ನಮ್ಮ ಮೇಲೆ ಯಾರ ವಕ್ರದೃಷ್ಟಿಯೂ ಬೀಳದಿರಲಿ…


Team Udayavani, Jan 16, 2018, 3:10 PM IST

19-33.jpg

ನನಗೆ ಗೆಲುವನ್ನು ಕರುಣಿಸಿದ್ದು ನಿನ್ನ ಚೆಂದದ ನಗು. ನನ್ನೊಳಗಿನ ಕೋಪದ ಜಮದಗ್ನಿಯನ್ನು ತಣ್ಣಗಾಗಿಸಿದ್ದು ನಿನ್ನ ಹುಸಿ ಮೌನ. ನನ್ನ ಕಷ್ಟ-ನೋವು, ಚಿಂತೆ- ಆತಂಕಗಳಿಗೆ ಸಮಾಧಾನ ತಂದಿದ್ದು ನಿನ್ನ ಮಾತುಗಳು. 

ಅಂದು ಮೊದಲ ಬಾರಿ ನೀನು ದಾರಿಯಲ್ಲಿ ಸಿಕ್ಕು, ತುಸು ನಕ್ಕು ಸಾಗಿದಾಗಲೇ ನನ್ನೊಳಗೊಬ್ಬ ಸಲೀಂ, ರೋಮಿಯೋ, ದೇವದಾಸನೆಂಬ ಅಮರ ಪ್ರೇಮಿ ಹುಟ್ಟಿದ್ದ. ಅಂದಿನಿಂದ ಅನಾರ್ಕಲಿಯನ್ನು ಅಣಕಿಸುವಂತೆ, ಜೂಲಿಯಟ್‌ಳನ್ನೇ ಜರಿಯುವಂತೆ, ಪಾರ್ವತಿಯೇ ಪರಿತಪಿಸುವಂತೆ ನಾನು ನಿನ್ನನ್ನು ಪ್ರೀತಿಸಲು ಶುರುವಿಟ್ಟುಕೊಂಡೆ. ಜಾತಿ-ಸಂಪ್ರದಾಯ, ಆಸ್ತಿ-ಅಂತಸ್ತುಗಳೆಂಬ ಕ್ಷುಲ್ಲಕತೆಗೆ ಬೆಲೆಕೊಡದೆ ಬೆಂಬಿಡದೆ ಕಾಡಿ ನಿನ್ನನ್ನು ಒಲಿಸಿಕೊಂಡೆ. 

 ಕೊಲ್ಲುವ ನಿನ್ನ ಕಣ್ಣೋಟ ನನ್ನೊಳಗಿನ ಕವಿಯನ್ನು ಬರೆಯಲು ಹಚ್ಚಿತ್ತು. ಬಳುಕುವ ನಿನ್ನ ನಡಿಗೆಯ ಗೆಜ್ಜೆಯ ದನಿಯು ನನ್ನಿಂದ ತಾಳ ಹಾಕಿಸುತ್ತಿತ್ತು. ಜಾರುವ ನಿನ್ನ ಮುಂಗುರುಳು ಮತ್ತೆ ಮತ್ತೆ ನನ್ನ ಕೆಣಕುತ್ತಿತ್ತು. ನಿನ್ನ ಆಕರ್ಷಕ ಮೈಮಾಟ ನನ್ನ ಕುಂಚಕೆ ಕೆಲಸ ನೀಡುತ್ತಿತ್ತು. ಹೊಗಳಿಕೆಗೆ ಅರಳುತ್ತಿದ್ದ ನಿನ್ನ ಕೆನ್ನೆಯ ರಂಗು ನಾನು ನಿಂತಲ್ಲೇ ನಲಿದಾಡಲು ಕಾರಣವಾಗುತ್ತಿತ್ತು. ಸೌಂದರ್ಯ ಸಿರಿಯ ಶಿಖರ ನೀನಾಗಿದ್ದರೂ, ರೂಢಿಸಿಕೊಂಡ ನಿನ್ನ ಸರಳತೆ ನನ್ನ ಹೃದಯವನ್ನೇ ಕದ್ದುಬಿಟ್ಟಿತ್ತು.

