Udayavni Special

ಧೂಳ್‌ ಮಗಾ ಧೂಳ್‌


Team Udayavani, Mar 17, 2019, 12:52 PM IST

s-7.jpg

ಚಳಿಗಾಲ ಬಂದಾಗ ನೆಗಡಿ, ಬೇಸಿಗೆ ಬಂದಾಗ ಒಣಕೆಮ್ಮು ಬರುತ್ತದೆ. ಇದಕ್ಕೆ ಕಾರಣ ಗೊತ್ತಾ? ಅದುವೇ ನಮ್ಮ ಮನೆ ಮತ್ತು ಅದರ ರಚನೆ.  ಮನೆ ಕಟ್ಟುವಾಗಲೇ ಋತುಮಾನಕ್ಕೆ ತಕ್ಕಂತೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗುವಂತೆ ಆರ್ಕಿಟೆಕ್ಟ್ ಮಾಡಬಹುದು. ಅದು ಹೇಗೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.  

ಮಾರ್ಚ್‌ ತಿಂಗಳಲ್ಲೇ ರಣ ಬೇಸಿಗೆ ಕಾಲು ಚಾಚಿ ಕುಳಿತುಕೊಂಡಿದೆ. ಕೆಮ್ಮು, ಕಫ‌ ಆಗಾಗ ನಿಮ್ಮನ್ನೂ ಬಾಧಿಸುತ್ತಿರಬೇಕು. ಹೌದು, ಇದು ಧೂಳಿನದೇ ಕೆಲಸ. ಬೇಸಿಗೆ ಶುರುವಾದರೆ ಬಿಸಿ ಹವೆಯ ಜೊತೆಗೆ ಧೂಳು ಕೂಡ ಹರಡುತ್ತದೆ.

ಈಶಾನ್ಯ ಮಾನ್‌ಸೂನ್‌ ಅವಧಿಯಲ್ಲಿ ಹೀಗೇನೆ.  ಹಿಂಗಾರು ಮಳೆ ಬಿದ್ದಾಗ ಧೂಳು ಕಡಿಮೆ ಆದರೂ ಮಳೆ ಬೀಳದ ಅವಧಿಯಲ್ಲಿ ಒಣ ಹವಾಮಾನ ಹೆಚ್ಚುತ್ತಿದ್ದಂತೆ ಧೂಳು ಹೆಚ್ಚಾಗುತ್ತದೆ. ಹಿಂಗಾರು ಗಾಳಿ ಬಹುತೇಕ ಈಶಾನ್ಯ ಅಂದರೆ ಉತ್ತರ ಭಾರತದ ಭೂಪ್ರದೇಶದಿಂದ ದಕ್ಷಿಣದತ್ತ ಬೀಸುವುದರಿಂದ ಒಣಮಣ್ಣಿನಿಂದ ಎದ್ದ ಧೂಳು, ಗಾಳಿಯೊಂದಿಗೆ ಬೆರೆತು ಹೋಗುತ್ತದೆ. ಮುಂಗಾರು ಗಾಳಿ ಸಮುದ್ರದ ಕಡೆಯಿಂದ ಬೀಸುವುದರಿಂದ ನಮಗೆ ಈ ಅವಧಿಯಲ್ಲಿ ಧೂಳಿನ ಸಮಸ್ಯೆ ಇರುವುದಿಲ್ಲ. ಈ ಬಾರಿ ಬೇಸಿಗೆಗೂ ಮೊದಲೇ ಸೆಖೆ ಸುರುವಾಗಿರುವುದರಿಂದ ನೆಲವೂ ಒಣಗಿ, ಧೂಳಿನ ಸಮಸ್ಯೆ ಹೆಚ್ಚಾಗಿದೆ. ವಿವಿಧ ಋತುಗಳು ವಿವಿಧ ಅನುಕೂಲಗಳನ್ನು ತರುವಂತೆಯೇ ಅನಾನುಕೂಲಗಳನ್ನೂ ತರುತ್ತವೆ. ಅವುಗಳಿಗೆ ಸರಿಹೊಂದುವಂತೆ ನಮ್ಮ ಮನೆಗಳನ್ನು ವಿನ್ಯಾಸ ಮಾಡಿಕೊಂಡರೆ, ಹವಾಮಾನದ ವೈಪರಿತ್ಯಗಳಿಂದ ರಕ್ಷಣೆ ಪಡೆದು ಆರಾಮವಾಗಿ ಇರಬಹುದು.

