯ್ಸ ಇನ್ಷೊರೆನ್ಸ್‌
ಹಾಡುಗಾರರಿಗೆ ಅವರ ಕಂಠಕ್ಕಿಂತ ಮಿಗಿಲಾದ ಸಂಪತ್ತಿಲ್ಲ. ಭಾರತದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್‌ ತಮ್ಮ ಇಳಿವಯಸ್ಸಿನಲ್ಲಿಯೂ ಸಂಗೀತಾಭ್ಯಾಸ ಮಾಡುತ್ತಾರೆ. ಇಂದಿಗೂ ಅವರು ಹಾಡಿದರೆ ಶ್ರುತಿಬದ್ಧವಾಗಿಯೇ ಇರುತ್ತದೆ. ಹಾಗಿದ್ದರೂ ಅವರು ದನಿಯ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲಿಲ್ಲ. ಅವರು ತಮ್ಮ ದನಿಗೆ ಇನ್ಷೊರೆನ್ಸ್‌ ಮಾಡಿಸಿದ್ದಾರೆ. ವಾಯ್ಸಗೆ ವಿಮೆ ಮಾಡಿಸಿರುವ ಮತ್ತೂಬ್ಬ ಸೆಲಬ್ರಿಟಿ ರಜಿನಿಕಾಂತ್‌. ಅವರು ತಮ್ಮ ದನಿಗೆ ಕಾಪಿರೈಟನ್ನೂ ಮಾಡಿಸಿದ್ದಾರೆ.

3. ಪೆಟ್‌ ಇನ್ಷೊರೆನ್ಸ್‌
ನಮ್ಮಲ್ಲಿ ಜೀವ ವಿಮೆ ಇರುವಂತೆಯೇ ಸಾಕುಪ್ರಾಣಿಗಳಿಗೂ ಪೆಟ್‌ ಇನ್ಷೊರೆನ್ಸ್‌ ಇದೆ. ಮನೆಯ ಸಾಕುಪ್ರಾಣಿಗಳು ಮನೆಯ ಸದಸ್ಯನಂತೆಯೇ ಇರುತ್ತವೆ. ಹೀಗಾಗಿ ಅವುಗಳಿಗೂ ವಿಮೆ ಮಾಡಿಸುತ್ತಿರುವುದು ಸಂತಸದ ಸಂಗತಿಯೇ. ಆದರೆ, ಕೆಲ ಸಂದರ್ಭಗಳಲ್ಲಿ ಯಜಮಾನರು ತಮ್ಮ ನೆಚ್ಚಿನ ನಾಯಿ ಸತ್ತ ನಂತರ ಇನ್ನೊಂದು ನಾಯಿಯನ್ನು ಕೊಳ್ಳಲು ನೆರವಾಗುತ್ತದೆ ಎಂಬ ಕಾರಣಕ್ಕೂ ಈ ವಿಮೆಗೆ ಮೊರೆ ಹೋಗುತ್ತಿದ್ದಾರೆ.

4. ಮದುವೆ
“ಮದುವೆ’ ಅನ್ನೋದು ಜೂಜು ಎಂಬ ಹಿರಿಯರ ಮಾತನ್ನು ನಿಜವಾಗಿಸುವ ವಿಮೆ ಇದು. ಭಾರತೀಯರು ಮಿಕ್ಕ ವಿಷಯಗಳಲ್ಲಿ ಜಿಪುಣತನ ತೋರಿದರೂ ಮದುವೆ ಮುಂತಾದ ಸಮಾರಂಭಗಳಿಗೆ ಮಾತ್ರ ವಿನಾಯಿತಿ ನೀಡುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳೂ ವಿಮೆಯ ವ್ಯಾಪ್ತಿಯಡಿ ಬಂದಿವೆ. “ಒಂದು ವೇಳೆ’ ಮದುವೆ ಸಮಾರಂಭ ಅರ್ಧಕ್ಕೇ ನಿಂತುಹೋದರೆ ಇದುವರೆಗೂ ಮಾಡಿರುವ ಖರ್ಚು ನೀರಿನಲ್ಲಿ ಹಾಕಿದಂತಾಗುತ್ತದೆ. ಈ ನಷ್ಟವನ್ನು ತಗ್ಗಿಸುವುದೇ ಈ ವಿಮೆಯ ಉದ್ದೇಶ.

