ಮಿಲಿಯನ್‌ ಡಾಲರ್‌ ಬೇಬಿ

Team Udayavani, Mar 17, 2019, 1:24 PM IST

ದುಂಡು ಮೊಗದ, ಮೂಗೇ ಇಲ್ಲದ, ಜುಟ್ಟು ಕಟ್ಟಿದ ನೀಲಿ ಕೂದಲಿನ, ಡಾಟ್‌ ಡಾಟ್‌ ಸ್ಕರ್ಟ್‌ ತೊಟ್ಟ ಅಮುಲ್‌ ಬೇಬಿ ಕಲಾವಿದನ ಒಂದು ಪಾತ್ರವಷ್ಟೇ ಅಲ್ಲ. ಅವಳು ನಿತ್ಯದ ಜೀವಂತಿಕೆ. ಪ್ರತಿ ತಲೆಮಾರೂ ಅವಳನ್ನು ಪುಟ್ಟ ಬಾಲೆ ಅಂತಲೇ ನೋಡುತ್ತಾ, ಆಕೆಯಿಂದ ದೊಡ್ಡ ಪಾಠ ಕಲಿಯುತ್ತಲೇ ಹೋಗುತ್ತಿದೆ. ವರ್ತಮಾನದ ಸುದ್ದಿಗೆ ಜೋತು ಬಿದ್ದು ಮತ್ತೆ ಮತ್ತೆ ಎದುರು ಬರುತ್ತಾಳೆ…

ಉಸಿರು ಬಿಗಿಹಿಡಿದಿತ್ತು, ಭಾರತ. ವೀರಯೋಧ ಅಭಿನಂದನ್‌ ವರ್ತಮಾನ್‌, ಆಗಿನ್ನೂ ಪಾಕ್‌ನಲ್ಲೇ ಇದ್ದರು. ಅಭಿಯ ಬಿಡುಗಡೆ ಪಕ್ಕಾ ಎಂದು ಬಲವಾಗಿ ನಂಬಿದ್ದವರ ಪೈಕಿ, ಅಮುಲ್‌ ಬೇಬಿಯೂ ಒಬ್ಬಳೇನೋ. ಅಮುಲ್‌ನ ಜಾಹೀರಾತು ತಯಾರಕ ಏಜೆನ್ಸಿ “ದಚುನ್ಹಾ ಕಮ್ಯುನಿಕೇಶನ್ಸ್‌’ನ ಜೋಶ್‌ ಹೈ ಇತ್ತು. 10 ಆರ್ಟಿಸ್ಟ್‌ಗಳು ಅವತ್ತು ರಾತ್ರಿಯಿಡೀ ನಿದ್ದೆಗೆಟ್ಟಿದ್ದರು. ಮುಂಬೈನ ಸ್ಟುಡಿಯೋದಲ್ಲಿ ಕುಳಿತು, ಅಭಿ ಭಾರತಕ್ಕೆ ಕಾಲಿಟ್ಟಾಗ ಎದ್ದೇಳುವ ಅಲೆಯನ್ನೇ ಧ್ಯಾನಿಸಿಕೊಂಡು, ಅಮುಲ್‌ನ ಒಂದು ಅದ್ಭುತ ಜಾಹೀರಾತಿಗೆ ಸ್ಕೆಚ್‌ ರೂಪಿಸಿಬಿಟ್ಟರು.

