ನಿಮ್ಮಿಷ್ಟದ ಗ್ಯಾಜೆಟ್‌ ಕೊಳ್ಳಲು ಇದು ಸಕಾಲ..!


Team Udayavani, Sep 24, 2018, 6:00 AM IST

nimmishtada.jpg

ಸೆಪ್ಟೆಂಬರ್‌ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ಬಾರ ಮೂರರಿಂದ ನಾಲ್ಕು ದಿನಗಳ ಕಾಲ ಈ ಸೇಲ್‌ ಇರುತ್ತದೆ. ಅಮೆಜಾನ್‌ ಎಸ್‌ಬಿಐ  ಕಾರ್ಡ್‌ಗೆ ಹಾಗೂ ಫ್ಲಿಪ್‌ಕಾರ್ಟ್‌ ಎಚ್‌ಡಿಎಫ್ಸಿ ಕಾರ್ಡ್‌ಗೆ ಎಕ್ಸ್‌ಟ್ರಾ ಡಿಸ್ಕೌಂಟ್‌ ಆಫ‌ರ್‌ ನೀಡಲಿವೆ.   ಆಫ‌ರ್‌ ಇರುವ ದಿನ ಮೊದಲಿಗೇ ನೀವು ಕೊಳ್ಳಬೇಕೆಂದಿರುವ ಗ್ಯಾಜೆಟ್‌ಗಳನ್ನು ಕೊಂಡುಬಿಡಿ. 

ಗ್ಯಾಜೆಟ್‌ ಗಳನ್ನು ಕೊಳ್ಳಬೇಕೆಂದುಕೊಂಡಿರುವವರು ಇನ್ನೊಂದು ವಾರ ಕಾಯುವುದೊಳಿತು! ಆನ್‌ ಲೈನ್‌ ಮಾರಾಟದ ದೈತ್ಯ ಸಂಸ್ಥೆಗಳಾದ ಅಮೆಝಾನ್‌ ಮತ್ತು ಫ್ಲಿಪ್‌ ಕಾರ್ಟ್‌ ವರ್ಷಕ್ಕೊಮ್ಮೆ ಮಾತ್ರ  ಆಯೋಜಿಸುವ ಭಾರಿ ರಿಯಾಯಿತಿ ಮಾರಾಟದ ದಿನಗಳು ಮತ್ತೆ  ಬಂದಿವೆ! ಫ್ಲಿಪ್‌ ಕಾರ್ಟ್‌,  ಬಿಗ್‌ ಬಿಲಿಯನ್‌ ಡೇಸ್‌ ಎಂಬ ಹೆಸರಿನಲ್ಲಿ ಹಾಗೂ ಅಮೆಝಾನ್‌ ಕಂಪನಿ, ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಹೆಸರಿನಲ್ಲಿ ಮಾರಾಟ ಮೇಳ ಹಮ್ಮಿಕೊಂಡಿವೆ. 

ಬಹು ದಿನಗಳಿಂದ ಕೊಳ್ಳಬೇಕೆಂದುಕೊಂಡಿದ್ದ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ಕ್ಯಾಮರಾ, ಸ್ಮಾರ್ಟ್‌ ಟಿವಿ ಇತ್ಯಾದಿಗಳನ್ನು ಕೊಳ್ಳಲು ಇದು ಸಕಾಲ. ಈ ಬಿಗ್‌ ಬಿಲಿಯನ್‌ ಡೇಸ್‌ ಎಂಬ ಕಾನ್ಸೆಪ್ಟ್ ಅನ್ನು ಮೊದಲು ಜಾರಿಗೊಳಿಸಿದ್ದು ಫ್ಲಿಪ್‌ಕಾರ್ಟ್‌. ಫ್ಲಿಪ್‌ಕಾರ್ಟ್‌, 2014ರ ಅಕ್ಟೋಬರ್‌ ನಲ್ಲಿ ಮೊದಲ ಬಾರಿಗೆ ಬಿಗ್‌ ಬಿಲಿಯನ್‌ ಡೇ ಎಂಬ ಹೆಸರಿನ ಸೇಲ್‌ ಆರಂಭಿಸಿತು. ಗ್ರಾಹಕರು ನಿರೀಕ್ಷಿಸಿರದ ಬೆಲೆಯಲ್ಲಿ ಆಗ ಮೊಬೈಲ್‌ ಫೋನ್‌ಗಳು, ಗ್ಯಾಜೆಟ್‌ಗಳು ಮಾರಾಟಕ್ಕಿದ್ದವು. ಅಂದು 15 ಲಕ್ಷ ಜನರು ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್‌ ಮಾಡಿದ್ದರು! ಬೇಡಿಕೆ ಪೂರೈಸುವುದು ಕಷ್ಟವಾಯಿತು.

