ಗಾಳಿ ಮಾತು

ಮನೆಯಲ್ಲಿ ಗಾಳಿಯನ್ನು ದುಡಿಸಿಕೊಳ್ಳುವುದು ಹೀಗೆ...

Team Udayavani, Apr 1, 2019, 6:00 AM IST

HOME-a

ನಿವೇಶನದ ಬೆಲೆ ಗಗನಕ್ಕೆ ಏರಿರುವುದರಿಂದ, ಮನೆ ಕಟ್ಟುವಾಗ ಹೆಚ್ಚು ಖಾಲಿ ಜಾಗ ಬಿಡದೆ ಕಟ್ಟಲಾಗುತ್ತದೆ. ಆದುದರಿಂದ, ಬಡಾವಣೆಗಳಲ್ಲಿ ಗಾಳಿಯ ಸಂಚಾರವೂ ಕಡಿಮೆ ಆಗಿದೆ. ಕಿಕ್ಕಿರಿದ ಪ್ರದೇಶಗಳಲ್ಲಿ ಸ್ವಾಭಾಕ ಹರಿವಿಗೆ ಅಡಚಣೆ ಏರ್ಪಟ್ಟು, ಬೇಸಿಗೆಯಲ್ಲಿ ಬೀಸುವ ಅಲ್ಪ ಸ್ವಲ್ಪ ತಂಗಾಳಿಯೂ ಮನೆಯನ್ನು ಪ್ರವೇಶಿಸಲು ಹರಸಾಹಸ ಪಡಬೇಕಾಗುತ್ತದೆ. ವಿದ್ಯುತ್‌ ಫ‌ಂಖಗಳು ಎಷ್ಟೇ ಜೋರಾಗಿ ತಿರುಗಿದರೂ ಕೋಣೆಯಲ್ಲಿ ಶೇಖರವಾಗಿರುವ ಹಳಸಲು ಗಾಳಿಯನ್ನೇ ತಿರುತಿರುಗಿಸಿ ಬಿಡುವುದರಿಂದ ನಮಗೆ ತಂಪೆನಿಸುವುದಿಲ್ಲ. ಗಾಳಿಯನ್ನು ದುಡಿಸಿಕೊಳ್ಳುವುದು ಗೊತ್ತಿದ್ದರೆ ಇಂಥ ಕಿರಿಕಿರಿ ಇರುವುದಿಲ್ಲ.

