ಮಾಗಿದ ಉಳುಮೆ: ಮಾಗಿಯಿಂದ ಕೀಟ ನಿಯಂತ್ರಣ

Team Udayavani, Apr 8, 2019, 10:09 AM IST

ಕಳೆದ ಮೂರು ದಶಕಗಳಿಂದ ಬೆಳೆಗಳಿಗೆ ಸಸ್ಯರೋಗ, ಕೀಟ ಬಾಧೆ ಹೆಚ್ಚಾಗುತ್ತಿದೆ. ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದು ಇದಕ್ಕೆ ಪ್ರಮುಖ ಕಾರಣ.ಮಾಗಿ ಉಳುಮೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಆದ್ದರಿಂದಲೇಹಿರಿಯರು “ಬಡವನ ಮಾಗಿ ಉಳುಮೆಸಾಹುಕಾರ ಹಾಕುವ ಗೊಬ್ಬರಕ್ಕೆ ಸಮಾನ’ ಎಂದು ಉದಾಹರಿಸುತ್ತಿದ್ದರು.

“ಬಿರುಸಾದ ಬೇಸಿಗೆ ಮಳೆ ಬರುವುದಕ್ಕೆ ಮುಂಚೆ ಜಮೀನನ್ನು ಚೆನ್ನಾಗಿ ಉಳುಮೆ ಮಾಡು ವುದು ಸೂಕ್ತ.ಏಪ್ರಿಲ… 15ರ ಆಸುಪಾಸಿನಲ್ಲಿ ಸಾಮಾನ್ಯವಾಗಿ ರಭಸದ ಮಳೆ ಬೀಳುತ್ತದೆ. ಹೀಗಾಗಿ, ಹೊಲವನ್ನು ಉತ್ತು ಹದ ಮಾಡಿದರೆ ಮುಂದಿನ ಹಂಗಾಮಿನಲ್ಲಿ ಬೆಳೆ ಇಳುವರಿ ಸಮೃದ್ಧ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಜೊತೆಗೆ ಪರಿಣಾಮಕಾರಿಯಾಗಿಕೀಟಗಳನ್ನು ನಿಯಂತ್ರಿಸಬಹುದು’ ಎನ್ನುತ್ತಾರೆ, ಕೀಟ ನಿಯಂತ್ರಣಾ ವಿಧಾನಗಳ ಸಂಶೋಧಕ ಲೋಕೇಶ್‌ ಮಾಕಮ್‌.ಬೇಸಿಗೆ ಮತ್ತು ಮುಂಗಾರುಮಳೆ ಆರಂಭಕ್ಕೂ ಮುನ್ನ ಉಳುಮೆ ಮಾಡುವುದರಿಂದ ಹೆಂಟೆಗಳು ಹೊಡೆಯುತ್ತವೆ. ಮಣ್ಣಿನ ಕಣಗಳರಚನೆಯೂ ಸುಧಾರಿಸುತ್ತದೆ. ಮಣ್ಣು ತುಂಬ ಸಡಿಲವಾಗಿರುವುದರಿಂದ, ಬಿದ್ದ ಮಳೆನೀರು ಹರಿದು ಹೋಗದೇ ಒಳಗೆ ಇಳಿಯುತ್ತದೆ. ಇದರಿಂದ ಜಮೀನು ದೀರ್ಘ‌ಕಾಲ ಹಸಿರಾಗಿ, ಸುತ್ತಲಿನ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಗಿ, ತೆರೆದ ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧವಾಗಿರುತ್ತದೆ. ಉಳುಮೆ ಮಾಡಿದ ನಂತರ ಗಟ್ಟಿಯಾದ ಬದುಗಳನ್ನು ನಿರ್ಮಿಸಬೇಕು. ಇದರಿಂದ ನೀರು ಹೊರಗೆ ಹರಿದು ಹೋಗಲು ಆಸ್ಪದವಿರುವುದಿಲ್ಲ. ಜಮೀನಿನ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು ಸೂಕ್ತ.