ಎಲ್ಲರೂ ಏಕಕಾಲಕ್ಕೆ ಇಂರ್‌ನೆಟ್‌ ಬಳಸಿದ್ದರಿಂದ, ಸರ್ವರ್‌ ಹ್ಯಾಂಗ್‌ ಆಯಿತು! ಆವತ್ತು ಬಹುತೇಕ ವಸ್ತುಗಳು ಕೆಲವೇ ನಿಮಿಷಗಳಲ್ಲಿ ಖಾಲಿಯಾದವು. ಅದಾದ ಬಳಿಕ ವರ್ಷಕ್ಕೊಮ್ಮೆ ಸಾಮಾನ್ಯವಾಗಿ ಸೆಪ್ಟೆಂಬರ್‌ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ವಾರ ಬಿಗ್‌ ಬಿಲಿಯನ್‌ ಡೇ ಸೇಲ್‌ ಅನ್ನು ಫ್ಲಿಪ್‌ ಕಾರ್ಟ್‌ಆಯೋಜಿಸುತ್ತಾ ಬಂದಿದೆ. ಆದರೆ, ಮೊದಲ ಸೇಲ್‌ನಂತೆ 1 ರೂ.ಗೆ  ಹ್ಯಾಂಡ್‌ ಬ್ಲೆಂಡರ್‌, 600 ರೂ.ಗೆ 2 ಟಿಬಿ ಹಾರ್ಡ್‌ಡಿಸ್ಕ್ ನಂತಹ ಅತಿ ಅಗ್ಗದ ಬೆಲೆಗೆ ಸೇಲ್‌ ಮಾಡುವ ದುಸ್ಸಾಹಸ ಮಾಡಲಿಲ್ಲ.

ಬದಲಿಗೆ, ಎಂದಿನ ಮಾರಾಟಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಗ್ಯಾಜೆಟ್‌ ಹಾಗೂ ಗೃಹೋಪಯೋಗಿ ವಸ್ತು ಗಳನ್ನು ಮಾರಾಟ ಮಾಡುವ ಮೇಳವನ್ನಾಗಿ ಮಾಡಿತು. ಫ್ಲಿಪ್‌ಕಾರ್ಟ್‌ ಹೀಗೆ ಮಾಡಲು ಶುರು ಮಾಡಿದ ಮೇಲೆ  ವಿಶ್ವದ ಆನ್‌ಲೈನ್‌ ಮಾರಾಟ ದೈತ್ಯ ಅಮೆಜಾನ್‌ ಸುಮ್ಮನಿರಲು ಸಾಧ್ಯವೇ? ಅದೂ ಸಹ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಹೆಸರಿನ ಮಾರಾಟ ಆರಂಭಿಸಿತು. 

ಸಾಮಾನ್ಯವಾಗಿ, ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಕಂಪೆನಿಗಳು ಗಣರಾಜ್ಯೋತ್ಸವಕ್ಕೆ, ಸ್ವಾತಂತ್ರ್ಯ ದಿನಾಚರಣೆಗೆ, ದೀಪಾವಳಿಗೆ ರಿಯಾಯಿತಿ ಮಾರಾಟ ಮಾಡುತ್ತವೆ. ಆಗಲೂ ಅನೇಕ ಆಫ‌ರ್‌ಗಳಿರುತ್ತವೆ. ಆದರೆ ಬಿಗ್‌ ಬಿಲಿಯನ್‌ ಡೇ ಹೆಸರಿನ ಮಾರಾಟದಲ್ಲಿ ಅತ್ಯಂತ ಹೆಚ್ಚಿನ ರಿಯಾಯಿತಿ ಗ್ರಾಹಕರಿಗೆ ದೊರಕುತ್ತದೆ. ಮೊಬೈಲ್‌ ಕಂಪೆನಿಗಳು ಅಮೇಜಾನ್‌ ಅಥವಾ ಫ್ಲಿಪ್‌ಕಾರ್ಟ್‌ಗೆ ಎಕ್ಸ್‌ಕ್ಲುಸಿವ್‌ ಆಗಿ ಮಾರಾಟಕ್ಕೆ ಕೊಡುವ ಮೊಬೈಲ್‌ಗ‌ಳಿಗೆ ಅದರ ತಯಾರಿಕಾ ವೆಚ್ಚಕ್ಕಿಂತ ಅಲ್ಪಲಾಭ ಇಟ್ಟುಕೊಂಡು ಮಾರಾಟಕ್ಕೆ ಬಿಟ್ಟಿರುತ್ತವೆ.