ಫ್ಯಾನ್‌ಗಳು ಜನಪ್ರಿಯವಾಗುತ್ತಿದ್ದಂತೆ ಸಾಂಪ್ರದಾಯಿಕವಾಗಿ ಮನೆಯನ್ನು ತಂಪಾಗಿರಿಸಿಕೊಳ್ಳುವ ವಿಧಾನವನ್ನು ಮರತೇ ಹೋದಂತೆ ಆಗಿದೆ. ಎಲೆಕ್ಟ್ರಿಕ್‌ ಫ್ಯಾನ್‌ಗಳು ಅಬ್ಬಬ್ಟಾ ಅಂದರೆ ಕೆಲವು ದಶಕಗಳಿಂದಷ್ಟೇ ನಮ್ಮಲ್ಲಿ ಬಳಕೆಯಲ್ಲಿರುವುದು. ಅದಕ್ಕೂ ಮೊದಲು ನಮ್ಮಲ್ಲಿ ವಿದ್ಯುತ್‌ ಬಳಸದೆ ಮನೆಯನ್ನು ತಂಪಾಗಿರಿಸಿಕೊಳ್ಳುವುದರ ಬಗ್ಗೆ ಹೆಚ್ಚು ಒಲವು ತೋರಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಿವೇಶನದ ಬೆಲೆ ಗಗನಕ್ಕೆ ಏರಿರುವುದರಿಂದ, ಮನೆ ಕಟ್ಟುವಾಗ ಹೆಚ್ಚು ಖಾಲಿ ಜಾಗ ಬಿಡದೆ ಕಟ್ಟಲಾಗುತ್ತದೆ. ಆದುದರಿಂದ, ಬಡಾವಣೆಗಳಲ್ಲಿ ಗಾಳಿಯ ಸಂಚಾರವೂ ಕಡಿಮೆ ಆಗಿದೆ. ಕಿಕ್ಕಿರಿದ ಪ್ರದೇಶಗಳಲ್ಲಿ ಸ್ವಾಭಾವಿಕ ಹರಿವಿಗೆ ಅಡಚಣೆ ಏರ್ಪಟ್ಟು, ಬೇಸಿಗೆಯಲ್ಲಿ ಬೀಸುವ ಅಲ್ಪ ಸ್ವಲ್ಪ ತಂಗಾಳಿಯೂ ಮನೆಯನ್ನು ಪ್ರವೇಶಿಸಲು ಹರಸಾಹಸ ಪಡಬೇಕಾಗುತ್ತದೆ. ವಿದ್ಯುತ್‌ ಫ‌ಂಖಗಳು ಎಷ್ಟೇ ಜೋರಾಗಿ ತಿರುಗಿದರೂ ಕೋಣೆಯಲ್ಲಿ ಶೇಖರವಾಗಿರುವ ಹಳಸಲು ಗಾಳಿಯನ್ನೇ ತಿರುತಿರುಗಿಸಿ ಬಿಡುವುದರಿಂದ ನಮಗೆ ತಂಪೆನಿಸುವುದಿಲ್ಲ. ಮನೆಯೊಳಗೆ ತಾಜಾ ಗಾಳಿ ಪ್ರವೇಶಿಸುವುದು ಅನಿವಾರ್ಯ, ಇಲ್ಲದಿದ್ದರೆ ನಿಶ್ವಾಸದ ಗಾಳಿಯೊಂದಿಗೆ ಸಾಕಷ್ಟು ಇತರೆ ಕಲ್ಮಶಗಳೂ ಸೇರಿಕೊಂಡು, ಒಟ್ಟಾರೆಯಾಗಿ ನಮಗೆ ಆರಾಮ ಎಂದೆನಿಸುವುದಿಲ್ಲ. ಮನೆಯ ವಿನ್ಯಾಸ ಮಾಡುವಾಗ ನಾವು ಗಾಳಿಯ ಒಳಹರಿವು ಹಾಗೂ ಶಾಖದ ಹೊರಹರಿನ ಬಗ್ಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

ಗಾಳಿಯ ಹರಿವು – ಎಲ್ಲಿ? ಹೇಗೆ?
ನಿವೇಶನದ ಅಕ್ಕಪಕ್ಕದಲ್ಲಿ ಒಂದಷ್ಟು ಖಾಲಿಜಾಗ ಇದ್ದರೆ, ಸುಲಭದಲ್ಲಿ ಹರಿದಾಡುವ ಗಾಳಿ,ಅಕ್ಕಪಕ್ಕದ ಮನೆಗಳು ಒತ್ತರಿಸಿಕೊಂಡು ಎದ್ದಿದ್ದರೆ ಒಳಪ್ರವೇಶಿಸಲು ಸುಲಭದಲ್ಲಿ ಸಾಧ್ಯ ಆಗುವುದಿಲ್ಲ.ಗಾಳಿ ಅಡ್ಡ ಹಾಯಲು ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ನಾವು ಅನಿವಾರ್ಯವಾಗಿ ವರ್ಟಿಕಲ್‌ ವೆಂಟಿಲೇಷನ್‌ ಅಂದರೆ ಗಾಳಿ ಕೆಳ ಮಟ್ಟದಿಂದ ಮೇಲಕ್ಕೆ ಹಾಯುವಂತೆ ಮನೆಯನ್ನು ವಿನ್ಯಾಸ ಮಾಡಬೇಕಾಗುತ್ತದೆ. ನಿಚಾÌಸದ ಗಾಳಿ ನಮ್ಮ ದೇಹದ ಉಷ್ಣಾಂಶದಷ್ಟು ಅಂದರೆ ಸುಮಾರು 37 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ದಕ್ಷಿಣ ಭಾರತದ ಬಹುತೇಕ ಕಡೆ ಸಂಜೆಯ ನಂತರ ಹೊರಾಂಗಣದ ಗಾಳಿ ಇದಕ್ಕಿಂತ ಸುಮಾರು ಹತ್ತು ಡಿಗ್ರಿಯಷ್ಟು ಕಡಿಮೆ ಇರುತ್ತದೆ. ನಾವು ಈ ತಾಜಾ ಗಾಳಿಯನ್ನು ಮನೆಯೊಳಗೆ ಪ್ರವೇಶಿಸುವಂತೆ ಮಾಡಿ, ನಮ್ಮ ಒಳಾಂಗಣದ ಶಾಖವನ್ನು ಹೀರಿಕೊಂಡು ತಂಪು ಮಾಡಿ, ನಂತರ ಬಿಸಿಯೇರಿರುವ ಈ ಗಾಳಿಯನ್ನು ಮೇಲು ಮಟ್ಟದಿಂದ ಹೊರಹಾಕಬಹುದು. ಬಿಸಿಗಾಳಿಗೆ ಸ್ವಾಭಾವಿಕವಾಗೇ ಮೇಲೇರಲು ಪ್ರಯತ್ನಿಸುತ್ತಿರುತ್ತದೆ. ನಾವು ಇದೇ ಅಂಶವನ್ನು ಮನೆಯೊಳಗಿಂದ ಶಾಖವನ್ನು ಹೊರದೂಡಲು ಬಳಸಬಹುದು.