5. ಕೌನ್‌ ಬನೇಗಾ ಕರೋಡ್‌ಪತಿ ವಿಮೆ
ಶ್ರೀ ಸಾಮಾನ್ಯ ಕೂಡಾ ಕೋಟಿ ರೂಪಾಯಿ ಸಂಪಾದಿಸಬಲ್ಲ ಎಂಬ ಭಾರತೀಯರ ಕನಸಿಗೆ ರೆಕ್ಕೆ ಮೂಡಿಸಿದ್ದು “ಕೌನ್‌ ಬನೇಗಾ ಕರೋಡ್‌ಪತಿ’. ಇದು ಇಂಗ್ಲೆಂಡ್‌ನ‌ಲ್ಲಿ ಪ್ರಸಾರವಾಗುತ್ತಿದ್ದ “ಹೂ ವಾಂಟ್ಸ್‌ ಟು ಬಿ ಎ ಮಿಲಿಯನೇರ್‌’ನಿಂದ ಸ್ಫೂರ್ತಿ ಪಡೆದಿದ್ದು. ಕಾರ್ಯಕ್ರಮದಲ್ಲಿ ನೀಡಲಾಗುವ ಬಹುಮಾನದ ಹಣಕ್ಕೆ ಇನ್ಷೊರೆನ್ಸ್‌ ಮಾಡಿಸಿದ್ದಾರೆ ಎನ್ನುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲಿ ಪಾಲ್ಗೊಳ್ಳುವ ಪ್ರತಿಸ್ಪರ್ಧಿ 25 ಲಕ್ಷ ರೂ. ಒಳಗೆ ಎಷ್ಟೇ ಹಣ ಗೆದ್ದರೂ ಕಾರ್ಯಕ್ರಮದ ನಿರ್ಮಾಪಕರು ಕೊಡುತ್ತಾರೆ. 25 ಲಕ್ಷದ ಮೇಲೆ ಎಷ್ಟೇ ಗೆದ್ದರೂ ಇನ್ಷೊರೆನ್ಸ್‌ ಸಂಸ್ಥೆ ಕೊಡುತ್ತದೆ. ಅಂದರೆ 1 ಕೋಟಿ ಗೆದ್ದ ಪಕ್ಷದಲ್ಲಿ 25 ಲಕ್ಷ ರೂ.ಗಳನ್ನು ಮಾತ್ರ ನಿರ್ಮಾಪಕ ಕೊಡುತ್ತಾನೆ, ಉಳಿದ 75 ಲಕ್ಷ ಹಣವನ್ನು ವಿಮಾ ಕಂಪನಿ ಪಾವತಿಸುತ್ತದೆ.

ಏಲಿಯನ್‌ ಇನ್ಷೊರೆನ್ಸ್‌
ಈ ಇನ್ಷೊರೆನ್ಸ್‌ ಮುಂದೆ ಮಿಕ್ಕಾವ ವಿಮೆಗಳೂ ವಿಚಿತ್ರ ಅನ್ನಿಸಲಿಕ್ಕಿಲ್ಲ. ಲಂಡನ್‌ ಮೂಲದ ವಿಮಾ ಸಂಸ್ಥೆಯೊಂದು ತಂದಿರುವ ಈ ಏಲಿಯನ್‌ ವಿಮೆಗೆ 20,000 ಮಂದಿ ಪಾಲಿಸಿದಾರರಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿ. ಹಾರುವ ತಟ್ಟೆಗಳಲ್ಲಿ ಆಕಾಶದಿಂದ ಇಳಿಯುವ ಅನ್ಯಗ್ರಹಜೀವಿಗಳು ಮನುಷ್ಯರನ್ನು ಹೊತ್ತೂಯ್ದು ಪ್ರಯೋಗಗಳನ್ನು ಮಾಡುತ್ತಾರೆ ಎಂಬ ಸಂಗತಿ ಒಂದು ಕಾಲದಲ್ಲಿ ಜಗತ್ತಿನಾದ್ಯಂತ ಭೀತಿ ತಂದಿತ್ತು. ಅನೇಕ ಮಂದಿ ತಮ್ಮನ್ನು ಏಲಿಯನ್ನರು ಹೊತ್ತೂಯ್ದು ವಾಪಸ್ಸು ತಂದು ಬಿಟ್ಟಿದ್ದಾರೆ ಎನ್ನುವ ಅನೇಕರು ಇಂದಿಗೂ ವಿದೇಶಗಳಲ್ಲಿ ಸಿಗುತ್ತಾರೆ. ಅದರ ಆಧಾರದಲ್ಲೇ ಈ ವಿಮೆ ತಂದಿರುವುದು. ಏಲಿಯನ್‌ ವಿಮೆಯ ಪಾಲಿಸಿದಾರರು ತಮ್ಮನ್ನು ಏಲಿಯನ್ನರು ಹೊತ್ತೂಯ್ದಿದ್ದಾರೆ ಎನ್ನುವುದಕ್ಕೆ ಪುರಾವೆ ಒದಗಿಸಿದರೆ ಮಾತ್ರ ವಿಮೆ ಕ್ಲೈಮ್‌ ಆಗುತ್ತದೆ.

– ಹವನ

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.