ಹಾರ್ಮೋನ್‌ ಮಿಸ್ಟೇಕೇನೂ ಅಲ್ಲ; ಹೆಣ್ಣಿಗೂ ಮೀಸೆ ಬಂದಿತ್ತು. ಅಭಿ ಬಿಡುಗಡೆಯಾದ ಮರುದಿನ, ಬೆಳಗಾಗುವುದರೊಳಗೆ ನಮ್ಮ ನಿಮ್ಮ ಮೊಬೈಲ್‌ನಲ್ಲಿ ಆ ಮೀಸೆ ಹೊತ್ತ ಹುಡುಗಿ, ದೇಶಭಕ್ತಿಯ ಗರ್ವದಿಂದ ಛಂಗನೆ ಜಿಗಿಯುತ್ತಿದ್ದಳು… ಕಟಿಂಗ್‌ ಶಾಪ್‌ಗೆ ಮೀಸೆ ಟ್ರಿಮ್‌ ಮಾಡಿಸಲೆಂದು ಬಂದ ಅಪ್ಪನ ಕಿರುಬೆರಳು ಹಿಡಿದು, ಸ್ಕೂಲ್‌ ಯೂನಿಫಾರಂ ತೊಟ್ಟ ಅಮುಲ್‌ ಬಾಲೆ, ಮೂಲೆಯ ಒಂದು ಚೇರ್‌ನಲ್ಲಿ ಸುಮ್ಮನೆ ಕೂರುತ್ತಾಳೆ. ಮೀಸೆ ಟ್ರಿಮ್‌ ಮಾಡಿಸಲು ಬಂದವರಿಗೆಲ್ಲ ಅವಳ ಮೇಲೆಯೇ ಕಣ್ಣು. ನೋಡ್ತಾ ನೋಡ್ತಾ, ಆ ಹುಡುಗಿ ಅಮುಲ್‌ ಮಿಲ್ಕ್ ಬಾಟಲ್‌ನ ಮುಚ್ಚಳ ತೆರೆದು, ಗ್ಲಾಸ್‌ಗೆ ಬಗ್ಗಿಸಿ, ಹಾಲನ್ನು ಗಟಗಟನೆ ಕುಡೀತಾಳೆ. ಎಲ್ಲರಿಗೂ ಆಶ್ಚರ್ಯ… ಹುಡುಗಿಯ ತುಟಿಯ ಮೇಲೂ ಮೀಸೆ! ಅಭಿನಂದನ್‌ನ ಮೀಸೆಯನ್ನು ಹೋಲುವ ಆ ರೂಪ, ಅವಳ ಕಂಗಳಲ್ಲಿ ಪ್ರವಹಿಸಿದ ದೇಶಭಕ್ತಿಯ ಮಿಂಚು, ಡೈರಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ನಂ.1 ಆಗಿರುವ ಅಮುಲ್‌ ಅನ್ನು ಇನ್ನಷ್ಟು ಎತ್ತರಿಸಿತು. ಮನೆ ಮನೆಯಲ್ಲಿ ಮಕ್ಕಳೆಲ್ಲ, ಮತ್ತೂಂದು ಗ್ಲಾಸ್‌ ಹೆಚ್ಚೇ ಹಾಲು ಕುಡಿದುಬಿಟ್ಟರು.

ಅಮುಲ್‌ನ ಈ ಸಾಹಸ ಹೊಸತೇನೂ ಅಲ್ಲ, ಅದು ನಿತ್ಯ ವಿನೂತನ. ಜಗತ್ತಿನಲ್ಲಿ ಏನೇ ಸೆನ್ಸೇಷನ್‌ ಘಟಿಸಲಿ, ಅದನ್ನು ತಕ್ಷಣ ಎನ್‌ಕ್ಯಾಶ್‌ ಮಾಡಿಕೊಳ್ಳೋ ಕಲೆಗಾರ. ಬೇರೆ ಕಂಪನಿಗಳು ಕಣಿºಟ್ಟು ಆಲೋಚಿಸುವ ಹೊತ್ತಿಗೆ, ಅಮುಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುತ್ತೆ. “ಉರಿ’ಯಲ್ಲಿ ಸರ್ಜಿಕಲ್‌ ದಾಳಿ ಆದಾಗಲೂ, ದೇಶವಾಸಿಗಳ ರಿಯಾಕ್ಷನ್‌ ಹೇಗಿರುತ್ತೆ ಎಂಬುದನ್ನು ರಾತ್ರೋರಾತ್ರಿ ಊಹಿಸಿಯೇ ಒಂದು ಪೋಸ್ಟರ್‌ ಬಿಟ್ಟಿತ್ತು. SURIgical strikes- Amul PAKs a punch ಎನ್ನುವ ಅದರ ಟ್ಯಾಗ್‌ಲೈನ್‌ ನೋಡಿ ಪಾಕ್‌ನ “ಡಾನ್‌’ ಪತ್ರಿಕೆ, ಅಮೂಲ್‌ ಬೇಬಿಯಿಂದಲೂ ಉಗಿಸಿಕೊಂಡೆವಲ್ಲ ಎಂದು ಸರ್ಕಾರದ ಕಿವಿಹಿಂಡಿತ್ತು.