ಟಬೊì ವೆಂಟಿಲೇಟರ್‌ ಬಳಸಿ
ಇತ್ತೀಚಿನ ದಿನಗಳಲ್ಲಿ ನೀವೂ ಗಮನಿಸಿರಬಹುದು. ದೊಡ್ಡದೊಡ್ಡ ಫ್ಯಾಕ್ಟರಿಗಳ ಮೇಲೂ ಗಿರಗಿಟ್ಟಲೆಯಂತೆ ತಿರುಗುವ ಗುಮ್ಮಟದಂಥ ಯಂತ್ರವನ್ನು. ತೆಳು ಅಲ್ಯುಮೀನಿಯಂ ಇಲ್ಲವೇ ಪ್ಲ್ಯಾಸ್ಟಿಕ್‌ ನಿಂದ ಮಾಡಲಾಗುವ ಈ ಯಂತ್ರಗಳು ಯಾವುದೇ ವಿದ್ಯುತ್‌ ಸಂಪರ್ಕ ಇಲ್ಲದೆ ಗಾಳಿಯ ಹರಿವಿನಿಂದಲೇ ತಿರುಗುತ್ತ, ಒಳಾಂಗಣದ ನಿಚಾÌಸ ಗಾಳಿಯನ್ನು ಹೊರಹಾಕಬಲ್ಲವು. ಮನೆಗಳಲ್ಲಿ ಇವುಗಳ ಬಳಕೆ ಹೆಚ್ಚಿಲ್ಲವಾದರೂ ಸೂಕ್ತ ಸ್ಥಳದಲ್ಲಿ ಈ ಟಬೊì ವೆಂಟಿಲೇಟರ್‌ಗಳನ್ನು ಅಳವಡಿಸಿದರೆ, ಮನೆಯನ್ನು ಸಾಕಷ್ಟು ತಂಪಾಗಿ ಇರಿಸಿಕೊಳ್ಳಬಹುದು. ಗಾಳಿ ಜೋರಾಗಿ ಬೀಸಿದಷ್ಟೂ ಬಿರುಸಿನಿಂದ ತಿರುಗುವ ಈ ಯಂತ್ರಗಳ ವಿನ್ಯಾಸ ವಿಶೇಷವಾಗಿದ್ದು, ಒಳಗಿನ ಗಾಳಿಯನ್ನು ಹೊರಗೆ ಬಿಡುತ್ತಲೇ ಹೊರಗಿನ ಮಳೆಯನ್ನು ಒಳಾಂಗಣಕ್ಕೆ ಬೀಳದಂತೆ ತಡೆಯಬಲ್ಲವು.

