ಲಾಸ್ಟ್‌ ಬೆಂಚ್‌ ಮಹಾತ್ಮೆ


Team Udayavani, Feb 26, 2019, 12:30 AM IST

x-3.jpg

ಫ‌ಸ್ಟ್‌ ಬೆಂಚ್‌ಲಿ ಕೂತು ಸಿಲಬಸ್‌ ಪಾಠ ಕಲಿತೆ ಲಾಸ್ಟ್‌ ಬೆಂಚ್‌ಗೆ ಹೋಗಿ ಬದುಕಿನ ಪಾಠ ಕಲಿತೆ

ತರಗತಿಯ ಕೊನೆಯ ಎರಡು ಸಾಲುಗಳು ಉಢಾಳರಿಗೆ ಮೀಸಲು. ಅವರೆಂದರೆ ಶಿಕ್ಷಕರಿಗೆ ಅದೇನೋ ಅಸಮಾಧಾನ. ಅವರು ಪಾಠ ಕೇಳುವುದಿಲ್ಲ ಅನ್ನೋದು ಲೆಕ್ಚರರ್ ದೂರು. ಆದರೆ, ಲಾಸ್ಟ್‌ ಬೆಂಚು ಕಲಿಸುವ ಪಾಠಗಳು ನೂರಾರು. ಪದವಿಯ ಮುಕ್ಕಾಲು ಭಾಗವನ್ನು ಮೊದಲ ಬೆಂಚಿನಲ್ಲಿ ಕಳೆದು, ಕೊನೆಯ ಸೆಮಿಸ್ಟರ್‌ನಲ್ಲಿ ಲಾಸ್ಟ್‌ ಬೆಂಚ್‌ನಲ್ಲಿ ಕುಳಿತ ಹುಡುಗಿಯ ಪುಳಕಗಳು ಇಲ್ಲಿವೆ. ಇದನ್ನೋದಿದರೆ, ಕೊನೆಯ ಬೆಂಚಿನವರ ಬಗೆಗಿನ ಭಾವನೆಗಳು ಬದಲಾಗಬಹುದು. 

“ಲಾಸ್ಟು ಬೆಂಚಿನ ಪಾರ್ಟಿ ನಮ್ಮದು
ನಮ್ದೇ ಹಾವಳಿ, ಯಾರ್ನೇನ್‌ ಕೇಳೊದು..’
“ಕಿರಿಕ್‌ ಪಾರ್ಟಿ’ ಸಿನಿಮಾದ ಈ ಟಪ್ಪಾಂಗುಚ್ಚಿ ಹಾಡು ಕೇಳಿದ್ದೀರಲ್ವಾ? ಹಾಡಿನಲ್ಲಿ ಎಷ್ಟು ಮಜಾ ಇದೆಯೋ, ಲಾಸ್ಟ್‌ ಬೆಂಚ್‌ನಲ್ಲಿ ಕೂರೋದರಲ್ಲಿ ಅದಕ್ಕಿಂತ ಹೆಚ್ಚು ಮಜಾ ಇದೆ. ಅದರಲ್ಲಿರೋ ಮಜಾ, ಫ‌ಸ್ಟ್‌ ಬೆಂಚಿನ ಮಕ್ಕಳಿಗೆ ಗೊತ್ತೇ ಇರೋದಿಲ್ಲ.  

ಫ‌ಸ್ಟ್‌ ಬೆಂಚ್‌ನವರು ಅತೀ ಬುದ್ಧಿವಂತರು, ಗುಣವಂತರು, ಸೃಜನಶೀಲರು ಅಂತೆಲ್ಲಾ ಹೇಳುತ್ತಾರೆ. ಎಲ್ಲ ಶಿಕ್ಷಕರಿಗೂ ಮೊದಲ ಸಾಲಿನ ಮಕ್ಕಳೇ ಹೆಚ್ಚು ಇಷ್ಟ. ಅವರು ಗಲಾಟೆ ಮಾಡುವುದಿಲ್ಲ, ನೀಟಾಗಿ ನೋಟ್ಸ್‌ ಬರೆದುಕೊಳ್ತಾರೆ, ಕ್ಲಾಸ್‌ನಲ್ಲಿ ತೂಕಡಿಸೋದಿಲ್ಲ… ಇವೆಲ್ಲಾ ಫ‌ಸ್ಟ್‌ ಬೆಂಚಿನವರನ್ನು ಇಷ್ಟಪಡಲು ಇರೋ ಕಾರಣಗಳು. ಫ‌ಸ್ಟ್‌ ಬೆಂಚ್‌ ಹುಡುಗನಿಗೆ ಎಂದೂ ಪ್ರಶ್ನೆ ಕೇಳುವುದಿಲ್ಲ. ಗುರುಗಳ ಕಣ್ಣೇನಿದ್ದರೂ ಕೊನೆಯ ಸಾಲಿನ ಹುಡುಗರ ಮೇಲೆಯೇ. ಅವರನ್ನು ನಿಲ್ಲಿಸಿ, ಪ್ರಶ್ನೆ ಕೇಳಿ, ಕಿವಿ ಹಿಂಡುವ ಅವಕಾಶಕ್ಕಾಗಿ ಎಲ್ಲ ಶಿಕ್ಷಕರೂ ಕಾಯುತ್ತಿರುತ್ತಾರೆ.  