ಧೂಳಿನ ಪ್ರವೇಶ
ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಚಳಿಗಾಲದಲ್ಲಿ ಹೆಚ್ಚಾ ಕಡಿಮೆ ಮುಚ್ಚಿಯೇ ಇಡುತ್ತಿದ್ದ ಕಿಟಕಿ ಬಾಗಿಲುಗಳೆಲ್ಲ ಈಗ ತೆರೆದಿಡಲಾಗುತ್ತಿದೆ. ಬರಿ ಗಾಳಿಯಷ್ಟೇ ಬೀಸಿ ಬಂದರೆ ಏನೂ ತೊಂದರೆ ಆಗುವುದಿಲ್ಲ. ಆದರೆ ಈ ಅವಧಿಯಲ್ಲಿ ಬೀಸುವ ಗಾಳಿಯಲ್ಲಿ ಸಾಕಷ್ಟು ಧೂಳಿನ ಕಣಗಳಿರುವುದರಿಂದ ಮನೆಯೊಳಗೆ ಧೂಳಿನ ಪ್ರವೇಶವೂ ಆಗಿಬಿಡುತ್ತದೆ. ಬಹುಪಾಲು ಧೂಳು ನೆಲದ ಮೇಲೆ ಕೂರುವುದರಿಂದ ಸಂಜೆಯ ಹೊತ್ತು ಮನೆಗೆ ತಿರುಗಿ ಬಂದು ಫ್ಯಾನ್‌ ಹಾಕಿದರೆ, ಕಣಗಳೆಲ್ಲವೂ ಮೇಲೆದ್ದು ಎಲ್ಲೆಡೆ ಹರಡಲು ತೊಡಗುತ್ತದೆ. ಅನೇಕರಿಗೆ ಒಣ ಹವಾಮಾನದಲ್ಲಿ ಸ್ವಲ್ಪ ಧೂಳು ಇರುವ ಗಾಳಿ ತಾಗಿದರೂ ಮೂಗು ಸೇರಿ, ಸೀನು ಶುರುವಾಗುತ್ತದೆ. ಧೂಳು ತುಂಬಿದ ಗಾಳಿಯನ್ನೇ ಫ್ಯಾನ್‌ಗಳೂ ಕೂಡ ರಾತ್ರಿ ಇಡೀ ತಿರುಗಿಸಿಹಾಕುವುದರಿಂದ, ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಕಿಟಕಿಗೆ ಹಾಕುವ ಕರ್ಟನ್‌ಗಳಿಗೂ ಸಾಕಷ್ಟು ಧೂಳು ತಗುಲಿಕೊಳ್ಳುತ್ತದೆ ಹಾಗೂ ಇದೂ ಕೂಡ ಗಾಳಿ ಸ್ವಲ್ಪ ಬೀಸಿದರೂ ಕೋಣೆಯೊಳಗೆ ಹಾರಾಡುತ್ತದೆ. ಇದೇ ರೀತಿಯಲ್ಲಿ ಎಲ್ಲೆಲ್ಲಿ ಅಡ್ಡ ಸ್ಥಳಗಳು – ಕಿಟಕಿಯ ಬದಿ, ವಾರ್ಡ್‌ರೋಬ್‌, ಶೆಲ್ಫ್ ಇತ್ಯಾದಿಗಳ ಮೇಲೂ ಸಾಕಷ್ಟು ಧೂಳು ಜಮೆಯಾಗಿ, ಫ್ಯಾನ್‌ ಹಾಕಿದೊಡನೆ ಎಲ್ಲೆಡೆ ಚಿಮ್ಮ ತೊಡಗುತ್ತದೆ. ಇನ್ನು ಮುಖ್ಯ ರಸ್ತೆಗಳ ಬದಿಯಲ್ಲಿ ಮನೆ ಇದ್ದರಂತೂ ಮತ್ತೂ ಹೆಚ್ಚಿನ ಧೂಳು ಎದ್ದು ವಾಹನಗಳ ಹೊಗೆಯೊಂದಿಗೆ ಸೇರಿ, ಮತ್ತೂ ಹೆಚ್ಚಿನ ಮಾಲಿನ್ಯ ಉಂಟುಮಾಡಬಲ್ಲದು.