ಎಂದಿನ ದಿನಗಳಲ್ಲೂ ಇವುಗಳ ದರ ಅಂಗಡಿಗಳಲ್ಲಿ ಕೊಳ್ಳುವ ಮೊಬೈಲ್‌ಗ‌ಳಿಗಿಂತ ಕಡಿಮೆಯೇ. ಆದರೆ  ಬಿಗ್‌ ಬಿಲಿಯನ್‌ ಡೇ ಅಥವಾ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸಂದರ್ಭದಲ್ಲಿ ಇನ್ನೂ ಕಡಿಮೆಯಾಗುತ್ತದೆ. ಉದಾಹರಣೆಗೆ ಒಂದು ಮೊಬೈಲ್‌ ಅಮೇಜಾನ್‌ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ 15 ಸಾವಿರಕ್ಕೆ ಮಾರಾಟವಾಗುತ್ತಿದೆ ಎಂದುಕೊಳ್ಳೋಣ. ಆಫ‌ರ್‌ ಸಂದರ್ಭದಲ್ಲಿ  ಅದನ್ನು 13 ಸಾವಿರ ಅಥವಾ 12 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಜೊತೆಗೆ ಬ್ಯಾಂಕ್‌ ಗಳ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಮತ್ತೆ ಎಕ್ಸ್‌ಟ್ರಾ ಶೇ. 10ರಷ್ಟು ರಿಯಾಯಿತಿ ದೊರಕುತ್ತದೆ!

ಕೆಲವಕ್ಕಂತೂ 10 ರಿಂದ 15 ಸಾವಿರದವರೆಗೂ ಡಿಸ್ಕೌಂಟ್‌ ನೀಡಲಾಗುತ್ತದೆ! ಈ ಬಾರಿಯ ಸೇಲ್‌ ಎಂದು?: ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ತಮ್ಮ ವೆಬ್‌ ಸೈಟ್‌ನಲ್ಲಿ ಕ್ರಮವಾಗಿ ಬಿಗ್‌ಬಿಲಿಯನ್‌ ಡೇಸ್‌ ಹಾಗೂ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಅನ್ನು ಘೋಷಿಸಿವೆ. ಅದರೆ ಲೇಖನ ಪ್ರಿಂಟ್‌ಗೆ ಹೋಗುವಾಗ ಯಾವತ್ತು ಎಂದು ದಿನಾಂಕ ಪ್ರಕಟಿಸಿರಲಿಲ್ಲ. ಬಹುತೇಕ ಸೆಪ್ಟೆಂಬರ್‌ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ಬಾರ ಮೂರರಿಂದ ನಾಲ್ಕು ದಿನಗಳ ಕಾಲ ಈ ಸೇಲ್‌ ಇರುತ್ತದೆ. ಅಮೆಜಾನ್‌ ಎಸ್‌ಬಿಐ ಕಾರ್ಡ್‌ಗೆ ಹಾಗೂ ಫ್ಲಿಪ್‌ಕಾರ್ಟ್‌ ಎಚ್‌ಡಿಎಫ್ಸಿ ಕಾರ್ಡ್‌ಗೆ ಎಕ್ಸ್‌ಟ್ರಾ ಡಿಸ್ಕೌಂಟ್‌ ಆಫ‌ರ್‌ ನೀಡಲಿವೆ.

ಆಫ‌ರ್‌ ಇರುವ ದಿನ ಮೊದಲಿಗೇ ನೀವು ಕೊಳ್ಳಬೇಕೆಂದಿರುವ ಗ್ಯಾಜೆಟ್‌ಗಳನ್ನು ಕೊಂಡುಬಿಡಿ. ಇಲ್ಲವಾದರೆ  ಔಟ್‌ ಆಫ್ ಸ್ಟಾಕ್‌ ಆಗಿಬಿಡುತ್ತವೆ. ಯಾವ ಯಾವ ಗ್ಯಾಜೆಟ್‌ಗಳಿಗೆ ಆಫ‌ರ್‌ ಇದೆ ಎಂದು ವೆಬ್‌ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿ ಇರುತ್ತದೆ. ಅದನ್ನು ಸಾವಕಾಶವಾಗಿ ಗಮನಿಸಿ. ಒಂದೊಂದು ಗ್ಯಾಜೆಟ್‌ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ ಎರಡರಲ್ಲೂ ಇರುತ್ತದೆ. ಯಾವುದರಲ್ಲಿ ಕಡಿಮೆ ಬೆಲೆ ಇದೆ  ಎಂದು ಚೆಕ್‌ ಮಾಡಿ ಅದರಲ್ಲಿಯೇ ಖರೀದಿಸಿ. ಹ್ಯಾಪಿ ಶಾಪಿಂಗ್‌!

* ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

needs 400 seats to avoid Babri lock to Mandir: PM Modi

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.