ಪಾಕ್‌ಗೆ ಪಂಚ್‌ ಕೊಡುವ ಬೇಬಿ
ವರ್ತಮಾನಕ್ಕೆ ಅಮುಲ್‌ ಎಷ್ಟೇ ಸ್ಪಂದಿಸಿದರೂ, ಅಮುಲ್‌ಗೆ ಮೊದಲಿನಿಂದಲೂ ದೇಶಭಕ್ತಿಯೇ ಬ್ರ್ಯಾಂಡ್‌. ಅದಕ್ಕೇ ಅದು ಟೇಸ್ಟ್‌ ಆಫ್ ಇಂಡಿಯಾ. ಪಾಕ್‌ ಅನ್ನು ಮತ್ತೆ ಮತ್ತೆ ಗುರಿ ಆಗಿಸುತ್ತಲೇ ತನ್ನ ಮಾರುಕಟ್ಟೆ ಕಂಡುಕೊಳ್ಳೋದರಲ್ಲಿ ಮಹಾ ಪಾಕಡಾ. ಇದೇ ಇಮ್ರಾನ್‌ ಖಾನ್‌ ಅಂದು ಮೂರನೇ ಮದುವೆ ಆದಾಗ, “ಈಗಲೂ ಮೇಡನ್‌ ಓವರ್‌ ಬೌಲಿಂಗೇ?’ ಎನ್ನುತ್ತಾ ಕಾಲೆಳೆದು, “ಅಮುಲ್‌- ವೆಡ್ಡೆಡ್‌ ಟು ಬ್ರೆಡ್‌’ ಎಂಬ ಶೃಂಗಾರ ಭಾವರಸದ ಶೀರ್ಷಿಕೆ ಕೊಟ್ಟಿತ್ತು. ಪಾಕ್‌ನ ಅಣುಬಾಂಬ್‌ ರಹಸ್ಯದ ಸುದ್ದಿ ಬಯಲಾದಾಗಲೆಲ್ಲ, “ಪ್ಯಾನಿಕ್‌ ಈಸ್‌ ಸ್ತಾನ್‌’ ಎನ್ನುತ್ತಾ ಪಂಚ್‌ ಕೊಟ್ಟು, ಇದೊಂದು ದೊಡ್ಡ ತಲೆನೋವಿನ ದೇಶ ಅಂತ ಝಾಡಿಸಿತ್ತು. ಅಭಿನಂದನ್‌ ಮರಳಿ ಕಾಲಿಟ್ಟಾಗ, ಅಮುಲ್‌ ಗರ್ಲ್ ಬ್ರೆಡ್‌ ನೀಡಿ ಸ್ವಾಗತಿಸಿದ ಚಿತ್ರ ವೈರಲ್‌ ಆಗಿದ್ದು ಮೊನ್ನೆ ಮೊನ್ನೆ. 2008ರ ಮುಂಬೈ ದಾಳಿಯ ರೂವಾರಿ ಝಾಕಿಯರ್‌ ರೆಹಮಾನ್‌ ಲಖೀÌಯನ್ನು ಪಾಕ್‌ ಮೇಲ್ನೋಟಕ್ಕೆ ಬಂಧಿಸಿ, ಬಿಡುಗಡೆ ಮಾಡಿದಾಗ, ಅಮುಲ್‌ ಬೇಬಿ ಫ‌ುಲ್‌ ಕನ್‌ಫ್ಯೂಸ್‌. ಪೋಸ್ಟರ್‌ನಲ್ಲಿ ಗಲ್ಲಕ್ಕೆ ಕೈ ಇಟ್ಟು, “ನೀವ್‌ ಹೇಗೋ ಗೊತ್ತಿಲ್ಲ, ಅಮುಲ್‌ ಯಾವಾಗಲೂ ನಂಬಿಕಸ್ಥ’ ಎಂದು, ಭಾರತೀಯರ ಗುಣವನ್ನು ಚಿತ್ರಿಸಿತ್ತು. ಪಾಕ್‌ ವಿರುದ್ಧದ ಇಂಥ ಪಂಚ್‌ಗಳೇ ಅದಕ್ಕೆ ಸಾಕಷ್ಟು ಖ್ಯಾತಿ ತಂದುಕೊಟ್ಟವು.

