ಗಟ್ಟಿ ಮನೆ ನಿರ್ಮಿಸೋದು ಹೇಗೆ?


Team Udayavani, Jun 19, 2017, 5:55 PM IST

gatti-mane.jpg

ನಮ್ಮಲ್ಲಿ ಮನೆ ಕಟ್ಟುವಾಗ ನೂರಾರು ವರ್ಷ ಬಾಳಲಿ ಎಂದು ಆಶಿಸುವುದು ಸಹಜ.  ಪ್ರತಿ ತಲೆಮಾರು ಮನೆ ಕಟ್ಟುವ ಸಾಹಸದಲ್ಲಿ ಹೆಚ್ಚು ವೇಳೆ ಹಾಗೂ ಹಣ ವ್ಯಯಿಸದೆ, ಪೂರ್ವಜರು ಕಟ್ಟಿದ ಮನೆಯಲ್ಲಿ ಇತರೆ ಸಾಧನೆಗಳತ್ತ ಚಿತ್ತ ಹರಿಸಲಿ ಎಂದು ಯೋಚಿಸುತ್ತಾರೆ. ಮನೆ ಕಟ್ಟಲು ಏನಿಲ್ಲವೆಂದರೂ ಒಬ್ಬರು ತಮ್ಮ ಜೀವಮಾನದಲ್ಲಿ ಸಂಪಾದಿಸುವ ಒಟ್ಟು ಪಾಲಿನಲ್ಲಿ ಸರಾಸರಿ ಮೂರನೆ ಒಂದು ಭಾಗ ಖರ್ಚು ಮಾಡುತ್ತಾರೆ. ಹಾಗಾಗಿ ನಾವು ಮನೆ ಕಟ್ಟುವ ಸಾಧನೆಯನ್ನು ಮಾಡಿದರೆ, ಮುಂದಿನ ಪೀಳಿಗೆಯವರು ಕಡೆ ಪಕ್ಷ ಮೂರನೆ ಒಂದು ಪಾಲಿನಷ್ಟು ವೇಳೆ ಅಥವಾ ಅವರು ಸಂಪಾದಿಸಬಹುದಾದ ಹಣವನ್ನು ಇತರೆ ಸಾಧನೆಗಳನ್ನು ಮಾಡಲು ಬಳಸಬಹುದು. ಆದರೆ ಒಂದು ವಿಚಾರ ಎಂದರೆ ಮನೆಕಟ್ಟಿ ಅದೇ ಮನೆಯಲ್ಲಿ ನೂರು ವರ್ಷ ಬದುಕುವವರು ನಮ್ಮಲ್ಲಿ ಕಡಿಮೆ.  ಇಡೀ ಜೀವನ ಪರ್ಯಂತ ದುಡಿದು ಕೊನೆಗಾಲದಲ್ಲಿ ಮನೆಕಟ್ಟುವವರೂ ಅಥವಾ ಬದುಕಿನ ನಡುಗಾಲದಲ್ಲಿ ಮನೆ ಕಟ್ಟುವವರು ಹೆಚ್ಚು. ಹೆಚ್ಚೆಂದರೆ 10-20 ವರ್ಷ ಮನೆ ಕಟ್ಟಿದವರು ಮನೆಯಲ್ಲಿ ವಾಸಮಾಡಬಹುದೇನೋ. ಅಮೆರಿಕಾದಲ್ಲಿ, ಸುಮಾರು ನೂರು ವರ್ಷಗಳ ಹಿಂದೆ ಅತಿ ಹೆಚ್ಚು ಮನೆಗಳನ್ನು ಕಟ್ಟಿ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿದ ಕಾರಣದಿಂದಲೇ ಅಲ್ಲಿ ಆ ನಂತರ ಅತಿ ಹೆಚ್ಚು ಪ್ರಯೋಗಶೀಲತೆ ಬೆಳೆಯಿತು ಎಂದೂ ಹೇಳಲಾಗುತ್ತದೆ. ಪ್ರತಿ ಮನೆ ಮುಂದಿನ ಪೀಳಿಗೆಗೆ ಹಸ್ತಾಂತರ ಗೊಂಡಾಗಲೂ ಆ ಪೀಳಿಗೆಗೆ ದೊಡ್ಡದೊಂದು ಜವಾಬಾœರಿಯಿಂದ ಮುಕ್ತವಾದಂತಾಗಿ ಸಾಕಷ್ಟು ಹಣ ಬಂಡವಾಳವಾಗಿಯೂ ಜೊತೆಗೆ ವೇಳೆಯನ್ನು ಪ್ರಯೋಗಶೀಲತೆಗೆ ಉಪಯೋಗಿಸಲು ಬಳುವಳಿಯಾಗಿ ನೀಡಿದಂತೆಯೂ ಆಗುತ್ತದೆ. 