ಧೂಳು ನಿಯಂತ್ರಣ
ಮನೆಗಳ ಒಳಗೆ ಸಾಮಾನ್ಯವಾಗೇ ಧೂಳು ಪ್ರವೇಶಿಸುವುದು ಕಿಟಕಿ ಬಾಗಿಲುಗಳಿಂದ ಆದಕಾರಣ, ನಾವು ಮನೆಯ ವಿನ್ಯಾಸ ಮಾಡುವಾಗ ಕೆಲ ವಿಷಯಗಳನ್ನು ಗಮನಿಸಬೇಕಾಗುತ್ತದೆ. ಮುಖ್ಯ ರಸ್ತೆ ಇಲ್ಲವೇ, ತೆರೆದ ಸ್ಥಳಗಳಿಂದ ಮನೆಯೊಳಗೆ ಧೂಳಿನ ಸಮಸ್ಯೆ ಎದುರಾಗಬಹುದು ಎಂದಾದರೆ, ದೊಡ್ಡ ಕಿಟಕಿಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಮನೆಯ ವಿನ್ಯಾಸವನ್ನು ರಸ್ತೆಗೆ ಕೋನದಲ್ಲಿರುವಂತೆ ವಿನ್ಯಾಸ ಮಾಡಿದರೆ, ಅತಿ ಹೆಚ್ಚು ಧೂಳು ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು. ನಾನಾ ಕಾರಣಗಳಿಂದ ಇಡೀ ಮನೆಯನ್ನು ಕೋನದಲ್ಲಿ ಪ್ಲ್ಯಾನ್‌ ಮಾಡಲು ಸಾಧ್ಯ ಆಗದಿದ್ದರೂ, ಕಡೇ ಪಕ್ಷ ಕಿಟಕಿಗಳನ್ನಾ ಹೊರಚಾಚಿದಂತೆ ವಿನ್ಯಾಸ ಮಾಡಿ ಮುಖ್ಯ ರಸ್ತೆಗೆ ಒಂದು ಕೋನದಲ್ಲಿ, ಬರುವಂತೆ ಮಾಡಿ, ನೇರವಾಗಿ ಧೂಳು ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು. ಈ ಹಿಂದೆ ನಮ್ಮಲ್ಲಿ ಜನಪ್ರಿಯವಾಗಿದ್ದ “ಕೋರ್ಟ್‌ಯಾರ್ಡ್‌’ ಮನೆ ಅಂದರೆ, ಮನೆಯ ಮಧ್ಯಭಾಗದಲ್ಲಿ ತೆರೆದಂತಿರುತ್ತಿದ್ದ ವಿನ್ಯಾಸಗಳಲ್ಲಿ, ಹೊರಗಿನ ಧೂಳು ಒಳಗೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಇತ್ತು. ಈಗಲೂ ನಾವು ನಮ್ಮ ಮನೆಯ ಕಿಟಕಿಗಳ ಮುಂದೆ ಸ್ವಲ್ಪವಾದರೂ ತೆರೆದ ಸ್ಥಳ ಇರುವಂತೆ ಮಾಡಿಕೊಂಡು, ಒಂದಷ್ಟು ಹಸಿರನ್ನು ಬೆಳೆಸಿದರೆ, ಧೂಳಿನ ಸಮಸ್ಯೆ ಬಹುಪಾಲು ಕಡಿಮೆ ಆಗುತ್ತದೆ.