ಆದರೆ, ಹೆಚ್ಚಿನವರೆಗೆ ಲಾಸ್ಟ್‌ ಬೆಂಚ್‌ನ ಮಹತ್ವ ಗೊತ್ತಿಲ್ಲ. ಸಿನಿಮಾ ತಾರೆಯರು, ಕ್ರೀಡಾಪಟುಗಳು, ಹಲವು ವಿಸ್ಮಯಗಳನ್ನು ಕಂಡು ಹಿಡಿದ ಸಂಶೋಧಕರಲ್ಲಿ ಹಲವರು, ಒಂದು ಕಾಲದಲ್ಲಿ ತರಗತಿಯ ಕೊನೆಯ ಸಾಲಿನಲ್ಲಿ ಕುಳಿತಿದ್ದವರೇ. ಇಂತಿಪ್ಪ ಲಾಸ್ಟ್‌ ಬೆಂಚಿನ ಮಹಿಮೆ ನನಗೂ ಗೊತ್ತಿರಲಿಲ್ಲ. 

ಯಾಕಂದ್ರೆ, ಒಂದನೇ ಕ್ಲಾಸ್‌ನಿಂದ, ಡಿಗ್ರಿ ಕೊನೆಯ ಸೆಮಿಸ್ಟರ್‌ವರೆಗೂ ನಾನು ಫ‌ಸ್ಟ್‌ ಬೆಂಚ್‌ನ ವಿದ್ಯಾರ್ಥಿ. ತರಗತಿಯ ಕೊನೆಯ ಎರಡು ಸಾಲುಗಳ ಬಗ್ಗೆ ಎಲ್ಲರಂತೆ ನಾನೂ ಮೂಗು ಮುರಿದವಳೇ. ಕೆಲವೊಮ್ಮೆ ನಮ್ಮ ಬೆಂಚ್‌ ತನಕವೂ ಕೇಳುತ್ತಿದ್ದ ಹಿಂದಿನವರ ನಗು, ಕೇಕೆ, ಕಮೆಂಟ್‌ಗಳ ಬಗ್ಗೆ ಕೋಪ. ಅವರೆಲ್ಲರನ್ನೂ ಅಪರಾಧಿಯಂತೆ ಕಾಣುತ್ತಿದ್ದೆ ನಾನು. “ನಿಂಗೇನು ಗೊತ್ತು, ಲಾಸ್ಟ್‌ ಬೆಂಚಿನಲ್ಲಿ ಕೂರುವುದರ ಮಜಾ’ ಅಂತ ಗೆಳೆಯರೆಲ್ಲ ಹೇಳುವಾಗ, ಅದರಲ್ಲೇನಿದೆ ಮಜಾ ಅಂತ ತಿಳಿಯುವ ಕುತೂಹಲವಾಯ್ತು. ಇನ್ನೇನು ಡಿಗ್ರಿ ಮುಗಿಯುತ್ತಾ ಬಂತಲ್ಲ, ಲೆಕ್ಚರರ್ ಕೇಳುವುದಿಲ್ಲ ಅಂತ ಆರನೇ ಸೆಮ್‌ನಲ್ಲಿ ಕೊನೆಯ ಬೆಂಚ್‌ನತ್ತ ಜಾರಿಕೊಂಡೆ. 