ನ್ಯೂಸೇ ಇಲ್ಲಿ ಬ್ಯುಸಿನೆಸ್ಸು
ಉದಾಹರಣೆಗೆ ನೋಡಿ, ನರೇಂದ್ರ ಮೋದಿ ಅಲ್ಲೆಲ್ಲೋ ಭಾಷಣದಲ್ಲಿ “ಅಚ್ಚೇ ದಿನ್‌ ಆಯೇಗ’ ಎಂದು ಘೋಷಣೆ ಮಾಡಿದ್ದಷ್ಟೇ. ಮೋದಿಯ ಪಕ್ಕದಲ್ಲಿ ನಿಂತ ಅಮುಲ್‌ ಬೇಬಿ, “ಅಚ್ಚಾ ಡಿನ್ನರ್‌ ಆಯಾ ಹೈ’ ಎಂದು ತನ್ನ ಸಂಸ್ಥೆಯ ಪ್ರಾಡಕ್ಟ್ಗಳನ್ನು ತೋರಿಸುತ್ತಾ, ಪ್ರಸೆಂಟ್‌ ಟೆನ್ಸ್‌ನಲ್ಲಿ ತನ್ನನ್ನು ಪ್ರಸೆಂಟ್‌ ಮಾಡಿತ್ತು. ಅಂದರೆ, ಅಮುಲ್‌ಗೆ ನ್ಯೂಸ್‌ ಪೆಗ್ಗೇ ಕಿಕ್‌. ನೀವು ನಂಬಿ¤àರೋ ಇಲ್ಲವೋ, ಅಮುಲ್‌ನ ಜಾಹೀರಾತು ತಯಾರಿಸುವ “ದ ಚುನ್ಹಾ ಕಮ್ಯುನಿಕೇಶನ್ಸ್‌’ ಕೆಲಸ ಮಾಡೋದು, ಪಕ್ಕಾ ನ್ಯೂಸ್‌ರೂಮ್‌ನಂತೆಯೇ. ಎಲ್ಲಿ ಏನೇ ನಡೆದ್ರೂ, ಅಮುಲ್‌ ಅದಕ್ಕೆ ಧ್ವನಿ ಎತ್ತುತ್ತದೆ. ಕ್ಷೀರ ಕ್ರಾಂತಿಯ ಹರಿಕಾರ ಡಾ. ವರ್ಗೀಸ್‌ ಕುರಿಯನ್‌, 1966ರಲ್ಲಿ ಈ ಅಡ್ವಟೈìಸ್‌ಮೆಂಟ್‌ ಸಂಸ್ಥೆಯ ಸಿಲ್ವೆಸ್ಟರ್‌ ದ ಚುನ್ಹಾಗೆ ಜಾಹೀರಾತಿನ ಹೊಣೆ ನೀಡುವಾಗಲೇ ಅಂಥ ಒಪ್ಪಂದ ಆಗಿತ್ತು. ವರ್ತಮಾನದ ಸಂಗತಿಗಳ ಮೇಲೆಯೇ ಜಾಹೀರಾತು ರೂಪಿಸಬೇಕು, ಯಾವುದೇ ಕ್ಷಣದಲ್ಲೂ ನೀವು ಆ್ಯಡ್‌ ಬಿಡುಗಡೆ ಮಾಡಬಹುದು; ಅಮುಲ್‌ ಉಸ್ತುವಾರಿಗಳ ಒಪ್ಪಿಗೆಗೆ ಕಾಯಬೇಕಿಲ್ಲ’ ಎನ್ನುವ ಸ್ವಾತಂತ್ರ್ಯ ಕೊಟ್ಟಿದ್ದೇ ಕೊಟ್ಟಿದ್ದು, ದ ಚುನ್ಹಾ ಪನ್‌ ಮೇಲೆ ಪನ್‌ ಮಾಡಿ, ಅಮುಲ್‌ ಬ್ರ್ಯಾಂಡ್‌ ಅನ್ನು ಜನರ ನಾಲಗೆ ಮೇಲೆ ಕರಗದಂತೆ ನೋಡಿಕೊಂಡಿತು.