ಅಲ್ಲಿಂದ ಮುಂದೆ ದಿನಗಳನ್ನು ಕ್ಷಣಗಳಂತೆ ಉರುಳಿಸಿದ್ದು ನಿನ್ನ ಒಲವಿನ ಸಾಂಗತ್ಯ. ಪ್ರತಿ ಹೆಜ್ಜೆಯಲ್ಲಿಯೂ ನನಗೆ ಗೆಲುವನ್ನು ಕರುಣಿಸಿದ್ದು ನಿನ್ನ ಚೆಂದದ ನಗು. ನನ್ನೊಳಗಿನ ಕೋಪದ ಜಮದಗ್ನಿಯನ್ನು ತಣ್ಣಗಾಗಿಸಿದ್ದು ನಿನ್ನ ಹುಸಿ ಮೌನ. ನನ್ನ ಕಷ್ಟ-ನೋವು, ಚಿಂತೆ-ಆತಂಕಗಳಿಗೆ ಸಮಾಧಾನ ತಂದಿದ್ದು ನಿನ್ನ ಮಾತುಗಳು. ಭವಿಷ್ಯದ ಯೋಚನೆ-ಯೋಜನೆಗಳಿಗೆ ಭದ್ರ ಬುನಾದಿ ಹಾಕಿದ್ದು ಕೊನೆವರೆಗೂ ನನ್ನೊಂದಿಗಿರುತ್ತೇನೆ ಎಂದು ಹೇಳಿದ ನಿನ್ನ ಭರವಸೆ.

ಎರಡು ವರ್ಷವಾದರೂ ಒಮ್ಮೆಯೂ ನಮ್ಮಿಬ್ಬರ ಮಧ್ಯೆ ಉದ್ಭವಿಸದ ಭಿನ್ನಾಭಿಪ್ರಾಯಗಳಿಗೆ, ಕಾಡದ ಸಣ್ಣ-ಪುಟ್ಟ ಮುನಿಸು, ಕೋಪ-ತಾಪಗಳಿಗೆ, ಬೇಡದ ಅತೀಯಾದ ನಿರೀಕ್ಷೆಗಳಿಗೆ, ನಮ್ಮನ್ನು ನೋಡಿ ಹೊಟ್ಟೆ ಉರಿದುಕೊಂಡು ಹುಳಿ ಹಿಂಡದ ಹಿತಶತ್ರುಗಳಿಗೆ, ನಾವಿಬ್ಬರೂ ಅನುರಾಗದ ಅಲೆಯಲ್ಲಿ ತೇಲುತ್ತಿರುವುದು ಗೊತ್ತಿದ್ದೂ ಇಲ್ಲದ್ದನ್ನು ಕಲ್ಪಿಸಿಕೊಂಡು ನಮ್ಮನ್ನಗಲಿಸುವ ಹುಚ್ಚು ಸಾಹಸಕ್ಕೆ ಕೈ ಹಾಕದ ನಮ್ಮಿಬ್ಬರ ಹೆತ್ತವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಮದ ಗುಂಗಿನಲ್ಲಿ ಹಾಳಾಗದ ನಮ್ಮ ವಿದ್ಯಾರ್ಥಿ ಜೀವನಕ್ಕೆ ಥ್ಯಾಂಕ್ಸ್‌ ಮತ್ತು ಥ್ಯಾಂಕ್ಸ್‌.