ಹಸಿರಿನಿಂದ ಸಮಸ್ಯೆ ದೂರ
ಹಸಿರೆಲೆಗಳಿಗೆ ಧೂಳನ್ನು ಆಕರ್ಷಿಸುವ ವಿಶೇಷ ಗುಣ ಇರುತ್ತದೆ. ಮನೆಯ ಕಿಟಕಿಗಳ ಮುಂದೆ ಸಣ್ಣದೊಂದು ಪ್ಲಾಂಟರ್‌ – ಉದ್ದನೆಯ ಹೂಕುಂಡ ವಿನ್ಯಾಸ ಮಾಡಿಕೊಂಡು ಒಂದಷ್ಟು ಗಿಡಗಳನ್ನು ಬೆಳೆಸಿದರೆ, ನೋಡಲು ಚಿತ್ತಾಕರ್ಷಕವಾಗಿ ಇರುವಂತೆಯೇ ಧೂಳನ್ನೂ ತಡೆಯುತ್ತದೆ. ಅನೇಕ ಮಾದರಿಯ ಗಿಡಗಳು ವಾತಾವರಣದಿಂದ ಧೂಳನ್ನೇ ಹೀರಿಕೊಂಡು, ಜೀಣಿಸಿಕೊಳ್ಳುವ ಶಕ್ತಿಯೂ ಇರುತ್ತದೆ. ಈ ಕಾರಣದಿಂದಲೇ ಹನಿ ನೀರಾವರಿಯಂತೆ ಗಿಡಗಳಿಗೆ ಸೂಕ್ಷ್ಮ ಪೋಶಕಾಂಶಗಳನ್ನು, ಮಣ್ಣಿಗೆ ಹಾಕಿದರೆ ಪೋಲಾಗಬಹುದೆಂದು, ನೇರವಾಗಿ ಎಲೆಗಳ ಮೇಲೆಯೇ
ಸ್ಪ್ರೆ ಮಾಡುವುದು! ಹಸಿರು ಗಿಡಗಳಿಗೆ ನಾವು ಹಾಕುವ ನೀರನ್ನು ದಿನವಿಡೀ ಹೊರಬಿಡುವುದರಿಂದಲೂ ನಮ್ಮ ಮನೆಯೊಳಗೆ ಸಾಕಷ್ಟು ತೇವಾಂಶ ಸೇರ್ಪಡೆ ಆಗುತ್ತದೆ. ಹಿಂಗಾರು ಅವಧಿಯಲ್ಲಿ ಗಾಳಿ ತೀರ ಒಣಗಿದ ಸ್ಥಿತಿಯಲ್ಲಿ ಇರುವುದರಿಂದ, ಹಸಿರನ್ನು ಮನೆಯ ಸುತ್ತಲೂ ಬೆಳಸಬೇಕು. ಹೀಗೆ ಮಾಡಿದರೆ ಮನೆಯೊಳಗಿನ ತೇವಾಂಶ ಹೆಚ್ಚಿ ಧೂಳಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ.