1970ರ ಸುಮಾರಿನಲ್ಲಿ ತಿಂಗಳಿಗೊಮ್ಮೆ ಜಾಹೀರಾತು, 80ರ ದಶಕಲ್ಲಿ 15 ದಿನಕ್ಕೊಮ್ಮೆ, 2000ದಲ್ಲಿ ವಾರಕ್ಕೊಮ್ಮೆ ಜಾಹೀರಾತುಗಳನ್ನು ರೂಪಿಸುತ್ತಾ, ಈಗ ಯಾವುದೇ ಗಂಟೆ/ ಯಾವುದೇ ಕ್ಷಣದಲ್ಲೂ ಅಮುಲ್‌ ಬ್ರೇಕಿಂಗ್‌ ನ್ಯೂಸ್‌ ಕೊಟ್ಟಂತೆ ಆ್ಯಡ್‌ಗಳನ್ನು ಬಿಡುತ್ತಿದೆ. ಅಮುಲ್‌ ಈ ಜಾಹೀರಾತಿಗಾಗಿಯೇ ತನ್ನ ಆದಾಯದ ಶೇ.1ರಷ್ಟನ್ನು ಮೀಸಲಿಡುತ್ತಿದೆ.

ಆ್ಯಡೇ ಒಂದು ಫ್ಲೇವರ್‌
ಪ್ರಪಂಚದಲ್ಲಿ ಎಲ್ಲೋ ಆದ ಸುದ್ದಿ ಕಂಪನವನ್ನು, ತನ್ನ ಉತ್ಪನ್ನಕ್ಕೆ ಕನೆಕ್ಟ್ ಮಾಡಿ, ಈ ನೆಲಕ್ಕೆ ಹತ್ತಿರ ಆಗಿಸೋದೂ ಅಮುಲ್‌ಗೆ ಕರಗತ. ಈ ಜಾಹೀರಾತನ್ನು ಒಮ್ಮೆ ನೋಡಿ, ಬಿಟ್ಟು ಬಿಡೋಕೆ ಯಾರಿಗೂ ಮನಸ್ಸಾಗಲ್ಲ. ಅದು ಸದಾ ನಮ್ಮೊಳಗೆ ಗಂಧವಾಗಿ ನೆಲೆ ನಿಲ್ಲುವ ಫ್ಲೇವರ್‌. ಒಂದು ಸ್ಯಾಂಪಲ್‌ ನೋಡಿ… ಎರಡು ವರ್ಷದ ಕೆಳಗೆ ಐಸ್‌ ಬಕೆಟ್‌ ಚಾಲೆಂಜ್‌ ಎನ್ನುವ ಹ್ಯಾಶ್‌ಟ್ಯಾಗ್‌ ಕ್ಯಾಂಪೇನ್‌, ಜಗತ್ತಿನ ತುಂಬಾ ಸಂಚಲನ ರೂಪಿಸಿತ್ತು. “ಎಎಲ್‌ಎಸ್‌’ ಎನ್ನುವ ರೋಗದ ಜಾಗೃತಿಗೆ ನಡೆದ ಆ ಕ್ಯಾಂಪೇನ್‌ ಭಾರತದಲ್ಲೂ ಸುದ್ದಿಯಲ್ಲಿದ್ದಾಗ, ಅಮುಲ್‌ ಬೇಬಿಯೂ ಐಸ್‌ ಬಕೆಟ್‌ ಹಿಡಿದವರ ಪಕ್ಕ ಹೋಗಿ ನಿಂತಿದ್ದಳು. “ಸ್ಲೆ„ಸ್‌ ಬಟರ್‌ ಇಟ್‌ ಚಾಲೆಂಜ್‌’ ಎನ್ನುತ್ತಾ, “ಬಟರ್‌ನ ಸ್ನಾನ ಮಾಡಿ, ಕೂಲ್‌ ಆಗಿರಿ’ ಎಂದು ಗುಜರಾತ್‌ ನೆಲದ ಹಾಲೋತ್ಪನ್ನಗಳ ತಂಪನ್ನು ಜಗತ್ತಿಗೆ ಸಾರಿತ್ತು.

