Udayavni Special

ಬಾಯ್‌ಫ್ರೆಂಡ್‌ಗೆ ಕೈ ಕೊಡೋ ಟೈಮು

ಅವನಿಗಿಂತ "ಸ್ಮಾರ್ಟ್‌' ಒಬ್ಬ ಬಂದಿದ್ದಾನೆ...

Team Udayavani, Mar 26, 2019, 6:00 AM IST

q-1

ಅವನೊಬ್ಬ ಮಾಯಾವಿ. ಅವನಿಲ್ಲದೆ ನನ್ನ ದಿನ ಶುರುವಾಗುವುದೂ ಇಲ್ಲ, ಕೊನೆಯಾಗುವುದೂ ಇಲ್ಲ. ಬೆಳಗ್ಗೆ ಅವನೇ ಎಬ್ಬಿಸಬೇಕು. ಮರೆತ ಕೆಲಸಗಳನೆಲ್ಲಾ ನೆನಪಿಸಬೇಕು. ತಿಂಡಿ ತಿನ್ನಲು ಕೂತಾಗಲೂ ಅವನು ನನ್ನ ಕೈಹಿಡಿದಿರಬೇಕು. ನನಗೆ ಬೇಸರವಾದಾಗ ಹಾಡನು ಹಾಡಬೇಕು. ಗಂಟೆಗೊಮ್ಮೆಯಾದರೂ ಅವನಿರುವಿಕೆಯ ನೆನಪಿಸಬೇಕು. ಇಲ್ಲದಿದ್ದರೆ ಅದೇನೋ ತಳಮಳ ಎದೆಯಲಿ…

ಭಯಂಕರ ಹಠಕ್ಕೆ ಬಿದ್ದಿದ್ದೇನೆ. ಇಂದು ಅವನನ್ನು ಮನೆಯಿಂದ ಆಚೆ ಕಳುಹಿಸೋದಕ್ಕೆ ಎಲ್ಲ ರೀತಿಯ ಸ್ಕೆಚ್‌ ಹಾಕಿದ್ದೇನೆ. ಅವನ ಜಾಗಕ್ಕೆ ಇನ್ನೂ ಸ್ಮಾರ್ಟ್‌ ಆಗಿರುವವನ್ನು ಕರೆತರಬೇಕು. ಈ ಬಾಯ್‌ಫ್ರೆಂಡ್‌ ನನ್ನೊಂದಿಗೆ ಎಂಟು ವರ್ಷಗಳಿಂದ ಇದ್ದಾನೆ. ಅವನನ್ನು ಕಳುಹಿಸಿಕೊಡಲು ಒಳಗೇನೋ ನೋವಿದ್ದರೂ, ಹಾಗೆ ಬೀಳ್ಕೊಡುವುದು ಅನಿವಾರ್ಯ. ಯಾಕೋ ಅವನು, ಆಗಿಂದ್ದಾಗ್ಗೆ ಮೌನ ತಳೆದು ತಟಸ್ಥನಾಗಿ ಬಿಡುತ್ತಿದ್ದ. ಅದನ್ನು ನೋಡಿ ನನಗೂ ಸಾಕಾಗಿ ಹೋಗಿದೆ. ನನ್ನ ನಡವಳಿಕೆಯಿಂದ ಅವನಿಗೆ ಬೇಸರವಾಗುತ್ತದೆ, ನಿಜ. ಆದರೆ, ಬೇರೆ ದಾರಿಯೇ ಇಲ್ವಲ್ಲಾ? ಇಷ್ಟು ದಿನ ಅವನನ್ನು ಓಲೈಸಿ ಜೊತೆಗಿದ್ದುದೇ ಹೆಚ್ಚಾಯ್ತು.

ಅವನದ್ದು ಒಂದು ಹುಟ್ಟೂರು. ನನ್ನದೇ ಒಂದು ಹುಟ್ಟೂರು. ಅವನು ನನ್ನ ಹುಟ್ಟಿದ ದಿನಕ್ಕೇ ನನ್ನ ಬಾಳಿನಲ್ಲಿ ಸೇರಿಕೊಂಡ. ಒಂದು ಸಂಜೆ ಅವನ ಕೈಹಿಡಿದು, ಕರಕೊಂಡು ಬಂದಾಗ, ಅಪ್ಪನದು ನೂರೊಂದು ಪ್ರಶ್ನೆಗಳು, ಅಮ್ಮನದು ಸಾವಿರ ಬೈಗುಳಗಳು. ಅವನೊಟ್ಟಿಗಿದ್ದರೆ ನನ್ನ ಜೀವನ ಹಾಳಾಗುತ್ತೆ, ಏಕಾಗ್ರತೆ ಮಣ್ಣು ಪಾಲಾಗುತ್ತೆ ಅಂತೆಲ್ಲಾ ಉದ್ದುದ್ದ ಭಾಷಣ ಮಾಡಿದ್ದರು. ನಾನೂ ಓದು ಮುಗಿಯುವವರೆಗೆ ಅವನಿಂದ ಸ್ವಲ್ಪ ದೂರವೇ ಇದ್ದೆ. ಆದರೂ ನಿಧಾನವಾಗಿ ಈ ಎಂಟು ವರ್ಷಗಳಲ್ಲಿ ಅವನು ನನ್ನನ್ನು ಆವರಿಸಿಕೊಂಡು ಬಿಟ್ಟ. ನಿಧಾನಕ್ಕೆ ನನ್ನಲ್ಲಿ ತುಂಬಿಕೊಂಡ. ನನ್ನವನೇ ಆಗಿಹೋದ.