ಸುದೃಢ ಮನೆ ಕಟ್ಟಿ
ಮನೆ ಕಟ್ಟಲು ನಿವೇಶನದ ಆಯ್ಕೆಯೂ ಬಲು ಮುಖ್ಯ. ಸೈಟಿಗೆ ಹೊಂದುವಂತೆ ಮನೆ ಕಟ್ಟಬೇಕು. ಸೈಟಿಗೆ ಹೊಂದುವಂತೆ ಮನೆಯ ಪಾಯ ಹಾಕಬೇಕು.  ಕೊನೆಗೆ ಸೈಟು ಹೇಗಿರುತ್ತದೋ ಹಾಗೇ ಮನೆಯನ್ನು ಕಟ್ಟಬೇಕು. ಅಂದರೆ ಸೈಟಿನ ವಾಸ್ತವ ರೂಪ/ ಸ್ಥಿತಿಯ ಆಧಾರದ ಮೇಲೆಯೇ ಮನೆ ಪ್ಲಾನ್‌ ತಯಾರಾಗಬೇಕಾಗುತ್ತದೆ. ನಿಮ್ಮ ಕಲ್ಪನೆ, ಕನಸಿನಂತೆ ಮನೆ ಕಟ್ಟಬೇಕಾದರೂ ಅದು ಸೈಟಿನ ಪ್ರಸ್ತುತ ಇರವಿಕೆಯ ಆಧಾರದ ಮೇಲೆಯೇ ಆಗಿರಬೇಕು.
ಎಲ್ಲವೂ ಒಟ್ಟಾರೆ ಮನೆ ಕಟ್ಟುವಿಕೆಯ ಮೇಲೆ ಪರಿಣಾಮ ಬೀರುವುದರಿಂದ ಗಮನ ಹೆಚ್ಚಿಗೆ ಕೊಡಬೇಕಾಗುತ್ತದೆ. ಇದರಂತೆ  ಗಟ್ಟಿಮುಟ್ಟಾದ ಪಾಯ ಹಾಕಲು ಗಟ್ಟಿ ಮಣ್ಣೂ ಕೂಡ ಮುಖ್ಯ. ಮನೆಯ ಮೇಲೆ ಒಟ್ಟಾರೆ ಭಾರ ಎಷ್ಟು ಬೀಳುತ್ತದೆ ಎಂದು ಲೆಕ್ಕಹಾಕಲು ಎಷ್ಟು ಮಹಡಿ ಕಟ್ಟುತ್ತೇವೆ? ಎನ್ನುವುದರ ಮೂಲಕ ನಿರ್ಧಾರಿತವಾಗುತ್ತದೆ.

ಕೆಲವೊಮ್ಮೆ ಒಂದು-ಎರಡು ಮಹಡಿ ಮಾತ್ರ ಎಂದು ಅಂದುಕೊಂಡು ಕಡಿಮೆ ಪಾಯ ಹಾಕಿ ನಂತರ ಒಂದು  ಮಹಡಿ ಹೆಚ್ಚುವರಿಯಾಗಿ ಹಾಕಿದರೆ, ಪಾಯದ ಮೇಲೆ ಅನಗತ್ಯವಾಗಿ ಲೋಡ್‌ ಹಾಕಿದಂತೆ ಆಗುತ್ತದೆ. ಅದಕ್ಕೆ ಬಜೆಟ್‌ ಹೇಗಿ ನಿಗದಿ ಮಾಡುತ್ತೀರೋ ಮನೆಯ ರೂಪರೇಶಗಳನ್ನು ಹಾಗೇ ಖಚಿತಮಾಡಿಕೊಳ್ಳಬೇಕು. ಒಂದು ಪ್ಲೋರ್‌ ಮನೆಯೋ, ಎರಡು ಫ್ಲೋರ್‌ ಮನೆಯೋ ಅಂತ ಮೊದಲು ತೀರ್ಮಾನಿಸಿರಬೇಕು.  ಭಾರ ಹೆಚ್ಚಾದಂತೆ ಎಲ್ಲ ಬಿರುಕುಗಳೂ ಪಾಯದಿಂದಾಗಿಯೇ ಬರುತ್ತದೆ ಎಂದೇನೂ ಅಲ್ಲದಿದ್ದರೂ, ಹೊರೆ ತಾಳಲಾರದೆ ಪಾಯ, ಸ್ವಲ್ಪ ಅಂದರೆ ಕೆಲವೇ ಎಮ್‌ ಎಮ್‌ ಕುಸಿದರೆ, ಇಡಿ ಮನೆ ಬೀಳದಿದ್ದರೂ ಕೆಲ ಮಾದರಿಯ ಬಿರುಕುಗಳು ಕಾಣಿಸಿಕೊಳ್ಳಬಹುದು. ಇವುಗಳ ಕಾರಣ ಹುಡುಕಿ, ಎಲ್ಲಿ ಹೆಚ್ಚು ಭಾರ ಬರುತ್ತಿದೆಯೋ ಅಲ್ಲಿ ಹೆಚ್ಚುವರಿ ಆಧಾರ ನೀಡುವುದು ಮನೆಯ ಬಾಳಿಕೆ ದೃಷ್ಟಿಯಿಂದ ಉತ್ತಮ.