ಇಂಥ ಐಡಿಯಾಗಳಿಂದಲೇ ಅಮುಲ್‌ ಬಲು ಬೇಗನೆ ಗಡಿಗಳನ್ನು ದಾಟಿದೆ. ನಿಮ್ಗೆ ಗೊತ್ತಾ? ಬರಾಕ್‌ ಒಬಾಮ ಕೂಡ ಅಮುಲ್‌ಪ್ರಿಯ. ಒಬಾಮ ಅಧಿಕಾರ ಹಿಡಿದ ಮರುದಿನ, ವೈಟ್‌ಹೌಸ್‌ನಲ್ಲಿ ಬ್ರೆಡ್‌ ಕತ್ತರಿಸುತ್ತಿರುವ ಅವರ ಚಿತ್ರಬಿಡಿಸಿ, “ಬರಾಕ್‌ ಫಾಸ್ಟ್‌’ ಎಂದು ಪನ್‌ ಮಾಡಿತ್ತು. ಫ‌ುಟ್ಬಾಲ್‌ ವಿಶ್ವಕಪ್‌ನಲ್ಲಿ ನೇಮಾರ್‌ ಮಿಂಚಿದಾಗ, ಮೈಕೆಲ್‌ ಫೆಲ್ಪ್$Õ ಈಜುಕೊಳದಲ್ಲಿ ಚಿನ್ನದ ಬೇಟೆಯಾಡಿದಾಗಲೂ ಈ ಬೇಬಿ ನ್ಪೋರ್ಟಿವ್‌ ಆಗಿ ನಕ್ಕಿದ್ದಳು. ಸುಂದರ್‌ ಪಿಚೆò ಗೂಗಲ್‌ನ ಗದ್ದುಗೆ ಹಿಡಿದಾಗ ಅವನೊಂದಿಗೆ ಚಹಾ ಕುಡಿಯುತ್ತಾ, “ಸುಂದರ್‌ ಪಿಯೋ ಚಾಯ್‌’ ಎಂದು, “ಅಮುಲ್‌- ಇಂಡಿಯನ್‌ ಬಾರ್ನ್ ಆ್ಯಂಡ್‌ ಬ್ರೆಡ್‌’ ಎಂದು ಭಾರತೀಯರ ಟ್ಯಾಲೆಂಟ್‌ ಅನ್ನು ಪುರಸ್ಕರಿಸಿತ್ತು. ಜಾಗತಿಕವಾಗಿ ತನ್ನನ್ನು ಪ್ರಸ್ತುತತೆ ಮಾಡಿಕೊಳ್ಳುತ್ತಲೇ ಅಮುಲ್‌, ವಿಶ್ವ ಶ್ರೇಷ್ಠ ರಾಷ್ಟ್ರಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.

ದುಂಡು ಮೊಗದ, ಮೂಗೇ ಇಲ್ಲದ, ಜುಟ್ಟು ಕಟ್ಟಿದ ನೀಲಿ ಕೂದಲಿನ, ಡಾಟ್‌ ಡಾಟ್‌ ಸ್ಕರ್ಟ್‌ ತೊಟ್ಟ ಅಮುಲ್‌ ಬೇಬಿ ಕಲಾವಿದನ ಒಂದು ಪಾತ್ರವಷ್ಟೇ ಅಲ್ಲ. ಅವಳು ನಿತ್ಯದ ಜೀವಂತಿಕೆ. ಪ್ರತಿ ತಲೆಮಾರೂ ಅವಳನ್ನು ಪುಟ್ಟ ಬಾಲೆ ಅಂತಲೇ ನೋಡುತ್ತಾ, ಆಕೆಯಿಂದ ದೊಡ್ಡ ಪಾಠ ಕಲಿಯುತ್ತಲೇ ಹೋಗುತ್ತಿದೆ. ಎಂದೋ ಕಟ್ಟಿದ ಕಂಪನಿ, ಮೂಲತತ್ವಕ್ಕೆ ಜೋತುಬಿದ್ದು, ಹೊಸ ಪೀಳಿಗೆಗೆ ಹಳತಾಗಿ ಕಂಡು ಹಳಸಬಾರದೆನ್ನುವ ಸಂದೇಶ ದಾಟಿಸುತ್ತಾಳೆ. ಜನ ಯಾವ ದಿಕ್ಕಿನಲ್ಲಿ ಯೋಚಿಸುತ್ತಾರೋ, ಆ ದಿಕ್ಕಿನತ್ತಲೇ ಹೆಜ್ಜೆ ಇಟ್ಟು, ಹತ್ತಿರ ಆಗುವ ಗುಟ್ಟನ್ನು ಈ ಬೇಬಿಯಿಂದ ಕಲಿಯೋದು ಸಾಕಷ್ಟಿದೆ.