ವೆಂಟಿಲೇಟರ್‌ ಅಳವಡಿಕೆ
ಮನೆಯ ಅತಿ ಹೆಚ್ಚು ಎತ್ತರದ ಸ್ಥಳ ಅಂದರೆ ಸಾಮಾನ್ಯವಾಗಿ ಮೆಟ್ಟಿಲು ಇರುವ ಕೋಣೆಯ ಮೇಲೆ ಇವನ್ನು ಅಳವಡಿಸಿದರೆ, ಬಿಸಿ ಗಾಳಿ ಮೇಲೇರಿ, ಕಿಟಕಿಗಳ ಮೂಲಕ ಹೊರಗಿನ ತಾಜಾಗಾಳಿ ಪ್ರವೇಶಿಸಲು ಅನುವು ಮಾಡಿಕೊಟ್ಟಂತೆ ಆಗುತ್ತದೆ. ಒಂದೇ ಮಹಡಿ ಅಥವಾ ಮೆಟ್ಟಿಲು ಕೋಣೆ ಇಲ್ಲದಿದ್ದರೆ, ಮನೆಯ ವಿನ್ಯಾಸ ಮಾಡುವಾಗಲೇ ಕಿಟಕಿಗಳನ್ನು ಸ್ವಲ್ಪ ಹೊರಚಾಚಿದಂತೆ ಮಾಡಿ, ನಾವು ಅಳವಡಿಸಲು ಬಯಸಿರುವ ಟಬೊì ಯಂತ್ರದ ಅಳತೆಯಂತೆ ಸುಮಾರು ಒಂದೂವರೆ ಅಡಿಯಿಂದ ಎರಡು ಅಡಿವರೆಗೂ ಪೊ›ಜೆಕ್ಟ್ ಮಾಡಿ, ಸೂಕ್ತ ರಂಧ್ರಗಳನ್ನು ಬಿಡುವ ಮೂಲಕವೂ ಗಾಳಿಯ ಹರಿವನ್ನು ಪಡೆಯಬಹುದು. ಸೂರಿನಲ್ಲಿ ಗಾಳಿ ಯಾವ ದಿಕ್ಕಿನಲ್ಲಿ ಬೀಸಿದರೂ ಈ ಯಂತ್ರಗಳು ಒಳಾಂಗಣದ ನಿಚಾÌಸ ಗಾಳಿಯನ್ನು ಹೊರಹಾಕಬಲ್ಲವು. ಆದರೆ ಕಿಟಕಿಗಳ ಮೇಲೆ ಅಳವಡಿಸಿದರೆ, ಗಾಳಿ ಅಡ್ಡ ಹಾಯ್ದರೆ ಮಾತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸಬಲ್ಲವು. ಆದುದರಿಂದ, ನಾವು ಕಡೇ ಪಕ್ಷ ಎರಡು ಕಡೆ ಅಂದರೆ ರಸ್ತೆಗೆ ಎದುರಾಗಿ ಒಂದು ಕಿಟಕಿಗೆ ಈ ಮಾದರಿಯ ವೆಂಟಿಲೇಟರ್‌ ಅಳವಡಿಸಿದ್ದರೆ, ಇನ್ನೊಂದನ್ನು ಮನೆಯ ಪಕ್ಕ ಅಂದರೆ ಎರಡು ಅಡಿಯಾದರೂ ತೆರೆದ ಸ್ಥಳ – ಓಪನ್‌ ಸ್ಪೇಸ್‌ ಬಿಟ್ಟಿರುವ ಕಡೆಯ ಕಿಟಕಿಯ ಮೇಲೆ ಈ ಯಂತ್ರವನ್ನು ಅಳವಡಿಸಬೇಕಾಗುತ್ತದೆ.

