ಪ್ರೊಫೆಸರ್‌ ಥರಾ ಇದ್ದವನು ಪ್ರಾವಿಶನ್‌ ಸ್ಟೋರ್‌ ಇಟ್ಟೆ…


Team Udayavani, Aug 11, 2020, 2:10 PM IST

ಪ್ರೊಫೆಸರ್‌ ಥರಾ ಇದ್ದವನು ಪ್ರಾವಿಶನ್‌ ಸ್ಟೋರ್‌ ಇಟ್ಟೆ…

ಸಾಂದರ್ಭಿಕ ಚಿತ್ರ

ಒಂದು ಕೆಲಸ ಅಂತ ಇರಬೇಕು. ಅದರಲ್ಲೂ ಕಡಿಮೆ ಕೆಲಸ, ಒಳ್ಳೆಯ ಸಂಬಳ ಕೊಡುವ ಕೆಲಸ ಸಿಕ್ಕಿಬಿಟ್ಟರೆ ಜೀವನ ಪಾವನ ಆದಂತೆ… ಇಂಥದೊಂದು ನಂಬಿಕೆ ಬಾಲ್ಯದಿಂದಲೂ ನನ್ನ ಜೊತೆಗಿತ್ತು. ಯಾವ ಕೆಲಸಕ್ಕೆ ಸೇರಿದರೆ ಜಾಸ್ತಿ ಸಂಪಾದನೆ ಮಾಡಬಹುದು? ಯಾವ ಕೆಲಸದಲ್ಲಿ ರಿಸ್ಕ್ ಕಡಿಮೆ ಇರುತ್ತದೆ, ಯಾವ ಕೆಲಸದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದೆಲ್ಲಾ ಲೆಕ್ಕಹಾಕುವುದೇ ನಮ್ಮ ಕೆಲಸವಾಗಿತ್ತು. ವಿಶೇಷವೆಂದರೆ, ನಮ್ಮ ಜೊತೆಗಿದ್ದ ಗೆಳೆಯರೂ ನಮ್ಮಂತೆಯೇ ಯೋಚಿಸುತ್ತಾ, ನಮ್ಮ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದರು.

ಡಾಕ್ಟರ್‌ ಆಗಿಬಿಡಬೇಕು, ದಿನವೂ 20 ಜನರನ್ನು ಟೆಸ್ಟ್ ಮಾಡಿದರೂ ಸಾಕು, ಚೆನ್ನಾಗಿ ಸಂಪಾದನೆ ಆಗುತ್ತದೆ ಎಂದು ಕೆಲವರು, ಇಂಜಿನಿಯರ್‌ ಆದರೆ ತಿಂಗಳು ತಿಂಗಳೂ ಲಕ್ಷ ಲಕ್ಷ ದುಡ್ಡು ಎಣಿಸಬಹುದು ಎಂದು ಹಲವರು ಹೇಳುತ್ತಿದ್ದರು. ಆದರೆ, ಈ ಎರಡೂ ವೃತ್ತಿ ಹೊಂದಬೇಕೆಂದರೆ, ಹಗಲೂ ರಾತ್ರಿಗಳನ್ನು ಒಂದು ಮಾಡಿಕೊಂಡು ಓದಬೇಕಿತ್ತು. ಜೊತೆಗೆ, ಇಂಜಿನಿಯರಿಂಗ್‌ ಓದಿದವರೆಲ್ಲ ಇಂಜಿನಿಯರ್‌ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದೂ ನಮಗೆ ಗೊತ್ತಿತ್ತು. ಹೀಗೆಲ್ಲಾ ಮಾತಾಡುತ್ತಿದ್ದಾಗಲೇ ನಮ್ಮ ಜೊತೆಗೇ ಇದ್ದ ಗೆಳೆಯ ಉದ್ಗರಿಸಿದ-  ”ಲೆಕ್ಚರರ್‌ ಆಗುವುದೇ ಸರಿ. ಕಾಲೇಜಲ್ಲಿ ಪಾಠ ಮಾಡಿದ್ದಕ್ಕೂ ಸಂಬಳ ಬರುತ್ತೆ, ಮನೆಯಲ್ಲಿ ಟ್ಯೂಷನ್‌ ಮಾಡಿದ್ರೆ ಅದರಿಂದಲೂ ಕಾಸು ಸಿಗುತ್ತೆ. ಅದರಲ್ಲೂ ಮ್ಯಾಥ್ಸ್, ಸೈನ್ಸ್, ಇಂಗ್ಲಿಷ್‌, ಅಕೌಂಟೆನ್ಸಿ ಥರದ ಸಬ್ಜೆಕ್ಟ್ ಆಗಿಬಿಟ್ಟರಂತೂ ಯಾವುದೇ ಊರಿಗೆ ಹೋದರೂ ಸಾಕಷ್ಟು ವಿದ್ಯಾರ್ಥಿಗಳು ಸಿಗುತ್ತಾರೆ…” ಅವನ ಮಾತಿನಲ್ಲಿ ಸತ್ಯವಿತ್ತು. ಏಕೆಂದರೆ, ನಾವೆಲ್ಲಾ ಟ್ಯೂಷನ್‌ಗೆ ಹೋಗುತ್ತಿದ್ದೆವು.

