ಮಹಾಯೋಗಿ ರಾಮನಿಗೂ ವಿರಹವೇ?

Team Udayavani, Aug 20, 2019, 5:21 AM IST

ಚೈತ್ರಮಾಸ, ಪುನರ್ವಸು ನಕ್ಷತ್ರ, ನವಮಿ ತಿಥಿಯಲ್ಲಿ ಹುಟ್ಟಿದ ಶ್ರೀರಾಮ ಜೀವಿಸಿದ್ದ ಕಾಲಾವಧಿ ಯಾವುದು? ಅದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಈಗ ಐದು ಸಾವಿರ ವರ್ಷಗಳ ಹಿಂದೆ ದ್ವಾಪರಯುಗ ಮುಗಿದು ಕಲಿಯುಗ ಆರಂಭವಾಗಿದೆ. ದ್ವಾಪರಯುಗದ ಕಾಲಾವಧಿ 8,64,000 ವರ್ಷ. ಈ ಯುಗಕ್ಕೂ ಮುನ್ನ ಇದ್ದದ್ದು ತ್ರೇತಾಯುಗ. ಅದರ ಕಾಲಾವಧಿ 12,96,000 ವರ್ಷ. ಈ ಇಷ್ಟು ವರ್ಷಗಳ ನಡುವಿನ ಯಾವುದೋ ಕಾಲಾವಧಿಯಲ್ಲಿ ರಾಮ ಬದುಕಿದ್ದ ಎಂದು ಮಾತ್ರ ಹೇಳಬಹುದು. ಅಯೋಧ್ಯೆಯಲ್ಲಿ ಸಾವಿರಾರು ವರ್ಷಗಳ ಕಾಲ ರಾಮ ಆಡಳಿತ ನಡೆಸಿದ ಎಂದು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಒಬ್ಬ ವ್ಯಕ್ತಿ ನೂರು ವರ್ಷ ಬದುಕುವುದೇ ಅಸಂಭವವಾಗಿರುವ ಲೆಕ್ಕಾಚಾರವನ್ನಿಟ್ಟುಕೊಂಡು ನೋಡಿದರೆ, ಆತ ಸಾವಿರಾರು ವರ್ಷ ಬದುಕಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಸಹಜ. ಇದು ಸಾಧ್ಯ ಎಂದು ಭಾರತೀಯ ಯೋಗ ಪರಂಪರೆ ಹೇಳುತ್ತದೆ. ಯೋಗ ಪರಂಪರೆಯ ಲೆಕ್ಕಾಚಾರಗಳ ಅನ್ವಯ ಎಷ್ಟು ಸಾವಿರ ವರ್ಷ ಬೇಕಾದರೂ ಶರೀರವನ್ನಿಟ್ಟುಕೊಂಡು ಬಾಳಬಹುದು. ಆದರೆ ಇಲ್ಲಿನ ಸ್ವಾರಸ್ಯವೆಂದರೆ ಅಂತಹ ಅಸಾಮಾನ್ಯ ಶಕ್ತಿಯಿರುವ ಯೋಗಿಗಳಿಗೆ ಶರೀರದ ಹಂಗೇ ಇರುವುದಿಲ್ಲ. ಇನ್ನಷ್ಟು ಖಚಿತವಾಗಿ ಹೇಳುವುದಾದರೆ ತನ್ನನ್ನು ನಿರ್ಬಂಧಕ್ಕೊಳಪಡಿಸಬಲ್ಲ ಶರೀರವನ್ನು ಆತ ಬಹಳಕಾಲ ಉಳಿಸಿಕೊಳ್ಳುವುದಿಲ್ಲ. ಇನ್ನೂ ಖಚಿತವಾಗಿ ಹೇಳುವುದಾದರೆ ಬೇಕಾದಾಗ ಶರೀರಧಾರಣೆ ಮಾಡಬಲ್ಲ, ಬೇಡವಾದಾಗ ತ್ಯಜಿಸಬಲ್ಲ ಶಕ್ತಿಯಿರುವ ಯೋಗಿ ಸಾವಿರಾರು ವರ್ಷಗಳಿಂದ ಬದುಕಿದ್ದಾನೆ ಎಂದು ಹೇಳುವುದೇ ಅರ್ಥಹೀನ. ನಿಸ್ಸಂಶಯವಾಗಿ ಶ್ರೀರಾಮ ಒಬ್ಬ ಮಹಾಯೋಗಿ. ವಸಿಷ್ಠ ಮಹರ್ಷಿಗಳಂತಹ ಕುಲಗುರುಗಳು, ವಿಶ್ವಾಮಿತ್ರರಂತಹ ದೀಕ್ಷಾ ಗುರುಗಳು ಇದ್ದ ಶ್ರೀರಾಮ, ಸೀತೆಯನ್ನು ಕಳೆದುಕೊಂಡಾಗ ವರ್ತಿಸಿದ ರೀತಿ, ಅವಳನ್ನು ಪಡೆಯಲು ಅವನು ಹೋರಾಡಿದ್ದು, ಬದುಕಿನ ಎಲ್ಲ ಸಂದಿಗ್ಧಗಳಲ್ಲಿ ಸ್ವಂತಸುಖವನ್ನು ಗಣಿಸದೇ ತ್ಯಾಗವನ್ನೇ ಆಯ್ಕೆ ಮಾಡಿಕೊಂಡಿದ್ದು, ಆಳಿದರೆ ರಾಮನಂತೆ ಆಳಬೇಕು ಎಂಬ ಮಾದರಿ ಹಾಕಿಕೊಟ್ಟಿದ್ದು, ಆತ ಸತ್ತ ಇಷ್ಟು ಸಾವಿರ ವರ್ಷಗಳ ನಂತರವೂ ಅವನನ್ನು ಭಾರತೀಯರು ದೇವರಸ್ಥಾನದಲ್ಲಿ ಪೂಜಿಸುತ್ತಿರುವುದನ್ನು ನೋಡಿದರೆ ಆತ ಮಹಾಯೋಗಿ ಎನ್ನಲು ಯಾವುದೇ ಅಡ್ಡಿಗಳಿಲ್ಲ.