ಸೂರಿನ ಸುದೃಢತೆ
ನಮ್ಮಲ್ಲಿ ಒಂದನ್ನು ಸ್ಟಾಂಡರ್‌x ಎಂದು ನಿರ್ಧರಿಸಿದ ರೀತಿಯಲ್ಲಿ ಎಲ್ಲಕ್ಕೂ ಒಂದೇ ಮಂತ್ರ ಎಂಬಂತಾಗಿದೆ. ಸೂರು ಎಂದರೆ ಐದು ಇಲ್ಲವೇ ಆರು ಇಂಚು ದಪ್ಪ ಎಂದಾಗಿದೆ. ಆದರೆ  ಆಧಾರ ನೀಡುವ ಗೋಡೆಗಳ ಅಂತರ ಹೆಚ್ಚಾದಂತೆಲ್ಲ, ಸ್ಲಾಬ್‌ ದಪ್ಪವೂ ಹೆಚ್ಚಾಗಬೇಕಾಗುತ್ತದೆ. ಸುಮಾರು ಹನ್ನೆರಡು ಹದಿನಾಲ್ಕು ಅಡಿ ಅಗಲದವರೆಗೂ ಆರು ಇಂಚು ಸಾಕಾದರೂ, ಹೆಚ್ಚು ಅಗಲ ಆದಂತೆ ಇದರ ದಪ್ಪವನ್ನೂ ಹೆಚ್ಚಿಸ ಬೇಕಾಗುತ್ತದೆ. ಇಲ್ಲವಾದರೆ, ಮಧ್ಯೆ ಸೂಕ್ತ ಬೀಮುಗಳನ್ನು ನೀಡಬೇಕು. 

ರೂಮುಗಳು ಸಾಮಾನ್ಯವಾಗಿ ಹೆಚ್ಚು ಅಗಲದ ಸ್ಪ್ಯಾನ್‌ ಹೊಂದಿರುವುದಿಲ್ಲ, ಅಲ್ಲೆಲ್ಲ ಆರು ಇಂಚಿನ ಆರ್‌ಸಿಸಿ ಸೂರು ಸಾಕಾಗುತ್ತದೆ. ಆದರೆ ಹೆಚ್ಚು ಸ್ಪ್ಯಾನ್‌ ಹೊಂದಿರುವ ಹಾಲ್‌- ಲಿವಿಂಗ್‌ ರೂಮುಗಳಿಗೆ ಸ್ವಲ್ಪ ದಪ್ಪದ ಸೂರನ್ನು ಹಾಕುವುದು ಅಗತ್ಯ. ಕೆಲವೊಮ್ಮೆ ಅರ್ಧ ಇಲ್ಲವೇ ಒಂದು ಇಂಚು ಹೆಚ್ಚುವರಿಯಾಗಿ ನೀಡಿದರೂ ಸಾಕಾಗುತ್ತದೆ. ಹೀಗೆ ಮಾಡುವುದರಿಂದ ಸೂರಿನ ಮಟ್ಟ ಒಂದಿಂಚು ಹೆಚ್ಚುವುದರಿಂದ, ಮಳೆಯ ನೀರು ಮೇಲ್‌ಮೈಯಲ್ಲಿ ಹೇಗೆ ಹರಿದು ಹೋಗುತ್ತದೆ ಎಂಬುದನ್ನು ಮೊದಲೇ ನಿರ್ಧರಿಸ ಬೇಕು. ಇಲ್ಲವೆ ಗೋಡೆಗಳನ್ನೇ ಒಂದು ಇಂಚಿನಷ್ಟು ಇಳಿಸಿದರೆ, ಹಾಲ್‌ ಭಾಗದಲ್ಲಿ ಒಂದು ಇಂಚಿನಷ್ಟು ದಪ್ಪದ ಸೂರು ಸರಾಗವಾಗಿ ಸಿಗುತ್ತದೆ. ತಲೆತಲಾಂತರ ಬಾಳುವ ಮನೆ ಕಟ್ಟುವುದು ಕಷ್ಟವೇನಲ್ಲ. ಒಂದು ಮನೆಯ ಗಟ್ಟಿತನ ಅದರ ಅತಿ ದುರ್ಬಲ ಭಾಗದಷ್ಟು ಮಾತ್ರ ಎಂದು ಹೇಳಲಾಗುತ್ತದೆ. ಆದುದರಿಂದ ಎಲ್ಲೂ ಕಡಿಮೆ ಮಾಡದೆ, ಸಾಕಷ್ಟು ಗಟ್ಟಿತನವನ್ನು ನೀಡಿದರೆ ನಿಮ್ಮ ಮನೆಯೂ ನಾಲ್ಕಾರು ಪೀಳಿಗೆಗೆ ಆಗುವ ರೀತಿಯಲ್ಲಿ ಧಾರಳವಾಗಿ ಬಾಳುತ್ತದೆ.