ತೇವಾಂಶದ ಲೆಕ್ಕಾಚಾರ
ತೇವಾಂಶ ಕಡಿಮೆ ಆದಷ್ಟೂ ಧೂಳಿನ ಕಿರಿಕಿರಿ ಹೆಚ್ಚುತ್ತದೆ. ಒಮ್ಮೆ ಒಳಾಂಗಣದ ವಾತಾವರಣದಲ್ಲಿ ತೇವಾಂಶ ಹೆಚ್ಚಾದರೆ, ಧೂಳು ನೆಲಕ್ಕೆ ಅಂಟಿ, ಫ್ಯಾನ್‌ ಬೀಸಿದರೂ ಮೇಲೇಳಲು ಆಗುವುದಿಲ್ಲ. ಹಿಂಗಾರು ಅವಧಿಯಲ್ಲಿ ಸರಾಸರಿ ತೇವಾಂಶ ಶೇ. 30ರಷ್ಟು ಇರುತ್ತದೆ. ಇದನ್ನು ಐವತ್ತು ಇಲ್ಲವೇ ಅರವತ್ತಕ್ಕೆ ಏರಿಸಿದರೆ ನಮ್ಮ ಶ್ವಾಸನಾಳಗಳಿಗೂ ಉತ್ತಮ. ವಿಶೇಷವಾಗಿ ಒಣಕೆಮ್ಮು ಹಾಗೂ ವಿವಿಧ ಅಲರ್ಜಿಗಳಿಂದ ಬಳಲುವವರಿಗೆ, ವಾತಾವರಣದ ಕಡಿಮೆ ತೇವಾಂಶ ಅತಿ ಹೆಚ್ಚು ಕಿರಿಕಿರಿ ಮಾಡಬಲ್ಲದು. ಹಾಗಾಗಿ, ಮನೆಯೊಳಗೆ ಒಂದಷ್ಟು ತೇವಾಂಶ ಹೆಚ್ಚುವಂತೆಯೂ ನಾವು ಮಾಡಬಹುದು. ಆಯಾ ತಾಪಮಾನಕ್ಕೆ ಸರಿಹೊಂದುವಂತೆ ವಾತಾವರಣದಲ್ಲಿ ತೇವಾಂಶ ಇರಬೇಕು ಎಂದು ನಮ್ಮ ದೇಹ ಅಪೇಕ್ಷಿಸುತ್ತದೆ. ಚಳಿಗಾಲದಲ್ಲಿ ಕಡಿಮೆ ತಾಪಮಾನಕ್ಕೆ ಸರಿಹೊಂದುವಷ್ಟು ತೇವಾಂಶ ಇದ್ದರೆ ಸಾಕಾಗುತ್ತದೆ. ಆದರೆ ಬಿಸಿಲೇರಿದಂತೆ ಚರ್ಮ ಒಡೆಯುವುದು, ತುಟಿ ಬಿರಿಯುವಂಥ ಸಮಸ್ಯೆಗಳೆಲ್ಲ ಜೊತೆಯಾಗುತ್ತವೆ.  ಆಗುವುದು ಸಾಮಾನ್ಯವಾಗಿ ಒಣ ಶಾಖದ ಕಿರಿಕಿರಿ ಬೇಸಿಗೆಯ ಶುರುವಿನಲ್ಲಿ ಹೆಚ್ಚಿರುತ್ತದೆ. ಇದರ ಜೊತೆ ಧೂಳಿನ ಸಮಸ್ಯೆಯೂ ಸೇರಿಕೊಳ್ಳುವುದನ್ನು ತಪ್ಪಿಸಲು ಈ ಋತುಮಾನದಲ್ಲಿ ನಾವು ಧೂಳಿನ ನಿಯಂತ್ರಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಮನೆಯೊಳಗೆ ಧೂಳು ತುಂಬಿದ ಬಿಸಿಗಾಳಿಯನ್ನು ನೇರವಾಗಿ ಬಿಟ್ಟುಕೊಳ್ಳುವ ಬದಲು, ಅವುಗಳನ್ನು ಗಿಡಗಳ ಹಸಿರೆಲೆಗಳ ಮೂಲಕ ಹಾಯ್ದುಬರುವಂತೆ ಒಂದಷ್ಟು “ವರ್ಟಿಕಲ್‌ ಗಾರ್ಡನ್‌’ ಮಾಡಿಕೊಳ್ಳಬಹುದು. ಕಿಟಕಿಯ ಅಕ್ಕ ಪಕ್ಕ ಇಲ್ಲವೇ ಅದರ ಮುಂದೆ ಒಂದು ಭಾಗದಲ್ಲಿ, ಒಂದು ಕೋನದಲ್ಲಿ ಒಂದಷ್ಟು ಗಿಡಗಳನ್ನು ಒಂದರ ಮೇಲೆ ಬರುವಂತೆ ಹಸಿರು ಹೋಡೆಯನ್ನು ನಿರ್ಮಿಸಿದರೂ, ನಮಗೆ ಸಾಕಷ್ಟು ರಕ್ಷಣೆ ಒದಗುತ್ತದೆ.