ವಿದ್ಯಾರ್ಥಿಗಳು ಹೆಚ್ಚಿದ್ದ ಕಾರಣಕ್ಕೆ, ಬೇರೆ ಬೇರೆ ಬ್ಯಾಚ್‌ ಮಾಡಿ ಟ್ಯೂಷನ್‌ ಮಾಡಲಾಗುತ್ತಿತ್ತು. 5 ಅಥವಾ 10 ವರ್ಷ ಹೀಗೆ ದುಡಿದು ಚೆನ್ನಾಗಿ ಕಾಸು ಮಾಡಿಕೊಂಡು, ಆನಂತರ ನೆಮ್ಮದಿಯ ಜೀವನ ನಡೆಸಬಹುದು ಎಂದೆಲ್ಲಾ ಮಾತಾಡಿಕೊಂಡಿದ್ದೆವು. ಅದೇನು ಕಾಕತಾಳೀಯವೋ ಏನು ಕಥೆಯೋ… ನಾನು ಕಡೆಗೂ ಲೆಕ್ಚರರ್‌ ಹುದ್ದೆಗೇ ಸೇರಿಕೊಂಡೆ. ಒಂದು ವ್ಯತ್ಯಾಸವೆಂದರೆ, ನನಗೆ ಸರ್ಕಾರಿ ಕಾಲೇಜಿನಲ್ಲಿ ಆ ಹುದ್ದೆ ಸಿಗಲಿಲ್ಲ. ಬದಲಾಗಿ, ಖಾಸಗಿ ಕಾಲೇಜಿನಲ್ಲಿ ಸಿಕ್ಕಿತು. ಆ ಸಂಸ್ಥೆಗೆ ದೊಡ್ಡ ಹೆಸರಿದ್ದುದರಿಂದ, ಆರ್ಥಿಕವಾಗಿ ಬಹಳ ಗಟ್ಟಿ ಇದೆ. ಎಂಥದೇ ಸಂದರ್ಭ ಬಂದರೂ ಏನೂ ತೊಂದರೆ ಆಗುವುದಿಲ್ಲ ಎಂದು ನನ್ನ ನಂಬಿಕೆಯಾಗಿತ್ತು. ನಾನು ಮಾತ್ರವಲ್ಲ; ಆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ನೂರಕ್ಕೂ ಹೆಚ್ಚು ಜನರು ಹಾಗೆಯೇ ನಂಬಿದ್ದರು.