ಗೋಡೆ ಲೆಕ್ಕಾಚಾರ ಹೀಗೆ ಮಾಡಬಹುದು ನೋಡ್ರೀ..!
ನಿಮ್ಮ ಮನೆ ಭಾರ ಹೊರುವ ಮಾದರಿಯ ಸ್ಟ್ರಕ್ಚರ್ ಹೊಂದಿದ್ದರೆ, ಮೊದಲು ಯಾವ ಗೋಡೆ ಹೆಚ್ಚು ಭಾರ ಹೊರುತ್ತದೆ ಎಂದು ಲೆಕ್ಕಚಾರ ಮಾಡಬೇಕು. ಏಕೆಂದರೆ   ಆ ಗೋಡೆಗಳನ್ನು ಸುದೃಢ ಮಾಡುವುದು ಅಗತ್ಯ. ನೀವು ತಿಳಿದು ಕೊಳ್ಳಬೇಕಾದ ವಿಚಾರ ಏನೆಂದರೆ ಸಾಮಾನ್ಯವಾಗಿ ಮನೆಯ ಮಧ್ಯಭಾಗದಲ್ಲಿ ಬರುವ ಗೋಡೆ ಎರಡೂ ಕಡೆಯಿಂದ ಭಾರ ಹೊರುವ ಕಾರಣ, ಮಧ್ಯದ ಗೋಡೆ ಹೆಚ್ಚು ದಪ್ಪ ಇರಬೇಕು. ಇಲ್ಲವೆ ಈ ಗೋಡೆಯನ್ನು ಹೆಚ್ಚು ದುರ್ಬಲ ಗೊಳಿಸಬಾರದು. ಗೋಡೆಗಳು ದುರ್ಬಲವಾಗಲು ಮುಖ್ಯ ಕಾರಣ – ಅತಿ ಹೆಚ್ಚು ಬಾಗಿಲು, ಶೋಕೆಸ್‌, ಗೂಡು ಇತ್ಯಾದಿ ಬಂದರೆ, ಅಷ್ಟು ಭಾಗದಲ್ಲಿ ಗೋಡೆಗಳು ಇರುವುದಿಲ್ಲ. ಆದಕಾರಣ, ಹೆಚ್ಚು ಭಾರ ಹೊರಲು ಆಗುವುದಿಲ್ಲ. ಶೋಕೆಸ್‌, ಗೂಡುಗಳು ನಿಮಗೆ ಅನಿವಾರ್ಯ ಇದೆಯೇ, ಇದ್ದರೆ ಎಲ್ಲಿ ನಿರ್ಮಿಸಿದರೆ ಹೆಚ್ಚು ಉಪಯೋಗ ಎನ್ನುವುದನ್ನು ಮೊದಲೇ ತೀರ್ಮಾನಿಸಬೇಕು. 

