Udayavni Special

ಪ್ರೀತಿಯ ಸಸಿ ಮೊಗ್ಗಾಗಿ ಅರಳುತ್ತಿದೆ…


Team Udayavani, Jul 2, 2019, 5:00 AM IST

9

ಗೆಳತಿ, ಇದು ಹೃದಯದ ಮಾತು. ನೀನು ಎದುರಾದಾಗ ಮಾತು ಬರಿದಾಗಿ, ಮೌನ ಮಡುಗುಟ್ಟತ್ತದೆ. ಏಕೆಂದರೆ, ನಿನ್ನ ಮುಂದೆ ಪ್ರೀತಿಯ ವಿಚಾರ ಹೇಳುವ ಧೈರ್ಯ ನನಗಿಲ್ಲವೋ ಏನೋ..

ನಿನ್ನ ಮೆಚ್ಚಿದ ದಿನದಿಂದ ಇಲ್ಲಿಯ ತನಕವೂ ಕಳವಳವಿದೆ ನನ್ನೆದೆಯಲಿ. ಅದೇನು ಕೇಳು ಗೆಳತಿ ಎಂದು ನಿನ್ನ ಮುಂದೆ ಬಂದು ಹೇಳಲು ನನ್ನ ಹೃದಯ ಕಸರತ್ತು ಮಾಡುತ್ತಲೇ ಇದೆ.ಆದರೆ ಪ್ರಯೋಜನ ಆಗಲಿಲ್ಲ.

ಒಂದು ದಿನ, ನಿನಗೆ ಹೂ ಕೊಟ್ಟಾದರೂ ಇದನ್ನೆಲ್ಲಾ ಹೇಳಬೇಕು ಅಂತ ಆಲೋಚನೆ ಮಾಡಿದ್ದೆ. ಆ ಮಧುರವಾದ ಗುಟ್ಟೊಂದು ಮರುದಿನವೇ ಹೂವಿನಂತೆ ಬಾಡಿಹೋಗಿತ್ತು!! ಏಕೆಂದರೆ, ಕೇವಲ ಒಂದು ದಿನ ಹೂ ಕೊಟ್ಟು ಹೇಳುವ ಬದಲು ನಿತ್ಯವೂ ಹೂ ಬಿಡುವ ಸಸಿಯನ್ನ ನಿನ್ನ ಕೈಗಿತ್ತರೆ ! ಆ ಸಸಿ ಪ್ರತಿ ನಿತ್ಯವೂ ಹೂ ಬಿಡುತ್ತಾ, ಅವನ್ನು ನೀನು ಮುಡಿಯುತ್ತಾ ಇದ್ದರೆ. ದಿನಂಪ್ರತಿ ನಾನೇ ನಿನಗೆ ಹೂ ಮುಡಿಸಿದಂತೆ ಆಗುತ್ತದಲ್ಲವೇ? ಅಂದು ಕೊಂಡೆ!

ಇಷ್ಟಾದ ನಂತರವೂ, ನನ್ನ ಒಲುಮೆಯನ್ನ ನಿನ್ನ ಮುಂದೆ ಬಂದು, ನೇರಾನೇರವಾಗಿ ಹೇಳುವ ಪ್ರಯತ್ನ ಮಾಡೋಣ ಅಂದುಕೊಂಡರೆ, ನನ್ನೆದೆಯ ಉಗಿ ಬಂಡಿ ನಿನ್ನ ನೋಡಿದ ಕ್ಷಣವೇ ಹಿಂತಿರುಗಿ ಓಡಿ ಹೋಗುತ್ತದಲ್ಲ ಏನುಮಾಡಲಿ?

ಹಸಿರು ನಿಶಾನೆಯನ್ನ ನೀಡುವಂತಹ ನಿನ್ನ ನಸು ನಾಚಿಕೆಯ ಹೊಳಪನ್ನ ಸಹಿಕೊಳ್ಳಲು ಈ ನನ್ನ ಕಣ್ಣುಗಳಿಂದಾಗುತ್ತಿಲ್ಲ.

ಕೇಳು ಮುದ್ದು ಗೆಳತಿ, ನನ್ನ ಮನದಲ್ಲಿ ಅಂದು ನೀನು ನೆಟ್ಟಿದ್ದ ಪ್ರೀತಿಯ ಸಸಿ ಇಂದು ಮೊಗ್ಗಾಗಿ ಅರಳುತ್ತಿದೆ.  ಉರಿ ಬಿಸಿಲು ಮೂಡುವ ಮುನ್ನ ಅರಳಿದ ಮೊಗ್ಗನು ನಿನಗೆ ಮುಡಿಸಲು ಬರುವೆನು. ಆಗ ನೀನು ದಯವಿಟ್ಟು ಹಿಂತಿರುಗಿ ನಿಂತುಬಿಡು, ಏಕೆಂದರೆ, ನಿನ್ನ ಆ ನಸುನಾಚಿಕೆಯ ಹೊಳಪನ್ನು ನನ್ನೊಳಗಿನ ಧೈರ್ಯವನ್ನು ಎಲ್ಲಿ ಕೊಂದು ಬಿಡುತ್ತದೋ ಅನ್ನೋ ಭಯ.

ಶರಣ… ಬೂದಿಹಾಳ್‌, ದಾವಣಗೆರೆ ವಿ.ವಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL-2

ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

IPL

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

PTI23-04-2020_000083B

ದಾವಣಗೆರೆ: 124 ಜನರಲ್ಲಿ ಕೋವಿಡ್ ದೃಢ, ಸೋಂಕಿನಿಂದ ಒಬ್ಬರು ಸಾವು

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

josh-tdy-3

ಬ್ಯಾಚುಲರ್‌ ಬದುಕಿನ ಆಸ್ತಿ ಹಂಚಿಕೆ

josh-tdy-2

ಆದರ್ಶ ಪ್ರಪಂಚ

josh-tdy-1

ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿ …

josh-tdy-5

ಬಾರೋ ಸಾಧಕತ ಕೇರಿಗೆ : ಅರಮನೆಯ ಶಿಶು ಗುಡಿಸಲಲ್ಲಿ ಬೆಳೆಯಿತು!

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

IPL-2

ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

cheta

ಜಂಗ್ಲಿ ರಂಗಾಪೂರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.