ಕನಸು ಕೈಗೂಡುತ್ತಾ? ನನಗೂ ಗೊತ್ತಿಲ್ಲ…

Team Udayavani, Jul 9, 2019, 5:30 AM IST

ನನ್ನ ಭಾವನೆಗಳಿಗೆ ಅವಳು, ಅವಳ ಭಾವನೆಗಳಿಗೆ ನಾನು ಸ್ಪಂದಿಸಿದ್ವಿ ಅಷ್ಟೆ. ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿದೆ. ಇದನ್ನು ಅವಳೂ ನನ್ನ ಬಳಿ ಹೇಳಿಕೊಂಡಿಲ್ಲ. ನಾನೂ ಅವಳ ಹತ್ತಿರ ಹೋಗಿ ಹೇಳಿಕೊಳ್ಳುವ ಪ್ರಯತ್ನ ಮಾಡಿಲ್ಲ. ಬದಲಾಗಿ, ಮೂರನೇ ಪಾರ್ಟಿಯಿಂದ ವಿಷಯ ತಿಳಿಯಬೇಕಾಯಿತು.

ಅವಳಿಗಾಗಿ ನಾನು ಹಲವು ಕನಸುಗಳನ್ನ ಕಟ್ಟಿಕೊಂಡಿರುವೆ.ಮುಂದಿನ ಟ್ರಿಪ್ಪಿಗಾಗಿ ಈಗಲೇ ಪ್ಲಾನ್‌ ಮಾಡಿರುವೆ. ಮುಂಜಾನೆಯ ಮಂಜಲ್ಲಿ ಚುಮು ಚುಮು ಚಳಿಯಲ್ಲಿ ನನ್ನವಳ ಕೈ ಹಿಡಿದು ಕೊಡಚಾದ್ರಿ ಬೆಟ್ಟ ಹತ್ತಿ, ಮೋಡಗಳೊಂದಿಗೆ ಬೆರೆತು ಅವಳ ಜೊತೆ ಹರಟುವ ಕನಸಿದೆ.ಎಷ್ಟೆಲ್ಲ ಕನಸು ಕಂಡರೂ ನಾವು ನಾವೂ ಎಲ್ಲರಂತೆ ಫೋನಿನಲ್ಲಿ ಗಂಟೆಗಟ್ಟಲೆ ಹರಟಲಿಲ್ಲ, ಪಾರ್ಕು ಸಿನಿಮಾ ಸುತ್ತಲಿಲ್ಲ, ಏನಿದ್ದರೂ ಬರಿಯ ಮುಸುಕಿನ ಗುದ್ಧಾಟವಷ್ಟೇ. ಅದೂ ಹೆಚ್ಚು ಎಂದರೆ ಒಂದು ದಿನ ಮಾತ್ರ. ಒಮ್ಮೆ ಮಾತ್ರ ನಾವಿಬ್ಬರೂ ಬರೋಬ್ಬರಿ 10 ದಿನ ಮಾತು ಬಿಟ್ಟಿದ್ದೆವು. ಆಗ ನಮ್ಮ ಚಾಟ್‌ಗಳೆಲ್ಲವೂ ಸ್ಟೇಟಸ್‌ ನಲ್ಲೆ ನಡೆಯುತ್ತಿದ್ದವು.

ಈಗ, ನಾವಿಬ್ಬರೂ ಒಬ್ಬರನ್ನೊಬ್ಬರು ಮೀಟ್‌ ಆಗಿ ವರ್ಷಗಳೇ ಕಳೆದು ಹೋಗಿವೆ. ಇಬ್ಬರೂ ಮತ್ತೆ ಸಿಗೋಣ ಎಂದರೆ ಅವಕಾಶಗಳೇ ಸಿಗುತ್ತಿಲ್ಲ.ಅದನ್ನೆಲ್ಲ ನೆನಪು ಮಾಡಿಕೊಂಡಾಗ ಸಹಜವಾಗಿಯೇ ಸಂಕಟವಾಗುತ್ತದೆ. ಯಾರೊಂದಿಗೆ ಹೇಳಿಕೊಳ್ಳುವುದು? ಅವಳೊಂದಿಗೆ ಬದುಕುವ ಕನಸೇನೋ ಇದೆ. ಅದು ನಿಜವಾಗುತ್ತಾ, ಇಲ್ಲವಾ ಎಂಬುದನ್ನು ಹೇಳಲು, ಹುಲುಮಾನವನಾದ ನಾನೆಷ್ಟರವನು?

-ಪವನ್‌ ಕುಮಾರ್‌. ಎಂ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇವತ್ತು ನಮ್ಮ ಸಮಾಜ ಹೇಗಿದೆ ಅಂದರೆ, 99 ಅಂಕ ಪಡೆದವರನ್ನು ಬಹಳ ಚೆನ್ನಾಗಿ ಆದರಿಸುತ್ತದೆ. 50 ಅಂಕ ಪಡೆದವರನ್ನು ಕ್ಯಾರೇ ಅನ್ನೋದಿಲ್ಲ. 90 ಅಂಕ ಪಡೆದ ವಿದ್ಯಾರ್ಥಿಗೆ...

  • ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫ‌ಲಿಸಿ ನೋಡುಗನ ಕಣ್ಣಿಗೆ ಕಂಡಾಗ ಆ ಚಿತ್ರಣದಲ್ಲಿ ಕಪ್ಪು ನೆರಳಿನ ಭಾಗ ಬಿಟ್ಟು ಇನ್ನುಳಿದವು ಕೆಂಪು, ಕಿತ್ತಳೆ ಅಥವಾ ಹಳದಿ...

  • ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸೇವಾ ಉದ್ಯಮವೆಂದರೆ ಆರೋಗ್ಯ ಸೇವಾ ಉದ್ಯಮ. ಅರ್ಥಾತ್‌ ಆಸ್ಪತ್ರೆ, ರೋಗ ಶುಶ್ರೂಷೆ. ಕೇವಲ ಕಟ್ಟಡ, ಉಪಕರಣ, ದಾದಿಯರು...

  • ಹುತಾತ್ಮರಾದ ಯೋಧರ ಅಂತ್ಯಕ್ರಿಯೆಗೆ ಹೆಗಲು ಕೊಡುವ ಶಹಾಪುರದ ಈಶ್ವರ್‌, ನಡು ರಾತ್ರಿಯೋ, ಬೆಳಗಿನ ಜಾವವೋ ಬರುವ ಯೋಧರು ವಿಶ್ರಾಂತಿ ತೆಗೆದುಕೊಳ್ಳುವಂತೆ ಏರ್ಪಾಟು...

  • ನಿನ್ನೊಂದಿಗೆ ಮಾತಿಗಿಳಿದರೆ ಯಾವ ಟ್ರಾಫಿಕ್‌ ಜಾಮ್‌ ಕೂಡಾ ವಿಳಂಬವೆನಿಸದು. . ನಿನ್ನ ಹೆಜ್ಜೆಗಳೊಂದಿಗೆ ಹೆಜ್ಜೆಗೂಡಿಸಿ ನಡೆಯುತ್ತಿದ್ದರೆ ಗೋಜಲ ಹಾದಿಯೇ ನಮ್ಮ...

ಹೊಸ ಸೇರ್ಪಡೆ