ಹತ್ತು ಅಡಿ ಉದ್ದದ ಗೋಡೆಯಲ್ಲಿ ಮೂರೂವರೆ ಅಡಿಯ ಎರಡು ಬಾಗಿಲು ಬಂದರೆ, ಕಡೆಗೆ ಭಾರ ಹೊರಲು ಉಳಿಯುವುದು ಕೇವಲ ಎರಡು ಅಡಿಗಳಷ್ಟು ಗೋಡೆ ಮಾತ್ರ. ಏಕೆಂದರೆ, ಬಾಗಿಲಿನ ಚೌಕಟ್ಟು ಕೂರಿಸಲು ಅಂದರೆ ಅದರ ಮೇಲು ಭಾಗದ “ಕೊಂಬು’ ಹಾಗೂ ಪಕ್ಕದಲ್ಲಿ ಸಿಗಿಸುವ ಉಕ್ಕಿನ ಹೋಲ್ಡ್‌ ಫಾಸ್ಟ್‌- ಬಿಗಿ ಹಿಡಿಗಳಿಗಾಗಿ ಸರಾಸರಿ ಆರು ಇಂಚಿನಷ್ಟು ಎರಡೂ ಕಡೆ ಗೋಡೆಯನ್ನು ಕೊರೆಯಲಾಗುತ್ತದೆ. ಈ ಭಾಗ ಭಾರವನ್ನು ಹೊರುವುದಿಲ್ಲ.  ಹಾಗಾಗಿ ನೀವು ನಿಮ್ಮ ಮನೆಯ ಮುಖ್ಯ ಗೋಡೆಗಳನ್ನು ಕಿಟಕಿ ಬಾಗಿಲು ಮತ್ತೂಂದು ಕೂರಿಸಲು ಕೊರೆದು ಹಾಕಿದ್ದೀರಾ? ಎಂಬುದನ್ನು ಪರಿಶೀಲಿಸಿ. 

ಮನೆಯ ವಿನ್ಯಾಸ ಮಾಡುವಾಗಲೇ ಎಷ್ಟು ಗೋಡೆಗಳಲ್ಲಿ, ಎಷ್ಟು ಪಾಲು ತೆರೆದ ಸ್ಥಳಗಳು ಇರುತ್ತವೆ ಹಾಗೂ ಇದರಿಂದ ಉಂಟಾಗುವ ದುರ್ಭಲತೆಯನ್ನು ಹೇಗೆ ಹೋಗಲಾಡಿಸಬಹುದು ಎಂಬುದನ್ನು ಮೊದಲೇ ಪರಿಶೀಲಿಸುವುದು ಅತ್ಯಗತ್ಯ. 

ಕಿಟಕಿ ಬಾಗಿಲುಗಳು ಮುಖ್ಯವಾದರೂ, ಅವುಗಳಿಂದಾಗಿ ಕಳೆದುಕೊಂಡ  ಸ್ಥಳವನ್ನು ಇತರೆ ವಿಧಾನದಲ್ಲಿ ತುಂಬಿದರೆ ಮನೆ ನಿಜಕ್ಕೂ ಹೆಚ್ಚು ಸುದೃಢವಾಗುತ್ತದೆ. ಕೆಲವೊಮ್ಮೆ ಗೋಡೆಗಳು ಕಡಿಮೆ ಇರುವ ಜಾಗಗಳಲ್ಲಿ, ಪ್ಲಿಂತ್‌ ಮಟ್ಟದಿಂದ ಸಣ್ಣದೊಂದು ಕಾಲಂ ಶುರುಮಾಡಿ ಸೂರಿನವರೆಗೂ ತೆಗೆದುಕೊಂಡು ಹೋಗುವ ಪರಿಪಾಟವಿದೆ. ಹೀಗೆ ಮಾಡಲು ಪ್ಲಿಂತ್‌ಗೆ ಉಕ್ಕಿನ ಸರಳುಗಳನ್ನು ಅಳವಡಿಸಿದರೆ ಸದೃಢವಾಗಿರುತ್ತದೆ. ರೇನ್‌ ಫೋರ್ಡ್‌ ಕಾಂಕ್ರಿಟ್‌ ಪ್ಲಿಂತ್‌ಗಳಿಂದ ಅಗತ್ಯಕ್ಕೆ ತಕ್ಕಂತೆ ನಾಲ್ಕಾರು ಕಡೆಯೂ ಸಣ್ಣ ಸಣ್ಣ ಕಾಲಂಗಳನ್ನು ಶುರು ಮಾಡಬಹುದು. ಈ ಕಾಲಂಗಳು ಸಾಮಾನ್ಯವಾಗಿ ಒಂಭತ್ತು ಇಂಚಿಗೆ ಒಂಬತ್ತು ಇದ್ದು, ನೆಲಪಾಯದ ಮಟ್ಟದಿಂದ ಬಾರದೆ, ಭೂಮಿಯ ಮಟ್ಟದಿಂದ ಸುಮಾರು ಒಂದು ಅಡಿ ಎತ್ತರದಲ್ಲಿ ಅಂದರೆ ಪ್ಲಿಂತ್‌ ಶುರುವಾಗುವ ಮಟ್ಟದಿಂದ ಮಾತ್ರ ಹಾಕಲಾಗುತ್ತದೆ.

– ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.