ಖಾರ ತಂದ ಸಿಹಿ!


Team Udayavani, Mar 30, 2020, 4:02 PM IST

ಖಾರ ತಂದ ಸಿಹಿ!

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿಯ ಸಾವಜಿ ಕುಟುಂಬವೊಂದು ಸಸ್ಯಹಾರಿ ಖಾದ್ಯಗಳಿಗೇ ಹೆಸರುವಾಸಿ! ವಿಶೇಷವಾಗಿ ಇವರ “ಖಾರ’ ಮತ್ತಿಗೆ ಫಿದಾ ಆಗದವರಿಲ್ಲ. ಅನೇಕರು ಇದರ ರುಚಿ ಸವಿಯುವ ಮುನ್ನ ಖಾರದ ಆಕಾರ, ಬಣ್ಣ ನೋಡಿಯೇ ಇದು “ಮರಾಠರ ಖಾರ’ ಎಂದು ಗುರುತಿಸಿ ಬಿಡುತ್ತಾರೆ!

ಇವರು ಮೂಲತಃ ಗದಗಿನವರು. ಮೂರು ದಶಕದ ಕೆಳಗೆ ಅಲ್ಲಿ ಕೈಮಗ್ಗಕ್ಕೆ ಕರಾಳ ದಿನ ಆರಂಭ ಆದವು. ಆಗ ರಘುನಾಥ ತಮ್ಮ ಕುಟುಂಬ ಸಮೇತ ಕೂಡ್ಲಿಗಿಗೆ ವಲಸೆ ಬಂದರು. ಇಡ್ಲಿ, ಚಟ್ನಿ ಮಾಡಿ ಓಣಿ ಓಣಿ ತಿರುಗಿ ಮಾರಿದರು. ಸ್ವಾದಿಷ್ಟ ಇಡ್ಲಿ ಚಟ್ನಿಗೆ ಜನ ಮನೆ ಮುಂದೆ ಕ್ಯೂ ನಿಂತರು! ತಿರುಗಾಟ ನಿಲ್ಲಿಸಿ, ಮನೆ ಮುಂದೆಯೇ ಹೋಟೆಲ್‌ ತೆಗೆದರು. ಬೆಳಗ್ಗೆ ಇಡ್ಲಿ - ಚಟ್ನಿ, ಸಂಜೆ ಅಲಸಂದಿ ವಡೆ ಮಾಡಿ ಫೇಮಸ್‌ ಆದರು.

ನಂತರ ಖಾರ ಪರಿಚಯಿಸಿದರು. ಶುಚಿ- ರುಚಿಯ ಕಾರಣಕ್ಕೆ ಇದೂ ಬೇಗನೆ ಹೆಸರಾಯ್ತು. ಈ ನಡುವೆ ಮನೆಯ ಮಾಲಿಕ ರಘುನಾಥ ತೀರಿಕೊಂಡ ನಂತರ ಪತ್ನಿ ರತ್ನಬಾಯಿ ತನ್ನ ಮಕ್ಕಳಾದ ಭಾಗ್ಯಶ್ರೀ ಮತ್ತು ಸಂತೋಷರೊಂದಿಗೆ ಈ ವ್ಯಾಪಾರ ಮುಂದುವರಿಸಿದ್ದಾರೆ. ಬಣ್ಣರಹಿತ ಢಾಣೆ ಸೇವು ಬಾಯಲ್ಲಿಟ್ಟರೆ ಸಾಕು ಕರಗುತ್ತೆ. ಅಷ್ಟು ಮೃದು!. ಇನ್ನು ಖಾರದ ಪುಡಿ, ಬೆಳ್ಳುಳ್ಳಿಯನ್ನು ಹದವಾಗಿ ಬೆರೆಸಿ ಮಾಡಿದ ಬುಗ್ಗಿ ಹೆಚ್ಚು ರುಚಿ ಬರುತ್ತೆ.

ಗಿರಾಕಿಗಳಿಗೆ, ಹೋಲ್‌ಸೇಲ್‌ ವ್ಯಾಪಾರಿಗಳಿಗೆ ಖಾರ ಖರೀದಿಸಲು ದುಂಬಾಲು ಬೀಳಲ್ಲ. ಖಾರದ ರುಚಿ ನೋಡಿದವರೇ ಇವರಿಗೆ ಪ್ರಚಾರಕರು!. ಮೊದಲು ಅವರು ಸಂತೆ ಮಾರ್ಕೆಟ್‌ ಜಾಗದಲ್ಲಿದ್ದರು. ಸಂತೆಗೆ ಬರುವವರೆಲ್ಲ ಕಡ್ಡಾಯವಾಗಿ ಖಾರ ಖರೀದಿಸುತ್ತಿದ್ದರು.  ಈಗ ಅಲ್ಲಿಲ್ಲ. ಆದರೂ ವ್ಯಾಪಾರ ಚೆನ್ನಾಗಿಯೇ ಆಗುತ್ತಿತ್ತು. ಅವರಿಗೆ ಕಾಯಂ ಗಿರಾಕಿ ಇದ್ದಾರೆ. “ಖಾರ’ದ ವ್ಯಾಪಾರ ಜೀವನಕ್ಕೆ ಆಸರೆ…’ ಎನ್ನುತ್ತಾರೆ ಸಂತೋಷ್‌.

“ಇಲ್ಲಿಯವರು ದೂರದೂರಿನ ತಮ್ಮ ಸ್ನೇಹಿತರು, ಸಂಬಂಧಿಕರಿಗೆ ಖಾರ ಕಳುಹಿಸುತ್ತಾರೆ. ಇದರಿಂದ ಇವರಿಗೇನೋ ಖುಷಿ. ಅವರ ನಾಲಿಗೆಗೂ ರುಚಿ!. ಅಷ್ಟೇಕೆ ಹಾಸ್ಟೆಲ್‌ ಮಕ್ಕಳಿಗೆ ಇದೇ ಸ್ನ್ಯಾಕ್ಸ್‌. ಒಟ್ಟಿನಲ್ಲಿ ಖಾರ ಖರೀದಿ ಕಿಂಚಿತ್ತೂ ಕರಗಿಲ್ಲ. ತಿಂಗಳಲ್ಲಿ 20 ಸಾವಿರ ನಿವ್ವಳ ಆದಾಯ ಸಂಪಾದಿಸಬಹುದು ಎನ್ನುವುದು ಭಾಗ್ಯಶ್ರೀ ಅವರ ಅಭಿಪ್ರಾಯ. ಇತ್ತೀಚೆಗೆ ಇವರು ಸಣ್ಣಪುಟ್ಟ ಊಟದ ಆರ್ಡರನ್ನೂ ಪಡೆಯುತ್ತಾರೆ. ವಿಶೇಷವಾಗಿ ಇವರು ಮಾಡುವ ಕೆಂಪು ಚಟ್ನಿ ಎಲ್ಲರಿಗೂ ಅಚ್ಚುಮೆಚ್ಚು. ­

 

-ಸ್ವರೂಪಾನಂದ ಎಂ. ಕೊಟ್ಟೂರು

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.