ಆ ಬೇಬಿಯ ಹಿಂದೆ…
“ಜಗತ್ತಿನ ದೀರ್ಘ‌ಕಾಲಿಕ ಜಾಹೀರಾತು’ ಖ್ಯಾತಿ ಈ ಅಮುಲ್‌ ಬೇಬಿಯದ್ದು. ಕಾಟೂìನ್‌ ಆರ್ಟಿಸ್ಟ್‌ಗಳಾದ ಕುಮಾರ್‌ ಮೊರೆ, ಯೂಸ್ಟೇಸ್‌ ಫ‌ರ್ನಾಂಡೀಸ್‌ರ ರೇಖಾಸೃಷ್ಟಿ ಇದಾಗಿದ್ದರೂ, ಈ ಬೇಬಿ ರೂಪದರ್ಶಿಯ ಪರಿಕಲ್ಪನೆ ಕುರಿಯನ್‌ ಅವರದ್ದು. ಹೆಸರಾಂತ ಸ್ಕ್ರಿಪ್ಟ್ ರೈಟರ್‌ ಭರತ್‌ ದಾಭೋಲ್ಕರ್‌ರಂಥವರೂ ಇದರ ಖ್ಯಾತಿಗೆ ಕಾರಣರಾಗಿದ್ದಾರೆ.

ಕಂಪನಿಗೇಕೆ ಮುಖ್ಯ, ಇಂಥ ಜಾಹೀರಾತು?
1. ಸೆಲೆಬ್ರಿಟಿಗಳನ್ನೇ ರೂಪದರ್ಶಿ ಮಾಡಿಕೊಂಡರೆ, ಸಂಸ್ಥೆಗೆ ಆರ್ಥಿಕ ಹೊರೆ ಹೆಚ್ಚು. ಅದನ್ನು ತಗ್ಗಿಸುವುದಕ್ಕೆ.
2. ಸಂಸ್ಥೆ ಸದಾ ಸುದ್ದಿಯಲ್ಲಿದ್ದರೆ, ಅದು ತಂತಾನೇ ಬ್ರ್ಯಾಂಡ್‌ ಎನಿಸಿಕೊಳ್ಳುತ್ತದೆ.
3. ಥೀಮ್ಡ್, ಅಪ್‌ಡೇಡ್‌ ಜಾಹೀರಾತಿನಿಂದ ಸಂಸ್ಥೆ ತನ್ನ ಉತ್ಪನ್ನದಲ್ಲೂ ಅಪ್‌ಡೇಟ್‌ ಆಗಿದೆ ಎಂಬುದನ್ನು ಸಾರುವುದು ಸುಲಭ.
4. ಜನರ ಅಭಿರುಚಿಯೇನು, ಈಗಿನ ಪೀಳಿಗೆ ಬಯಸುತ್ತಿರೋದೇನು ಎನ್ನುವ ರಹಸ್ಯ ಸಂಸ್ಥೆಗೆ ಬೇಗ ಗೊತ್ತಾಗುತ್ತದೆ.
5. ಅದರಲ್ಲೂ ಭಾರತದ ಮಾರುಕಟ್ಟೆ ಮೂಲದಲ್ಲಿ ದೇಶಭಕ್ತಿಯೂ ಒಂದು. ಅದನ್ನು ಎನ್‌ಕ್ಯಾಶ್‌ ಮಾಡಿಕೊಂಡರೆ, ಯಶಸ್ಸು ಸಿಗೋದು ಪಕ್ಕಾ.
6. ರೂಪಕಗಳಲ್ಲಿ ಗ್ರಾಹಕರ ಮನಸ್ಸನ್ನು ಆವರಿಸಿಕೊಂಡರೆ, ಅಂಥ ಉತ್ಪನ್ನಕ್ಕೆ ಆಯುಸ್ಸು ಜಾಸ್ತಿ.