ಎಷ್ಟೊಂದು ಸುಂದರವಾಗಿದೆ ಈ ಬದುಕು? ಅದೇನು ಪುಣ್ಯ ಮಾಡಿದ್ದೆವೋ ನಾವಿಬ್ಬರೂ ಹೀಗಿರಲು. ಯಾವ ಜನ್ಮದ ಬಂಧವೋ ಏನೋ ನಾವು ಒಂದಾಗಿದ್ದೇವೆ. ನಗುನಗುತ ಸಾಗಿದ್ದೇವೆ. ಯಾರ ವಕ್ರದೃಷ್ಟಿಯೂ ನಮ್ಮ ಮೇಲೆ ಬೀಳದಿರಲಿ. ನಮ್ಮಿಬ್ಬರ ವಿಶಾಲ ಹೃದಯದ ಸ್ವತ್ಛಂದ ಬಯಲಿನಲ್ಲಿ ವಿಷಾದದ ಬಿರುಕು ಕಾಣದಿರಲಿ. ನೂರ್ಕಾಲ ನಾವು ಹೀಗೇ ಇರೋಣ. ನಮ್ಮದೇ ಪ್ರಪಂಚದಲ್ಲಿ ಸಣ್ಣದೊಂದು ಪ್ರೇಮಲೋಕ ಸೃಷ್ಟಿಸಿಕೊಂಡು ಸ್ವತಂತ್ರವಾಗಿ ಸ್ವೇಚ್ಛೆಯಿಂದ ಮನಸೋ ಇಚ್ಛೆ ತೇಲಾಡೋಣ. ಜೋಡಿ ಹಕ್ಕಿಗಳಾಗಿ ಹಾರಾಡೋಣ. ಏನಂತಿಯಾ?

ನಿನ್ನೊಲವಿನ ಆರಾಧಕ
ಅಶೋಕ ವಿ. ಬಳ್ಳಾರಿ

ಟಾಪ್ ನ್ಯೂಸ್

aravind

ಗೋವಾ ಚುನಾವಣೆಗೂ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿದ ಆಪ್

1-aseqwe

ಲಾಕ್ ಡೌನ್, ಕರ್ಫ್ಯೂ ತೆಗೆಯಿರಿ: ಸರಕಾರದ ವಿರುದ್ಧವೇ ಸಿಂಹ ಘರ್ಜನೆ !

pratap

ಗುಣಮಟ್ಟದ ಆಧಾರದಲ್ಲಿ ಸ್ತಬ್ಧ ಚಿತ್ರ ಆಯ್ಕೆ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

1-sasa

ತಮಿಳುನಾಡಿನ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರ ತಿರಸ್ಕೃತ ಟ್ಯಾಬ್ಲೋ ಪ್ರದರ್ಶನ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

cm-bomm

ಹನ್ನೊಂದು ದಿನಗಳ ಕಾಲ ಮನೆಯಲ್ಲಿ ಕುಳಿತ ಉದಾಹರಣೆಯೇ ಇರಲಿಲ್ಲ: ಸಿಎಂ ಬೊಮ್ಮಾಯಿ

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

aravind

ಗೋವಾ ಚುನಾವಣೆಗೂ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿದ ಆಪ್

ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚಳ

ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚಳ

ಹಗಲು ವೇಳೆ ಸಮರ್ಪಕ ತ್ರಿಫೇಸ್‌ ವಿದ್ಯುತ್‌ ನೀಡಿ

ಹಗಲು ವೇಳೆ ಸಮರ್ಪಕ ತ್ರಿಫೇಸ್‌ ವಿದ್ಯುತ್‌ ನೀಡಿ

ರೇಷ್ಮೆನಗರಿಯಲ್ಲಿ ಕೊರೊನಾ ನರ್ತನ

ರೇಷ್ಮೆನಗರಿಯಲ್ಲಿ ಕೊರೊನಾ ನರ್ತನ

1-aseqwe

ಲಾಕ್ ಡೌನ್, ಕರ್ಫ್ಯೂ ತೆಗೆಯಿರಿ: ಸರಕಾರದ ವಿರುದ್ಧವೇ ಸಿಂಹ ಘರ್ಜನೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.