ಅತ್ಯಾಚಾರಿ, ಭೋಗವಾದಿ ರಾವಣನ ತುಚ್ಛ ಪ್ರೇಮ

Team Udayavani, Dec 3, 2019, 12:00 PM IST

josh-tdy-7

ರಾವಣನನ್ನು ಮಹಾತ್ಮ ಎಂದು ಹೇಳುವ ಕೆಲವು ವಾದಗಳಿವೆ. ಕೆಲವು ಎಡಪಂಥೀಯರು ರಾವಣನನ್ನು ಹಿಂದುಳಿದ ಜಾತಿಗೆ ಸೇರಿದವನು, ಅವನು ಶೋಷಿತ ಸಮುದಾಯದ ಧ್ವನಿ ಎನ್ನುತ್ತಾರೆ. ಹಿಂದುಳಿದ, ಗುಡ್ಡಗಾಡು ಸಮುದಾಯಕ್ಕೆ ಸೇರಿದ್ದವರನ್ನೇ,ಮೇಲ್ಜಾತಿಯವರು ರಾಕ್ಷಸರನ್ನಾಗಿ ಪುರಾಣಗಳಲ್ಲಿಬಿಂಬಿಸಿದ್ದಾರೆ ಎನ್ನುವುದು ಇದರ ಹಿಂದಿನ ವಾದ.

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿ,ರಾವಣ ದ್ರಾವಿಡರ ನಾಯಕಎನ್ನುವಂತೆ ಮಾತನಾಡುತ್ತಿದ್ದರು. ಇನ್ನೊಂದು ಸಮುದಾಯ, ರಾವಣ ಒಬ್ಬ ಮಹಾಬ್ರಾಹ್ಮಣ ಎಂದು ಅವನ ಬಗ್ಗೆ ಅನುಕಂಪತೋರುತ್ತದೆ. ಅವನು ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿದ್ದ, ಶ್ರೀರಾಮ ಲಂಕೆಗೆ ಹೋಗುವ ಮುನ್ನ ರಾಮೇಶ್ವರದಲ್ಲಿಶಿವಲಿಂಗ ಸ್ಥಾಪಿಸುವಾಗ ಸ್ವತಃ ರಾವಣನೇ ಅರ್ಚಕನಾಗಿ ಬಂದಿದ್ದ ಎಂಬ ಕಥೆಗಳೂ ಇವೆ. ರಾವಣನನ್ನು ಶ್ರೀರಾಮ ಹತ್ಯೆ ಮಾಡಿದ ನಂತರ ಅವನಿಗೆ ಬ್ರಹ್ಮಹತ್ಯಾ ದೋಷಬಂದಿತ್ತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ರೀತಿಯ ಎಲ್ಲ ಅಭಿಪ್ರಾಯಗಳು ವಾಲ್ಮೀಕಿ ವಿರಚಿತಮೂಲ ರಾಮಾಯಣಕ್ಕೆ ಹೊರತಾದ ಸಂಗತಿಗಳು.

ಕಾಲಕ್ರಮದಲ್ಲಿ ಮೂಲರಾಮಾಯಣಕ್ಕೆಸಂಬಂಧಿಸಿದ ವಿಚಾರಗಳ ಬದಲು, ಬೇರೆ ಬೇರೆ ಮೂಲಗಳಲ್ಲಿ ಬೆಳೆದುಬಂದುಜನಪ್ರಿಯವಾದ ಸಂಗತಿಗಳೇ ಎಲ್ಲರ ಬಾಯಲ್ಲಿ ಕೇಳಿಬಂದು ಅದೇರಾಮಾಯಣವಾಗಿದೆ. ವಿಚಿತ್ರವೆಂದರೆ, ಇಂತಹ ಹಲವು ಸಂಗತಿಗಳು ಮೂಲ ರಾಮಾಯಣದಲ್ಲಿ ಸಿಕ್ಕುವುದೇ ಇಲ್ಲ! ಅತ್ಯಂತ ಜನಪ್ರಿಯವಾಗಿರುವ ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ಶ್ರೀರಾಮ ಲಕ್ಷ್ಮಣನಿಗೆ ಹೇಳುತ್ತಾನೆ ಎಂಬ ಮಾತು ಕೂಡಾ ಇದೇ ವರ್ಗಕ್ಕೆ ಸೇರಿದ್ದು! ಇವೆಲ್ಲ ಇರಲಿ….ಮೂಲ ರಾಮಾಯಣ ಓದಿದವರು ರಾವಣನನ್ನು ಪುಣ್ಯಾತ್ಮ ಎನ್ನಲಂತೂಸಾಧ್ಯವಿಲ್ಲ. ಅವನ ಅರಮನೆಯಲ್ಲಿ 3000 ಸ್ತ್ರೀಯರು ಅವನ ಪತ್ನಿಯರಂತೆ ಬಿದ್ದುಕೊಂಡಿರುತ್ತಾರೆ. ಇವರೆಲ್ಲ ಬೇರೆ ರಾಜರ ಪತ್ನಿಯರು. ಒಬ್ಬ ವ್ಯಕ್ತಿ ಇಷ್ಟೊಂದು ಪತ್ನಿಯರನ್ನುಹೊಂದಿದ್ದಾನೆ, ಅದರ ಜೊತೆಗೆ ಸೀತೆಯನ್ನೂಅಪಹರಿಸುತ್ತಾನೆಂದರೆ, ಅವನು ಸ್ತ್ರೀಲಂಪಟನಲ್ಲದೇ ಇನ್ನೇನು? ರಾವಣನ ಇತಿಹಾಸಪೂರ್ತಿ ಆಕ್ರಮಣ, ಹಿಂಸೆ, ಪರವಸ್ತುವಿನ ಮೇಲೆ ಆಸೆ ಪಟ್ಟು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು, ಹೀಗೆ ಸಾಗುತ್ತದೆಆ ಕಾಲದ ರಾಜಧರ್ಮಕ್ಕೆ ತಕ್ಕಂತೆ ಇನ್ನೊಬ್ಬರ ರಾಜ್ಯಆಕ್ರಮಿಸಿಕೊಳ್ಳುವುದು ಸರಿಯೆಂದು ಒಪ್ಪಿಕೊಳ್ಳೋಣ.