ಮೊನ್ನೆ ಮೊನ್ನೆಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಯಾವಾಗ ಕೋವಿಡ್ ಬಂತೋ, ಆ ಕ್ಷಣದಿಂದಲೇ ದುರಾದೃಷ್ಟ ನಮ್ಮ ಹೆಗಲೇರಿತು. ಕೋವಿಡ್ ಸೋಂಕಿನಿಂದ ಪಾರಾಗಲು ಲಾಕ್‌ಡೌನ್‌ ಘೋಷಣೆಯಾದಾಗ, ಇದೆಲ್ಲಾ ಒಂದು ತಿಂಗಳಲ್ಲಿ ಸರಿ ಹೋಗಬಹುದು ಎಂದು ನಾವೆಲ್ಲರೂ ಅಂದುಕೊಂಡಿದ್ದೆವು. ಆದರೆ ಕೋವಿಡ್ ಕಾಟ, ಎಲ್ಲರ ನಿರೀಕ್ಷೆ ಮೀರಿ ಬೆಳೆಯುತ್ತಾ ಹೋಯಿತು. ಮೊದಲ ತಿಂಗಳು ಸಂಬಳ ಕೊಟ್ಟ ಸಂಸ್ಥೆ, ಆ ನಂತರದಲ್ಲಿ ಸಂಬಳ ಕೊಡುವುದನ್ನು ನಿಲ್ಲಿಸಿಯೇಬಿಟ್ಟಿತು. ಹೇಳಿ ಕೇಳಿ ಬೆಂಗಳೂರಿನ ಬದುಕು, ಬಾಡಿಗೆ ಮನೆ, ಎಲ್ಲಿಗೆ ಹೋಗಬೇಕೆಂದರೂ ಕಾಸು ಬಿಚ್ಚಲೇಬೇಕು… ಹೀಗಿರುವಾಗ, ಸಂಬಳವಿಲ್ಲದೆ ಬದುಕುವುದು ಹೇಗೆ? ಬೆಂಗಳೂರಿಗೆ ಹೋಲಿಸಿದರೆ, ಊರಲ್ಲಿ ಸ್ವಲ್ಪ ನೆಮ್ಮದಿ ಅಂದುಕೊಂಡು, 15 ದಿನಗಳ ಮಟ್ಟಿಗೆ ಊರಿಗೆ ಹೋಗೋಣ, ಅಷ್ಟರೊಳಗೆ ಎಲ್ಲಾ ಸರಿ ಹೋಗಬಹುದು ಅಂದುಕೊಂಡು ಊರಿಗೆ ಬಂದಿದ್ದಾಯ್ತು. ಉಹೂಂ, ಏನೇನೂ ಬದಲಾಗಲಿಲ್ಲ. ಈಗ ಮಾಡುವುದೇನು? ನಾನು ಬದುಕಲೇಬೇಕಿತ್ತು. ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೆಲಸವಾದರೇನು

ಎಂದು ಯೋಚಿಸಿ, ಬೆಂಗಳೂರಿನ ಮನೆ ಖಾಲಿ ಮಾಡಿದೆ. ಊರಿನಲ್ಲಿ ಒಂದು ಚಿಲ್ಲರೆ ಅಂಗಡಿ ತೆರೆಯಲು ನಿರ್ಧರಿಸಿದೆ. ನನ್ನ ಬಳಿ ಇದ್ದ ಹಣದ ಜೊತೆಗೆ, ಗೆಳೆಯರ ಬಳಿ ಸ್ವಲ್ಪ ಸಾಲ ಪಡೆದು ಕಡೆಗೊಮ್ಮೆ ಅಂಗಡಿ ತೆರೆದೂ ಬಿಟ್ಟೆ. ಒಂದು ಕಾಲದಲ್ಲಿ ಲೆಕ್ಚರರ್‌ ಹುದ್ದೆ ನನಗೆ ಅನ್ನ ಕೊಟ್ಟಿದ್ದು ನಿಜ, ಈಗ ಪ್ರಾವಿಶನ್‌ ಸ್ಟೋರ್‌ ಕೂಡ ನನ್ನ ಹೊಟ್ಟೆ ತುಂಬಿಸುತ್ತಿದೆ ಅನ್ನುವುದೂ ನಿಜವೇ.

 

-ಮಹಾದೇವ ಸ್ವಾಮಿ, ಯಳಂದೂರು

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.