ಎಕ್ಸಾಸ್ಟ್‌ ಫ್ಯಾನ್‌ ಬಳಸಿ
ಸಾಮಾನ್ಯವಾಗಿ ಗೋಡೆಗಳಿಗೆ ಎತ್ತರದ ಸ್ಥಾನದಲ್ಲಿ ಅಳವಡಿಸಲಾಗುವ ಈ ಫ‌ಂಖಗಳನ್ನು ಅಡುಗೆ ಮನೆಯ ಶಾಖ ಹಾಗೂ ಹೊಗೆಯನ್ನು ಹೊರದೂಡಲು ಬಳಸಲಾಗುತ್ತದೆ. ಇತರೆ ವೇಳೆಯಲ್ಲಿ ಇವುಗಳ ಬಳಕೆ ಇರುವುದಿಲ್ಲ. ಆದರೆ ನಾವು ಈ ಫ‌ಂಖಗಳನ್ನೂ ಬಳಸಿ ಮನೆಯ ಒಳಾಂಗಣದಲ್ಲಿ ಶೇಖರವಾಗುವ ಬಿಸಿಗಾಳಿಯನ್ನು ಹೆಚ್ಚು ಖರ್ಚಿಲ್ಲದೆ ಸುಲಭದಲ್ಲಿ ಹೊರಹಾಕಬಹುದು! ಗಾಳಿಯನ್ನು ಹೊರದೂಡಲೆಂದೇ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಈ ಎಕ್ಸಾಸ್ಟ್‌ ಫ್ಯಾನ್‌ಗಳು ಅತಿ ಸಮರ್ಪಕವಾಗಿ ಮನೆಯೊಳಗಿನ ಬಿಸಿಗಾಳಿಯನ್ನೂ ಹೊರಹಾಕಿ, ಕೆಳಮಟ್ಟದಲ್ಲಿ ಅಂದರೆ ಸುಮಾರು ಎರಡೂವರೆ ಅಡಿ ಎತ್ತರದಲ್ಲಿ ಇರುವ ಕಿಟಕಿಗಳ ಮೂಲಕ ತಂಪಾದ ಗಾಳಿ ಮನೆಯನ್ನು ಪ್ರವೇಶಿಸುವಂತೆ ಮಾಡಬಲ್ಲವು. ಒಂದು ಕಡೆ ಗಾಳಿ ಹೊರದೂಡಲ್ಪಡುತ್ತಿದ್ದಂತೆ, ಅದರ ಜಾಗ ತುಂಬಲು ಹೊರಗಿನಿಂದ ತಾಜಾ ಗಾಳಿ ಒಳಗೆ ಹಾಯುತ್ತದೆ. ಈ ಮೂಲಕ ನಾವು ಅನಿವಾರ್ಯ ಎಂದೆನಿಸಿರುವ ಸೀಲಿಂಗ್‌ ಫ್ಯಾನ್‌ಗಳ ಮಿತಿಯನ್ನು ಮೀರಿ, ಬೇಸಿಗೆಯಲ್ಲೂ ತಂಪಾಗಿರುವ ಒಳಾಂಗಣವನ್ನು ಪಡೆಯಬಹುದು.

ಮಾಮೂಲಿ ಸೂರು ಫ‌ಂಖಗಳಿಗೆ ಹೋಲಿಸಿದರೆ ಇವು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಒಳಾಂಗಣದಲ್ಲಿ ಮೇಲು ಮಟ್ಟದಲ್ಲಿ ಶೇಖರವಾಗುವ ಬಿಸಿಗಾಳಿಯನ್ನು ಹೊರದೂಡುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಈ ಹಿಂದೆ ಮನೆಗಳಲ್ಲಿ ಸೂರಿನ ಕೆಳಗೆ ವೆಂಟಿಲೇಟರ್‌ – ಗವಾಕ್ಷಿಗಳನ್ನು ನೀಡುವುದು ಕಡ್ಡಾಯವಾಗಿರುತ್ತಿತ್ತು. ಮನೆಯೊಳಗೆ ಪ್ರತಿ ಕೋಣೆಗೂ ಒಂದೆರಡಾದರೂ ಇದ್ದು, ಯಾವುದೇ ಫ್ಯಾನ್‌ ತಿರುಗದಿದ್ದರೂ ಒಳಾಂಗಣವನ್ನು ತಂಪಾಗಿ ಇರಿಸುತ್ತಿದ್ದವು. ಈಗ ನಮಗೆ ಆ ಮಾದರಿಯ ವೆಂಟಿಲೇಟರ್‌ ಗಳನ್ನು ಇಡಲು ನಾನಾ ಕಾರಣಗಳಿಂದ ಆಗದಿದ್ದರೆ, ಒಂದೆರಡು ಎಕ್ಸಾಸ್ಟ್‌ ಫ್ಯಾನ್‌ ಗಳನ್ನಾದರೂ ನೀಡಿ, ಮನೆಯನ್ನು ಪರಿಣಾಮಕಾರಿಯಾಗಿ ತಂಪಾಗಿರಿಸಿಕೊಳ್ಳಬಹುದು!

– ಆರ್ಕಿಟೆಕ್ಟ್ ಕೆ. ಜಯರಾಮ್‌
ಮಾಹಿತಿಗೆ- 98441 32826

ಟಾಪ್ ನ್ಯೂಸ್

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.