ಲಾಠಿ ಹಿಡಿವ ಬದಲು ಬೆತ್ತ ಹಿಡಿದೆ..!

Team Udayavani, May 26, 2020, 5:17 AM IST

lati-hidi

ಹೈಸ್ಕೂಲಿಗೆ ಬರುವವರೆಗೂ, ಪೊಲೀಸ್‌  ಕಾನ್‌ಸ್ಟೆಬಲ್‌ ಆಗಲೇಬೇಕೆಂದು  ಪಣತೊಟ್ಟಿದ್ದೆ. ಪೊಲೀಸ್‌ ಆಗಲು ಗಟ್ಟಿಮುಟ್ಟಾದ ದೇಹ ಬೇಕು ಅಂತ ನಮ್ಮ ಜಮೀನಿನವರೆಗೂ ಪ್ರತಿದಿನ ಬೆಳಗ್ಗೆಯೇ ಓಡುತ್ತಾ ಹೋಗಿ ಅಲ್ಲಿ ಲಾಂಗ್‌ಜಂಪ್‌, ಹೈ ಜಂಪ್‌ ಅಭ್ಯಾಸ ಮಾಡುತ್ತಿದ್ದೆ…

ತೀರಾ ಬಡತನದ ಕುಟುಂಬದಲ್ಲಿ ಜನಿಸಿದವನು ನಾನು. ಮೂರು ಹೊತ್ತಿನ ಊಟದ ಹೊರತು, ಇನ್ಯಾವುದೇ ಸೌಕರ್ಯಗಳಿಗೂ ಆಸೆಪಡದಂತಹ ಪರಿಸ್ಥಿತಿ ಮನೆಯಲ್ಲಿತ್ತು. ನಾನು ಚೆನ್ನಾಗಿ ಓದಿ, ಸರ್ಕಾರಿ ನೌಕರಿ ಪಡೆದರೆ ಮಾತ್ರ,  ಮನೆಯ ಪರಿಸ್ಥಿತಿ ಸುಧಾರಿಸಲು ಸಾಧ್ಯವೆಂದು ಅನಿಸುತ್ತಿತ್ತು. ಆ ದಿನಗಳಲ್ಲಿ ಪೊಲೀಸ್‌ ಅಂದರೆ, ಎಲ್ಲರಿಗೂ ಭಯ ಮತ್ತು ಗೌರವ. ಈಗಿಂದಲೇ ಚೆನ್ನಾಗಿ ಓದಬೇಕು. ಮುಂದೊಂದು ದಿನ, ಪೊಲೀಸ್‌ ಆಗಿ ಎಲ್ಲರಿಂದ ಗೌರವ ಪಡೆಯಬೇಕು  ಎಂಬ ಆಸೆ, ಚಿಕ್ಕಂದಿನಲ್ಲಿಯೇ ಮನಸ್ಸು ಹೊಕ್ಕಿತು.

“ಪೊಲೀಸ್‌ ಆಗಲು ಗಟ್ಟಿಮುಟ್ಟಾದ ದೇಹ ಬೇಕು. ಚೆನ್ನಾಗಿ ಓಡಬೇಕು, ಹೈಜಂಪ್‌, ಲಾಂಗ್‌ ಜಂಪ್‌ ಚೆನ್ನಾಗಿ ಮಾಡ್ಬೇಕು…’ ಎಂದೆಲ್ಲಾ ಕೆಲವು ಹಿರಿಯರು ಸಲಹೆ  ನೀಡಿದ್ದರು. ಹಾಗಾಗಿ, ಮನೆಯಿಂದ ಒಂದು ಕಿಲೋಮೀಟರ್‌ ದೂರವಿದ್ದ ನಮ್ಮ ಜಮೀನಿನವರೆಗೂ, ಪ್ರತಿದಿನ ಬೆಳಗ್ಗೆಯೇ ಓಡುತ್ತಾ ಹೋಗುತ್ತಿದ್ದೆ. ಅಲ್ಲಿಯ ನೆಲವನ್ನು ನನಗೆ ತೋಚಿದಂತೆ ಅಗೆದು, ಮೆದು ಮಾಡಿಕೊಂಡು, ಅಲ್ಲಿಯೇ  ಹೈಜಂಪ್‌, ಲಾಂಗ್‌ಜಂಪ್‌ ಅಭ್ಯಾಸ ಮಾಡುತ್ತಿದ್ದೆ. ಪುನಃ ಅಲ್ಲಿಂದ ಮನೆಯವರೆಗೆ ಓಡಿ ಬರುತ್ತಿದ್ದೆ.

ಹೈಸ್ಕೂಲಿಗೆ ಬಂದಮೇಲೆ, ನಿಧಾನವಾಗಿ ಪೊಲೀಸರ ಕಷ್ಟಗಳು ಅರ್ಥವಾದವು. ಕೆಲವು ಭ್ರಷ್ಟ ಪೊಲೀಸರನ್ನು ನೋಡಿ, ಎದುರಿಗೆ  ಹೆದರಿದಂತೆ  ಮಾಡುವ ಜನರು, ಹಿಂದಿನಿಂದ ಬೈಯುವ ರೀತಿಯೂ ಗೊತ್ತಾಯಿತು. ಅದರ ಜೊತೆಗೇ, ಹೈಸ್ಕೂಲಿನಲ್ಲಿ ಅನೇಕ ಶಿಕ್ಷಕರು ಬೀರಿದ ಪ್ರಭಾವದಿಂದಾಗಿ, ಮುಂದೆ ನಾನು  ಪೊಲೀಸ್‌ ಆಗುವ ಬದಲು, ಶಿಕ್ಷಕ ಆಗಬೇಕು ಅನಿಸಿತು.ಕಾಲೇಜಿನಲ್ಲಿ  ಕನ್ನಡ ಉಪನ್ಯಾಸಕರಾಗಿದ್ದ ಡಾ. ಸರ್ಫ್‌ರಾಜ್‌ ಚಂದ್ರಗುತ್ತಿಯವರ ಪ್ರಭಾವಕ್ಕೊಳಗಾದ ಮೇಲಂತೂ, ಉಜ್ವಲ ಪ್ರಜೆಗಳನ್ನು ಸೃಷ್ಟಿಸುವ ಶಿಕ್ಷಕರ ಹುದ್ದೆಯೇ ಶ್ರೇಷ್ಠ ಅನ್ನಿಸಿತು.

ಆನಂತರದಲ್ಲಿ, ನನ್ನ ಮನಸ್ಸನ್ನು ಸಂಪೂರ್ಣವಾಗಿ  ಶಿಕ್ಷಕನಾಗುವ ಕಡೆಗೆ ತಿರುಗಿಸಿಕೊಂಡೆ. ಈಗ, ಹೈಸ್ಕೂಲಿನಲ್ಲಿ ಆಂಗ್ಲಭಾಷಾ ಶಿಕ್ಷಕನಾಗಿರುವೆ. ಹತ್ತು ವರ್ಷಗಳ ಸೇವೆಯನ್ನು ಸರ್ಕಾರಿ ಶಾಲೆಯಲ್ಲಿ ಪೂರೈಸಿದ್ದೇನೆಂಬ ಹೆಮ್ಮೆಯಿದೆ. ಈ ಹುದ್ದೆಯಿಂದ ಸಂತೃಪ್ತಿ, ಸಮಾಧಾನ ಮತ್ತು ಗೌರವ-  ಎಲ್ಲವೂ ದೊರಕಿದೆ.

* ರಾಘವೇಂದ್ರ ಈ. ಹೊರಬೈಲು

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.