ಲಾಸ್ಟ್‌ ಬೆಂಚ್‌ನಲ್ಲಿ ಕುಳಿತ ಮೊದಲ ದಿನ ಏನೋ ಒಂಥರಾ ಉತ್ಸಾಹ, ಕುತೂಹಲ. ನನಗಂತೂ ತುಂಬಾ ತರ್ಲೆ ಮಾಡಬೇಕು ಎಂದು ಅನ್ನಿಸಿತು. ಕ್ಲಾಸ್‌ನಲ್ಲಿ ಲೆಕ್ಚರರ್‌ ಇರುವಾಗಲೇ ಸೆಲ್ಫಿ  ಕ್ಲಿಕ್ಕಿಸಿದೆವು. ನಂತರದ ಪೀರಿಯೆಡ್‌ಗೆ ಕನ್ನಡ ಮೇಷ್ಟ್ರು ಬಂದರು. ಹಳೆ ಸಿನಿಮಾ ಹೀರೋನಂತೆ ಕಾಣುವ ಅವರ ವೇಷಭೂಷಣ, ಪಾಠ ಮಾಡುವಾಗ ಅವರ ಬಾಡಿ ಲಾಂಗ್ವೇಜ್‌, ಗಲಾಟೆ ಮಾಡಿದಾಗ ಅವರು ಬೈಯುತ್ತಿದ್ದ ಭಾಷೆ… ಎಲ್ಲವೂ ನಗು ತರಿಸುತ್ತಿತ್ತು. ಅದನ್ನೆಲ್ಲ ತುಂಬಾ ಎಂಜಾಯ್‌ ಮಾಡಿದ್ದೇ ಆಗ. ಅವರು ನಮ್ಮ ಕಡೆಗೆ ನೋಡುತ್ತಿರುವಾಗ, ಸಿನ್ಸಿಯರ್‌ ಆಗಿ ಪಾಠ ಕೇಳುವವರಂತೆ ನಟಿಸುತ್ತಿದ್ದೆವು. ಆ ಕಡೆ ತಿರುಗಿದಾಗ ಮತ್ತೆ ತರಲೆ… ಹೀಗೆ ಕ್ಲಾಸ್‌ ಮುಗಿದಿದ್ದೇ ತಿಳಿಯಲಿಲ್ಲ. 

ಏನೇನೆಲ್ಲಾ ಕಲಿತೆ…
ನಮ್ಮ ಕ್ಲಾಸ್‌ ಅನ್ನು ಕಂಡರೆ ಕೆಲವು ಶಿಕ್ಷಕರಿಗೆ ಆಗುತ್ತಿರಲಿಲ್ಲ. ಲಾಸ್ಟ್‌ ಬೆಂಚ್‌ನವರು ತುಂಬಾ ಗಲಾಟೆ ಮಾಡ್ತಾರೆ, ಪಾಠ ಮಾಡೋಕೆ ಬಿಡುವುದಿಲ್ಲ ಎಂದು ಟೀಕಿಸುತ್ತಿದ್ದರು. ತುಂಬಾ ಗೋಳು ಕೊಟ್ಟವರನ್ನು ಶಿಕ್ಷಕರು ಜೀವಮಾನ ಪೂರ್ತಿ ಮರೆಯುವುದಿಲ್ಲವಂತೆ. ಹಾಗಾಗಿ, ಅವರ ನೆನಪಿನ ಬುತ್ತಿಯಲ್ಲಿ ನನಗಂತೂ ಒಂದು ಸ್ಥಾನ ಇದ್ದೇ ಇದೆ. ಫ‌ಸ್ಟ್‌ ಬೆಂಚ್‌ನಲ್ಲಿ ಕುಳಿತಾಗ ಏನೇನೆಲ್ಲಾ ಕಲಿಯಬಹುದೋ, ಲಾಸ್ಟ್‌ ಬೆಂಚ್‌ನಲ್ಲಿ ಅದಕ್ಕಿಂತ ಹೆಚ್ಚು ಕಲಿಯಲು ಸಿಗುತ್ತದೆ. ಕುಳಿತಲ್ಲೇ ತರ್ಲೆ ಮಾಡೋದನ್ನು, ಗಲಾಟೆ ಮಾಡೋದನ್ನು, ಪಾಠ ಕೇಳಿದಂತೆ, ನೋಟ್ಸ್‌ ಬರೆದಂತೆ ನಟಿಸೋದನ್ನು ಕಲಿತುಕೊಂಡೆ. ಉಳಿದೆಲ್ಲ ಸೆಮ್‌ಗಳಿಗಿಂತ ಈ ಒಂದು ಸೆಮ್‌ನ ನೆನಪುಗಳೇ ಕೊನೆಯವರೆಗೆ ಉಳಿಯುವುದು.  