ನಮ್ಮ ದೇಹ ನೈಸರ್ಗಿಕವಾಗಿ ಒಂದು ರೀತಿಯ ವಾತಾವರಣಕ್ಕೆ ಹೊಂದಿಕೊಂಡಿರುತ್ತದೆ. ಹವಾಮಾನ ವೈಪರಿತ್ಯಗಳು, ನಗರೀಕರಣ ಕೆಲ ತೊಂದರೆಗಳನ್ನು ಉಲ್ಬಣಿಸುವಂತೆ ಮಾಡುತ್ತದೆ. ಇವುಗಳಿಗೆ ನಾವು ಸಕಾಲದಲ್ಲಿ ಸರಳ ಉಪಾಯಗಳನ್ನು ಕಂಡುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ- 98441 32826

ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಜಾತಿಗಿಂತ ನೀತಿ, ಸಾಧನೆ ಮೇಲ್ಪಂಕ್ತಿಯಾಗಲಿ:ಅಂಗಾರ

ಜಾತಿಗಿಂತ ನೀತಿ, ಸಾಧನೆ ಮೇಲ್ಪಂಕ್ತಿಯಾಗಲಿ:ಅಂಗಾರ

ಕೊಲ್ಲಮೊಗ್ರು: ಮುಳುಗಿದ ಸೇತುವೆ; ಭಾರೀ ಮಳೆ: ಮತ್ತೆ ಕೃಷಿ ಚಟುವಟಿಕೆಗಳಿಗೆ ತೊಂದರೆ

ಕೊಲ್ಲಮೊಗ್ರು: ಮುಳುಗಿದ ಸೇತುವೆ; ಭಾರೀ ಮಳೆ: ಮತ್ತೆ ಕೃಷಿ ಚಟುವಟಿಕೆಗಳಿಗೆ ತೊಂದರೆ

ಸಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌: ಕರ್ನಾಟಕ ಟಿ20 ತಂಡ ಪ್ರಕಟ

ಸಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌: ಕರ್ನಾಟಕ ಟಿ20 ತಂಡ ಪ್ರಕಟ

ಸ್ಮಾರ್ಟ್‌ ಸಿಟಿ: ಜೈಲ್‌ ರೋಡ್‌ ಅಭಿವೃದ್ಧಿ ಕಾಮಗಾರಿ ಆರಂಭ

ಸ್ಮಾರ್ಟ್‌ ಸಿಟಿ: ಜೈಲ್‌ ರೋಡ್‌ ಅಭಿವೃದ್ಧಿ ಕಾಮಗಾರಿ ಆರಂಭ

ಧರ್ಮ ಅನುಸರಿಸುವುದರಿಂದ ಆತ್ಮ ಕಲ್ಯಾಣ ಸಾಧ್ಯ: ಡಾ| ವೀರೇಂದ್ರ ಹೆಗ್ಗಡೆ

ಧರ್ಮ ಅನುಸರಿಸುವುದರಿಂದ ಆತ್ಮ ಕಲ್ಯಾಣ ಸಾಧ್ಯ: ಡಾ| ವೀರೇಂದ್ರ ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.