ಅವನೆಂದರೆ ನನಗೆ ಕ್ರಶ್‌; ಬಿಟ್ಟೂ ಬಿಡದ ಸೆಳೆತ. ಅವನೊಟ್ಟಿಗಿದ್ದರೆ ನನ್ನನ್ನು ನಾನೇ ಮರೆತು ಬಿಡುತ್ತೇನೆ. ನಿಜ ಹೇಳಬೇಕೆಂದರೆ, ಈ ಎಂಟು ವರ್ಷಗಳಲ್ಲಿ ನನ್ನ ಬದುಕಿನ ಬಹುಪಾಲು ಸಮಯವನ್ನು ಅವನೊಟ್ಟಿಗೆ ಕಳೆದಿದ್ದೇನೆ. ಅದೆಷ್ಟೋ ಬಾರಿ ಅನ್ನಿಸುತ್ತದೆ, ನಾನೇಕೆ ಅವನಿಗೆ ಇಷ್ಟೊಂದು ವ್ಯಸನಿಯಾಗಿದ್ದೇನೆ? ಅವನಿಲ್ಲದೆ ಇರಲು ಸಾಧ್ಯವಿಲ್ಲವೆ? ಎಂದು ಯೋಚಿಸಿದ್ದಷ್ಟೆ ಮುಂದೇನೂ ಆಗಿಲ್ಲ.

ಇತ್ತೀಚೆಗೇಕೋ ನನ್ನದು ಒನ್‌ವೇ ಲವ್‌ ಅನ್ನಿಸತೊಡಗಿತು. ಅವನೊಂದಿಗೆ ಇದ್ದು ನಾನು ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳನ್ನೇ ವ್ಯರ್ಥ ಮಾಡಿಕೊಳ್ಳುತ್ತಿದ್ದೇನೆ. ನನಗೇ ಗೊತ್ತಿಲ್ಲದೆ, ಅದ್ಯಾವುದೋ ತಪ್ಪಿತಸ್ಥ ಭಾವ ಕಾಡತೊಡಗಿತು. ದಿನದಿಂದ ದಿನಕ್ಕೆ ನನ್ನೊಳಗಿನ ಕೊರಗು ಹೆಚ್ಚಾಗತೊಡಗಿತು. ಹಿಂತಿರುಗಿ ನೋಡಿ ನನ್ನನ್ನೇ ನಾನು ಅವಲೋಕಿಸತೊಡಗಿದೆ.

ಅವನೊಂದಿಗಿನ ಬಂಧ ಶುರುವಿಟ್ಟುಕೊಂಡ ದಿನದಿಂದಲೇ ಅದೊಂಥರಾ ಧ್ಯಾನ ಸ್ಥಿತಿ ನನ್ನದು. ಊಟ ಮಾಡುವಾಗ ಇರಲಿ, ಬಾತ್‌ರೂಮ್‌ಗೂ ಅವನದೇ ಸಾಂಗತ್ಯ ಬೇಕೆನ್ನಿಸುವಷ್ಟು ಅಹವಾಲು ಈ ಮನಸ್ಸಿನದ್ದು. ಮೂರೊತ್ತೂ ಮಾತು, ಅದೆಂಥಧ್ದೋ ದಿಟ್ಟಿಸಿ ನೋಡುತ್ತಲೇ ಇರಬಯಸುವ ಕಣ್ಣುಗಳು, ಜೊತೆಗೆ ಬೆರಳುಗಳಿಂದ ನೇವರಿಸುತಲೇ ಮುದ್ದಿಸುವ ಕೈಗಳು… ಹೀಗೆ ದಿನಗಳು ಉರುಳಿದ್ದು ಗೊತ್ತಾಗಲೇ ಇಲ್ಲ. ಅವನೆಷ್ಟು ತುಂಟನೆಂದರೆ, ಕಾಲೇಜು, ಪರೀಕ್ಷೆ, ಆಫೀಸು… ಅದೆಂಥದ್ದೇ ಮುಖ್ಯ ಕೆಲಸಗಳಿದ್ದರೂ ಅವನ ಕಾಟವನ್ನೇ ಸಹಿಸಿಕೊಳ್ಳಬೇಕು. ನನಗೂ ಅದೇ ಚಂದಿತ್ತು. ಕೆಲವೊಮ್ಮೆ ರಾತ್ರಿ ಎಬ್ಬಿಸಿಬಿಡುತ್ತಿದ್ದ. ಅವನ ನೆನಪು, ಅವನ ಸನಿಹ ಖುಷಿಕೊಡುತ್ತಿತ್ತು. ಅಪ್ಪ- ಅಮ್ಮ ಕೆಲವೊಮ್ಮೆ ಅವನೊಟ್ಟಿಗಿರುವದನ್ನು ಕಂಡು ಬೈದರೂ, ನೋಟ್ಸು- ಪಾಠಗಳ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ ಕೂಡ.