ನಮ್ದು ಬ್ಯುಸಿ ಗ್ಯಾಂಗ್‌
ಹಿಂದಿನ ಬೆಂಚಿನ ನಮಗೊಂದು ವಿಚಿತ್ರ ಹೆಸರಿತ್ತು. ನಮ್ಮ ಗ್ಯಾಂಗ್‌ನ ಹೆಸರು “ಬ್ಯುಸಿ ಗ್ಯಾಂಗ್‌’. ನಮ್ಮೆಲ್ಲರ ಹೆಸರಿನ ಮೊದಲ ಸ್ಪೆಲಿಂಗ್‌ ಅನ್ನು ಒಟ್ಟುಗೂಡಿಸಿ (ಭಾರತಿ, ಉಮೇಶ್‌, ಶ್ರೀದೇವಿ, ಸಂತು, ಶ್ವೇತ, ಶಂಕರ್‌, ಯಶು, ಯೋಗಿ) ಗ್ಯಾಂಗ್‌ ನೇಮ್‌ ಇಟ್ಟಿದ್ದೆವು. ಹೆಸರಿಗೆ ತಕ್ಕಂತೆ ನಾವು ಯಾವಾಗಲೂ ಬ್ಯುಸಿಯಾಗಿಯೇ ಇರುತ್ತಿದ್ದೆವು. ಗುಂಪಿನಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯ ಕಲೆ ಇತ್ತು. ಎಲ್ಲರೂ ಅವರವರ ಕಲೆಯಲ್ಲಿ ಚಾಣಕ್ಷರೇ. ಯಾರಾದರೊಬ್ಬರು ಹಸಿವು ಎಂದರೆ ಸಾಕು, ಎಲ್ಲರೂ ಬಂಕ್‌ ಮಾಡಿ ಕ್ಯಾಂಟೀನ್‌ಗೆ ಲಗ್ಗೆ ಇಡುತ್ತಿದ್ದೆವು. ಒಂದೇ ಬಾಕ್ಸ್‌ ಇದ್ದರೂ ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದೆವು.  “ಬಕಾಸುರರು’, ತಿನ್ನೋದೇ ಇವರ ಬ್ಯುಸಿನೆಸ್ಸು ಅಂತೆಲ್ಲಾ ಉಳಿದವರು ಆಡಿಕೊಳ್ಳುತ್ತಿದ್ದರು. 

ನಾವೂ ಒಳ್ಳೇವ್ರೆ
ಏನಪ್ಪಾ ಇವಳು ಕ್ಲಾಸ್‌ ಬಂಕ್‌ ಮಾಡೋದನ್ನೇ ಹೆಮ್ಮೆಯಿಂದ ಹೇಳ್ತಿದ್ದಾಳೆ ಅಂತ ಅಂದುಕೊಳ್ಳಬೇಡಿ. ನಾವು ಸ್ವಲ್ಪ ತರಲೆಗಳಷ್ಟೇ, ಕೆಟ್ಟವರೇನಲ್ಲ. ನಮ್ಮ ಬ್ಯುಸಿ ಗುಂಪಿನೊಳಗೆ ಯಾರಾದರೂ ತಪ್ಪು ಮಾಡಿದರೆ ಅಂಥವರಿಗೆ ಎಲ್ಲರೂ ಸೇರಿ ತಿಳಿ ಹೇಳುತ್ತಿದ್ದೆವು. ಯಾರಾದರೂ ಜಗಳವಾಡಿದರೆ ಎಲ್ಲರೂ ಸೇರಿ ಅವರನ್ನು ಒಂದು ಮಾಡುತ್ತಿದ್ದೆವು. ಏನೇ ಆದರೂ, ಒಬ್ಬರನ್ನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. ನಾನು ಮೊದಲ ಬೆಂಚಿನಲ್ಲಿದ್ದಾಗ ಸಿಲಬಸ್‌ ಪಾಠ ಕಲಿತಿದ್ದೆ, ಕೊನೆಯ ಬೆಂಚಿನಲ್ಲಿ ಬದುಕಿನ ಪಾಠ ಕಲಿತೆ.

ಭಾರತಿ ಸಜ್ಜನ್‌, ತುಮಕೂರು

ಟಾಪ್ ನ್ಯೂಸ್

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

14-

Kundapura ಭಾಗದ ಅಪರಾಧ ಸುದ್ದಿಗಳು

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

14-

Kundapura ಭಾಗದ ಅಪರಾಧ ಸುದ್ದಿಗಳು

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.