ಬೇಸಿಗೆಮಳೆ ಆರಂಭಕ್ಕೂ ಮುನ್ನ ಉಳುಮೆ ಮಾಡುವುದರಿಂದ ಗರಿಕೆ ಹುಲ್ಲು, ಇತರ ಕಳೆಗಳನ್ನು ನಿಯಂತ್ರಿಸಬಹುದು. ಕೀಟ ಬಾಧೆ ನಿಯಂತ್ರಣ ಏಪ್ರಿಲ್‌ನಿಂದ ಜೂನ್‌ 15ರ ತನಕ ಬಿಸಿಲಿನ ಪ್ರಖರತೆ ಹೆಚ್ಚುತ್ತಲೇ ಇರುತ್ತದೆ. ಮಾಗಿ ಉಳುಮೆ ಮಾಡಿದ್ದರೆ ಮಣ್ಣಿನ ಕೆಳ ಪದರದಲ್ಲಿ ಇರುವ ರೋಗಾಣುಗಳು-ರೋಗಕಾರಕ ಶಿಲೀಂಧ್ರ ಗಳು ನಾಶವಾಗುತ್ತವೆ. ಮಣ್ಣು ಮಗುಚುವುದರಿಂದ ಕೀಟಗಳು; ಅವುಗಳ ಕೋಶಗಳು ಮೇಲ್ಪದರಕ್ಕೆ ಬಂದು, ಬಿಸಿಲಿನಿಂದ ನಾಶವಾಗುವುದರ ಜೊತೆಗೆ ಹಕ್ಕಿಗಳಿಗೆ ಆಹಾರವಾಗುತ್ತವೆ. ಬೆಳೆ ಸಂದರ್ಭದಲ್ಲಿ ಮಿಡತೆಗಳ ಸಂಖ್ಯೆ ಹೆಚ್ಚಳವಾದರೆ ತುಂಬ ಕಷ್ಟ. ಇದನ್ನು ಸಿ¨ªೆಗುಮ್ಮ, ಕುದುರೆ ಹುಳು ಎಂದೆಲ್ಲ ಕರೆಯಲಾಗುತ್ತದೆ. ಈ ಮಿಡತೆಗಳು ಸಾಯುವುದಕ್ಕೂ ಮೊದಲು ಮಣ್ಣಿನ ಎರಡರಿಂದ ಮೂರು ಇಂಚು ಆಳದಲ್ಲಿ ಇರುತ್ತವೆ. ಕೆಂಪು ತಲೆ ಕಂಬಳಿ ಹುಳುಗಳು ಮೇಲ್ಮಣ್ಣಿನಿಂದ ಮೂರರಿಂದ ನಾಲ್ಕು ಇಂಚು ಒಳಭಾಗದಲ್ಲಿ ಕೋಶಾವಸ್ಥೆ ಯ ಲ್ಲಿರುತ್ತವೆ. ಮಳೆಗಾಲ ಆರಂಭವಾ ಗುತ್ತಿದಂತೆ ಆಚೆ ಬರುವ ಇವುಗಳು ಬೆಳೆಯನ್ನು ಬಾಧಿಸುತ್ತವೆ.