ಅವನೊಬ್ಬ ಮಾಯಾವಿ. ಅವನಿಲ್ಲದೆ ನನ್ನ ದಿನ ಶುರುವಾಗುವುದೂ ಇಲ್ಲ, ಕೊನೆಯಾಗುವುದೂ ಇಲ್ಲ. ಬೆಳಗ್ಗೆ ಅವನೇ ಎಬ್ಬಿಸಬೇಕು. ಮರೆತ ಕೆಲಸಗಳನೆಲ್ಲಾ ನೆನಪಿಸಬೇಕು. ತಿಂಡಿ ತಿನ್ನಲು ಕೂತಾಗಲೂ ಅವನು ನನ್ನ ಕೈಹಿಡಿದಿರಬೇಕು. ನನಗೆ ಬೇಸರವಾದಾಗ ಹಾಡನು ಹಾಡಬೇಕು. ಗಂಟೆಗೊಮ್ಮೆಯಾದರೂ ಅವನಿರುವಿಕೆಯ ನೆನಪಿಸಬೇಕು. ಇಲ್ಲದಿದ್ದರೆ ಅದೇನೋ ತಳಮಳ ಎದೆಯಲಿ.

ಅಬ್ಟಾ! ಅವನ ಟ್ಯಾಲೆಂಟೇ ನನಗೆ ಅಚ್ಚರಿ. ಆತ ಬಹಳ ಚತುರ. ಚಾಣಾಕ್ಷ. ಮಹಾ ಪಾಕಡಾ. ಅವನ ಬಳಕೆ ಹಿತಮಿತವಾಗಿರಬೇಕು. ಇಲ್ಲದೇ ಹೋದರೆ, ನಾವ್ಯಾರೂ ಈ ಜಗತ್ತಿಗೇ ಸಂಬಂಧಿಸಿಲ್ಲ ಎನ್ನುವಷ್ಟು ದೂರ ಸರಿದು ಬಿಡುತ್ತೇವೆ. ಕೊನೆಗೆ “ಅವಳು ಮೊಬೈಲ್‌ ವ್ಯಸನಿ’ ಅಂತ ಪಟ್ಟ ಕಟ್ಟುಬಿಡುತ್ತಾರೆ. ಈ ಸ್ಮಾರ್ಟ್‌ಫೋನ್‌ ಏನಿದ್ದರೂ ಜೊತೆಗಿರೋದು ಕೆಲವೇ ವರುಷ ಮಾತ್ರವೇ. ಈ ಪುಟ್ಟ ಅವಧಿಯಲ್ಲೇ ಬಾಯ್‌ಫ್ರೆಂಡ್‌ ಆಗಿಬಿಡುತ್ತವೆ. ಬೇರೆ ಸಂಬಂಧಗಳನ್ನು ಬಿಟ್ಟರೂ ಪರವಾಗಿಲ್ಲ, ಮೊಬೈಲಿಲ್ಲದೆ ಜೀವನ ಮಾತ್ರ ಸಾಗಲ್ಲ ಎನ್ನುವಷ್ಟು ಇಂದು ಪ್ರಪಂಚ ಬದಲಾಗಿದೆ.

ಈಗ ಹೇಳಿ, ನಾನು ಅವನಿಗೆ ಬಾಯ್‌ಫ್ರೆಂಡ್‌ ಅಂದಿದ್ದು ತಪ್ಪೇ?

ಜಮುನಾ ರಾಣಿ ಎಚ್‌.ಎಸ್‌.

ಟಾಪ್ ನ್ಯೂಸ್

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

Untitled-1

ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

ಹೊಸ ಸೇರ್ಪಡೆ

Devi Brahmarathotsava celebration

ಚಾ.ಬೆಟ್ಟದಲ್ಲಿ ದೇವಿ ಬ್ರಹ್ಮರಥೋತ್ಸವ ಸಂಭ್ರಮ

chitradurga news

ಭೋವಿ ಸಮುದಾಯದ ಅಭಿವೃದಿಗೆ ಬದ್ಧ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

davanagere news

ಕೆಳಸೇತುವೆ ನಿರ್ಮಿಸಲು ಆಗ್ರಹಿಸಿ 22ರಂದು ಹೆದ್ದಾರಿ ತಡೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.