ಸೆನ್ಸೇಶನ್‌ ಸುದ್ದಿ ಮೂಲಕ ಗ್ರಾಹಕನ ಮೋರೆಯಲ್ಲಿ ಸ್ಟೈಲಿಂಗ್‌ ಲೈನ್‌ ಹುಟ್ಟಿಸುವ ಕೆಲಸ ನಮ್ಮದು. ಪನ್‌ನಿಂದಲೇ ಅಮುಲ್‌ ಇಂದು ಪ್ರಪಂಚದ ಮೂಲೆ ಮೂಲೆ ತಲುಪಿದೆ.
ದ ಚುನ್ಹಾ, ಅಮುಲ್‌ನ ಜಾಹೀರಾತು ಏಜೆನ್ಸಿ

ಕೀರ್ತಿ ಕೋಲ್ಗಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಎಂದರೆ ಕೇವಲ ಭತ್ತ ಎನ್ನುವಂಥ ಪರಿಸ್ಥಿತಿ ಇದೆ. ಹೀಗಿರುವಾಗ ಅದೇ ಪ್ರದೇಶದ ಯಡಹಳ್ಳಿ ಗ್ರಾಮದ ಯುವ ರೈತ ಭೀಮಾಶಂಕರ ಹೂವಿನ...

  • ಭೂಮಿಯನ್ನು ಏಳು ಸುತ್ತು ಸುತ್ತುವಷ್ಟು ಬೃಹತ್ತಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ ಸಂಪರ್ಕ ಭಾರತದಲ್ಲಿದೆ. ಹಾಗಿದ್ದೂ ಈ ಕಾಲದಲ್ಲೂ ಒಂದು ಜಾಲತಾಣ ಓಪನ್‌ ಆಗಲು,...

  • ಈ ವರ್ಷದಲ್ಲಿ ಫೆಬ್ರವರಿ, ಏಪ್ರಿಲ್‌, ಜೂನ್‌ ಮತ್ತು ಆಗಸ್ಟ್‌ ತಿಂಗಳಿನಲ್ಲಿ ರಿಸರ್ವ್‌ ಬ್ಯಾಂಕ್‌, ಸತತವಾಗಿ ನಾಲ್ಕು ಸಲ ರೆಪೋ ದರವನ್ನು ಕಡಿಮೆ ಮಾಡಿದೆ. ಹೀಗಾಗಿ...

  • ಇಟ್ಟಿಗೆ ಗೋಡೆಗಳು ಸಾಮಾನ್ಯವಾಗಿ ಮೇಲಿನಿಂದ ಬರುವ ಭಾರವನ್ನು ಮಾತ್ರ ಹೊರುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಪ್ರವಾಹದಲ್ಲಿ ನೀರು ಅಲೆಗಳ ರೂಪದಲ್ಲಿ ಅಪ್ಪಳಿಸುತ್ತಿದ್ದರೆ,...

  • ವಾರಗಟ್ಟಲೆ ಒಂದೆಡೆ ಮೊಕ್ಕಾಂ ಹೂಡಿ ಮನೆಯವರ ಚಲನವಲನಗಳನ್ನು ಗಮನಿಸಿ, ರಾತ್ರಿ ಹೊತ್ತಿನಲ್ಲಿ ಚಹರೆ ಮುಚ್ಚಿಕೊಂಡು, ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗದಂತೆ...

ಹೊಸ ಸೇರ್ಪಡೆ