ಮುಂಗಾರು ಮಳೆ ಆರಂಭವಾದಂತೆ ಬಿತ್ತನೆ ಬೀಜಗಳು ಮೊಳಕೆಯೊಡೆದಾಗ, ಇದರೊಂದಿಗೆ ಆಸರೆ ಕಳೆಗಳು ಮೊಳಕೆಯೊಡೆ ಯುತ್ತವೆ. ಇದೇ
ಸಂದರ್ಭದಲ್ಲಿ ಮಣ್ಣಿನ ಮೇಲ್ಪದರದಿಂದ ಕೆಳಗೆ ಇರುವ ಕೋಶಗಳಿಂದ ಹಿಲಿಯೋಥಿಸ್‌ ಕೋಶಗಳು ಹೊರ ಬೀಳುತ್ತವೆ. ಜೂನ್‌ ತಿಂಗಳಿನಿಂದಲೇ ಚಟುವಟಿಕೆ ಪ್ರಾರಂಭಿಸುವ ಈ ಪತಂಗಗಳು ರಾತ್ರಿ ಸಮಯ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಒಂದೇ ಬೆಳೆ ಬೇಡ ಹಿಲಿಯೋಥಿಸ್‌ ಕೀಟಗಳು 181 ಕ್ಕೂ ಹೆಚ್ಚು ವಿವಿಧ ತಳಿಗಳನ್ನು ಆಶ್ರಯಿಸಿವೆ. ನೆಲಗಡಲೆ, ಉದ್ದು, ಅಲಸಂದೆ, ಹೆಸರು, ಸಾಸಿವೆ, ಸೂರ್ಯಕಾಂತಿ, ಕುಸುಬೆ, ತೊಗರಿ, ಜೋಳ, ಗೋವಿನ ಜೋಳ, ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್‌, ಬೆಂಡೆಕಾಯಿ, ಟೊಮೆಟೊ,
ಎಲೆಕೋಸು, ಬಟಾಣಿ ಮುಂತಾದ ಬೆಳೆಗಳಿಗೆ ಇವುಗಳು ಮಾಡುವ ಹಾನಿ ಅಪಾರ. ಮುಖ್ಯವಾಗಿ ಹತ್ತಿ, ಕಡಲೆ, ತೊಗರಿ ಮತ್ತು ಸೂರ್ಯಕಾಂತಿಗೆ ಇವುಗಳ ಬಾಧೆ ತೀವ್ರ. ಇವುಗಳು ವೃದ್ಧಿಸಿದರೆ ನಿಯಂತ್ರಣ ಬಹಳ ಕಷ್ಟ. ಇಂಥ ಕೀಟಗಳು ಕಳೆ ಸಸ್ಯಗಳಲ್ಲಿ ಆಶ್ರಯ ಪಡೆದಿರುತ್ತವೆ. ಬೇಸಿಗೆಮಳೆಗೂ ಮುನ್ನ ಉಳುಮೆ ಮಾಡಿದಾಗ ಇವುಗಳ ಕೋಶಗಳು ಮಣ್ಣಿನ ಮೇಲು ಭಾಗಕ್ಕೆ ಬರುತ್ತವೆ. ಪ್ರಖರ ಬಿಸಿಲಿನಿಂದ ಸಾಯುತ್ತವೆ. ಕೀಟಭಕ್ಷಕಗಳಿಗೆ ಆಹಾರವಾಗುತ್ತವೆ ಎನ್ನುತ್ತಾರೆ ಲೋಕೇಶ್‌. ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುವುದರಿಂದಲೂಕೀಟ ಬಾಧೆ, ಸಸ್ಯರೋಗಗಳು ಹೆಚ್ಚಾಗುವುದಲ್ಲದೇ ಬೆಳೆ ಇಳುವರಿಯೂ ಕುಗ್ಗುತ್ತದೆ. ಇವುಗಳಲ್ಲದೇ ಮಣ್ಣಿನ ಫ‌ಲವತ್ತತೆಯೂಗಣನೀಯವಾಗಿ ಕಡಿಮೆಯಾಗುತ್ತದೆ. ಇಂಥ ಅನೇಕ ಸಮಸ್ಯೆಗಳನ್ನು ಬೆಳೆ ಪರಿವರ್ತನೆ ಮಾಡುವುದರಿಂದ ಪರಿಣಾಮಕಾರಿಯಾಗಿ
ತಡೆಗಟ್ಟಬಹುದು.

ಕುಮಾರ ರೈತ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...