ರಾಮನನ್ನು ಮಹಾಯೋಗಿ ಎಂದು ಒಪ್ಪಿಕೊಂಡರೂ, ಆತ ಸಾವಿರಾರು ವರ್ಷಗಳ ಕಾಲ ಬದುಕಿದ್ದ ಎಂದು ಒಪ್ಪಿಕೊಳ್ಳುವುದು ಕಷ್ಟ. ಸಾಮಾನ್ಯವಾಗಿ ಉನ್ನತಯೋಗಿಗಳು ಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳುವುದಿಲ್ಲ, ಶರೀರವನ್ನು ಎಷ್ಟೇ ದೀರ್ಘ‌ಕಾಲ ಉಳಿಸಿಕೊಳ್ಳಬಲ್ಲವಾದರೂ ಜನರನೋಟದಿಂದ ಬೇಗನೆ ಮುಕ್ತರಾಗುತ್ತಾರೆ. ಹೇಗೆ ನೋಡಿದರೂ ಆತ ಸಾವಿರಾರು ವರ್ಷಗಳ ಬದುಕಿದ್ದ ಎಂಬುದರ ಅರ್ಥ ಬೇರೇನೋ ಇದೆ ಎನ್ನುವುದು ಖಚಿತ. ಹೌದು ಅರ್ಥ ಬೇರೆಯೇ ಇದೆ. ಭಾರತದಲ್ಲಿ ಗೋತ್ರ ಪರಂಪರೆ, ಗುರುಪರಂಪರೆ, ಪಿತೃಪರಂಪರೆಯಿದೆ. ಉದಾಹರಣೆಗೆ ರಾಮಾಯಣದಲ್ಲಿನ ಪರಶುರಾಮನ ಹೆಸರು ಮಹಾಭಾರತದಲ್ಲೂ ಕಾಣಿಸಿಕೊಳ್ಳುತ್ತದೆ. ಅದು ಹೇಗೆ ಸಾಧ್ಯ ಎಂದರೆ, ಅದು ಪರಶುರಾಮ ಅಲ್ಲ ಆತನ ಸಂತತಿ ಅಥವಾ ಗೋತ್ರದವರು ಎನ್ನಬಹುದು. ಆ ಗೋತ್ರದವರನ್ನು ಅದೇ ಹೆಸರಿನಿಂದ ಗುರ್ತಿಸುವುದು ಇದರ ಹಿಂದಿನ ತರ್ಕ. ಈ ದೃಷ್ಟಿಯಲ್ಲಿ ನೋಡಿದರೆ, ರಾಮನ ನಂತರ ಆಳಿದ ಆತನ ಸಂತತಿಯವರನ್ನೆಲ್ಲ ರಾಮ ಎಂಬ ಮಹಾಪುರುಷನ ಹೆಸರಿನಲ್ಲೇ ಗುರ್ತಿಸಲಾಗುತ್ತಿತ್ತು. ಹಾಗಾಗಿ ಆಳಿದ್ದು ಸಂತತಿಯವರಾದರೂ, ರಾಮನೇ ಹೆಸರೇ ಮುಖ್ಯವಾಯಿತು. ಇದರಲ್ಲಿ ಇನ್ನೊಂದು ಆಯಾಮವೂ ಇದೆ. ರಾಮ ಎಂಬ ಮಹಾತ್ಮ ಹಾಕಿಕೊಟ್ಟ ಆದರ್ಶ ಆಡಳಿತದ ಮಾದರಿಯನ್ನು, ಸಾವಿರಾರು ವರ್ಷಗಳ ಕಾಲ ಮುಂದಿನಪೀಳಿಗೆ ಅನುಸರಿಸಿರುವುದು ಅಸಂಭವವಲ್ಲ. ಹೀಗೆಯೂ ಜನರಪ್ರಜ್ಞೆಯಲ್ಲಿ ರಾಮ ಸಾವಿರಾರುವರ್ಷ ಬದುಕಿದ್ದರಿಂದ ಅದನ್ನು ರಾಮನೇ ಬದುಕಿದ ಎಂಬರ್ಥದಲ್ಲಿ ಹೇಳಿರಬಹುದು. ಇಂತಹ ರಾಮನಿಗೆ ಎದುರಾದ ವಿರಹವೇದನೆ ಹೇಗಿತ್ತು ಗೊತ್ತಾ?

ನಿರೂಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಜಾಸ್ತಿ ಬರಬೇಕು ಅನ್ನೋದು ಉದ್ಯೋಗದ ನಿಯಮ. ಹೀಗಾಗಿ, ನಮ್ಮ ಬದುಕನ್ನು ನಾವೇ ಚಂದಗಾಣಿಸಿಕೊಳ್ಳಬೇಕು. ಅದಕ್ಕೆ ಡಿಸೈನಿಂಗ್‌ ಕೋರ್ಸ್‌ ಮಾಡಬೇಕು. ಬೆಳಗ್ಗೆ ಎದ್ದು...

  • ಮೊಬೈಲ್‌ ಕಿತ್ತುಕೊಂಡರು ಅಂತ ಮಗ ಅಪ್ಪನನ್ನೇ ಕೊಲೆಗೈದ ಧಾರುಣ ಘಟನೆ ಮೊನ್ನೆಯಷ್ಟೇ ನಡೆದಿದೆ. ಈ ಕಾಲದ ಮಕ್ಕಳಿಗೆ, ಹೆತ್ತು ಹೊತ್ತು ಬೆಳೆಸಿದವರ ಮೇಲೆ ಸ್ವಲ್ಪವೂ...

  • ಹಳ್ಳಿಗಳಿಂದ ಬಂದವರಿಗೆ ಬೆಂಗಳೂರಿನಂಥ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಒಂಟಿತನ ಕಾಡಲು ಶುರುವಾಗಿಬಿಡುತ್ತದೆ. ಇಲ್ಲಿನವರಲ್ಲಿ ಬಹುತೇಕರು ತಾವಾಯ್ತು ತಮ್ಮ...

  • ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-2 ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಬಿಸಿಲೂರಿನ ಬಾಲೆಯೂ ಹೋಗಿದ್ದಳು. ಆಕೆಗೆ ಐತಿಹಾಸಿಕ ಪ್ರಸಂಗಕ್ಕೆ ಸಾಕ್ಷಿಯಾಗುವ...

  • ಬಟ್ಟೇನ ಈ ಮಟ್ಟಕ್ಕೆ ಕೊಳೆ ಮಾಡ್ಕೊಂಡು ಬಂದಿದೀಯಲ್ಲ, ನಾಳೆ ಸ್ಕೂಲ್‌ಗೆ ಯಾವ ಡ್ರೆಸ್‌ನಲ್ಲಿ ಹೋಗ್ತೀಯಾ? ನಾಲ್ಕು ಬಿಟ್ರೆ ನಿಂಗೆ ಶಿಸ್ತು ಬರೋದು ಎಂದು ರೇಗುತ್ತಾ...

ಹೊಸ ಸೇರ್ಪಡೆ