ಪರಪತ್ನಿಯರತ್ತ ಕಣ್ಣು ಹಾಕುತ್ತಾನೆಂದರೆ? ತನ್ನ ತಾಯಿಕೈಕಸಿಯ ಬಯಕೆಯಂತೆ ಒಮ್ಮೆ ಶಿವನ ಆತ್ಮಲಿಂಗ ತರಲು ಕೈಲಾಸಕ್ಕೆ ಹೋಗಿದ್ದ ರಾವಣ, ಅಲ್ಲಿ ಪಾರ್ವತಿಯ ಮೇಲೆಯೇ ಕಣ್ಣುಹಾಕಿ, ಆಕೆಯನ್ನೇ ಅಪಹರಿಸಲು ಯತ್ನಿಸುತ್ತಾನೆ. ಶಿವಪಾರ್ವತಿ ಕುಳಿತಿದ್ದ ಪರ್ವತವನ್ನು ಎತ್ತಿ ಒಯ್ಯಲು ಹೊರಟಾಗ, ಶಿವ ತನ್ನ ಕಾಲೆರಳಲ್ಲಿ ಪರ್ವತವನ್ನು ಒತ್ತುತ್ತಾನೆ. ಆಗ ರಾವಣನ ಕೈಗಳು ಪರ್ವತದಡಿ ಸಿಕ್ಕಿಕೊಳ್ಳುತ್ತದೆ, ಆತ ನೋವಿನಿಂದರಾಎಂದು ಕೂಗಿಕೊಳ್ಳುತ್ತಾನೆ. ಆ ಧ್ವನಿ ರಾವಿತಗೊಳ್ಳುತ್ತದೆ (ಪ್ರತಿಧ್ವನಿ). ಆದ್ದರಿಂದಲೇ ಅವನಿಗೆ ರಾವಣನೆಂಬ ಹೆಸರು ಬಂದಿದ್ದು. ಅವನ ಸ್ತ್ರೀಯರ ಮೇಲಿನ ವ್ಯಾಮೋಹ ಇಲ್ಲಿಗೇ ಮುಕ್ತಾಯಗೊಳ್ಳುವುದಿಲ್ಲ. ದೇವಕನ್ಯೆ ರಂಭೆ ತನ್ನನ್ನು ವರುಣನಿಗೆ ಅರ್ಪಿಸಿಕೊಂಡಿರುತ್ತಾಳೆ. ಒಮ್ಮೆ ಆಕೆ ಸ್ವರ್ಗದ ದಾರಿಯಲ್ಲಿ ವರುಣನನ್ನು ಕೂಡಲು ಹೊರಟಿರುತ್ತಾಳೆ. ಆಗ ಆಕೆಯನ್ನು ಬಲಾತ್ಕಾರವಾಗಿ ರಾವಣ ಹಿಡಿದು, ಅತ್ಯಾಚಾರ ಮಾಡುತ್ತಾನೆ. ತಾನು ವರುಣನಿಗೆಸೇರಿದವಳು ಎಂದರೂ ರಾವಣ ಕೇಳುವುದಿಲ್ಲ. ನಿಮ್ಮ ದೇವಲೋಕದಲ್ಲಿ ಯಾರು, ಯಾರನ್ನುಬೇಕಾದರೂ ಸೇರಬಹುದು. ಬಾ ನನ್ನನ್ನು ಸೇರು ಎಂಬ ತರ್ಕವನ್ನು ಬೇರೆ ಹೇಳುತ್ತಾನೆ. ಇದರಿಂದ ಸಿಟ್ಟಾದ ವರುಣ, ರಾವಣ ಇನ್ನೊಮ್ಮೆ ಪರಸ್ತ್ರೀಯರನ್ನು ಬಲಾತ್ಕಾರವಾಗಿ ಸೇರಲು ಯತ್ನಿಸಿದರೆ, ಅವನ ತಲೆ ಸಿಡಿದು

ಸಾವಿರ ಹೋಳಾಗಲಿ ಎಂದು ಶಾಪ ಕೊಡುತ್ತಾನೆ. ರಾವಣ ಮುಂದೆ ಸೀತೆಯನ್ನು ಅಪಹರಿಸಿದರೂ,

ಭಯದಿಂದಲೇ ಬಲಾತ್ಕಾರಿಸುವುದಿಲ್ಲ. ಅವಳನ್ನು, ಅನುನಯಿಸಲು, ಒಪ್ಪಿಸಲು ಹೆಣಗುತ್ತಾನೆ. ಈಗ ಹೇಳಿ ಪರ ಸ್ತ್ರೀಯರನ್ನು ಅಪಹರಿಸುವ,ಬಲಾತ್ಕಾರಿಸುವ ರಾವಣ ಆದರ್ಶನಾಗಿರಲು ಹೇಗೆ ಸಾಧ್ಯ?ಇದನ್ನು ಪ್ರೀತಿಯೆನ್ನಲಾದೀತೆ? ಅದು ಪವಿತ್ರವಾದೀತ.

-ನಿರೂಪ

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.